ಸಕ್ಸಸ್ ಮಂತ್ರ ಈಗ ಬದಲಾಗಿದೆ, ನನಗೀಗ ಜ್ಞಾನೋದಯವಾಗಿದೆ; ನಟಿ ಸಮಂತಾ ಮುತ್ತಿನಂಥ ಮಾತು!
ಈ ಕ್ಷಣದಲ್ಲಿ ಬದುಕುವುದು ಮುಖ್ಯ ಎಂಬ ಭಾವ ಜಗತ್ತಿನ ಬಹುತೇಕ ಜನರಲ್ಲಿ ಹೆಚ್ಚು ಹೆಚ್ಚು ಮನೆ ಮಾಡತೊಡಗಿದೆ. ಭೂತಕಾಲ ಅಥವಾ ಭವಿಷ್ಯ ಕಾಲದಲ್ಲಿ ಬದುಕುವ ಟ್ರೆಂಡ್ ಸದ್ಯಕ್ಕೆ ಮಾಯವಾಗತೊಡಗಿದೆ.
ಭಾರತದ ಸೆನ್ಸೇಷನಲ್ ನಟಿ ಸಮಂತಾ ತಮ್ಮ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ. ಸಮಂತಾ ಪ್ರಕಾರ ಈಗ ಸಕ್ಸಸ್ ಡೆಫಿನಿಶನ್ ಚೇಂಜ್ ಆಗಿದೆಯಂತೆ. 'ನನಗೆ ಇತ್ತೀಚೆಗೆ ಅರ್ಥವಾಗಿರುವ ಪ್ರಕಾರ ಯಶಸ್ಸಿನ ವಿವರಣೆ ಈಗ ಬದಲಾಗಿದೆ. ಈಗ ಆರೋಗ್ಯ ಇಂಪಾರ್ಟೆಂಟ್, ಫ್ಯಾಮಿಲಿ, ಫ್ಯಾಮಿಲಿ ಟೈಮಿಂಗ್ಸ್, ಟೈಮ್ ಮತ್ತು ಹೆಪಿನೆಸ್ ಇಂಪಾರ್ಟೆಂಟ್, ಈ ಕ್ಷಣದಲ್ಲಿ ಬದುಕುವುದು ಮುಖ್ಯ ಎಂಬ ಭಾವನೆ ಬಲವಾಗುತ್ತಿದೆ' ಎಂದಿದ್ದಾರೆ ನಟಿ ಸಮಂತಾ.
ಈ ಮೊದಲು ಕೆರಿಯರ್, ವೃತ್ತಿ, ತುಂಬಾ ಉನ್ನತ ಹುದ್ದೆ, ಅದೂ ಇದೂ ಸಕ್ಸಸ್ ಅಳತೆಗೋಲು ಎಂಬಂತಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂದಿನ ಯಶಸ್ಸಿನ ಸೂತ್ರ ಸಂಪೂರ್ಣ ಬದಲಾಗಿದ್ದು, ಈಗ ಎಲ್ಲರೂ ಸಂತೃಪ್ತಿಯೇ ಜೀವನದ ಮಹಾ ಗುರಿ, ಅದೇ ಯಶಸ್ಸು ಎಂದು ಭಾವಿಸುತ್ತಿದ್ದಾರೆ. ಕುಟುಂಬ, ಕುಟುಂಬಕ್ಕೆ ಕೊಡಬೇಕಾದ ಸಮಯ, ಟೈಮ್ ಮ್ಯಾನೇಜ್‌ಮೆಂಟ್, ಮುಂತಾದವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಮೊದಲಿನಂತೆ, ಕತ್ತೆಯಂತೆ ದುಡಿಯುವುದು, ದುಡ್ಡು ಗುಡ್ಡೆ ಹಾಕುವುದು ಈಗ ಯಶಸ್ಸು ಎಂದು ಯಾರೂ ಭಾವಿಸುತ್ತಿಲ್ಲ.
