Kannadathi: ಹಣೆಬರಹ ಬದಲಾಯ್ಸಿ ಹರ್ಷನ ಜೊತೆ ಹಸೆಮಣೆ ಏರ್ತಾಳಂತೆ ವರೂ, ಏನ್ ಹೆದ್ರಿಸ್ತೀರಾ ಗುರೂ!
ಕನ್ನಡತಿ ಸೀರಿಯಲ್‌ನಲ್ಲಿ ಮದುವೆ ತಯಾರಿ ಶುರುವಾಗಿ ತಿಂಗಳಾಗ್ತಾ ಬಂತು. ಡ್ರಾಮಾ ಮೇಲೆ ಡ್ರಾಮಾ ನಡೆದು ಇನ್ನೇನು ಅಂತಿಮ ಘಟ್ಟಕ್ಕೆ ಬರುವಾಗ ಹೈಡ್ರಾಮಾ ನಡೆಯಲು ವೇದಿಕೆ ಸಿದ್ಧವಾಗ್ತಾ ಇದೆ. ಹರ್ಷನ ಮದ್ವೆ ಭುವಿ ಜೊತೆಗಲ್ಲ, ನನ್ ಜೊತೆಗೆ ಅಂತಿದ್ದಾಳೆ ವರೂ. ಭುವಿ ಗತಿ ಏನ್ ಗುರೂ..
'ಕನ್ನಡತಿ'(Kannadathi) ಸೀರಿಯಲ್ ನಲ್ಲಿ ಹವಿ ಮದುವೆ ಖುಷಿ. ಸದ್ಯಕ್ಕೀಗ ಚಪ್ಪರ ಶಾಸ್ತ್ರ ನಡೀತಿದೆ. ಅಂತೂ ಇಂತೂ ಮದ್ವೆ(Marriage) ಆಗ್ತಿದ್ದಾರಲ್ಲಾ ಅಂತ ನಿಟ್ಟುಸಿರು ಬಿಡೋ ಹಾಗಿಲ್ಲ. ಯಾರಿಗೂ ಗೊತ್ತಾಗದ ಹಾಗೆ ಎಂಗೇಜ್‌ಮೆಂಟ್(Engagement) ರಿಂಗನ್ನೇ ಮಾಯ ಮಾಡಿರೋ ವರೂ ಇದೀಗ ಮದುವೆಯನ್ನೇ ಮಾಯ ಮಾಡೋಕೆ ಹೊರಟಂಗಿದೆ. ಹೇಗೂ ಈ ಮದುವೆಯ ಪ್ಲಾನ್(Wedding Plan) ಮಾಡ್ತಿರೋದು ವರೂಧಿನಿ ಒಡೆತನದ ಸಪ್ತಪದಿ ಕಂಪನಿ. ಅದನ್ನೇ ಬಳಸಿಕೊಂಡು ಹರ್ಷ ಭುವಿ ಮದುವೆಯನ್ನು ಹರ್ಷ ವರೂ ಮದುವೆಯಾಗಿ ಬದಲಾಯಿಸೋ ಪ್ಲಾನ್‌ನಲ್ಲಿದ್ದಾಳೆ ವರೂಧಿನಿ. ಅಷ್ಟಕ್ಕೂ ವರೂ ಏನ್ಮಾಡ್ತಾಳೆ ಅನ್ನೋದನ್ನು ನಾವೆಲ್ಲ ಕಾದು ನೋಡಬೇಕಿದೆ. ಹರ್ಷನ ಮದುವೆಯ ಖುಷಿಗೆ ಸಾಥ್ ಕೊಡೋಕೆ ಅಂತ 'ಗೀತಾ' ಸೀರಿಯಲ್(Geetha Serial) ಹೀರೋ ವಿಜಯ್ ಎಂಟ್ರಿ ಕೊಟ್ಟಾಗಿದೆ. 'ಗಿಣಿರಾಮ'(Ginirama) ಹೀರೋ ಪುರುಷೋತ್ತಮ್ ಬರ್ತಿದ್ದಾರೆ. ಬಹುಶಃ ಮದ್ವೆಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು(Sandalwood celebrities) ಬಂದರೂ ಬರಬಹುದು.
Kanyakumari serial: ತಮ್ಮನಿಗೆ ತಾಳಿ ಮಹತ್ವ ಹೇಳ್ತಿದ್ದಾಳೆ ಕನ್ನಿಕಾ, ಕಟ್ಟಿದ ತಾಳಿ ತೆಗೆದಿಟ್ಟರೆ ಏನಾಗುತ್ತೆ?
