ಒಂದೆರಡು ಹಿಟ್ ಧಾರಾವಾಹಿಯಲ್ಲಿ ಮಿಂಚಿ ಆ ನಂತರ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡ ಕುಂದಾಪುರದ ಹೀರೋ ಶೈನ್ ಶೆಟ್ಟಿ ಜೀವನ ಕಥೆಯಿದು. ಸ್ಟಾರ್ ಗಿರಿ ಗಿಟ್ಟಿಸಿಕೊಂಡ ಮೇಲೆ ಕೆಲವರ ನಡುವಳಿಕೆಯೇ ಬದಲಾಗಿ ಹೋಗುತ್ತದೆ. ಎಷ್ಟೇ ಕಷ್ಟ ಎದುರಾದರೂ ಸ್ಟೇಟಸ್ ಮುಲಾಜಿಗೆ ಬಿದ್ದು ಜೀವನ ನಡೆಸುತ್ತಾರೆ. ಆದರೆ ಇವರು ಹಾಗಲ್ಲ ಸ್ಟಾರ್ ಗಿರಿ ಪಕ್ಕಕ್ಕಿಟ್ಟು ಬನಶಂಕರಿ ರಸ್ತೆಯಲ್ಲಿ ಫುಡ್‌ ಟ್ರಕ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

 

BB7:ಮಧ್ಯರಾತ್ರಿ ಮನೆಯಿಂದ ಹೊರಟು ಇದ್ದದ್ದನ್ನೆಲ್ಲಾ ಮಾರಿಕೊಂಡ 'ದುನಿಯಾ' ನಟಿ!

ಹೌದು ಶೈನ್‌ ಶೆಟ್ಟಿಗೆ ಸಿನಿಮಾದಲ್ಲಿ ನಟಿಸುವ ಆಸೆ. ಸಿನಿಮಾನೂ ಇಲ್ಲದೇ ಧಾರಾವಾಹಿಯೂ ಇಲ್ಲದೆ ಕೈ ಕಟ್ಟಿ ಹಾಕಿದಂತಾಗಿತ್ತು. ಕೊನೆಗೆ ಅವಕಾಶವೇ ಇಲ್ಲದಂತಾಗಿತ್ತು. ಆನಂತರ ಜೀವನಕ್ಕೆ ಏನಾದರೂ ಮಾಡಬೇಕು ಎಂದು ದೋಸೆ ಹೋಟಲ್ ವ್ಯಾಪಾರ ಶುರು ಮಾಡಿದ್ದರು.

BB7: ಸಿನಿಮಾ ಇಲ್ಲದೇ ಕ್ಯಾಂಟೀನ್ ತೆರೆದ ಶಂಕರ್ ನಾಗ್, ಸತ್ಯಕಥೆ ಬಿಚ್ಚಿಟ್ಟ ಜೈ ಜಗದೀಶ್!

 

ಧಾರಾವಾಹಿಯಿಂದ ಅನೇಕರಿಗೆ ಪರಿಚಯವಿದ್ದ ಶೈನ್ ವ್ಯಾಪಾರ ಮಾಡುವಾಗ ಬಂದು ಮಾತನಾಡಿಸುತ್ತಿದ್ದರು. ಇನ್ನು ಕೆಲವರು ತಿಂದು ಹೋಗುವವರೆಗೂ ಎಲ್ಲೋ ನೋಡಿದ್ದೀನಿ ಎಂದು ಮಾತನಾಡಿಸುತ್ತಿದ್ದರು. ಯಾವೂದಕ್ಕೂ ತಲೆ ಕೆಡೆಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದರು.

ಇನ್ನು ಕೆಲ ದಿನಗಳ ಹಿಂದೆ ಪೋಷಕರಿಗೆ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮದಲ್ಲಿ ಶೈನ್ ಹೇಳುವುದು ಒಂದೇ ಮಾತು ಅದು 'ಕಷ್ಟದಲ್ಲಿದಾಗ ನಮ್ಮ ಕೈ ಹಿಡಿಯುವುದ ತಂದೆ-ತಾಯಿ, ಮೋಜು ಮಸ್ತಿ ಮಾಡುವಾಗ ಬರುವ ಸ್ನೇಹಿತರಲ್ಲ' ಎಂದು.