Asianet Suvarna News Asianet Suvarna News

ಕಾಮಿಡಿ ಕಿಲಾಡಿಗಳು ಪ್ರವೀಣ್, ದೀಪಿಕಾ ಮೊದಲ ಕಿರುಚಿತ್ರ 'ಬೆಂಕಿಯ ಬಲೆ'ಗೆ ಇದೆಂಥಾ ಅನಿಸಿಕೆ ಬಂತಪ್ಪಾ..!

ಕಾಮಿಡಿ ಕಿಲಾಡಿಗಳು ಪ್ರವೀಣ್ ಹಾಗೂ ದೀಪಿಕಾ ಮೊದಲ ಕಿರುಚಿತ್ರ 'ಬೆಂಕಿಯ ಬಲೆ'ಗೆ ಮೈಸೂರು ಯುವಕ ತಮ್ಮ ಅನಿಸಿಕೆ ಬರೆದುಕೊಂಡಿದ್ದು, ಇದನ್ನು ಹೊಗಳಿಕೆ ಅನ್ನಬೇಕಾ ಅಥವಾ ತೆಗಳಿಕೆ ಅನ್ನಬೇಕಾ ನೀವಾದ್ರೂ ಹೇಳಿ..

Comedy Khiladi fame Praveen jain and Deepika gowda starring Benkiya bale short film get good Comment sat
Author
First Published Jun 23, 2024, 4:23 PM IST

ಬೆಂಗಳೂರು (ಜೂ.23): ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಕನ್ನಡಿಗರನ್ನು ನಗೆ ಕಡಲಲ್ಲಿ ತೇಲಿಸಿದ ಪ್ರವೀಣ್ ಜೈನ್ ಹಾಗೂ ದೀಪಿಕಾ ಗೌಡ ಅವರು ಕಿರು ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಈ ಕಿರುಚಿತ್ರದ ಬಗ್ಗೆ ಅನಿಸಿಕೆ ಬರೆದುಕೊಂಡಿರುವ ಮೈಸೂರಿನ ಯುವಕ ಹೊಗಳಿದ್ದಾನೋ..., ತೆಗಳಿದ್ದಾನೋ... ಒಂದಂತೂ ತಿಳಿಲಿಲ್ಲ. ಈತನ ಅನಿಸಿಕೆ ಓದಿ ನೀವಾದ್ರೂ ಒಂದು ತೀರ್ಮಾನಕ್ಕೆ ಬನ್ನಿ. ಜೊತೆಗೆ, ಅನಿಸಿಕೆ ಓದಿದ ನಂತರ ಕಿರು ಕಲಾವಿದರ ಕಿರುಚಿತ್ರ ನೋಡುವುದು ನೋಡುವುದು ಬಿಡುವುದು ಕೂಡ ನಿಮ್ಮ ಅನಿಸಿಕೆ..

ಮೈಸೂರಿನ ಕನ್ನಾಯಕನಹಳ್ಳಿ ಯುವಕ ಸುಹಾಸ್ ಎಂ. ಸುಮುಕ ಅವರು ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬೆದುಕೊಂಡಿದ್ದಾರೆ. 'ಎಲ್ಲರಿಗೂ ನಮಸ್ಕಾರ... 'ಬೆಂಕಿಯ ಬಲೆ' ಕಿರುಚಿತ್ರದ ಬಗ್ಗೆ ನನ್ನ ಅನಿಸಿಕೆ. ಇಲ್ಲಿಯವರೆಗೂ ದೀಪಿಕಾ ಗೌಡ ಹಾಗೂ ಪ್ರವೀಣ್ ಅವರನ್ನು ನಾವು ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲಿ ನೋಡಿದ್ದೆ ಹೆಚ್ಚು... ಈಗಲೂ ಕೂಡ 'ಬೆಂಕಿಯ ಬಲೆ' ಕಿರು ಚಿತ್ರದಲ್ಲೂ ಕೂಡ ಅವರನ್ನು ಈ ರೀತಿಯಲ್ಲೇ ನೋಡಬಹುದು. 

