ಕನ್ನಡತಿ ಸೀರಿಯಲ್‌ ಅಭಿಮಾನಿಗಳಿಗೆ ಮಾರ್ಚ್ ತಿಂಗಳಲ್ಲಿ ಬಂಪರ್ ಮನೋರಂಜನೆ ಸಿಗುವ ಎಲ್ಲಾ ಲಕ್ಷಣ ಕಾಣ್ತಿದೆ. ಹರ್ಷ ಭುವಿಯ ಮದುವೆಗೆ ಏನೆಲ್ಲಾ ಕಾರಣ ಬೇಕೋ ಅದೆಲ್ಲ ಸೃಷ್ಟಿ ಆಗ್ತಿದೆ. ಈಗ ಹರ್ಷ ಭುವಿ ಮದುವೆ ಮಾಡದೇ ವಿಧಿಯಿಲ್ಲ ಅನ್ನೋ ಹಾಗಾಗಿದೆ. 

ಕಲರ್ಸ್ ಕನ್ನಡ (Colors Kannada) ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿ (Kannadathi Serial). ಈ ಸೀರಿಯಲ್ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ಪರಿಚಿತರಾಗಿ, ಸ್ನೇಹಿತರಾಗಿ ಕೊನೆಗೆ ಪ್ರೇಮಿಗಳಾಗಿರೋ ಹರ್ಷ (Harsha) ಭುವಿ (Bhuvi) ಮದುವೆ (Marriage) ಸನ್ನಿಹಿತವಾಗಿದೆ. ಒಂದು ಕಡೆ ಇವರಿಬ್ಬರ ಮದುವೆಯ ವಿಚಾರ ಪ್ರಸ್ತಾಪವಾಗುತ್ತಿರುವಾಗ ಇನ್ನೊಂದು ಕಡೆ ಹರ್ಷನ ತಾಯಿ ಮಾಲಾ ಕೆಫೆಯ ಒಡತಿ ರತ್ನಮಾಲಾ ಆರೋಗ್ಯದಲ್ಲಿ ಏರುಪೇರಾಗಿದೆ. ದೊಡ್ಡಮ್ಮನನ್ನ ಕಳುಹಿಸಿಕೊಡುವ ದಿನ ಯಾವಾಗ ಬೇಕಾದರೂ ಬರಬಹುದು ಅಂತ ಹೇಳೋಕೆ ಬಂದಿದ್ದಾರೆ ಡಾಕ್ಟರ್ (Doctor) ಅಂತ ಹರ್ಷನಿಗೆ ಹೇಳ್ತಾ ಕಣ್ಣೀರಾಗ್ತಿದ್ದಾನೆ ಆದಿ. ಇತ್ತ ಹರ್ಷನಿಗೆ ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಗುವ ಆತಂಕ ಶುರುವಾಗಿದೆ.

ಇನ್ನೊಂದು ಕಡೆ ಹರ್ಷ ಹಾಗೂ ಭುವಿಯ ಪ್ರೇಮದ (Love) ಎಪಿಸೋಡ್ (Episodes) ಶುರುವಾಗಿ ಒಂದಿಷ್ಟು ಸಮಯವಾಯ್ತು. ಹರ್ಷನ ಹಲವು ಕೋರಿಕೆಗಳ ನಂತರದಲ್ಲಿ ಆತನ ಪ್ರೀತಿಯನ್ನು ಭುವಿ ಒಪ್ಪಿಕೊಂಡಿದ್ದಾಳೆ. ಹರ್ಷನನ್ನು ವರೂ ಸಾಕಷ್ಟು ಪ್ರೀತಿಸುತ್ತಾಳೆ. ಆತನಿಗೋಸ್ಕರ ಏನು ಮಾಡೋಕೂ ಆಕೆ ರೆಡಿ ಆಗಿದ್ದಾಳೆ. ಇದು ಭುವಿಯ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಇಬ್ಬರೂ ಪ್ರೀತಿ ವಿಚಾರವನ್ನು ವರೂಧಿನಿಗೆ ಇನ್ನೂ ಹೇಳಿಲ್ಲ. ಈ ಕಾರಣಕ್ಕೆ ಭುವಿ ಒಂದೊಂದೇ ಕಾರಣ ನೀಡಿ ಮದುವೆ ಮುಂದೂಡುತ್ತಿದ್ದಾಳೆ. ಆದರೆ, ಇಬ್ಬರ ಮದುವೆ ಶೀಘ್ರವೇ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಮಹತ್ವದ ಘಟನೆ. ಭುವಿ ಹಾಗೂ ಹರ್ಷನ ಮದುವೆ ಬೇಗ ಆಗೋಕೆ ನಡೆದಂತಹ ಘಟನೆ ಕುತೂಹಲ ಹೆಚ್ಚಿಸಿದೆ.

