Asianet Suvarna News Asianet Suvarna News

ಪತ್ನಿ ಬಿಟ್ಟು ಬಾ ಎಂದು ಹೇಳಿಲ್ಲ, ನನ್ನಿಂದ ತಪ್ಪಾಗಿದೆ, ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಲೀಕ್!

ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಡಿವೋರ್ಸ್ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿರುವ ಹೆಸರು ನಟಿ ಸಪ್ತಮಿ ಗೌಡ. ಇದೀಗ ಇದೇ ಡಿವೋರ್ಸ್‌ಗೆ ಕಾರಣವಾಗಿರುವ ಪ್ರಮುಖ ಘಟನೆಯ ಆಡಿಯೋ ಲೀಕ್ ಆಗಿದೆ. ನಟಿ ಸಪ್ತಮಿ ಗೌಡ ಅವರದ್ದು ಎನ್ನಲಾದ ಈ ಆಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ. 

Yuva rajkumar divorce case sapthami gowda Allegedly Audio leak on Relationship with Actor ckm
Author
First Published Jun 23, 2024, 2:28 PM IST

ಬೆಂಗಳೂರು(ಜೂ.23) ನಟ ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಡಿವೋರ್ಸ್ ಪ್ರಕರ ನ್ಯಾಯಲದಲ್ಲಿದೆ. ಯುವ ವಕೀಲರ ಆರೋಪದ ಬೆನ್ನಲ್ಲೇ ಶ್ರೀದೇವಿ ಮಾಡಿದ ಆರೋಪಗಳು ಕನ್ನಡ ಚಿತ್ರರಂಗವನ್ನೆ ಕಂಪಿಸಿತ್ತು. ಯುವ ರಾಜ್‌ಕುಮಾರ್, ನಟಿ ಸಪ್ತಮಿ ಗೌಡ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ. ಹೊಟೆಲ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಿದ್ದು. ಇದೀಗ ಈ ಆರೋಪಗಳಿಗೆ ಪುಷ್ಠಿ ನೀಡುವ ಆಡಿಯೋ ಲೀಕ್ ಆಗಿದೆ. ನಟಿ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಇದಾಗಿದ್ದು, ಯುವ ರಾಜ್ ಕುಮಾರ್ ಜೊತೆಗಿನ ಸಂಬಂಧ, ನಡೆದ ಘಟನೆ ಕುರಿತು ಮಾತನಾಡಿದ್ದಾರೆ.

ವೈರಲ್ ಆಗಿರುವ ಆಡಿಯೋ ಮಹಿಳೆಯೊಬ್ಬರು ಅಳುತ್ತಾ ರೆಕಾರ್ಡ್ ಮಾಡಿದ ಆಡಿಯೋ ಆಗಿದೆ. ಧ್ವನಿ ಸಪ್ತಮಿ ಗೌಡ ಅವರ ಧ್ವನಿಯನ್ನು ಹೋಲುತ್ತಿದೆ. ‘ಹೌದು ನನ್ನಿಂದ ಹಲವರಿಗೆ ನೋವಾಗಿದೆ. ನನ್ನದು ತಪ್ಪಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ನಾನು ಗುರು(ಯುವ ಮೂಲ ಹೆಸರು) ನಂಬಿ ಮಾಡಿದೆ. ನಿಮ್ಮ ಸೆಟ್ ಅಲ್ಲಿ ಆಗಿದೆ, ಸಾರಿ ಸರ್’ ಎಂಬ ಮಾತುಗಳು ಆಡಿಯೋನಲ್ಲಿವೆ. ಈ ಆಡಿಯೋವನ್ನು ಸಪ್ತಮಿ, ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕಳಿಸಿದ್ದಾರೆ ಎನ್ನಲಾಗುತ್ತಿದೆ.

ಯುವ ರಾಜ್‌ಕುಮಾರ್‌ ಮನೆಯಲ್ಲಿ ಸಪ್ತಮಿ ಗೌಡ; ಅಣ್ಣಾವ್ರ ಬಟ್ಟೆ ಮುಟ್ಟಿ ಎಲ್ಲರಿಗೂ ಹೇಳಿಕೊಂಡು ಓಡಾಡಿದ ನಟಿ!

‘ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್​ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ’ ಎಂಬ ಮಾತುಗಳು ಆಡಿಯೋನಲ್ಲಿದೆ.

ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಅಲ್ಲದೆ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೊ ಎಂದು ಹೇಳಿಲ್ಲ ಸರ್ ನನ್ನನ್ನು ನಂಬಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಗುರು (ಯುವ)ಗೆ ಅದು ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ’ ಎಂದು ಸಪ್ತಮಿ ಅವರದ್ದು ಎನ್ನಲಾದ ಆಡಿಯೋನಲ್ಲಿ ಹೇಳಲಾಗಿದೆ.

ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಯುವ ಬಾಳಿಗೆ ಸಪ್ತಮಿ ಗೌಡ ಎಂಟ್ರಿ ಆಗಿದೆ ಎನ್ನಲಾಗುತ್ತಿದೆ. ‘ಯುವ’ ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತುಗಳು ಸಹ ಈ ಹಿಂದೆ ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಆ ಸಮಯದಲ್ಲಿ ಸಪ್ತಮಿ ಅವರು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಕಳಿಸಿದ್ದ ಆಡಿಯೋ ಇದು ಎನ್ನಲಾಗುತ್ತಿದೆ.

ಶ್ರೀದೇವಿ ಭೈರಪ್ಪ ವಿರುದ್ಧ 10 ಕೋಟಿಯ ಮಾನನಷ್ಟ ಕೇಸ್‌ ಹಾಕಿದ ಸಪ್ತಮಿ ಗೌಡ!
 

Latest Videos
Follow Us:
Download App:
  • android
  • ios