Maha Shivratri 2022: ಮೋಹಿತ್ ರೈನಾ ಮಹಾದೇವ್ ಪಾತ್ರ ತೊರೆದಿದ್ದೇಕೆ?
ಮಹಾಶಿವರಾತ್ರಿ (Mahashivratri 2022) ಹಬ್ಬವನ್ನು ಮಂಗಳವಾರ ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇವಾಲಯಗಳಲ್ಲಿ ರುದ್ರಾಭಿಷೇಕದೊಂದಿಗೆ ಶಿವನನ್ನು ಪೂಜಿಸಲಾಗುತ್ತಿದೆ. ಅಂದಹಾಗೆ, ಶಿವನನ್ನು ಆರಾಧಿಸಿದ ಹಲವು ಧಾರಾವಾಹಿಗಳನ್ನು ಟಿವಿಯಲ್ಲಿ ತೋರಿಸಲಾಗಿದೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮವೆಂದರೆ ದೇವೋ ಕೆ ದೇವ್ ಮಹಾದೇವ್ (Devo Ke Dev Mahadev). ಇದು ಸಖತ್ ಫೇಮಸ್ ಆಗಿದೆ. ಈ ಧಾರಾವಾಹಿ ಸೂಪರ್‌ಹಿಟ್ ಆಯಿತು ಮತ್ತು ಮೋಹಿತ್ ರೈನಾ (Mohit Raina) ಅದರಲ್ಲಿ ಮಹಾದೇವನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದಿಂದ ಮೋಹಿತ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಪ್ರದರ್ಶನವು 2011-14ರ ವರೆಗೆ ನಡೆಯಿತು. ಆದರೆ, ಶಿವನ ಪಾತ್ರವನ್ನು ನಿರ್ವಹಿಸುವ ಮೂಲಕ ಜನಪ್ರಿಯರಾದ ನಂತರವೂ ಮೋಹಿತ್ ಸ್ವಲ್ಪ ಸಮಯದ ನಂತರ ಕಾರ್ಯಕ್ರಮವನ್ನು ತೊರೆದರು. ಅವರು ಶೋ ಅನ್ನು ಏಕೆ ತೊರೆದರು ಎಂಬುದನ್ನು ಕೆಳಗೆ ಓದಿ.
ಟಿವಿ ಮೂಲಕ ವೃತ್ತಿ ಜೀವನ ಆರಂಭಿಸಿದ ಮೋಹಿತ್ ರೈನಾ (Mohith Raina) ಈಗ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ವೆಬ್ ಸೀರೀಸ್ (Web Series) ಗಳಲ್ಲೂ ಕೆಲಸ ಮಾಡಿದ್ದಾರೆ. ವಾಸ್ತವವಾಗಿ, ಅವರು ಚಲನಚಿತ್ರಗಳ (Movie) ಕಾರಣದಿಂದ ಪ್ರದರ್ಶನವನ್ನು ತೊರೆದರು.
ವಾಸ್ತವವಾಗಿ, ಈ ಕಾರ್ಯಕ್ರಮದ ಶೂಟಿಂಗ್‌ಗಾಗಿ ಅವರು ದಿನಕ್ಕೆ 12 ಗಂಟೆಗಳ ಕಾಲ ನೀಡಬೇಕಾಗಿತ್ತು. ಆದರೆ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಅವರು ಧಾರಾವಾಹಿಗೆ ಸಮಯ ಸಿಗಲಿಲ್ಲ ಮತ್ತು ಅಂತಿಮವಾಗಿ ಅವರು ಧಾರವಾಹಿಯನ್ನೇ ತೊರೆಯಬೇಕಾಯಿತು.
ಜಮ್ಮು ಮೂಲದ ಮೋಹಿತ್ ಅವರು ಮಹಾಭಾರತ (Mahabharata) ಮತ್ತು ಸಾಮ್ರಾಟ್ ಅಶೋಕ್‌ನಂತಹ (Samrat Ashok)ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೋಹಿತ್ ಬಾಲ್ಯದಿಂದಲೂ ನಟನಾಗಬೇಕೆಂದು ಬಯಸಿದ್ದರು ಆದರೆ ಅವರು ಅಧ್ಯಯನದಲ್ಲಿ ತುಂಬಾ ಚುರುಕಿದ್ದ ಕಾರಣದ ಅವರ ಪೋಷಕರು ಅವರನ್ನು CA ಆಗಬೇಕೆಂದು ಬಯಸಿದ್ದರು.
ಅವರು ಗ್ರಾಸಿಮ್ ಮಿಸ್ಟರ್ ಇಂಡಿಯಾ 2005 ರಲ್ಲಿ ಭಾಗವಹಿಸಿ, ಟಾಪ್ 5 ಸ್ಪರ್ಧಿಗಳಲ್ಲಿ ಆಯ್ಕೆಯಾದರು. 21ನೇ ವಯಸ್ಸಿನಲ್ಲಿ, ಅವರು ತಮ್ಮ ಪೋಷಕರಿಗೆ ನಟನಾಗುವ ಬಯಕೆಯನ್ನು ವ್ಯಕ್ತಪಡಿಸಿದರು. ಆತನ ಪೋಷಕರು ಸಾರಾಸಗಟಾಗಿ ನಿರಾಕರಿಸಿದ್ದರು.