Maha Shivratri 2022: ಮೋಹಿತ್ ರೈನಾ ಮಹಾದೇವ್ ಪಾತ್ರ ತೊರೆದಿದ್ದೇಕೆ?

ಹರ್ಷನ ತಾಯಿ ರತ್ನಮಾಲಾಗೆ ಭುವಿ (Bhuvi) ಕಂಡರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ಅವಳು ತನ್ನೂರಾದ ಹಸಿರುಪೇಟೆಯವಳು, ಗುಣವಂತೆ ಅನ್ನೋದು ಮುಖ್ಯಕಾರಣ. ಹಸಿರುಪೇಟೆಯಿಂದ ಬೆಂಗಳೂರಿಗೆ ಬಂದ ರತ್ನಮಾತಾ ಮಾಲಾ ಕೆಫೆ ಕಟ್ಟಿ ಬೆಳೆಸಿದ್ದಾಳೆ. ಸದ್ಯಕ್ಕೆ ತನ್ನ ಬುದ್ಧಿವಂತಿಕೆಯಿಂದ ಅನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಅವರಿಗೆ ಈ ಮೊದಲೇ ಅವರಿಗೆ ಸಾವಿನ ಭೀತಿ ಎದುರಾಗಿದೆ. ನಿರಂತರವಾಗಿ ಅನಾರೋಗ್ಯ ಕಾಡುತ್ತಲೇ ಇದೆ. ಈಗಂತೂ ಅವರ ಆರೋಗ್ಯ ಬಹಳ ಹದಗೆಟ್ಟಿದೆ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ರತ್ನಮಾಲಾ ಯಾವಾಗ ಬೇಕಾದರೂ ಸಾಯಬಹುದು ಎಂದು ವೈದ್ಯರು ನೇರವಾಗಿಯೇ ಹೇಳಿದ್ದಾರೆ. ಇದರಿಂದ ಮನೆಯವರ ಆತಂಕ ಹೆಚ್ಚಾಗಿದೆ. ಆಕೆಯ ಮನವನ್ನು ನೋಯಿಸದಿರಲು ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ ಅಮ್ಮನಿಗೋಸ್ಕರ ಹರ್ಷ ಏನು ಬೇಕಾದರೂ ಮಾಡೋಕೆ ರೆಡಿ ಆಗಿದ್ದಾನೆ.

16 ನೇ ವಯಸ್ಸಿನಲ್ಲಿ ನಟಿಯಾದ ಕ್ರಿಸ್ಟಲ್‌ಗೆ ನಟನೆ ಇಷ್ಟವಿರಲಿಲ್ಲವಂತೆ, ಯಾಕೆ ಗೊತ್ತಾ?

