ಬಹಿರಂಗವಾಯ್ತು 'ಬಿಗ್ ಬಾಸ್' ಹೋಸ್ಟ್ ಕಿಚ್ಚ ಸುದೀಪ್ ಡಯಟ್ ಪ್ಲಾನ್ ಸೀಕ್ರೆಟ್
ಬಿಗ್ ಬಾಸ್ ಸೀಸನ್ 1 ರಿಂದ 9 ರ ತನಕವೂ ಇದನ್ನು ಹೋಸ್ಟ್ ಮಾಡಿದ್ದು ನಟ ಸುದೀಪ್. ಇದೀಗ ಹತ್ತನೇ ಆವೃತ್ತಿಗೆ (Bigg Boss Season 10) ಕೂಡ ನಟ ಸುದೀಪ್ ಅವರೇ ಹೋಸ್ಟ್ ಎಂಬುದು ಕನ್ಫರ್ಮ್. ಬಿಗ್ ಬಾಸ್ ಕನ್ನಡ ಶೋ ವನ್ನು ನಟ ಸುದೀಪ್ ತುಂಬಾ ಚೆಂದವಾಗಿ ನಡೆಸಿಕೊಡುತ್ತಾರೆ

ಬಿಗ್ ಬಾಸ್ ಕನ್ನಡ 'ಹೋಸ್ಟ್' ಸುದೀಪ್ ಎಂಬುದು ಸಹಜವಾಗಿಯೇ ಎಲ್ಲರಿಗೂ ಗೊತ್ತಿದೆ. ಕನ್ನಡದ ಬಿಗ್ ಬಾಸ್ ಶೋ ಶುರುವಾದಾಗಿನಿಂದ ಇಲ್ಲಿಯವರೆಗೂ ನಟ ಸುದೀಪ್ ಈ ಶೋ ನಡೆಸಿಕೊಡುತ್ತಿದ್ದಾರೆ. ಅದೆಷ್ಟೋ ಕಿರುತೆರೆ ವೀಕ್ಷಕರು ಹಾಗೂ ಕರ್ನಾಟಕದ ಪ್ರೇಕ್ಷಕರು ನಟ ಸುದೀಪ್ ಅವರಿಗಾಗಿಯೇ ಈ ಶೋವನ್ನು ನೋಡುತ್ತಾರೆ ಎಂಬುದು ಗುಟ್ಟಿನ ವಿಷಯವೇನೂ ಅಲ್ಲ. ಹೌದು, ಸುದೀಪ್ ಬಿಗ್ ಬಾಸ್ ಕನ್ನಡ ಶೋವನ್ನು ತುಂಬಾ ಚೆನ್ನಾಗಿ ನಡೆಸಿಕೊಡುತ್ತಾರೆ.
ಬಿಗ್ ಬಾಸ್ ಸೀಸನ್ 1 ರಿಂದ 9 ರ ತನಕವೂ ಇದನ್ನು ಹೋಸ್ಟ್ ಮಾಡಿದ್ದು ನಟ ಸುದೀಪ್. ಇದೀಗ ಹತ್ತನೇ ಆವೃತ್ತಿಗೆ (Bigg Boss Season 10) ಕೂಡ ನಟ ಸುದೀಪ್ ಅವರೇ ಹೋಸ್ಟ್ ಎಂಬುದು ಕನ್ಫರ್ಮ್. ಬಿಗ್ ಬಾಸ್ ಕನ್ನಡ ಶೋ ವನ್ನು ನಟ ಸುದೀಪ್ ಅದೆಷ್ಟು ಚೆಂದವಾಗಿ ನಡೆಸಿಕೊಡುತ್ತಾರೆ ಎಂದರೆ ವಾರಾಂತ್ಯದಲ್ಲಿ ಸುದೀಪ್ ಬಂದಾಗಲೇ ಬಿಗ್ ಬಾಸ್ ಟಿಆರ್‌ಪಿ 'ಟಾಪ್' ಲೆವೆಲ್‌ಗೆ ಹೋಗುತ್ತದೆ ಎಂಬುದು ಸತ್ಯ ಸಂಗತಿ. ಸುದೀಪ್ ಧ್ವನಿ ಮತ್ತು ನಿರೂಪಣೆ ಅದೆಷ್ಟು ಸೊಗಸು ಎಂದರೆ ನಟ ಸುದೀಪ್ ಅದೇ ಕಾರಣಕ್ಕೆ ಬಿಗ್ ಬಾಸ್‌ನಲ್ಲಿ ಎಲ್ಲರಿಗಿಂತಲೂ ಫೇಮಸ್.