ಒಂದು ದಿನ ನನಗೆ ಬೆಳಗ್ಗೆ ಎಚ್ಚರವಾದಾಗ, ಅನೇಕ ಸಂಬಂಧಿಕರು ಮನೆಯ ಹೊರಗೆ ಇದ್ದರು. ನಾನು ಮರೆತಿರುವ ಯಾವುದೋ ಕಾರ್ಯವಿದೆ ಎಂದು ನಾನು ಭಾವಿಸಿದೆ. ಆದರೆ ಆ ಬಂಧುಗಳೆಲ್ಲ ನನಗೆ ಉಪದೇಶ ನೀಡಲು ಬಂದಿದ್ದಾರೆಂದು ಗೊತ್ತಾಯಿತು. ಆದರೆ ನನಗೆ ಆಗಲೇ ಟಿಕೆಟ್ ಸಿಕ್ಕಿತ್ತು. ಹಾಗಾಗಿ ಯಾರ ಮಾತನ್ನೂ ಕೇಳದೆ ಮುಂಬೈಗೆ ಬಂದೆ,' ಎಂದು ಮೋಹಿತ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಮೋಹಿತ್ ತಮ್ಮ ವೃತ್ತಿಜೀವನವನ್ನು 2006 ರಲ್ಲಿ ಟಿವಿ ಶೋ ಸ್ಪೇಸ್‌ನೊಂದಿಗೆ ಪ್ರಾರಂಭಿಸಿದರು. ಆದರೆ ಅವರಿಗೆ ಮನ್ನಣೆ ಸಿಕ್ಕಿದ್ದು ಮಾತ್ರ ಮಹದೇವ ಪಾತ್ರದಿಂದ. ಉತ್ತಮ ಪರ್ಸಾನಲಿಟಿಯ ಕಾರಣ ಅವರಿಗೆ 'ಮಹಾದೇವ' ಪಾತ್ರವನ್ನು ನೀಡಲಾಯಿತು. ಆದರೆ ಆ ಸಮಯದಲ್ಲಿ ಮೋಹಿತ್ ಅವರ ತೂಕ 107 ಕೆಜಿ ಇತ್ತು. ತಯಾರಕರು ಮೋಹಿತ್ ಅವರನ್ನು ತೂಕ ಇಳಿಸಿಕೊಳ್ಳಲು ಕೇಳಿಕೊಂಡರು. ಕಠಿಣ ಪರಿಶ್ರಮದಿಂದ ಮೋಹಿತ್ 30 ಕೆಜಿ ತೂಕ ಇಳಿಸಿಕೊಂಡರು.
ಮಹದೇವ್ ಪಾತ್ರದಿಂದ ಹೊರಬರುವುದು ತುಂಬಾ ಕಷ್ಟವಾಗಿತ್ತು. ಶೂಟಿಂಗ್ ಮುಗಿಸಿ 15 ನಿಮಿಷ ಧ್ಯಾನ ಮಾಡಿ, ಮಹದೇವ್ ಪಾತ್ರದಿಂದ ಹೊರ ಬರುತ್ತಿದ್ದೆ' ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. ‘ಮಹಾದೇವ’ ಪಾತ್ರದಲ್ಲಿ ಮೋಹಿತ್ ಅದ್ಭುತವಾಗಿ ನಟಿಸಿದ್ದಾರೆ. ಶೀಘ್ರದಲ್ಲೇ ಅವರು ಟಿವಿಯಲ್ಲಿ ಅತ್ಯಂತ ದುಬಾರಿ ನಟರಲ್ಲಿ ಒಬ್ಬರಾದರು. ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ.ನಂತರ ಅವರಿಗೆ ಚಿತ್ರಗಳ ಆಫರ್ ಬರಲಾರಂಭಿಸಿತು ಮತ್ತು ಅವರು ಧಾರಾವಾಹಿ ತೊರೆದು ಚಲನಚಿತ್ರಗಳತ್ತ ಗಮನ ಹರಿಸಿದರು.
ಮೋಹಿತ್ ಪ್ರಸ್ತುತ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ನಿರತರಾಗಿದ್ದಾರೆ. ಅವರು ಉರಿ, ಗುಡ್ ನ್ಯೂಜ್, ಮಿಸ್ಟರ್ ಸೀರಿಯಲ್ ಕಿಲ್ಲರ್, ಶಿದ್ದತ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಗಳ ಹೊರತಾಗಿ, ಅವರು ಕಾಫಿರ್, ಭೌಕಲ್ ಮತ್ತು ಎ ವೈರಲ್ ವೆಡ್ಡಿಂಗ್ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.