ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯೊಂದಿಗೆ ನಟಿ ಪವಿತ್ರಾಗೌಡ ಕಿರಿಕ್; ಒಳ್ಳೆ ಊಟ, ಮೆತ್ತನೆ ಹಾಸಿಗೆಗೆ ಹಠ
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ 2ನೇ ಪತ್ನಿ ನಟಿ ಪವಿತ್ರಾಗೌಡ ಜೈಲಿನ ಮಹಿಳಾ ಸಿಬ್ಬಂದಿಯೊಂದಿಗೆ ಸಣ್ಣ ಸಣ್ಣ ವಿಚಾರಕ್ಕೂ ಕಿರಿಕ್ ಮಾಡುತ್ತಿದ್ದಾರೆ.
ಬೆಂಗಳೂರು (ಜೂ.23): ಚಿತ್ರದುರ್ಗದ ರೇಣುಕಾಸ್ವಾಮಿ (Reuka Swamy) ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ 2ನೇ ಪತ್ನಿ ನಟಿ ಪವಿತ್ರಾಗೌಡ (Pavithra Gowda) ಜೈಲಿನ ಮಹಿಳಾ ಸಿಬ್ಬಂದಿಯೊಂದಿಗೆ ಸಣ್ಣ ಸಣ್ಣ ವಿಚಾರಕ್ಕೂ ಕಿರಿಕ್ ಮಾಡುತ್ತಿದ್ದಾರೆ. ನನಗೆ ಒಳ್ಳೆಯ ಊಟ ಕೊಡಿ, ಮನೆಯಿಂದ ಮೆತ್ತನೆಯ ಬ್ಲಾಂಕೆಟ್ ತರಿಸಿಕೊಡಿ ಎಂದೆಲ್ಲಾ ಹಠ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ. ಈ ಕೊಲೆ ಆರೋಪದಲ್ಲಿ ನಟ ದರ್ಶನ್, ಆತನ 2ನೇ ಪತ್ನಿ ಪವಿತ್ರಾಗೌಡ ಸೇರಿ 16 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿದ್ದಾರೆ. ಆದರೆ, ಇಲ್ಲಿ ನಟಿ ಪವಿತ್ರಾಗೌಡ ಮಾತ್ರ ಜೈಲಿನ ಮಹಿಳಾ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡುತ್ತಿದ್ದಾರೆ. ಜೈಲಿನಲ್ಲಿದ್ದರೂ ಮನೆಯಲ್ಲಿರುವ ಸೌಲಭ್ಯಗಳನ್ನು ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಆರೋಪಿ ನಟಿ ಪವಿತ್ರಾ ಗೌಡಗೆ ಜೈಲಿನಲ್ಲಿ ಮಲಗಲು ಜೈಲಿನ ಬ್ಲಾಂಕೆಟ್ ಅನ್ನು ನೀಡಲಾಗಿತ್ತು. ಆದರೆ, ಈ ಬ್ಲಾಂಕೆಟ್ ನನಗೆ ಬೇಡ. ಇದನ್ನು ಯಾರಾರು ಹೊದ್ದು ಮಲಗಿದ್ದಾರೋ ಗೊತ್ತಿಲ್ಲ. ಸ್ವಚ್ಛಗೊಳಿಸಿದ್ದರೂ ಇದನ್ನು ನಾನು ಉಪಯೋಗಿಸುವುದಿಲ್ಲ ಎಂದು ಜೈಲಿನ ಮಹಿಳಾ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾಳೆ. ಈ ವೇಳೆ ಎಷ್ಟೇ ಸಮಾಧಾನ ಮಾಡಿದರೂ ಕೇಳದೇ ನನಗೆ ಮಲಗಲು ನಮ್ಮ ಮನೆಯಿಂದ ಪ್ರತ್ಯೇಕ ಬ್ಲಾಂಕೆಟ್ ತರಿಸಿಕೊಡಿ ಎಂದು ಕಿರಿಕ್ ಮಾಡಿದ್ದಾಳೆ.
ಕಸ್ಟಡಿಯಲ್ಲಿ 12 ದಿನ, ಜಿಮ್ , ಊಟ, ನಿದ್ದೆಯೂ ಇಲ್ಲ, ಇಷ್ಟೊಂದು ತೂಕ ಕಳೆದುಕೊಂಡ ನಟ ದರ್ಶನ್ !
