ದೂರದರ್ಶನ ಎನ್ನುತ್ತಿದ್ದಂತೆ ನೆನಪಿಗೆ ಬರೋದೇ ಟಿನ್‌ಟಿನ್ ಟಿ ಡಿನ್ ಟ್ಯೂನ್‌ನೊಂದಿಗೆ ಸುತ್ತಿ ಸುತ್ತಿ ಬರುತ್ತಿದ್ದ ಲೋಗೋ. ಆ ಶಬ್ದ, ನೋಟವೆರಡೂ 80,90ರ ದಶಕದ ಮಕ್ಕಳ ಬಾಲ್ಯದೊಂದಿಗೆ ಬೆಸೆದುಕೊಂಡಿದೆ. ನೂರೊಂದು ಚಾನಲ್‌ಗಳ ಹಾವಳಿ ಇಲ್ಲದ ಕಾಲದಲ್ಲಿ, ಏಕಚಕ್ರಾಧಿಪತಿಯಾಗಿ ಮೆರೆದ ಡಿಡಿ ಕೊಡುತ್ತಿದ್ದ ಕಾರ್ಯಕ್ರಮಗಳ ಗುಣಮಟ್ಟ ಎಂಥದೆಂದರೆ ಇಂದಿಗೂ ಆ ಸೀರಿಯಲ್‌ಗಳು, ಕಾರ್ಯಕ್ರಮಗಳನ್ನು ನೋಡಿದವರು ಮೆಲುಕು ಹಾಕಿ ಖುಷಿ ಪಡುತ್ತಾರೆ.

ತಂದೆ ಕಳೆದುಕೊಂಡ 'ಪಾರು' ತಮ್ಮ; ದುಃಖದಲ್ಲೇ ಅವಾರ್ಡ್ ಸ್ವೀಕಾರ!

ಆಗ ಟಿವಿ ಎಂಬುದು ಊರಿನ ಶ್ರೀಮಂತರ ಮನೆಯ ಸೊತ್ತು. ಅಲ್ಲೇ ಊರಿನ ಬಹುಪಾಲು ನೆರೆಯುತ್ತಿತ್ತು. ಎಲ್ಲರೂ ಸೇರಿ ಟಿವಿ ನೋಡುವ ಮಜಾ ಅನುಭವಿಸಿದವರಿಗೇ ಗೊತ್ತು. ಚಿತ್ರಹಾರ್, ಮಹಾಭಾರತ, ಮಾಲ್ಗುಡಿ ಡೇಸ್, ನುಕ್ಕಡ್, ಫೌಜಿ ಮುಂತಾದವನ್ನು ಮರೆತವರುಂಟೇ? ಇಂದಿಗೂ ಕೂಡಾ ಬಾಲ್ಯದ ಕತೆ ಹೇಳುವಾಗ 80, 90ರ ದಶಕದವರ ನೆನಪಿನಲ್ಲಿ ಅಚ್ಚಳಿಯದೆ ಉಳಿದ ಹೆಗ್ಗಳಿಕೆ 60ರ ವಸಂತಕ್ಕೆ ಕಾಲಿಟ್ಟ ಡಿಡಿಯದು. ಇಂದಿಗೂ ಕೂಡಾ ಆ ಸೀರಿಯಲ್‌ಗಳನ್ನು ಬೆಳಗ್ಗೆಯಿಂದ ರಾತ್ರಿವರೆಗೆ ಕುಳಿತು ನೋಡಿದರರೂ ಬೋರಾಗದು. ಅಂಥ ಯಾವೆಲ್ಲ ಸೀರಿಯಲ್‌ಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವೆಂಬುದನ್ನು ಮೆಲುಕು ಹಾಕೋಣ ಬನ್ನಿ.

1. ಮಾಲ್ಗುಡಿ ಡೇಸ್

ಆರ್.ಕೆ.ನಾರಾಯಣ್ ಅವರ ಪುಸ್ತಕಾಧರಿತ ಈ ಕತೆಯು, 10 ವರ್ಷದ ಸ್ವಾಮಿಯ ಬದುಕಿನ ಕತೆಗಳನ್ನು ಬಹಳ ಚೆಂದವಾಗಿ ಹೇಳುತ್ತಿತ್ತು. ಮಾಸ್ಟರ್ ಮಂಜುನಾಥ್ ಅಭಿನಯಿಸಿರುವ ಸ್ವಾಮಿಯ ಬಾಲ್ಯದಲ್ಲಿ ನಮ್ಮ ಬಾಲ್ಯವನ್ನು ಕಾಣಬಹುದು. ದೇಶದ ಯಾವುದೇ ಹಳ್ಳಿಯ ತಲೆಬಿಸಿಯಿಲ್ಲದ ಸರಳ ಬದುಕನ್ನು ಬಹಳ ಸರಳವಾಗಿ ಕತೆ ಹೇಳಿರುವುದು ಈ ಧಾರಾವಾಹಿಯ ಹೆಗ್ಗಳಿಕೆ. ಈಗಲೂ ಅಮೇಜಾನ್ ಪ್ರೈಮ್‌ನಲ್ಲಿ ಮಾಲ್ಗುಡಿ ಡೇಸ್ ನೋಡಬಹುದು. 