ಯಾರ್ ಬೇಕಿದ್ರೂ ಬರಲಿ, ಮದ್ವೆ ಅಂತೂ ನಡೆಯುತ್ತೆ, ಆದರೆ ಹರ್ಷ ಭುವಿ ಜೊತೆಗಲ್ಲ. ಹರ್ಷ ವರೂ ಜೊತೆಗೆ ಅಂತಿದ್ದಾಳೆ ವರೂ. ಈ ವರೂಧಿನಿ ಸಖತ್ ಪೊಸೆಸ್ಸಿವ್(Possessive) ಹುಡುಗಿ. ಅವಳಿಗೆ ಸ್ವಲ್ಪ ಮಾನಸಿಕ ಸಮಸ್ಯೆಯೂ ಇದೆ. ಆದರೆ ಭಯಂಕರ ಬುದ್ಧಿವಂತೆ ಅನ್ನೋದರಲ್ಲಿ ಎರಡು ಮಾತಿಲ್ಲ. ಅವಳು ಈಗ ಹರ್ಷನ ಜೊತೆ ಮದ್ವೆ ಮಾಡ್ಕೊಳ್ಳೋಕೆ ಇರೋ ಏಕೈಕ ಮಾರ್ಗ ಅಂದರೆ ಅಮ್ಮಮ್ಮ. ಅದು ಹೇಗೆ ಅಂತ ಮುಂದೆ ನೋಡೋಣ. ಹಾಗೆ ನೋಡಿದರೆ ವರೂಧಿನಿ ಪಾತ್ರವನ್ನು ಶುರುವಿನಿಂದಲೇ ಕಟ್ಟಿರೋ ರೀತಿ ಡಿಫರೆಂಟ್(Different) ಆಗಿದೆ. ಅವಳು ಕಂಪ್ಲೀಟ್ ವಿಲನ್ನಾ ಅಂದರೆ ಖಂಡಿತಾ ಅಲ್ಲ. ಹಾಗಾದ್ರೆ ಹೀರೋಯಿನ್(Heroine) ಥರ ಒಳ್ಳೆ ಹುಡುಗಿನಾ ಅಂತ ಕೇಳಿದ್ರೆ ಅದನ್ನೂ ಒಪ್ಕೊಳ್ಳೋ ಹಾಗಿಲ್ಲ. ಒಂಥರಾ ಪೆಕ್ಯುಲಿಯರ್ ಕ್ಯಾರೆಕ್ಟರ್(Peculiar character) ಅಂತೀವಲ್ಲ ಹಾಗೆ. ಬಹಳ ತೀವ್ರತೆಯ ಹುಡುಗಿ ಅನ್ನಬಹುದೇನೋ. ತನ್ನ ಆಸೆಗೆ ಅಡ್ಡ ಬಂದವರನ್ನು ಕ್ರೂರವಾಗಿ ಶಿಕ್ಷಿಸುತ್ತಾಳೆ. ಅವರಿಗೆ ಶಿಕ್ಷಿಸೋಕೆ ಆಗದಿದ್ರೆ ತನಗೆ ತಾನೇ ಶಿಕ್ಷಿಸಿಕೊಳ್ತಾಳೆ. ಅವಳು ಭುವಿಯ ಪ್ರಾಣ ಸ್ನೇಹಿತೆ. ಬೆಟ್ಟದಿಂದ ಬೀಳ್ತಿರುವವಳನ್ನು ರಕ್ಷಿಸಿ ಅವಳು ಬದುಕುವ ಹಾಗೆ ಮಾಡಿದ ಗೆಳತಿ. ಅವಳಿಗಿರುವ ವೀಕ್‌ನೆಸ್(weakness) ಹರ್ಷ. ಹರ್ಷ ಅವಳ ಹೀರೋ. ಅವನನ್ನು ಪಡೆಯೋದಕ್ಕೋಸ್ಕರ ಅವಳು ಏನು ಮಾಡೋದಕ್ಕೂ ರೆಡಿ ಇದ್ದಾಳೆ. ಸದ್ಯಕ್ಕೆ ತಾನು ನಡೆಸ್ತಿರೋ ವೆಡ್ಡಿಂಗ್ ಪ್ಲಾನರ್ ಕಂಪನಿ 'ಸಪ್ತಪದಿ' ಮೂಲಕವೇ ಈ ಮದುವೆ ಮುರಿದುಬೀಳಿಸೋ ಪ್ಲಾನ್ ಮಾಡ್ತಿದ್ದಾಳೆ.
Lakshana: ಕೋಟ್ಯಧಿಪತಿ ಮಗಳಾಗಿ ಮೆರೆದ ಶ್ವೇತಾ ಬೀದಿಗೆ ಬಿದ್ದಿದ್ದಾಳೆ, ಇನ್ಮೇಲೆ ಲೈಫ್ ಹೇಂಗೋ!
