ಸ್ಮಾರ್ಟ್‌ ಜೋಡಿಗೆ ಅಯ್ಕೆ ಆಗಿರುವ ರಾಹುಲ್ ಮತ್ತು ನತಲ್ಯ ಮೊದಲ ಬಾರಿ ತಮ್ಮ ಪ್ರೀತಿ ಮತ್ತು ಮದುವೆ ವಿಚಾರ ರಿವೀಲ್ ಮಾಡಿದ್ದಾರೆ...

ರಾಜಕೀಯ ಮತ್ತು ಹಿಂದಿ ಮನೋರಂಜನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರಾಹುಲ್ ಮನೋಜನ್ ಮತ್ತು ನಿತಲ್ಯಾ ಸ್ಮಾರ್ಟ್ ಜೋಡಿ ಸ್ಪರ್ಧೆಗೆ ಎಂಟರ್ ಆಗುತ್ತಿರುವ ಮೊದಲ ಜೋಡಿ ಎಂದು ಘೋಷಣೆ ಮಾಡಲಾಗಿತ್ತು. ಇವರಿಬ್ಬರ ಮದುವೆ ಸುದ್ದಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಹೀಗಾಗಿ ಇದೇ ಮೊದಲ ಬಾರಿ ನತಲ್ಯ ಟಿವಿಯಲ್ಲಿ ಕಾಣಿಸಿಕೊಂಡಿರುವುದು. ಕಾರ್ಯಕ್ರಮದಲ್ಲಿ ತಮ್ಮ ಮದುವೆ ಮತ್ತು ಮುಂದಿನ ಪ್ಲ್ಯಾನಿಂಗ್ ಬಗ್ಗೆ ಮಾತನಾಡಿದ್ದಾರೆ. 

'ಮೊದಲ ಸಲ ತಿಳಿಯದೇ ಏನಾದರೂ ಆದರೆ ಅದನ್ನು ಆ್ಯಕ್ಸಿಡೆಂಟ್‌ ಎಂದು ಹೇಳಲಾಗುತ್ತದೆ. ಅದೇ ಎರಡನೇ ಅಲ ಆದರೆ ಕೋ-ಇನ್ಸಿಡೆನ್ಸ್‌ ಅನ್ಸುತ್ತೆ .ಅದೇ ಮೂರನೇ ಸಲ ಆದರೆ ಖಂಡಿತಾ ಹ್ಯಾಬಿಟ್ ಆಗುತ್ತದೆ. ಹಾಗಿದ್ರೆ ರಾಹುಲ್‌ಗೆ ಮದುವೆಯಾಗುವುದೇ ಹ್ಯಾಬಿಟ್ ಆಗ್ಬಿಟಿದ್ಯಾ?' ಎಂದು ನಿರೂಪಕಿ ಮನೀಶಾ ಪೌಲ್ ಪ್ರಶ್ನೆ ಮಾಡುತ್ತಾರೆ. 'ಇಷ್ಟು ಸುಂದರವಾಗಿರುವ ಹೆಣ್ಣು ನೋಡಿದರೆ, ಯಾರಿಗೆ ತಾನೆ ಮದುವೆ ಆಗಬಾರದು ಅನಿಸುತ್ತದೆ ಹೇಳಿ?' ಎಂದು ರಾಹುಲ್ ಟಾಂಕ್ ಕೊಟ್ಟಿದ್ದಾರೆ. 

ರಾಹುಲ್ ಮತ್ತು ನತಲ್ಯ ಮೊದಲು ಭೇಟಿಯಾಗಿದ್ದು ಹೋಟೆಲ್‌ನಲ್ಲಿ ಅಂತೆ. 'ನಾನು ನಿಮಗೆ ಸಂಪೂರ್ಣವಾಗಿ ಹೇಳುತ್ತೇನೆ. ನನ್ನ ಸ್ನೇಹಿತೆಯನ್ನು ರಾಹುಲ್‌ಗೆ ಸೆಟ್ ಮಾಡುವ ಕೆಲಸ ನಾನು ಮಾಡುತ್ತಿದ್ದೆ. ಅವರಿಗೆ ಮತ್ತೆ ಮದುವೆ ಆಗುವ ಪ್ಲ್ಯಾನ್‌ ಇತ್ತು. ಹೆಣ್ಣು ಹುಡುಕುತ್ತಿದ್ದರು. ಯಾರನ್ನೂ ಒಪ್ಪದಿದ್ದಕ್ಕೆ ನನ್ನ ತಾಯಿಯನ್ನೇ ಮದುವೆ ಆಗಿ ಎಂದು ಕೂಡ ನಾನು ರಾಹುಲ್‌ಗೆ ಹೇಳಿದ್ದೆ,' ಎಂದು ನತಲ್ಯ ಹೇಳಿದ್ದಾರೆ. 

