'ಅವರೇನೋ ಚೆನ್ನಾಗಿ ಡೈಲಾಗ್ ಹೇಳಿದ್ದಾರೆ. ಆದರೆ, ಅವರ ಡೈಲಾಗ್ ನನ್ನ ಬಗ್ಗೆಯೇ ಇದೆ, ಆದರೆ ಅವರು ನನ್ನನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಹೇಳಿದ್ದಕ್ಕೆ ನನಗೆ ಈಗ ಸಂಭಾಷಣೆ ಹೇಳಲು ಕಷ್ಟವಾಗುತ್ತಿದೆ' ಎಂದೆ.
ಶೂಟಿಂಗ್ ಸ್ಪಾಟ್‌ನಲ್ಲಿ ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆಗ ನಾನು ತುಂಬಾ ಮೃದು ಧೋರಣೆಯಿಂದ ಹೋರಾಟ ನಡೆಸುತ್ತೇನೆ. ನಾನು ತುಂಬಾ ಜೋರಾಗಿ ಕೂಗಾಡಿ ಎಲ್ಲರ ಮೂಡ್ ಹಾಳು ಮಾಡುವುದಿಲ್ಲ. ಬದಲಿಗೆ, ಅದನ್ನು ತುಂಬಾ ಮೃದುವಾಗಿ ಹೇಳಿ ಪರಿಹಾರ ದೊರಕಿಸಿಕೊಳ್ಳಲು ಯತ್ನಿಸುತ್ತೇನೆ. ನನಗೆ ನನ್ನ ಸಿನಿಮಾ ಶೂಟಿಂಗ್ ಸಮಯದಲ್ಲಿ ಹಲವರಿಂದ ಹಲವು ಸಮಸ್ಯೆಗಳು ತಲೆದೋರುತ್ತವೆ. ಆಗೆಲ್ಲ ನಾನು ಸಮಯ ನೋಡಿ ನನ್ನ ನಿರ್ದೇಶಕರಿಗೆ ಈ ಬಗ್ಗೆ ತಿಳಿಸುತ್ತೇನೆ. ಅದನ್ನು ಮಾತುಕತೆ ಮೂಲಕ ಅಥವಾ ಮೌನ ವಹಿಸುವುದರ ಮೂಲಕ ತಿಳಿಯಾಗಿಸಿಕೊಂಡು ನಿಟ್ಟುಸಿರು ಬಿಡುತ್ತೇನೆ.
ಸಕ್ಸಸ್ ಮಂತ್ರ ಈಗ ಬದಲಾಗಿದೆ, ನನಗೀಗ ಜ್ಞಾನೋದಯವಾಗಿದೆ; ನಟಿ ಸಮಂತಾ ಮುತ್ತಿನಂಥ ಮಾತು!
ಒಮ್ಮೆ ಹೀಗಾಯ್ತು. ನನ್ನ ಸಹನಟರೊಬ್ಬರದು ಡೈಲಾಗ್ ಸೀನ್ ಇತ್ತು. ಅವರೊಬ್ಬರೇ ಡೈಲಾಗ್ ಹೇಳಬೇಕಿತ್ತು. ಆದರೆ, ಅವರು ಹೇಳಬೇಕಾದ ಡೈಲಾಗ್ ನನ್ನ ಬಗ್ಗೆ ಇತ್ತು. ಅವರ ಡೈಲಾಗ್ ಮುಗಿದ ಮೇಲೆ ನಾನು ಡೈಲಾಗ್ ಹೇಳಬೇಕಿತ್ತು. ಅವರು ತಮ್ಮ ಡೈಲಾಗ್ ಅನ್ನು ಅದೆಷ್ಟು ತನ್ಮಯರಾಗಿ ಹೇಳುತ್ತಿದ್ದರು ಎಂದರೆ ನನ್ನ ಬಗ್ಗೆ ಸ್ವಲ್ಪವೂ ಯೋಚಿಸುತ್ತಲೇ ಇರಲಿಲ್ಲ. ಆದರೆ, ಅವರು ನನ್ನ ಪಾತ್ರದ ಬಗ್ಗೆ ಹೇಳಿರುವ ಆ ಸಂಭಾಷಣೆಗಳಲ್ಲಿ ಸ್ವಲ್ಪವೂ ಸ್ಪಷ್ಟತೆ ಇರಲಿಲ್ಲ. ನಾನು ನನ್ನ ಡೈಲಾಗ್ ಹೇಳಲು ಸಾಧ್ಯವೇ ಆಗಲಿಲ್ಲ.
ಬಾಳಲ್ಲಿ ಬಂದಿದ್ದಕ್ಕೆ ಧನ್ಯವಾದ; ರಶ್ಮಿಕಾ ಮಂದಣ್ಣ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್!
ನಾನು ನನ್ನ ನಿರ್ದೇಶಕರಿಗೆ ಈ ಬಗ್ಗೆ ಹೇಳಿದೆ 'ಅವರೇನೋ ಚೆನ್ನಾಗಿ ಡೈಲಾಗ್ ಹೇಳಿದ್ದಾರೆ. ಆದರೆ, ಅವರ ಡೈಲಾಗ್ ನನ್ನ ಬಗ್ಗೆಯೇ ಇದೆ, ಆದರೆ ಅವರು ನನ್ನನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಹೇಳಿದ್ದಕ್ಕೆ ನನಗೆ ಈಗ ಸಂಭಾಷಣೆ ಹೇಳಲು ಕಷ್ಟವಾಗುತ್ತಿದೆ' ಎಂದೆ. ಕೊನೆಗೆ ಶೂಟಿಂಗ್ ನಿಂತೇ ಹೋಯಿತು. ಬಳಿಕ, ಅವರು ನನ್ನ ಸಹನಟರಿಗೆ 'ನೀವು ಅವರ ಬಗ್ಗೆ ಹೇಳುವ ಡೈಲಾಗ್ ಇದ್ದಾಗ ಅವರನ್ನು ನೋಡಿ ಹೇಳಿ, ಅವರ ರೆಸ್ಪಾನ್ಸ್ ಕೂಡ ಗಮನಿಸಿ ಮುಂದಿನ ಸಂಭಾಷಣೆ ಹೇಳಿ ಎಂದು ಟಿಪ್ಸ್ ಕೊಟ್ಟರು. ಆ ಬಳಿಕ ಶೂಟಿಂಗ್ ಸರಾಗವಾಗಿ ನಡೆಯಿತು.
ನಿನ್ನಣ್ಣನ್ನ ಹೇಗೆ ಕಂಟ್ರೋಲ್‌ನಲ್ಲಿ ಇಟ್ಕೊಂಡಿದೀನಿ ನೋಡು; ಅತ್ತಿಗೆ ಮಾತು ಕೇಳಿ ಪುಷ್ಪಾಗೆ ಶಾಕ್ ಆಯ್ತಾ?
