20 ಲಕ್ಷ ರೂ. ಬೆಲೆಯ ಕ್ಯಾಮೆರಾ ಬಳಸುತ್ತಿರುವ ಹಳ್ಳಿ ಜನ; 'Village cooking' ಚಾನೆಲ್‌ನಲ್ಲಿ ಬಡವರಿಗೆ ಅನ್ನದಾನ!
ಯೂಟ್ಯೂಬ್ ವಿಡಿಯೋ ಚಿತ್ರೀಕರಣ ಮಾಡಲು ದುಬಾರಿ ಕ್ಯಾಮೆರಾ ಬಳಸುತ್ತಿರುವ ರೈತರು. ಇದರ ಬೆಲೆ ಕೇಳಿ ಶಾಕ್ ಆಗ್ಬೇಡಿ....
ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಪ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ಆಪ್‌ಗಳಿಂದ ಜೀವನ ನಡೆಸುತ್ತಿರುವ ಸಾವಿರಾರು ಮಂದಿಯಲ್ಲಿ ವಿಲೇಜ್ ಕುಕ್ಕಿಂಗ್ ತಂಡವೂ ಒಂದು. ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ 6 ರೈತ ಕುಟುಂಬದವರು ಸೇರಿಕೊಂಡು 2018ರಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಾರೆ. ಸುಮಾರು 25.4 ಮಿಲಿಯನ್ ಅಂದ್ರೆ ಎರಡುವರೆ ಕೋಟಿ ಜನರು ಈ ಚಾನೆಲ್‌ನ ಸ್ಬಸ್ಕ್ರೈಬ್ ಮಾಡಿದ್ದಾರೆ. ಇದರಿಂದ ಇವರಿಗೆ ಸಿಲ್ವರ್ ಪ್ಲೇ ಬಟನ್, ಗೋಲ್ಡನ್ ಪ್ಲೇ ಬಟನ್ ಹಾಗೂ ಡೈಮೆಂಟ್ ಪ್ಲೇ ಬಟನ್ ಲಭ್ಯವಾಗಿದೆ.
ಎಮ್ ಪೆರಿಯಾತಂಬಿ ಮತ್ತು ಮಮ್ಮೊಕ್ಕಳು ಸೇರಿ ಮಾಡುತ್ತಿರುವ ಈ ಚಾನೆಲ್ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದೆ. ಹಣ ಬರುತ್ತಿದೆ ಅಂತ ಶೋಕಿ ಮಾಡುವುದು ಅಥವಾ ಮತ್ತೊಂದು ರೀತಿಯಲ್ಲಿ ಚರ್ಚು ಮಾಡುವುದು ಮಾಡುತ್ತಿಲ್ಲ. ಒಂದು ವಿಡಿಯೋದಿಂದ ಬಂದ ಹಣವನ್ನು ಮತ್ತೊಂದು ವಿಡಿಯೋ ಖರ್ಚಿಗೆ ಬಳಸುತ್ತಿದ್ದಾರೆ. ಅಲ್ಲದೆ ಅಡುಗೆ ಮಾಡಿದ ನಂತರ ತಮ್ಮ ಹಳ್ಳಿಯ ಬಳಿ ಇರುವ ವೃದ್ಧಾಶ್ರಮ, ಆಸ್ಪತ್ರೆಗಳು ಮತ್ತು ಬಡವರಿಗೆ ಅನ್ನದಾನ ಮಾಡುತ್ತಾರೆ. ಒಂದು ಅಗಲು ವೇಸ್ಟ್ ಆಗದಂತೆ ಹಂಚಿಕೊಂಡು ತಿನ್ನುತ್ತಾರೆ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ತಮಿಳು ನಾಡು ಸರ್ಕಾರಕ್ಕೆ 10 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು.
ಅಮಲಾಗೆ ಕಪ್ಪಾಳಕ್ಕೆ ಬಾರಿಸಿದ ಆರಾಧನಾ; 3rd ಕ್ಲಾಸ್ ಫ್ಯಾಮಿಲಿ ಅಂದವರಿಗೆ ಪಾಠ!
ಕಮಲ್ ಹಾಸನ್ ನಟಿಸಿರುವ ವಿಕ್ರಂ ಸಿನಿಮಾದಲ್ಲಿ ಇಡೀ ವಿಲೇಜ್ ಕುಕ್ಕಿಂಗ್ ತಂಡ ಕಾಣಿಸಿಕೊಂಡಿತ್ತು. ದೇಶಾದ್ಯಂತ ಇವರ ವಿಡಿಯೋ ವೈರಲ್ ಆಗುತ್ತಿದ್ದು ಊರಿಗೆ ಹೆಮ್ಮೆ ಎಂದಿದ್ದಾರೆ. ಇನ್ನು ಶೂಟಿಂಗ್ ಮಾಡಲು ಇವರು ಬಳಸುವುದು ರೆಡ್ ಕ್ಯಾಮೆರಾ 8ಕೆ ಎಂದು, ಇದರ ಬೆಲೆ ಸುಮಾರು 20 ಲಕ್ಷ ರೂಪಾಯಿ ಎನ್ನಲಾಗಿದೆ. ಈ ಕ್ಯಾಮೆರಾ ಬಳಸುತ್ತಿರುವ ಏಕೈಕ ಯೂಟ್ಯೂಬ್ ಚಾನೆಲ್ ಅಂದ್ರೆ ವಿಲೇಜ್ ಕುಕ್ಕಿಂಗ್ ಚಾನೆಲ್. ಈ ಕ್ಯಾಮೆರಾ ಬಳಸಲು ಸುಮಾರು 2-3 ಮಂದಿ ಬೇಕಾಗುತ್ತದೆ ಹಾಗೂ ಸೆರೆ ಹಿಡಿದಿರುವ ವಿಡಿಯೋವನ್ನು ಎಡಿಟ್ ಮಾಡಲು ವಿದ್ಯಾವಂತರೇ ಬೇಕು ಏಕೆಂದರೆ ಅಷ್ಟು ತಾಂತ್ರಿಕ ಕೆಲಸ ಇದೆ ಎನ್ನಲಾಗಿದೆ. 'ಈ ಕ್ಯಾಮೆರಾ ಬೆಲೆ ಆದ್ರೂ ಈ ಜನರು ಗೊತ್ತಾ? ಈ ಕ್ಯಾಮೆಲಾ ಎಷ್ಟು ಮಹತ್ವ ಹೊಂದಿದೆ ಅಂತ ಏನಾದರೂ ಗೊತ್ತಾ? ಅವರ ಕೈಯಲ್ಲಿ ದೊಡ್ಡ ಅಸ್ತ್ರವಿದು ಎಂದು ಯಾರಾದರೂ ತಿಳಿ ಹೇಳಿ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.