ಬಿಗ್ ಬಾಸ್ ಕನ್ನಡ ಸೀಸನ್ 10; ತ್ರಿಮೂರ್ತಿಗಳಲ್ಲಿ ವೋಟಿಂಗ್ ಗೆಲ್ಲೋದು ಯಾರು? ಮೂಡಿದೆ ಭಾರೀ ಕ್ರೇಜ್
ಬಿಗ್ ಬಾಸ್ ಪ್ರಿಯರಿಗೆ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಚಾರ್ಲಿ ಮನೆಯೊಳಗೆ ಇರಲಿರುವ 16 ಸ್ಪರ್ಧಿಗಳ ಪೈಕಿ ಒಂದೋ ಅಥವಾ ಎಕ್ಸ್‌ಟ್ರಾ ಪ್ಲೇಯರ್ ಆಗಿರುತ್ತೋ ಎಂಬುದು! ಕೆಲವರಿಗೆ ಅನ್ನಿಸಬಹುದು, ನಾಯಿಯನ್ನು ಮನುಷ್ಯರ ಜತೆ ಕಂನ್ಟೆಸ್ಟಂನ್ಟ್ ಆಗಿ ಕಳಿಸಲು ಸಾಧ್ಯವೇ ಎಂದು..!

ಬಿಗ್ ಬಾಸ್ ಕನ್ನಡ ಇಂದು (08 ಅಕ್ಟೋಬರ್ 2023) ಸಂಜೆ 6.00 ಕ್ಕೆ ಪ್ರೀಮಿಯರ್ ಶೋ ಪ್ರಸಾರದ ಮೂಲಕ ಶುರುವಾಗಲಿದೆ. ಅದಕ್ಕೂ ಮೊದಲು ಹೊಸದೊಂದು ಸಾಹಸ ಎಂಬಂತೆ, 3 ಸ್ಪರ್ಧಿಗಳನ್ನು ಬಿಗ್ ಬಾಸ್ ವೇದಿಕೆಗೆ ಕರೆದು ಅವರನ್ನು ಪರಿಚಯಿಸಿ, ವೀಕ್ಷಕರ ವೋಟಿಂಗ್ ಮೂಲಕ ಈ ಮೂವರನ್ನು ಒಳಗೆ ಬಿಡುವುದೋ ಅಥವಾ ಹೊರಗೆ ಬಿಡುವುದೋ ಎಂಬುದನ್ನು ನಿರ್ಧರತಿಸಲಾಗುವುದು ಎಂದು ಹೋಸ್ಟ್ ಸುದೀಪ್ ಹೇಳುವ ಮೂಲಕ ಹೊಸದೊಂದು ಟ್ವಿಸ್ಟ್ ಕೊಟ್ಟಿದ್ದಾರೆ ಈ ಬಾರಿಯ ಬಿಗ್ ಬಾಸ್‌ಗೆ.
ಡ್ರೋಣ್ ಪ್ರತಾಪ್, ವರ್ತೂರು ಸಂತೋಷ್ ಹಳ್ಳಿಕಾರ್ ಹಾಗೂ ರಕ್ಷಕ್ (ನಟ ಬುಲೆಟ್ ಪ್ರಕಾರ್ಶ ಮಗ) ಇದೀಗ ಈ ತ್ರಿಮೂರ್ತಿಗಳಲ್ಲಿ ಯಾರು ಒಳಗೆ ಹೋಗಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕು. ಇದು ಈ ಬಾರಿ ಬಿಗ್ ಬಾಸ್ ಶೋ ನ ಹೊಸ ಗಿಮಿಕ್ ಎನ್ನಲಾಗುತ್ತಿದೆ. ಇನ್ನೂ ಏನೇನೋ ಇರಬಹುದು, ಅವುಗಳನ್ನು ನೋಡಲು ಸಾಯಂಕಾಲ 6.00 ಗಂಟೆವರೆಗೆ ಕಾಯಲೇಬೇಕು. ಈಗಾಗಲೇ ಚಾರ್ಲಿಯನ್ನು (ನಟ ರಕ್ಷಿತ್ 'ಚಾರ್ಲಿ) ಸಿನಿಮಾದಲ್ಲಿ ಕಾಣಿಸಕೊಂಡಿದ್ದ ನಾಯಿ) ಬಿಗ್ ಬಾಸ್ ಮನೆಯೊಳಕ್ಕೆ ಕಳಿಸಲಾಗುವುದು ಎಂದು ಕಲರ್ಸ್ ಕನ್ನಡದ ಅಧಿಕೃತ ಪ್ರಕಟಣೆ ಹೇಳಿದೆ.