ಬಿಗ್ ಬಾಸ್‌ ಮನೆಯ ಮೇಕಪ್‌ ರೂಂ ಸೀಕ್ರೆಟ್ ರಿವೀಲ್; ಹೇಗಿದೆ ನೋಡಿ!

2. ಮಹಾಭಾರತ್

ಚಿತ್ರ ನಿರ್ಮಾಪಕ ಬಿ ಆರ್ ಚೋಪ್ರಾ ನಿರ್ಮಾಣದಲ್ಲಿ ತಯಾರಾದ ಮಹಾಭಾರತ್ 94 ಎಪಿಸೋಡ್‌ಗಳನ್ನು ಒಳಗೊಂಡಿತ್ತು. ಈಗ ಸಾವಿರಾರು ಎಪಿಸೋಡ್ ದಾಟುವ ಧಾರಾವಾಹಿಗಳನ್ನು ನೋಡುವವರಿಗೆ ಅಷ್ಟೆಯೇ ಎನಿಸಬಹುದು. ಆದರೆ, ಆಗ ವಾರಕ್ಕೊಮ್ಮೆ ಅಂದರೆ ಭಾನುವಾರ ಮಾತ್ರ ಅರ್ಧ ಗಂಟೆಗಳ ಕಾಲ ಬರುತ್ತಿದ್ದ ಈ ಧಾರಾವಾಹಿಗಾಗಿ ವಾರವಿಡೀ ಕಾಯುವ ಕಾತರ ಅನುಭವಿಸಿದವರಿಗೇ ಗೊತ್ತು. ಪ್ರತಿ ಎಪಿಸೋಡ್ ಆರಂಭದಲ್ಲಿ "ಮೈ ಸಮಯ್ ಹೂಂ" ಎಂಬ ಆಳದ ದನಿ ಕೇಳಿ ಬರುತ್ತಿದ್ದುದರೆ ನೆನಪು ಹಲವರಲ್ಲಿ ಈಗಲೂ ರೋಮಾಂಚನ ಮೂಡಿಸಬಹುದು. 1988ರಲ್ಲಿ ಬಂದ ಈ ಧಾರಾವಾಹಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಇದರ ಡೈಲಾಗನ್ನು ಹೆಸರಾಂತ ಹಿಂದಿ ಕವಿ, ಮುಸ್ಲಿಂ ಕಾದಂಬರಿಕಾರ ರಾಜಾ ಬರೆಯುತ್ತಿದ್ದುದು ಹಿಂದೂ ಮೂಲಭೂತವಾದಿಗಳನ್ನು ಕೆಣಕಿತ್ತು. ಆದರೆ, ಸಂಭಾಷಣೆಯ ತೂಕವನ್ನು ಮತ್ತಾರಿಗೂ ಮೀರಿಸಲಾಗುತ್ತಿರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ.

BB7: ರಾತ್ರಿಯೆಲ್ಲಾ ಎಕ್ಸಾಮ್ ಗೆ ಓದಿ ಮಾರನೇ ದಿನ ಬಸ್ ನಲ್ಲಿ ನಿದ್ದೆ ಮಾಡಿದ ಕಿಲಾಡಿ!

3. ಫೌಜಿ

ಬಾಲಿವುಡ್‌ನ ಕಿಂಗ್ ಖಾನ್ ಶಾರುೂಖ್ ಅಭಿನಯದ ಈ ಸೀರಿಯಲ್ ಮರೆಯುವವರುಂಟೇ? ಭಾರತೀಯ ಸೇನೆಯ ಕಮ್ಯಾಂಡೋವೊಬ್ಬರು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಅನುಭವಿಸಬೇಕಾದ ಗೊಂದಲಗಳು, ಒತ್ತಡಗಳ ಕುರಿತು ಈ ಧಾರಾವಾಹಿಯ ಕತೆ ಇತ್ತು. 