ಚಿತ್ರದ ನಿರ್ದೇಶಕ ಯುವ ಶೆಟ್ಟಿ ಅವರ ಕಥೆ ಹಾಗೂ ನಿರ್ದೇಶನ ಹಾಗೂ ಡೈಲಾಗ್ ಎಲ್ಲದರ ನಿರೂಪಣೆ ಶೈಲಿಯೇ ಎಲ್ಲ ಪ್ರೇಕ್ಷಕ ವೃಂದದವರಿಗೆ ತುಂಬಾ ಇಷ್ಟವಾಗಿದೆ ಎನ್ನಬಹುದು.. ಏಕೆಂದರೆ ಈ ಕಿರು ಚಿತ್ರದಲ್ಲಿ ಎಲ್ಲಾ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬೇಕಾಗಿರುವ ಎಲ್ಲಾ ಸರಕುಗಳನ್ನು ನಾವು ಕಾಣಬಹುದು. ಇದರಲ್ಲಿ ಹಾಸ್ಯ ಕೇಳುವವರಿಗೆ ತಿಳಿಹಾಸ್ಯ ಹಾಗೂ ಎಮೋಷನ್ಸ್ ಕೇಳುವವರಿಗೆ ಎಮೋಷನ್ಸ್ , ಟ್ವಿಸ್ಟ್ ಕೇಳುವವರಿಗೆ ಟ್ವಿಸ್ಟ್ ಎಲ್ಲವೂ ಕೂಡ ಈ ಬೆಂಕಿಯ ಬಲೆ ಕಿರುಚಿತ್ರದಲ್ಲಿ ಕಾಣಬಹುದು.

ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯೊಂದಿಗೆ ನಟಿ ಪವಿತ್ರಾಗೌಡ ಕಿರಿಕ್; ಒಳ್ಳೆ ಊಟ, ಮೆತ್ತನೆ ಹಾಸಿಗೆಗೆ ಹಠ

ಇನ್ನು ಟೈಟಲ್ ವಿಚಾರಕ್ಕೆ ಬಂದರೆ 'ಬೆಂಕಿಯ ಬಲೆ' ಚಿತ್ರ ನೋಡುವಾಗ ನನಗನಿಸಿದ್ದು, ಇದು ಬೆಂಕಿಯ ಬಲೆ ಅಲ್ಲ ಭಯಂಕರ ಬಲೆ ಅಂಥ. ಯಾಕಂದ್ರೆ ನಟಿ ದೀಪಿಕಾ ಗೌಡ ಅವರ ಬಲೆಯಲ್ಲಿ ಅದೆಷ್ಟು ಮಂದಿ ಬಿದ್ದಿದ್ದಾರೆ ಅಂಥ ನೀವು ಚಿತ್ರ ನೋಡಿನೆ ಅರ್ಥ ಮಾಡ್ಕೋಬೇಕು... ಚಿತ್ರದ ಮೊದಲಿಗೆ ಕಂಡ ಅವರ ಪ್ರೀತಿಯ ನುಡಿಗಳು ಹಾಗೆ ಆ ಕರಾವಳಿ ಭಾಷೆಯನ್ನ ಕೇಳ್ತಾ ಮುಂದೆ ಸಡನ್ ಆಗಿ ಮದುವೆ ಎಂದರೆ ನನಗೆ ಶಾಕ್.. ಪಾಪ ಆ ಬೆಂಕಿಯ ಬಲೆಯಲ್ಲಿ ಸಿಕ್ಕ ಪ್ರವೀಣ್ ಅವರನ್ನು ನೋಡ್ತಾ ಇದ್ದರೆ, ಅಯ್ಯೋ ಪಾಪ ಅನ್ನಿಸ್ತು... ಮುಂದೆ ಹೋಗ್ತಾ ಹೋಗ್ತಾ ನನಗೆ ಕಂಡದ್ದು ದೀಪಿಕಾ ಗೌಡ ರವರ ಭಯಂಕರ ಬಲೆ...

ಮದುವೆಯಾದ ನಂತರ ಅವರು ಪ್ರವೀಣ್ ಅವರಿಗೆ ಕೊಡ್ತಿದ್ದ ಎಕ್ಸಪ್ರೆಷನ್ ನೋಡಿ ಇವರ ಪ್ರೀತಿಯಲ್ಲಿ ಹೀಗಾಗಬಾರದಿತ್ತು ಅಂಥ ಬೇಜಾರ್ ಆಗ್ತಾ ಇತ್ತು . ಅದಕ್ಕೆ ಮೇನ್ ರೀಸನ್ ಆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಾತ್ರ ಸೂಪರ್. ಪ್ರತಿ ಸೀನ್ ಅಲ್ಲೂ ಅಲ್ಲಿ ಬರುವ ಸಾಂಗ್ ಆಗಿರಬಹುದು ಮ್ಯೂಸಿಕ್ ಆಗಿರಬವುದು ತುಂಬಾ ಚೆನ್ನಾಗಿ ಪುಷ್ ಕೊಟ್ಟಿದೆ ಎನ್ನಬಹುದು. ನೀಲ ಮೇಘ ಶ್ಯಾಮ ಹಾಗೂ ಆರ್ಕೆಸ್ಟ್ರಾ ಅಲ್ಲಿ ಬರುವ ಏನಾಯ್ತೋ ಏನಾಯ್ತೋ, ಏನಾಗಲಿ ಮುಂದೆ ಸಾಗು ನೀ , ಬಯಸಿದ್ದೆಲ್ಲ ಸಿಗದು ಬಾಳಲಿ ಇವೆಲ್ಲವೂ ಕೂಡಾ "ವ್ಹಾ" ಅಂಥ ಅಂದುಕೊಳ್ತಾನೆ ನೋಡುವಾಗ ಪ್ರವೀಣ ನಾ ಸ್ಥಿತಿ ನೋಡಿ ಅಳಬೇಕೋ ನಗಬೇಕೋ ಒಂದು ತಿಳಿಯಲ್ಲ..

