Asianet Suvarna News Asianet Suvarna News

ಡ್ಯಾನ್ಸಿಂಗ್ ಚಾಂಪಿಯನ್ 'ಅಪ್ಪು' ಟ್ರೋಫಿ ಪಡೆದ ಅದಿತ್ಯ,ಅನ್ಮೋಲ್; ಕೈ ಸೇರಿದ ಹಣ ಎಷ್ಟು?

ಡ್ಯಾನ್ಸಿಂಗ್ ಚಾಂಪಿಯನ್ ಅನೌನ್ಸ್ ಮಾಡಿದ ಆಕ್ಷನ್ ಪ್ರಿನ್ಸ್‌. ಜ್ಯೂನಿಯರ್ ರಾಖಿ ಭಾಯ್ ಆಕ್ಟಿಂಗ್ ಸೂಪರ್‌ ಎಂದೇಳಿದ ವೀಕ್ಷಕರು.
 

Colors Kannada Dancing Champion Adithya Anmol bags winner trophy vcs
Author
Bangalore, First Published May 30, 2022, 10:58 AM IST

ಕಲರ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಡ್ಯಾನ್ಸ್‌ ಶೋ ನಿನ್ನೆ ಫಿನಾಲೆ ನಡೆಯಿತ್ತು. ಮೇ 29ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಿತ್ತು. ವಿಶೇಷ ಅತಿಥಿಗಳಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಮತ್ತು ಧ್ರುವ ಸರ್ಜಾ (Dhruva Sarja) ಭಾಗಿಯಾಗಿದ್ದರು.  

ಫಿನಾಲೆ ಹಂತದಲ್ಲಿ ಎರಡು ರೌಂಡ್‌ ಡ್ಯಾನ್ಸ್‌ ಇರಲಿದೆ. ಮೊಲದ ರೌಂಡ್ ಮುಗಿದ ನಂತರ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಅವರು ಆಗಮಿಸಿ ವಿನ್ನರ್ ಟ್ರೋಫಿ ರಿವೀಲ್ ಮಾಡಿದ್ದಾರೆ. ಅಪ್ಪುಗೆ ಡ್ಯಾನ್ಸ್‌ ಡೆಡಿಕೆಟ್ ಮಾಡಿ ಪವರ್‌ ಫುಲ್ ಡ್ಯಾನ್ಸ್‌ ಪೋಸ್‌ ಶೈಲಿಯಲ್ಲಿ ಟ್ರೋಫಿ ಡಿಸೈನ್ ಮಾಡಲಾಗಿದೆ. 'ಫಿನಾಲೆ ಹಂತ ತಲುಪಿರುವ ಎಲ್ಲಾ ಸ್ಪರ್ಧಿಗಳಿಗೆ ಆಲ್‌ ದಿ ಬೆಸ್ಟ್‌' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೇದಿಕೆ ಮೇಲಿಂದ ವಿಶ್ ಮಾಡಿದ್ದಾರೆ.

ಡಾನ್ಸಿಂಗ್ ಚಾಂಪಿಯನ್ ಫಿನಾಲೆ; ಭಾನುವಾರ ಸಂಜೆ 6 ಗಂಟೆಯಿಂದನೇ ಆರಂಭ

 

 

ಫಿನಾಲೆ ತಲುಪಿರುವ ಸ್ಪರ್ಧಿಗಳು ಯಾರು:

1) ಚಂದನಾ ಮತ್ತು ಅಕ್ಷತಾ
2) ಅರ್ಜುನ್‌ ಯೋಗಿ ಮತ್ತು ರಾಣಿ
3) ಆರತಿ ಮತ್ತು ಸಾಗರ್
4) ಆರಾಧ್ಯಾ ಮತ್ತು ನಿವೇದಿತಾ
5) ಅನ್ಮೋಲ್ ಮತ್ತು ಆದಿತ್ಯಾ

ಡ್ಯಾನ್ಸಿಂಗ್ ಚಾಂಪಿಯನ್ ಸೀಸನ್‌ 1ರ ಟ್ರೋಫಿನ ಅನ್ಮೋಲ್ (Anmol) ಮತ್ತು ಆದಿತ್ಯ (Adithya) ಗೆದಿದ್ದಾರೆ. ಜೊತೆಗೆ 5 ಲಕ್ಷ ರೂ ಬಹುಮಾನವೂ ದೊರಕಿದೆ.  ಎರಡನೇ ಸ್ಥಾನವನ್ನು ಸ್ಥಾನವನ್ನು ನಿವೇದಿತಾ (Niveditha) ಮತ್ತು ಆರಾಧ್ಯಾ (Aaradhya) ಪಡೆದರೆ ಮೂರನೇ ಸ್ಥಾನವನ್ನು ಚಂದನಾ (Chandana) ಮತ್ತು ಅಕ್ಷತಾ ಪಡೆದು 2 ಲಕ್ಷ ಗೆದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆರತಿ ಮತ್ತು ಸಾಗರ್ (Sagar), ಐದನೇ ಸ್ಥಾನದಲ್ಲಿ ಅರ್ಜುನ್ (Arjun) ಮತ್ತು ರಾಣಿ ಇದ್ದಾರೆ.