ಬಹಿರಂಗವಾಯ್ತು 'ಬಿಗ್ ಬಾಸ್' ಹೋಸ್ಟ್ ಕಿಚ್ಚ ಸುದೀಪ್ ಡಯಟ್ ಪ್ಲಾನ್ ಸೀಕ್ರೆಟ್
ಆದರೆ, ಬಿಗ್ ಬಾಸ್ ಪ್ರಿಯರಿಗೆ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಚಾರ್ಲಿ ಮನೆಯೊಳಗೆ ಇರಲಿರುವ 16 ಸ್ಪರ್ಧಿಗಳ ಪೈಕಿ ಒಂದೋ ಅಥವಾ ಎಕ್ಸ್‌ಟ್ರಾ ಪ್ಲೇಯರ್ ಆಗಿರುತ್ತೋ ಎಂಬುದು! ಕೆಲವರಿಗೆ ಅನ್ನಿಸಬಹುದು, ನಾಯಿಯನ್ನು ಮನುಷ್ಯರ ಜತೆ ಕಂನ್ಟೆಸ್ಟಂನ್ಟ್ ಆಗಿ ಕಳಿಸಲು ಸಾಧ್ಯವೇ ಎಂದು. ಆದರೆ, ಚಾರ್ಲಿ ಮಾಮೂಲಿ ನಾಯಿಯಲ್ಲ, ಅದು ಸ್ಪೆಷಲ್ ನಾಯಿ. ಆ ಕಾರಣಕ್ಕೇ ಬೇರೆ ನಾಯಿಗಳ ಹೊರತಾಗಿ ಈ ನಾಯಿಯನ್ನು ಕಳಿಸುತ್ತಿರುವುದು. ಆದರೆ, 16 ಸ್ಪರ್ಧಿಗಳು ಇದ್ದೇ ಇರುತ್ತಾರೆ, ನಾಯಿ ಎಕ್ಸ್‌ಟ್ರಾ ಪ್ಲೇಯರ್ ಎನ್ನಬಹುದು.
ಬಿಗ್ಬಾಸ್ ವೇದಿಕೆಯಲ್ಲಿ ಡ್ರೋಣ್ ಪ್ರತಾಪ್ ಪ್ರತ್ಯಕ್ಷ! ಕಾಗೆ ಹಾರಿಸೋಕೆ ರೆಡಿನಾ ಅಂತಿದ್ದಾರೆ ನೆಟ್ಟಿಗರು
ಯಾಕೆ ಏನೇನೋಈಗಲೂ ಗೆಸ್ ಮಾಡ್ಬೇಕು? ಇನ್ನೇನು ಸ್ವಲ್ಪ ಹೊತ್ತು ಅಷ್ಟೇ, ಬಿಗ್ ಬಾಸ್ ಶುರುವಾಗಲಿದೆ. 6.00 ಗಂಟೆಗೆ ಸ್ಟಾರ್ಟ್ ಆಗಲಿರುವ ಬಿಗ್ ಬಾಸ್ ಶೋ ಒಂದೊಂದಾಗಿ ಗುಟ್ಟುಗಳನ್ನು ರಟ್ಟು ಮಾಡುತ್ತಾ ಹೋಗಲಿದೆ. ನೋಡಿ, ಎಲ್ಲವನ್ನೂ ಒಂದೊಂದಾಗಿ ತಿಳಿದುಕೊಳ್ಳುತ್ತಾ ಇರಿ.. ಇಂದು ಭಾನುವಾರ ಬೇರೆ, ಆರಾಮಾಗಿ ಟಿವಿ ಮುಂದೆ ಆಸೀನರಾಗಿ ಬಿಗ್ ಬಾಸ್ ನೋಡಲು ಎಲ್ಲಾ ಅವಕಾಶಗಳೂ ಇವೆ. ಈ ಚಾನ್ಸ್ ಕೈ ಚೆಲ್ಲಿದರೆ, ನ್ಯೂಸ್‌ನಲ್ಲಿ ಕೂಡ ಎಲ್ಲವನ್ನೂ ತಿಳಿದು ಆನಂದಿಸಬಹುದು.