ಕಲಾವಿದರ ಜೀವನವೇ ಹಾಗೆ. ನಗಿಸುವವರ ಜೀವನದಲ್ಲಿ ದುಖಃವಿದೆ. ಅವರ ರಿಯಲ್ ಲೈಫ್‌ಗೂ ರೀಲ್‌ ಲೈಫ್‌ಗೂ ತುಂಬಾ ವ್ಯತ್ಯಸವಿರುತ್ತದೆ. ವೀಕ್ಷಕರಿಗೆ ಗೊತ್ತಾಗದಂತೆ ಅಭಿನಯಿಸುತ್ತಾರೆ ಆ ಶ್ರಮಕ್ಕೆ ಪ್ರತಿಫಲವು ದೊರಕುತ್ತದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಪಾರು' ಧಾರಾವಾಹಿ ವೀಕ್ಷಕರ ಗಮನ ಸೆಳೆದಿದೆ. ಅಖಿಲಾಂಡೇಶ್ವರಿಯ ಗಾಂಭಿರ್ಯತೆ, ಪಾರುಳ ಮುಗ್ಧತೆ ಹಾಗೂ ಆದಿತ್ಯನ ಡಿಗ್ನಿಫೈಡ್ ಮ್ಯಾನರಿಸಂ.

Add Asianetnews Kannada as a Preferred SourcegooglePreferred

ಬಿಗ್ ಬಾಸ್‌ ಮನೆಯ ಮೇಕಪ್‌ ರೂಂ ಸೀಕ್ರೆಟ್ ರಿವೀಲ್; ಹೇಗಿದೆ ನೋಡಿ!

ಈ ಧಾರಾವಾಹಿಯಲ್ಲಿ ಪಾರುಗೆ ತಮ್ಮನಾಗಿ ಅಭಿನಯಿಸುತ್ತಿರುವ ಗಣೇಶ್ ನಿಗೆ ಜೀ ಕನ್ನಡ ಕುಟುಂಬ ಅವಾರ್ಡ್‌ನಲ್ಲಿ ಬಾಲನಟ ಅವಾರ್ಡ್‌ ದೊರೆಯಿತು. ಅವಾರ್ಡ್ ಸ್ವೀಕರಿಸಿದ ಗಣೇಶ್ ಮಾತನಾಡದೆ ಮೌನಿಯಾಗುತ್ತಾರೆ. ಈ ವೇಳೆ ಧಾರಾವಾಹಿಯ ನಿರ್ಮಾಪಕ ದಿಲೀಪ್ ರಾಜ್ ಮೈಕ್‌ ಹಿಡಿದು 'ಗಣೇಶ್ 6 ದಿನಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದಾರೆ. ತಂದೆ ಹೋದ ನೋವಿನಲ್ಲಿದ್ದರೂ ಗಣೇಶ್ ಮೂರನೇ ದಿನ ಬಂದು ಬಾಕಿಯಿದ್ದ ಡಬ್ಬಿಂಗ್ ಮುಗಿಸಿ ಹೋಗಿದ್ದಾರೆ. ಯಾರಿಗೂ ಹೇಳದೆ, ಯಾರಿಗೂ ಗೊತ್ತಾಗಬಾರದು, ತನ್ನಿಂದ ಧಾರಾವಾಹಿಗೆ ತೊಂದರೆ ಆಗಬಾರದು' ಎಂದು ಮೂರನೇ ದಿನಕ್ಕೆ ಬಂದು ಡಬ್ಬಿಂಗ್ ಮುಗಿಸಿದ್ದಾರೆ ಎಂದು ಹೇಳಿದರು.

View post on Instagram

ಚಿಕ್ಕ ವಯಸ್ಸಾದರೂ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುವ ಗಣೇಶನಿಗೆ ಈ ಅವಾರ್ಡ್‌ ಸೂಕ್ತವೆಂದು ಹೇಳುತ್ತಾರೆ ಅಷ್ಟೇ ಅಲ್ಲದೆ ವೇದಿಕೆ ಮುಂದೆ ಆಸೀನರಾಗಿದ್ದ ಅತಿಥಿಗಳು ಎದ್ದು ನಿಂತು ಗಣೇಶನಿಗೆ ಚಪ್ಪಾಳೆ ತಟ್ಟಿದರು.