ರಾಮೋಜಿ ಫಿಲಂ ಸಿಟಿಯಲ್ಲಿ ಶಿಡ್ಲಘಟ್ಟ ಸೆಟ್; ಸಂಜು ವೆಡ್ಸ್ ಗೀತಾ 2 ಸಸ್ಪೆನ್ಸ್ ಲೀಕ್
ಈ ಚಿತ್ರದ ಮೊದಲ ಭಾಗದ ಕತೆಯನ್ನು ಊಟಿ, ಜೈಲು ಹಾಗೂ ಮಳೆಯ ಹಿನ್ನಲೆಯಲ್ಲಿ ಕಟ್ಟಿಕೊಡಲಾಗಿತ್ತು. ಈಗ ಇದರ ಮುಂದುವರಿದ ಭಾಗ ಸೆಟ್ಟೇದಿದೆ. ನಾಯಕಿ ಬದಲಾಗಿದ್ದು, ಮಿಕ್ಕಂತೆ ಇಲ್ಲಿ ಯಾವ ಕತೆ ತೆರೆದುಕೊಳ್ಳುತ್ತದೆಂಬ ಕುತೂಹಲ ಎಲ್ಲರಿಗೂ ಇದೆ. ಅದರೆ ಒಂದು ಸಣ್ಣ ನೋಟ ಇಲ್ಲಿದೆ
ಆರ್. ಕೇಶವಮೂರ್ತಿ
ನಾಗಶೇಖರ್ ನಿರ್ದೇಶನದ, ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸುತ್ತಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದೆ. ಛಲವಾದಿ ಕುಮಾರ್ ನಿರ್ಮಾಣ, ಸತ್ಯ ಹೆಗಡೆ ಕ್ಯಾಮೆರಾ, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆಯ ಈ ಚಿತ್ರಕ್ಕೆ ಎರಡನೇ ಹಂತದ ಶೂಟಿಂಗ್ ತಯಾರಿಗಳು ನಡೆಯುತ್ತಿವೆ. ಇಷ್ಟಕ್ಕೂ ಪಾರ್ಟ್ 2 ಕತೆ ಏನೆಂಬ ಪ್ರಶ್ನೆ ಎಲ್ಲರದ್ದು.
ಸಂಜು ಫ್ರಮ್ ಶಿಡ್ಲಘಟ್ಟ
ಪಾರ್ಟ್ 2 ಕತೆ ಸಿಕ್ಕಾಪಟ್ಟೆ ಹೊಸದಾಗಿದೆಯಂತೆ. ಈ ಬಾರಿ ಮಳೆ, ಹಸಿರು, ತಣ್ಣನೆಯ ಪ್ರದೇಶಕ್ಕಿಂತ ನಿಗಿ ನಿಗಿ ಸುಡುವ ಬಯಲಿನಲ್ಲಿ ಕತೆ ತೆರೆದುಕೊಳ್ಳಲಿದೆಯಂತೆ. ಯಾಕೆಂದರೆ ಸಂಜು ಅಥಾರ್ತ್ ಚಿತ್ರದ ನಾಯಕನ ಊರು ಶಿಡ್ಲಘಟ್ಟ. ಮೊದಲ ಭಾಗದಲ್ಲಿ ಊಟಿಯಲ್ಲಿದ್ದ ಸಂಜು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಊರಿಗೆ ಹೋಗಿದ್ದು ಯಾಕೆ, ಇಲ್ಲಿ ಸಂಜು ಏನು ಮಾಡುತ್ತಾರೆ, ಅಲ್ಲದೆ ಗೀತಾ ಮತ್ತೆ ಹೇಗೆ ಸಿಗುತ್ತಾಳೆ ಎನ್ನುವುದೇ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಆತ್ಮ.