4. ಶಕ್ತಿಮಾನ್

90ರ ದಶಕದ ಮಕ್ಕಳ ಪಾಲಿಗೆ ರಸದೌತಣವೆಂಬಂತೆ ಭಾಸವಾಗುತ್ತಿದ್ದುದು ಈ ಶಕ್ತಿಮಾನ್ ಸೀರಿಯಲ್. ಸೂಪರ್ ಹೀರೋಗಳು ಕೇವಲ ಹಾಲಿವುಡ್‌ಗೆ ಸೀಮಿತವಲ್ಲ ಎಂಬುದನ್ನು ಪ್ರೂವ್ ಮಾಡಿದ ಕತೆ ಇದು. ಮುಖೇಶ್ ಖನ್ನಾ ಅಭಿನಯದ ಈ ಧಾರಾವಾಹಿ 1997ರಿಂದ 2005ರವರೆಗೂ ಪ್ರಸಾರವಾಗಿದ್ದು ಹೆಗ್ಗಳಿಕೆ. ಇದರಲ್ಲಿ ಖನ್ನಾ ಒಮ್ಮೆ ಶಕ್ತಿಮಾನ್ ಆಗಿದ್ದರೆ ಮತ್ತೊಮ್ಮೆ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರ್‌‌ನಾಥ್ ಶಾಸ್ತ್ರಿಯಾಗಿ ಕಾಣಿಸಿಕೊಂಡಿದ್ದರು. ಧ್ಯಾನ ಹಾಗೂ ಬದುಕಿನ ಐದು ಸಂಗತಿಗಳ ಮೇಲೆ ಹಿಡಿತ ಸಾಧಿಸಿ ಸೂಪರ್‌ಹ್ಯೂಮನ್ ಆಗಿದ್ದ ವ್ಯಕ್ತಿಯ ಕತೆ ಇದು. ನಂತರದಲ್ಲಿ ಖನ್ನಾ ಆರ್ಯಮಾನ್ ಎಂಬ ಧಾರಾವಾಹಿಯನ್ನು ಕೂಡಾ ತಂದಿದ್ದರು. 

BB7:ಕಿರುತೆರೆ ನಟ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!

5. ಹಮ್ ಲೋಗ್

80ರ ದಶಕದಲ್ಲ ಭಾರತ ಹೇಗಿತ್ತು ಎಂಬುದನ್ನು ನೀವು ನೋಡಬೇಕೆಂದರೆ, ಹಮ್ ಲೋಗ್ ನೋಡಬೇಕು. ಶಿಕ್ಷಣ ಜೊತೆಗೆ ಮನರಂಜನೆ ಎಂಬ ಉದ್ದೇಶದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಹಮ್ ಲೋಗ್ (1984) ಕುಟುಂಬ ಯೋಜನೆ, ಮಹಿಳಾ ಸಬಲೀಕರಣ, ಅಲ್ಕೋಹಾಲಿಸಂ, ಡ್ರಗ್ ಅಬ್ಯೂಸ್ ಮುಂತಾದ ಸಾಮಾಜಿಕ ಸಮಸ್ಯೆಗಳ ಮೇಲೆ ಕತೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿತ್ತು. ಇವೆಲ್ಲವೂ ಭಾರತದ ಬಹುತೇಕ ಮಧ್ಯಮವರ್ಗ ಕುಟುಂಬಗಳ ಕತೆಯೇ ಆಗಿತ್ತು. ಇದು ನ್ಯಾಷನಲ್ ನೆಟ್ವರ್ಕ್‌ನ ಮೊದಲ ಡ್ರಾಮಾ ಸೀರೀಸ್. 

BB7: ಶಂಕರ್‌ ನಾಗ್‌ರನ್ನ ಕೋತಿ ಎಂದು ಕರೆದ ನಟಿ ಬಗ್ಗೆ ಬಾಯ್ಬಿಟ್ಟ ರವಿ ಬೆಳಗೆರೆ!

6. ಶಾಂತಿ

ಭಾರತೀಯ ಟಿವಿ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಧಾರಾವಾಹಿಯೊಂದು ಪ್ರತಿದಿನ ಪ್ರಸಾರವಾಗತೊಡಗಿದ್ದರೆ ಅದು ಶಾಂತಿಯಿಂದ. ಇದರ ಮುಖ್ಯ ಪಾತ್ರಧಾರಿಯಾಗಿ ಮಂದಿರಾ ಬೇಡಿ ನಟಿಸಿದ್ದರು. ಮನೋಜ್ ಬಾಜ್ಪೇಯ್, ಅನೂಪ್ ಸೋನಿಯಂಥ ಹೆಸರಾಂತ ನಟರೂ ಇದ್ದರು. ಈ ಧಾರಾವಾಹಿ ಯಶಸ್ವಿಯಾಗಿ 807 ಎಪಿಸೋಡ್ ಕಂಡಿತ್ತು.