ಅಂಥ ಸುದೀಪ್ ತುಂಬಾ ಫೀಟ್ ಆಗಿ ತಮ್ಮ ದೇಹವನ್ನು ಮೆಂಟೇನ್ ಮಾಡಿಕೊಂಡಿದ್ದಾರೆ. ಇದು ಸುದೀಪ್ ನೋಡುವ ಎಲ್ಲರಿಗೂ ಅರ್ಥವಾಗುವ ಸಂಗತಿ. ಹಾಗಿದ್ದರೆ ನಟ ಸುದೀಪ್ ಇಷ್ಟೊಂದು ಫೀಟ್ ಆಗಿರುವುದು ಹೇಗೆ? ವಯಸ್ಸು 50 ರ ಹತ್ತಿರವಿದ್ದರೂ ಸುದೀಪ್ ಇನ್ನೂ ಫೀಟ್‌ನೆಸ್ ಮೆಂಟೇನ್ ಮಾಡಿರುವ ರೀತಿ ಎಂಥವರನ್ನೂ ಅಚ್ಚರಿಗೊಳಿಸುತ್ತಿದೆ. ಹಾಗಿದ್ದರೆ ಕಿಚ್ಚ ಸುದೀಪ್ ಆಹಾರ-ವಿಹಾರಗಳು ಹೇಗಿವೆ? ಸುದೀಪ್ ಡಯಟ್ ಪ್ಲಾನ್ ಹೇಗಿದೆ? ಈ ಬಗ್ಗೆ ತಿಳಯುವ ಕುತೂಹಲ ಎಲ್ಲರಲ್ಲೂ ಇದೆ.
.ಡಿಂಗ್ರಿ ಕುಡಿ ರಾಜವರ್ಧನ್ 'ಗಜರಾಮ' ಆಗಮನ ಸನ್ನಿಹಿತ; ತುಪ್ಪದ ಬೆಡಗಿ ಥಕಧಿಮಿತ..!
ನಟ ಸುದೀಪ್ ಇತ್ತೀಚೆಗೆ 3 ಹೊತ್ತು ಊಟ ಮಾಡುವ ಬದಲು ಕೇವಲ ಎರಡು ಹೊತ್ತು ಮಾತ್ರ ತಿನ್ನುತ್ತಾರಂತೆ. ಲೇಟ್ ಮಾರ್ನಿಂಗ 11 ಗಂಟೆಗೆ ಮತ್ತು ಅರ್ಲಿ ನೈಟ್ 6.30 ಯಿಂದ 7 ಗಂಟೆ ಒಳಗೆ ಅವರು ಊಟ ಮಾಡುತ್ತಾರಂತೆ. ಮಾರ್ನಿಂಗ್ ಬ್ರೇಕ್‌ಫಾಸ್ಟ್ ಬದಲು ಮದ್ಯಾಹ್ನದ ಸಮೀಪದ ವೇಳೆ ಅಂದರೆ ಬೆಳಿಗ್ಗೆ 11 ಗಂಟೆಗೆ ಹೊಟ್ಟೆತುಂಬಾ ತಿಂಡಿ ತಿನ್ನುತ್ತಾರೆ. ಬಳಿಕ, ಮದ್ಯಾನ್ಹದ ಊಟ ಸ್ಕಿಪ್ ಮಾಡಿ ಸಾಯಂಕಾಲ 7 ಗಂಟೆ ಒಳಗೆ ರಾತ್ರಿ ಊಟ ಮಾಡುತ್ತಾರೆ ಅಷ್ಟೇ. ಹೊಟ್ಟೆಗೆ ಎರಡೇ ಹೊತ್ತು ಹಾಕುವ ಮೂಲಕ ಸುದೀಪ್ ದಿನವಿಡೀ ಎನರ್ಜಿ ಉಳಿಸಿಕೊಂಡು ಫೀಟ್‌ನೆಸ್ ಕಾಪಾಡಿಕೊಂಡಿದ್ದಾರಂತೆ.
ಬಿಗ್ ಬಾಸ್ ಕನ್ನಡ ಸೀಸನ್ 10; ಇಷ್ಟೊಂದು ದೊಡ್ಡ ಮನೆ ಬೇರೆಲ್ಲೂ ಇಲ್ಲ..!