ಪತ್ನಿ ಬಿಟ್ಟು ಬಾ ಎಂದು ಹೇಳಿಲ್ಲ, ನನ್ನಿಂದ ತಪ್ಪಾಗಿದೆ, ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಲೀಕ್!

ಹಾಗೆ ರಿಸಪ್ಷನ್ ಅಲ್ಲಿ ಹುಡುಗನ ಸ್ನೇಹಿತ ಶೇಕೆಂಡ್ ಕೊಡುವಾಗ ಕೈ ಮುಗಿತರಲ್ಲ ದೀಪಿಕಾ ಗೌಡ ಅವ್ರು ಅವಾಗ ಅಂತೂ ನಗು ಬಾರದೆ ಇರಲ್ಲ.. ಹಳೆಯ ಲವರ್ಸ್ ಎಲ್ಲರನ್ನೂ ತನ್ನ ಮದುವೆಯಲ್ಲಿ ಖರ್ಚಿಲ್ಲದೆ ಯೂಸ್ ಮಾಡ್ಕೊಂಡ ಕಾನ್ಸೆಪ್ಟ್ ಮಾತ್ರ ಚಿಂದಿ ಅಂಥ ಹೇಳ್ಬೋದು.. ಒಟ್ಟಿನಲ್ಲಿ ಈ ಕಿರು ಚಿತ್ರ ಮಾತ್ರ ತುಂಬಾ ವಿಭಿನ್ನ ಹಾಗು ಹೊಸತನದಿಂದ ಕೂಡಿದೆ.. ಎಲ್ಲ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ತಕ್ಕಂತೆ ತುಂಬಾ ಚೆನ್ನಾಗಿ ಅಭಿನಹಿಸಿದ್ದಾರೆ..ದೀಪಿಕಾ ಗೌಡ ಹಾಗು ಪ್ರವೀಣ ಅವರ ಅಭಿನಯ ಅಂತೂ ಸೂಪರ್.. ಇಂದಿನ ದಿನಗಳಲ್ಲಿ ನಡೆಯುತ್ತಿರುವ ವಾಸ್ತವದ ಚಿತ್ರಣವನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ.

ಇನ್ನು ಯಾರ್ ನೋಡಿಲ್ಲ 'ಬೆಂಕಿಯ ಬಲೆ' ಕಿರು ಚಿತ್ರವನ್ನು ಈಗಲೇ ಹೋಗಿ @GOODTOGO ಚಾನಲ್ ಅಲ್ಲಿ ನೋಡಿ ಆನಂದಿಸಿ' ಎಂದು ಬರೆದುಕೊಂಡಿದ್ದಾರೆ. 

ಸುಮುಕ ಅವರ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ (@maathu_barahavagide) ನೀವು ಈ ಬರಹವನ್ನೂ ನೋಡಬಹುದು. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಕೂಡ ಬಂದಿವೆ. ಇನ್ನು ಈ ಅನಿಸಿಕೆಯನ್ನು ಸ್ವತಃ ಕಿರು ಚಿತ್ರ ನಟ ಪ್ರವೀಣ್ ಜೈನ್ ಕೂಡ ಹಂಚಿಕೊಂಡಿದ್ದಾರೆ. ಇನ್ನು ಈ ಕಿರುಚಿತ್ರವನ್ನು ಈ ಲಿಂಕ್ ಕ್ಲಿಕ್ ಮಾಡಿ ( https://youtu.be/jGObVQtPMb8?si=hXWJuPYNx4ZnQTxp ) ನೋಡಬಹುದು..

Latest Videos
Follow Us:
Download App:
  • android
  • ios