ತಾಯಿ ಬಳಿ ಬಂದ ಹರ್ಷ 'ನಿನ್ನನ್ನು ಎಲ್ಲಾದರೂ ಕರೆದುಕೊಂಡು ಹೋಗಬೇಕೆ?' ಎಂದು ಪ್ರಶ್ನಿಸಿದ್ದಾನೆ. ಸದ್ಯ, ಭುವಿ ತನ್ನ ತಂಗಿಯ ಜತೆ ಹಸಿರುಪೇಟೆಗೆ ತೆರಳಿದ್ದಾಳೆ. ಹೀಗಾಗಿ, ರತ್ನಮಾಲಾ ಕೂಡ ಹಸಿರುಪೇಟೆಗೆ ತೆರಳುವ ಇಂಗಿತ ವ್ಯಕ್ತಪಡಿಸಬಹುದು. ಹೀಗಾದಲ್ಲಿ, ಅಲ್ಲಿಯೇ ಮದುವೆ ಮಾತುಕತೆ ನಡೆಯಲಿದೆ. ರತ್ನಮಾಲಾಗೆ ಅನಾರೋಗ್ಯ (Ill) ಕಾಡಿರುವುದರಿಂದ ಶೀಘ್ರವೇ ಹರ್ಷ ಹಾಗೂ ಭುವಿ ಮದುವೆ ನಡೆಯಬಹುದು. ರತ್ನಮಾಲಾ ತನ್ನ ಸಾವಿನ ಮೊದಲು ಮಗನ ಮದುವೆ (Wedding) ನೋಡೋಕೆ ಕಾತುರದಿಂದ ಕಾದಿದ್ದಾಳೆ. ತನ್ನ ಆಸ್ತಿಯನ್ನು (Assets) ಎಷ್ಟೇ ಒಳ್ಳೆಯವನಾದರೂ ಕೊಂಚ ಹುಂಬನಾದ ಮಗ ಹರ್ಷನ ಕೈಗೊಪ್ಪಿಸೋದು ಅವಳಿಗೆ ಸಾಧ್ಯವಿಲ್ಲ. ಸೊಸೆ ಸಾನಿಯಾ ಕೂಡ ಅವಳ ಆಸ್ತಿಗೆ ಕಣ್ಣು ಹಾಕುತ್ತಿದ್ದಾಳೆ. ತನ್ನೆಲ್ಲ ಶ್ರಮ ಯೋಗ್ಯರಿಗೆ ಸೇರಬೇಕು ಎಂಬುದು ಅಮ್ಮಮ್ಮ ಆಸೆ. ಹೀಗಾಗಿ ಭುವಿಯನ್ನು ತನ್ನ ಸೊಸೆಯಾಗಿ ಮಾಡಿ ತನ್ನೆಲ್ಲ ಸಂಪತ್ತನ್ನೂ ಅವಳಿಗೆ ನೀಡಿಯೇ ರತ್ನಮಾಲಾ ಕೊನೆಯುಸಿರೆಯಬಹುದು ಎಂಬ ಊಹೆ ಅಭಿಮಾನಿಗಳದ್ದು.

ಈ ಕಾರಣಗಳನ್ನು ನೋಡಿದರೆ ಶೀಘ್ರದಲ್ಲೇ ಹರ್ಷ ಭುವಿ ಮದುವೆ ನಡೆಯಬಹುದು ಎಂದು ಕಾಣುತ್ತದೆ. ಹರ್ಷ ಅಮ್ಮನನ್ನು ಹಸಿರುಪೇಟೆಗೆ ಕರೆದೊಯ್ದು ಮನೆಯವರನ್ನು ಹೇಗಾದರೂ ಮಾಡಿ ಒಪ್ಪಿಸಿ ಮದುವೆ ಮಾಡಬಹುದು. ಮುಂದಿನ ವಾರ ಅಥವಾ ಅದರ ಆಸುಪಾಸಲ್ಲಿ ವೀಕ್ಷಕರಿಗೆ ಹರ್ಷ ಭುವಿಯ ಮದುವೆಯ ಸಂಭ್ರಮ ನೋಡಲು ಸಿಗಬಹುದು.

ನಾಲ್ಕನೇ ಮದುವೆ ಆಗಬೇಕಂತೆ ಈ ನಟ, 3ನೇ ಹೆಂಡತಿಯಿಂದ 10-12 ಮಕ್ಕಳು ಬೇಕಂತೆ!