ಅವಳು ಕೊನೇ ಕ್ಷಣದಲ್ಲಿ ನಾಯಕಿ ಭುವಿಯನ್ನೇ ಕಿಡ್ನಾಪ್ (Kidnap)ಮಾಡಿಸಿ ಅದೇ ಹಸೆಮಣೆ ಏರಿ ಹರ್ಷನ ಜೊತೆಗೆ ಮದುವೆ ಆಗ್ತಾಳಾ ಅಂದ್ರೆ ಖಂಡಿತವಾಗಿಯೂ ಇಲ್ಲ. ಇಂಥಾ ಹಳೇ ಸಿನಿಮಾದ ಐಡಿಯಾ ಸಾನಿಯಾ ತಲೆಗೆ ಬಂದಾಗಿದೆ. ಅದನ್ನವಳು ವರೂ ಮುಂದೆ ಹೇಳಿಯೂ ಇದ್ದಾಳೆ. ಒಂದು ವೇಳೆ ಹೀಗೇನಾದ್ರೂ ಮಾಡಿದ್ರೆ ನಾನು ಹಸೆಮಣೆಯಲ್ಲಿರಲ್ಲ, ಜೈಲಲ್ಲಿ ಕೂತು ಕಂಬಿ ಎಣಿಸ್ತಿರಬೇಕಾಗುತ್ತೆ ಅಂತ ವರೂ ಸಾನಿಯಾಗೆ ಹೇಳಿದ್ದಾಳೆ.
ಬಹಳ ಹಿಂದೆ ಅಮ್ಮಮ್ಮ ಅವಳು ಒಂದೊಳ್ಳೆ ಕೆಲಸ ಮಾಡಿದಾಗ ಏನು ಬೇಕಾದ್ರೂ ಕೇಳು ಕೊಡ್ತೀನಿ ಅಂತ ಮಾತು ಕೊಟ್ಟಿದ್ರು. ವರೂ ಈ ಮಾತು ಬಳಸ್ಕೊಂಡು ಹಸೆಮಣೆ ಏರುವ ಸಾಧ್ಯತೆ ಇದೆಯಾ, ಜೊತೆಗೆ ಅವಳು ಭುವಿಯ ಪ್ರಾಣವನ್ನೂ ಉಳಿಸಿದ್ದಾಳೆ. ಆ ಪಾಯಿಂಟ್ ಇಟ್ಟು ಭುವಿಯ ಬಾಯಿ ಮುಚ್ಚಿಸಬಹುದು ಅಂದುಕೊಂಡಿದ್ದಾಳಾ ಅನ್ನೋ ಅನುಮಾನ ಇದೆ. ಆದರೆ ಇದಕ್ಕೆಲ್ಲ ಹರ್ಷ ಒಪ್ಪುತ್ತಾನಾ? ಇಲ್ಲಾ ಅಜ್ಜಿ ಮಂಗಳಮ್ಮನ ಸಹಾಯ ಪಡೆದು ಭುವಿಯನ್ನು ಬಲವಂತವಾಗಿ ಬೇರೆಯವರ ಜೊತೆಗೆ ಮದ್ವೆ ಮಾಡಿಸಿ ತಾನು ಹರ್ಷನ ಮಡದಿಯಾಗೋ ಪ್ಲಾನಾ ಅನ್ನೋ ಡೌಟೂ ಇದೆ. ನಿಜಕ್ಕೂ ಏನ್ ನಡಿಯುತ್ತೆ ಅಂತ ಗೊತ್ತಾಗಬೇಕಾದ್ರೆ ಕಾಯಬೇಕಷ್ಟೇ. ಆದರೆ ಸೀರಿಯಲ್ ಕತೆಯನ್ನು ತಗೊಂಡ ಹೋದ ರೀತಿ ಕಂಡು ಫ್ಯಾನ್ಸ್ ಅಂತೂ ತಬ್ಬಿಬ್ಬಾಗಿದ್ದಾರೆ. ಏನ್ ಹೆದ್ರಿಸ್ತೀರಾ ಗುರೂ ಅಂತಿದ್ದಾರೆ.
Jothe Jotheyali : ಅನು ಸಿರಿಮನೆಯೇ ಈಗ ರಾಜನಂದಿನಿ, ವಾವ್, ಎಂಥಾ ಆ್ಯಕ್ಟಿಂಗ್!
ವರೂಧಿನಿ ಪಾತ್ರಕ್ಕೆ ಸಾರಾ ಅಣ್ಣಯ್ಯ(Sara Annaiah) ಜೀವ ತುಂಬುತ್ತಿದ್ದಾರೆ. ಹರ್ಷನಾಗಿ ಕಿರಣ್ ರಾಜ್(Kiran Raj), ಭುವಿಯಾಗಿ ರಂಜನಿ ರಾಘವನ್(Ranjini Raghavan) ಮಿಂಚುತ್ತಿದ್ದಾರೆ.