ಕನ್ನಡ ಚಿತ್ರಗಳನ್ನು ಕಡೆಗಣಿಸಬೇಡಿ; ಓಟಿಟಿಗಳಿಗೆ ರಿಷಬ್ ಶೆಟ್ಟಿ ಮನವಿ
ಗುಡ್ಡಗಾಡಿನ ಪ್ರದೇಶದ ಕತೆ
ಬೆಟ್ಟ ಗುಡ್ಡಗಳಿಂದ ಕೂಡಿದ, ಕುರುಚುಲು ಕಾಡಿನಂತಿರುವ ಶಿಡ್ಲಘಟ್ಟದ ಕತೆಯೊಂದು ತೆರೆ ಮೇಲೆ ಮೂಡುತ್ತಿದೆ. ಇದುವರೆಗೂ ಯಾರೂ ಕೂಡ ಗಮನಿಸಿದ, ಗ್ಲೋಬಲ್ ಮಟ್ಟದ ಪರಂಪರೆಯೊಂದನ್ನು ನಿರ್ದೇಶಕ ನಾಗಶೇಖರ್ ತೆರೆ ಮೇಲೆ ತರುತ್ತಿದ್ದಾರೆ. ಆ ಪರಂಪರೆ ಯಾವುದು, ಇದಕ್ಕೂ ಮತ್ತು ಚಿತ್ರದ ನಾಯಕ ಸಂಜುಗೆ ಇರುವ ನಂಟು ಏನೆಂಬುದೇ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಕೇಂದ್ರಬಿಂದು. ನೈಜತೆ, ದೇಸಿತನ ಮತ್ತು ಸಿನಿಮಿಯ ತಿರುವುಗಳೇ ಚಿತ್ರದ ಶಕ್ತಿಯಾಗಿದೆ ಎಂಬುದು ನಾಗಶೇಖರ್ ಮಾತು.
ಜರ್ನಿ ಟು ಸ್ವಿಟ್ಜರ್ಲ್ಯಾಂಡ್
ಶಿಡ್ಲಘಟ್ಟದ ಗ್ಲೋಬಲ್ ಕತೆಯೊಂದು ಸ್ವಿಟ್ಜರ್ಲ್ಯಾಂಡ್ ವರೆಗೂ ಪ್ರಯಾಣ ಮಾಡುತ್ತದೆ. ಇಲ್ಲಿನ ಒಂದು ಸಾಮಾನ್ಯ ಪ್ರದೇಶದ ಊರಿನ ಹುಡುಗ ಸ್ವಿಟ್ಜರ್ಲ್ಯಾಂಡ್‌ವರೆಗೂ ಯಾಕೆ ಹೋಗುತ್ತಾನೆ ಎನ್ನುವ ಒಂದು ರೋಕ ಪ್ರಯಾಣ ಇಲ್ಲಿದೆ. ಮುಂದೆ ಅಲ್ಲಿಂದ ಬಾಂಬೆಗೆ ಬರುತ್ತಾನೆ. ಈ ಪ್ರಯಾಣದಲ್ಲಿ ಸಂಜು ಜತೆಗೆ ಗೀತಾ ಎಲ್ಲಿ ಸೇರಿಕೊಳ್ಳುತ್ತಾಳೆ ಎಂಬುದನ್ನು ತುಂಬಾ ಸೊಗಸಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ನಾಗಶೇಖರ್
ದಪ್ಪ ಆದ್ರೆ ರೇಶ್ಮೆ ಸೀರೆ ಹಾಕೋದಾ?; ರಚ್ಚು ನಿಂಗೆ ಸೀರೆನೆ ಅಚ್ಚುಮೆಚ್ಚು ಎಂದ ಪಡ್ಡೆಹೈಕ್ಳು
ರಾಮೋಜಿ ಫಿಲಂ ಸಿಟಿಯಲ್ಲಿ ಶಿಡ್ಲಘಟ್ಟ ಸೆಟ್ಟು
ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಕತೆಗೆ ಪೂರಕವಾಗಿ ಶಿಡ್ಲಘಟ್ಟ ತಾಲೂಕು ಪ್ರದೇಶಗಳ ಸೆಟ್ ನಿರ್ಮಿಸುವ ಸಾಹಸ ಮಾಡುತ್ತಿದ್ದಾರೆ. ಅತ್ಯಂತ ನೈಜವಾಗಿ ಒಂದೂರಿನ ಸೆಟ್ ನಿರ್ಮಿಸುವ ಮೂಲಕ ಇಡೀ ಚಿತ್ರ ಅದ್ದೂರಿಯಾಗಿ ಮೂಡಿ ಬರುವುದಕ್ಕೆ ನಿರ್ಮಾಪಕ ಛಲವಾದಿ ಕುಮಾರ್ ಅವರು ಕೈ ಜೋಡಿಸಿದ್ದಾರಂತೆ.