ಮಟನ್ ಫ್ರೈ ಮಾಡಿದ ರೀಲ್ಸ್ ಜೋಡಿ. ಇಂಡಸ್ಟ್ರಿ ಹುಡುಗ ಅಂತ ಯಾರೂ ಹುಡುಗಿ ಕೊಡದ ಸಮಯದಲ್ಲಿ ದೇವತೆಯಾಗ ಬಂದ ಮೌಲ್ಯಾ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸವಿ ರುಚಿ ಕಾರ್ಯಕ್ರಮದಲ್ಲಿ ರೀಲ್ಸ್ ಜೋಡಿ ಪ್ರತೀಕ್ ಮತ್ತು ಮೌಲ್ಯಾ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಶೈಲಿಯ ಮಟನ್ ಫ್ರೈ ಮಾಡುವುದು ಹೇಗೆ ಎಂದು ಮೌಲ್ಯಾ ತೋರಿಸಿಕೊಡುತ್ತಿದ್ದಾರೆ. ಅಡುಗೆ ಜೊತೆ ತಮ್ಮ ಲವ್ ಸ್ಟೋರಿಯನ್ನು ಈ ಕಪಲ್ಸ್ ಹಂಚಿಕೊಂಡಿದ್ದಾರೆ. ಮೌಲ್ಯಾ ಮೂಲತಃ ಬೆಂಗಳೂರಿನ ಹುಡುಗಿ, ಪ್ರತೀಕ್ ಮೈಸೂರು ಹುಡುಗ ಆಗಿದ್ದು ಬೆಂಗಳೂರಿಗೆ ಬಂದು 10-12 ವರ್ಷ ಆಗಿದೆ. ಈ ಜೋಡಿಯದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಕೆಲವು ತಿಂಗಳ ಹಿಂದೆ ಮುದ್ದಾಗ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ.
ಬೆಂಗಳೂರು ಹುಡುಗಿ ಮೌಲ್ಯಾ ಜಿಮ್ ಟ್ರೈನರ್ ಆಗಿ ಕೆಲಸ ಆರಂಭಿಸಿದ್ದರು, ಆಕೆಯ ಸ್ಟುಡೆಂಟ್ ಆಗಿ ಪ್ರತೀಕ್ ಸೇರಿಕೊಂಡಿದ್ದರು. ಅಲ್ಲಿಂದ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇದರ ನಡುವೆ ತಮ್ಮ ಹಳೆ ಲವ್ ಸ್ಟೋರಿ, ಕ್ರಶ್ ಹೀಗೆ ಸಣ್ಣ ಪುಟ್ಟದನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಪ್ರತೀಕ್ ಮನೆಯಲ್ಲಿ ಹುಡುಗಿ ಹುಡುಕಲು ಶುರು ಮಾಡಿದ್ದರು ಆಗ ಕೂಡ ಮೌಲ್ಯಾನೇ ಹಲವು ಹುಡುಗಿಯರ ಫೋಟೋವನ್ನು ಕಳುಹಿಸುತ್ತಿದ್ದರಂತೆ. ಇವರಿಬ್ಬರ ರೀಲ್ಸ್‌ನ ನೋಡಿ ಎಲ್ಲರೂ ಲವ್ ಮಾಡಿ ಮದುವೆ ಆಗಿದ್ದು ಅಂದುಕೊಳ್ಳುತ್ತಾರೆ...ಆದರೆ ಸ್ಟೋರಿ ಬೇರೆನೇ ಇದೆ.
20 ಲಕ್ಷ ರೂ. ಬೆಲೆಯ ಕ್ಯಾಮೆರಾ ಬಳಸುತ್ತಿರುವ ಹಳ್ಳಿ ಜನ; 'Village cooking' ಚಾನೆಲ್‌ನಲ್ಲಿ ಬಡವರಿಗೆ
ಒಬ್ಬರನ್ನೊಬ್ಬರು ಮಚ್ಚಾ ಮಚ್ಚಿ ಎಂದು ಕರೆದುಕೊಂಡು ಒಳ್ಳೆಯ ಸ್ನೇಹಿತರಾಗಿದ್ದರು. ಸ್ನೇಹಿತರಾಗಿದ್ದಾನ ಜೀವನ ಚೆನ್ನಾಗಿತ್ತು ಮದುವೆ ಆದ್ಮೇಲೆ ಸಂಸಾರ ಈಗ ಮಗ ಅಂತ ದೊಡ್ಡ ಹಾದಿ ಹಿಡಿದಿದೆ ಎಂದು ಮೌಲ್ಯಾ ಹೇಳುತ್ತಾರೆ. ಸ್ನೇಹಿತರಾಗಿದ್ದಾಗ ಎಲ್ಲವನ್ನು ಶೇರ್ ಮಾಡಿಕೊಂಡಿದ್ದೀನಿ ಏನೂ ಬಿಟ್ಟಿಲ್ಲ ಆದರೆ ಈಗ ಒಂದು ಮೆಸೇಜ್ ಬಂದರೆ ಸಾಕು ಒಂದು ಲುಕ್ ಬರುತ್ತೆ ಎಂದು ಪ್ರತೀಕ್ ಹೇಳಿದ್ದಾರೆ. ಸ್ನೇಹಿತರಾಗಿದ್ದಾಗ ನಾವಿಬ್ಬರೂ ಮದುವೆ ಆಗುತ್ತೀವಿ ಅನ್ನೋ ಐಡಿಯಾನೂ ಇಲ್ಲ. ಸ್ನೇಹಿತೆಯನ್ನು ಮದುವೆ ಅಗಿದ್ದಕ್ಕೆ ಖುಷಿ ಎಷ್ಟಿದೆ ದುಃಖನೂ ಅಷ್ಟೇ ಇದೆ ಎಂದು ಪ್ರತೀಕ್ ಹಾಸ್ಯ ಮಾಡಿದ್ದಾರೆ.
ಅಮಲಾಗೆ ಕಪಾಳಕ್ಕೆ ಬಾರಿಸಿದ ಆರಾಧನಾ; 3rd ಕ್ಲಾಸ್ ಫ್ಯಾಮಿಲಿ ಅಂದವರಿಗೆ ಪಾಠ!