ಜೊತೆಗೆ, ಜೈಲಿನಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಕಿರಿಕ್ ಮಾಡುತ್ತಾ ನನಗೆ ಅದು ಬೇಕು, ಇದು ಬೇಕು ಅಂತ ಪವಿತ್ರಾ ಗೌಡ ಹಠ ಮಾಡುತ್ತಿದ್ದಾಳೆ. ಇನ್ನು ವಿಚಾರಣಾಧೀನ ಕೈದಿಗೂ ಕೂಡ ಜೈಲಿನಲ್ಲಿರುವ ಅಪರಾಧಿಗಳಿಗೆ ಕೊಡುವ ಊಟವನ್ನೇ ಕೊಡಲಾಗುತ್ತದೆ. ಆದರೆ, ನನಗೆ ಜೈಲು ಊಟ ಬೇಡ ಎಂದು ಊಟ ಮಾಡಲು ನಿರಾಕರಣೆ ಮಾಡುತ್ತಿದ್ದಾಳೆ. ಇದರಿಂದ ಕೋಪಗೊಂಡ ಜೈಲು ಸಿಬ್ಬಂದಿ ನಿಮ್ಮ ಮನೆಯಲ್ಲ ಎಂದ ಜೈಲು ಇದನ್ನೇ ನೀನು ತಿನ್ನಬೇಕು. ಇಲ್ಲಿ ಕೊಡುವ ಸೌಕರ್ಯಗಳನ್ನು ಮಾತ್ರ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ನೀನು ಕೇಳಿದ ಸೌಕರ್ಯಗಳನ್ನು ಜೈಲಿನಲ್ಲಿ ಒದಗಿಸಲು ಸಾಧ್ಯವಿಲ್ಲ ಎಂದು ಜೈಲಿನ ಸಿಬ್ಬಂದಿ ನಟಿ ಪವಿತ್ರಾಗೌಡ ಅವರಿಗೆ ಖಡಕ್ ಆಗಿ ಹೇಳಿದ್ದಾರೆ.
ಜೈಲಿನಲ್ಲಿ ಮಂಕು ಬಡಿದಂತೆ ಕುಳಿತ ನಟ ದರ್ಶನ್ : ರೇಣುಕಾಸ್ವಾಮಿ (Renuka swamy) ಬರ್ಬರ ಹತ್ಯೆ ಕೇಸಿನಲ್ಲಿ ಬಂಧಿತನಾಗಿರುವ ನಟ ದರ್ಶನ್ (Darshan thoogudeepa) ಮತ್ತು ಮೂವರು ಸಹಚರರನ್ನು ನಿನ್ನೆ ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಆಪ್ತರಾದ ವಿನಯ್, ಪ್ರದೂಷ್ ಹಾಗೂ ಧನರಾಜ್‌ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಇಡಲಾಗಿದೆ. ಆದರೆ, ಪೊಲೀಸ್ಟ್ ಕಸ್ಟಡಿಯಲ್ಲಿದ್ದ ದರ್ಶನ್ ತನಿಖೆಯಿಂದ ಮಾನಸಿಕವಾಗಿಯೂ ಹೈರಾಣಾಗಿದ್ದಂತೆ ಕಂಡರು.
ತುಮಕೂರು ಕಾಲೇಜು ವಿದ್ಯಾರ್ಥಿನಿ ಅಂಕಲ್‌ನೊಂದಿಗೆ ಪರಾರಿ; ನಾಲ್ಕು ದಿನದ ಬಳಿಕ ಶವವಾಗಿ ಪತ್ತೆಯಾದ ಕುವರಿ
ಪೊಲೀಸರ ವಿಚಾರಣೆಯ ನಡುವೆ ನಡುವೆ ಸರಿಯಾಗಿ ಆಹಾರ ಸೇವಿಸದೆ, ದೈಹಿಕವಾಗಿ ಬಳಲಿದ್ದಾರೆ. ಇನ್ನು ಜೈಲು ಸೇರಿದ ನಂತರ ತಡರಾತ್ರಿವರೆಗೂ ಕುಳಿತಲ್ಲೇ ಮಂಕಾಗಿದ್ದ ದರ್ಶನ್, ರಾತ್ರಿ ಸುಮಾರು 11.30ರ ನಂತರ ನಿದ್ದೆಗೆ ಜಾರಿದ್ದಾರೆ. ಮುಂಜಾನೆ 6.30ಕ್ಕೆ ಎದ್ದು ನಿತ್ಯ ಕರ್ಮ ಮುಗಿಸಿ ಕೊಠಡಿಯಲ್ಲಿ ಸುಮ್ಮನೆ ಕುಳಿತಿದ್ದರು. ಬೆಳಗ್ಗೆ ಕಾಫಿ ಕುಡಿಯದೇ, ಪೇಪರ್ ಕೂಡ ನೋಡದೇ ಸ್ವಲ್ಪ ತಿಂಡಿ ಸೇವಿಸಿ ಮಂಕಾಗಿ ಕುಳಿತಿದ್ದಾರೆ ಎಂದು ತಿಳಿದುಬಂದಿದೆ.