ಅಮು ವಿರುದ್ಧ ತಿರುಗಿ ಬಿದ್ದ ಆರಾಧನಾ. ಅಮ್ಮನ ಗಂಡ ಮಾಡಿರುವ ಮಾಸ್ಟರ್ ಪ್ಲ್ಯಾನ್ ಹಿಂದಿನ ರಹಸ್ಯ ಗೊತ್ತಾಗುತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಮ್ಮ ಸುಶಾಂತ್ ಮತ್ತು ಪತ್ನಿ ಆರಾಧಾನಾ ನೆಮ್ಮದಿಯಾಗಿ ಜೀವನ ಮಾಡಬಾರದು, ಅತ್ತೆ ದೃಷ್ಟಿಯಲ್ಲಿ ಆರಾಧಾನಾ ಕೆಟ್ಟವಳು ಆಗಬೇಕು ಎಂದು ಅಮಲಾ ಮಾಡುವ ಮಾಸ್ಟರ್‌ ಪ್ಲ್ಯಾನ್‌ಗೆ ಮಹೇಶ್‌ ಬಿಗ್ ಟ್ವಿಸ್ಟ್‌ ಕೊಡುತ್ತಾರೆ. ಇಷ್ಟು ದಿನಗಳಿಂದ ಅಮಲಾಗೆ ಸಹಾಯ ಮಾಡುತ್ತಿದ್ದ ಮಹೇಶ್‌ ( ಆರಾಧನಾ ತಾಯಿಯ ಎರಡನೇ ಗಂಡ) ಹಣ ಬೇಕು ಎಂದು ಕೇಳಿದ್ದಕ್ಕೆ ಆಗುವುದಿಲ್ಲ ಮಾಡುವುದಿಲ್ಲ ಎಂದು ಹುಡುಗರನ್ನು ಬಿಟ್ಟಿ ಹೊಡೆಸುತ್ತಾಳೆ. ಈ ಸತ್ಯವನ್ನು ಬೀಗರಾದ ಎಸ್‌ ನಾರಾಯಣ್‌ ಬಳಿ ಹೇಳಿ ಅಮಲಾಗೆ ಬುದ್ಧಿ ಕಲಿಸಬೇಕು ಎಂದು ಮಹೇಶ್ ಮುಂದಾಗುತ್ತಾನೆ.

ಮನೆಯಲ್ಲಿ ಬೀಗರು ಎದುರಾದರೂ ಸಣ್ಣ ಪುಟ್ಟ ಸುಳಿವು ಕೊಟ್ಟು ಅಮಲಾಳಿಗೆ ಭಯ ಪಡಿಸುತ್ತಾನೆ. ಮಹೇಶ್ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ದೂರು ನೀಡಲು ಬೀಗರು ಮುಂದಾಗುತ್ತಾರೆ ಅಷ್ಟರಲ್ಲಿ ಬುದ್ಧಿವಂತಿಕೆ ಬಳಸಿದ ಅಮಲಾ 'ತಂದೆಗೆ ಮೀಟಿಂಗ್ ಇದೆ ಯಾವುದೇ ಕಾರಣಕ್ಕೂ ಮಿಸ್ ಮಾಡುವಂತೆ ಇಲ್ಲ. ಮಹೇಶ್ ಸಮಸ್ಯೆಯನ್ನು ನಾನು ನೋಡಿಕೊಳ್ಳುತ್ತೀನಿ' ಎನ್ನುತ್ತಾರೆ. ಈ ಧೈರ್ಯದ ಮೇಲೆ ಬೀಗರು ಮೀಟಿಂಗ್‌ಗೆ ಹೋಗುತ್ತಾರೆ. ಇಲ್ಲೇ ಆರಾಧನಾಳಿಗೆ ಅನುಮಾನ ಶುರುವಾಗುತ್ತದೆ. ನನ್ನಿಂದ ಸಹಾಯ ಆಗುತ್ತಾ ಎಂದು ಮಹೇಶನನ್ನು ಕೇಳಿದಾಗ ಇಲ್ಲ ಅಮಲಾ ಜೊತೆ ಮಾತನಾಡುತ್ತೀನಿ ಎಂದು ಕರೆದುಕೊಂಡು ಹೋಗುತ್ತಾನೆ.

ಒಂದು ಸಲ ಭೇಟಿ ಆದವರು ಜೈಲಿನಲ್ಲಿದ್ದಾಗ ನಾನು ಹೋಗಲ್ಲ, ಯಾಕೆ ಹೋಗ್ಬೇಕು ಗೊತ್ತಿಲ್ಲ: ರಾಜ್‌ ಬಿ ಶೆಟ್ಟಿ ಟಾಂಗ್ ವೈರಲ್!

ಅಮಲಾ ಮತ್ತು ಮಹೇಶ್ ರೂಮಿನಲ್ಲಿ ಮಾತನಾಡುವಾಗ ಆರಾಧಾನ ಅದನ್ನು ಕೇಳಿಸಿಕೊಳ್ಳುತ್ತಾರೆ. 'ಪ್ರೀತಿಯಿಂದ ಬಾಳುತ್ತಿರುವ ಮಗಳ ಸಂಸಾರದಲ್ಲಿ ಬಿರುವು ಮೂಡಿಸಲು ನೋಡುತ್ತಿದ್ದೀರಾ ಅದು ಹಣದ ಅಸೆಗೆ.....get out' ಎಂದು ಮಹೇಶನ ಮೇಲೆ ಆರಾಧನಾ ಕೂಗಾಡಿ ಹೊರ ಹಾಕುತ್ತಾಳೆ. ಇದನ್ನು ನೋಡಿ ಅಲ್ಲಿದ್ದ ಅಮಲಾ 'ನೋಡಿ ಎಂಥಾ ಫ್ಯಾಮಿಲಿಯಿಂದ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದಿದ್ದಾನೆ...ಇಲ್ಲೇ ಗೊತ್ತಾಗುತ್ತೆ 3rd ಕ್ಲಾಸ್ ಅಂತ' ಎಂದು ಅಮಲಾ ಹೇಳುತ್ತಾರೆ. ಕೋಪಕೊಂಡ ಆರಾಧನಾ 'ಮುಚ್ಚೇ ಬಾಯಿ' ಎಂದು ಕಪ್ಪಾಳಕ್ಕೆ ಬಾರಿಸುತ್ತಾಳೆ. 

ಕದ್ದು ಮುಚ್ಚಿ ಸಿಗರೇಟ್‌ ಸೇದಲು ಹೋಗಿ ಜನರಿಗೆ ಸಿಕ್ಕಾಕೊಂಡ 'ಆದಿಪುರುಷ್‌' ನಟಿ ಕೃತಿ; ಪೋಸ್ಟ್ ವೈರಲ್!