ಡ್ಯಾನ್ಸ್‌ ರಿಯಾಲಿಟಿ ಶೋನಿಂದ ಪುಟ್ಟಗೌರಿ ಔಟ್; ಕಾರಣ ಪ್ರಸಾರ ಮಾಡಿಲ್ಲ ಯಾಕೆ?

ಮೊದಲನೇ ಸ್ಥಾನ ಪಡೆದಿರುವ ಅನ್ಮೋಲ್‌, ಕೆಜಿಎಪ್ ಚಾಪ್ಟರ್ 1ರಲ್ಲಿ (KGF 1) ಯಾಕಿಂಗ್ ಸ್ಟಾರ್ ಯಶ್ (Yash) ಅವರ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕಾರ್ಯಕ್ರಮದ ಪೂರ್ತಿ ಅವರನ್ನು ಜ್ಯೂನಿಯರ್ ರಾಖಿ ಎಂದು ಕರೆಯಲಾಗಿತ್ತು. ಅನ್ಮೋಲ್ ಜೋಡಿಯಾಗಿದ್ದ ಆದಿತ್ಯ ತಾಯಿಯನ್ನು ನೋಡದೆ ಅದೆಷ್ಟೋ ವರ್ಷಗಳು ಆಗಿದ್ದ ಕಾರಣ ಅವರ ಕುಟುಂಬವನ್ನು ವೇದಿಕೆ ಮೇಲೆ ಕರೆಸಲಾಗಿತ್ತು ಹಾಗೂ ಜಡ್ಜ್‌ ಮಯೂರಿ (Mayuri) ಅವರು ಡ್ಯಾನ್ಸ್‌ ಮಾಡಲು ಸುಲಭ ಆಗಬೇಕೆಂದು ಶೋ ಗಿಫ್ಟ್‌ ಕೊಟ್ಟಿದ್ದಾರೆ. ಫಿನಾಲೆ ವೇದಿಕೆ ಮೇಲೆ ಆದಿತ್ಯ ನನಗೆ ಸಿಕ್ಕ ಬೆಸ್ಟ್‌ ಪಾರ್ಟನರ್ ಅವರಿಂದ ನಾನು ಡ್ಯಾನ್ಸ್‌ ಕಲಿತಿರುವೆ ಎಂದು ಅನ್ಮೋಲ್ ವಾಚ್‌ ಗಿಫ್ಟ್‌ ಕೊಟ್ಟಿದ್ದಾರೆ. 

ಶೂಟಿಂಗ್‌ ಸೆಟ್‌ನಲ್ಲಿ ಎಷ್ಟು ಕೂಲ್ ಆಗಿರುತ್ತಾರೆ ಮೇಘನಾ ರಾಜ್‌ ನೋಡಿ!

'ಈ ಶೋ ಕರ್ನಾಟಕದ ಡ್ಯಾನ್ಸ್‌ ಪ್ರತಿಭೆಯನ್ನು ಮತ್ತೊಂದು ಎತ್ತರಕ್ಕೆ ಕರೆದೊಯ್ದಿದೆ' ಎಂದು ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ತೀರ್ಪುಗಾರರ ಸ್ಥಾನದಲ್ಲಿ ಮೇಘನಾ ರಾಜ್‌ (Meghana Raj), ಮಯೂರಿ ಉಪಾದ್ಯ ಮತ್ತು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಮಿಂಚಿದ್ದಾರೆ. ಸೃಜನ್ ಲೋಕೇಶ್ (Srujan Lokesh) ಬಂಡವಾಳ ಹಾಕಿರುವ ಈ  ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಶಶಿಕುಮಾರ್, ಶರತ್, ಶಿವರಾಜ್‌ಕುಮಾರ್ (Shivarajkumar), ಧ್ರುವ ಸರ್ಜಾ, ಪ್ರೇಮಾ, ಸುಂದರ್ ರಾಜ್, ಪ್ರೇಮಿಳಾ, ಗಿರಿಜಾ ಲೋಕೇಶ್‌ ಆಗಮಿಸಿದ್ದರು.

Follow Us:
Download App:
  • android
  • ios