ಬಾಳಲ್ಲಿ ಬಂದಿದ್ದಕ್ಕೆ ಧನ್ಯವಾದ; ರಶ್ಮಿಕಾ ಮಂದಣ್ಣ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್!
ಈ ಕ್ಷಣದಲ್ಲಿ ಬದುಕುವುದು ಮುಖ್ಯ ಎಂಬ ಭಾವ ಜಗತ್ತಿನ ಬಹುತೇಕ ಜನರಲ್ಲಿ ಹೆಚ್ಚು ಹೆಚ್ಚು ಮನೆ ಮಾಡತೊಡಗಿದೆ. ಭೂತಕಾಲ ಅಥವಾ ಭವಿಷ್ಯ ಕಾಲದಲ್ಲಿ ಬದುಕುವ ಟ್ರೆಂಡ್ ಸದ್ಯಕ್ಕೆ ಮಾಯವಾಗತೊಡಗಿದೆ. ಅಂದರೆ, ಹಳೆಯ ಕಾಲದಲ್ಲಿ ಆಗಿಹೋದ ಘಟನೆಗಳು, ಭವಿಷ್ಯದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಯೋಚನೆ, ಯೋಜನೆ ಈಗ ಬಹುತೇಕ ಹಳ್ಳ ಹಿಡಿಯತೊಡಗಿದೆ. ಇಂದು ಇಂದಿಗೆ ನಾಳೆ ನಾಳೆಗೆ ಎಂಬ ಭಾವ ಯುವಜನರಲ್ಲಿ ಆಳವಾಗಿ ಬೇರೂರತೊಡಗಿದೆ. ಇತ್ತೀಚೆಗೆ ಯಾರೂ ಹೆಚ್ಚು ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಅನ್ನಿಸುತ್ತಿಲ್ಲ' ಎಂದಿದ್ದಾರೆ ಸಮಂತಾ.
ಮತ್ತೆ ಬಾಲಿವುಡ್ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡಲು ನನಗಿಷ್ಟವಿಲ್ಲ; ಪ್ರಿಯಾಂಕಾ ಚೋಪ್ರಾ
ಅಂದಹಾಗೆ, ನಟಿ ಸಮಂತಾ ನಟನೆಯಲಲ್ಇ ಮೊದಲಿಗಿಂತ ಹೆಚ್ಚು ಚೂಸಿ ಆಗಿದ್ದಾರೆ ಎನ್ನಬಹುದು. ಖುಷಿ ಸಿನಿಮಾ ಬಳಿಕ ಅನಾರೋಗ್ಯದ ಕಾರಣಕ್ಕೆ ಅಮೆರಿಕಾದಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿರುವ ಸಮಂತಾ, ಪ್ರಕೃತಿಯಲ್ಲಿ ಹೆಚ್ಚು ಹೆಚ್ಚು ಸಮಯ ಕಾಲ ಕಳೆಯುತ್ತಿದ್ದಾರೆ. ವಿದೇಶ ಪ್ರವಾಸಗಳು, ಭಾರತದಲ್ಲಿ ಕೊಯಮುತ್ತೂರಿನ ಈಶಾ ಯೋಗ ಸೆಂಟರ್, ಕೇದಾರ, ಹರಿದ್ವಾರ ಮಂತಾದ ಧಾರ್ಮಿಕ ಕ್ಷೇತ್ರಗಳಿಗೆ ಸಮಂತಾ ಈಗ ಹೆಚ್ಚು ಹೆಚ್ಚು ಭೇಟಿ ನೀಡುತ್ತಿದ್ದಾರೆ. ಅವರು ನಟನೆಗಿಂತ ಹೆಚ್ಚಾಗಿ ಈಗ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಆಧ್ಯಾತ್ಮದ ಬಗ್ಗೆ ಕೆಲಸ ಮಾಡುತ್ತಿದ್ದಾರೆ.