'ನಿತಲ್ಯ ಅವರ ಅಮ್ಮ ತುಂಬಾನೇ ಯಂಗ್. ನನಗಿಂತ ನಾಲ್ಕು ವರ್ಷ ದೊಡ್ಡವರು ಅಷ್ಟೆ. ನನ್ನ ಅತ್ತೆಗೂ ನನಗೂ ನಾಲ್ಕು ವರ್ಷ ವಯಸ್ಸಿನ ವ್ಯತ್ಯಾಸವಿದೆ. ಆದರೆ ನನ್ನ ಹೆಂಡತಿ ನಿತಲ್ಯ ಮತ್ತು ನನಗೆ 18 ವರ್ಷ ವಯಸ್ಸಿನ ವ್ಯತ್ಯಾಸವಿದೆ. ಹೀಗಾಗಿ ಅವರ ಅಮ್ಮನ ವಯಸ್ಸಿಗೆ ಈಕೆ ಬರುವಷ್ಟರಲ್ಲಿ ಇನ್ನೂ ಹಾಟ್ ಆಗಿರುತ್ತಾಳೆ ಎಂದು ಒಪ್ಪಿಕೊಂಡೆ,' ಎಂದು ರಾಹುಲ್ ಹೇಳುತ್ತಾರೆ. ನನ್ನ ಅಮ್ಮ ತುಂಬಾ ಹಾಟ್ ಎಂದು ನಿತಲ್ಯ ಹೇಳುತ್ತಾಳೆ.

ಕಂಗನಾರ Lock Uppನಲ್ಲಿ ರವೀನಾ ಟಂಡನ್‌? 16 ಬಂಧಿತರು ಮತ್ಯಾರು?

'ರಾಹುಲ್ ಮೊದಲು ಎರಡು ಮದುವೆಗಳು ಬಗ್ಗೆ ನನಗೆ ಯಾವ ಅಭಿಪ್ರಾಯವಿಲ್ಲ. ಅವೆಲ್ಲಾ ಶಾರ್ಟ್‌ ರಿಲೇಶನ್‌ಶಿಪ್ ಆಗಿತ್ತು. ಸುದೀರ್ಘ ಮದುವೆ ಸಂಬಂಧವೇನೂ ಅಲ್ಲ. ಮದುವೆ ಆದ ಕೆಲವೇ ತಿಂಗಳಲ್ಲಿ ಅದನ್ನು ಮದುವೆ ಎಂದು ಹೇಳುವುದಕ್ಕೆ ಆಗೋಲ್ಲ. ವರ್ಷಗಳು ಕಳೆಯಬೇಕು. ಮದುವೆಯಾಗಿ ಎಷ್ಟೋ ವರ್ಷಗಳು ಆದ ನಂತರೂ ಅದನ್ನು ಮದುವೆ ಎಂದು ಹೇಳುವುದಕ್ಕೆ ಆಗೋಲ್ಲ. ಆಗಲೂ ಜನರು ದೂರ ಆಗುತ್ತಾರೆ,' ಎಂದು ನಿತಲ್ಯ ತುಂಬಾನೇ ಓಪನ್ ಮೈಂಡ್‌ನಲ್ಲಿ ಉತ್ತರ ನೀಡುತ್ತಾರೆ.

ಮದುವೆ ಕಾನ್ಸೆಪ್ಟ್‌ ಅನ್ನು ತುಂಬಾನೇ ಡಿಫರೆಂಟ್ ಆಗಿ ನೋಡುವ ರಾಹುಲ್ ನಾಲ್ಕು ಮದುವೆ ಆಗುತ್ತಾರಾ ಎಂದು ಪ್ರಶ್ನಿಸಿದ್ದಾಗ. 'ನಾಲ್ಕನೇ ಮದುವೆಗೆ ನಾನು ರೆಡಿಯಾಗಿರುವೆ. ಅದು ಮತ್ತೆ ನತಲ್ಯ ಜೊತೆಯೇ ಆಗಿರುತ್ತದೆ. ಆಕೆಯನ್ನು ಮತ್ತೆ ಮತ್ತೆ ಮದುವೆಯಾಗುವೆ,' ಎಂದಿದ್ದಾರೆ. ಅಲ್ಲದೆ 'ನನ್ನ ಹೆಂಡತಿ ಇಷ್ಟೊಂದು ಸುಂದರವಾಗಿದ್ದಾಳೆ ಅಂದ್ಮೇಲೆ 10-12 ಮಕ್ಕಳು ಮಾಡಿಕೊಳ್ಳಬೇಕು,' ಎಂದೂ ವೇದಿಕೆ ಮೇಲೆ ಪರ್ಸನಲ್ ವಿಚಾರಗಳನ್ನು ಮೊದಲ ಬಾರಿ ರಿವೀಲ್ ಮಾಡಿದ್ದಾರೆ.