ಶೂಟೌಟ್‌ ಆರ್ಡರ್‌ ಬಂದಿತ್ತಂತೆ, ಊಟಕ್ಕೆ ವಿಷ ಹಾಕಬೇಕಿತ್ತು; ಮಾನಸಿಕ ಅಸ್ವಸ್ಥ ಅಂತಾರೆಂದು ಕಣ್ಣೀರಿಟ್ಟ ಡ್ರೋನ್ ಪ್ರತಾಪ್

ಸುಳ್ಳು ಕಳ್ಳ ಎಂದು ಸುದ್ದಿ ಮಾಡಿದ ಜನರಿಗೆ ಬಿಗ್ ಬಾಸ್ ಮೂಲಕ ಸ್ಪಷ್ಟನೆ ಕೊಟ್ಟ ಡ್ರೋನ್ ಪ್ರತಾಪ್. 

Colors Kannada Bigg Boss Drone prathap talks about media and trolls effect on his mental health vcs

ಬಿಗ್ ಬಾಸ್ ಸೀಸನ್‌ 10ರಲ್ಲಿ ಸ್ಪರ್ಧಿಸುತ್ತಿರುವ ಡ್ರೋನ್ ಪ್ರತಾಪ್ ಮೊದಲ ಸಲ ತಮ್ಮ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವೇದಿಕೆ ಮೇಲೆ ನಿಂತು ಕಣ್ಣೀರಿಟ್ಟಿದ್ದಾರೆ.

'ನನ್ನ ಜೀವನದ ಒಂದು ಭಾಗದ ಕಥೆ ಎಲ್ಲರಿಗೂ ಗೊತ್ತಿದೆ. ಒಂದು ಸಮಯದಲ್ಲಿ ನಾನು ದೇಶ ಬಿಟ್ಟು ಹೋಗಿದ್ದೆ ಆಗ ಒಂದಿಷ್ಟು ಬ್ಲಾಗರ್‌ಗಳು ಮತ್ತು ನನ್ನ ಜೊತೆ ಕೆಲಸ ಮಾಡಿದ ವ್ಯಕ್ತಿಗಳು ನನ್ನ ಬಗ್ಗೆ ಒಂದಿಷ್ಟು ಸ್ಟೋರಿಗಳನ್ನು ಕ್ರಿಯೇಟ್ ಮಾಡಿದ್ದರು. ಎಲ್ಲರೂ ನಾನು ದುಡ್ಡು ತೆಗೆದುಕೊಂಡಿರುವೆ ಅಂತಾನೆ ಹೇಳುತ್ತಿದ್ದರು. ಮೂರು ಜನರು ಸೇರಿಕೊಂಡು ರೆಕ್ಕೆ ಪುಕ್ಕ ಕಟ್ಟಿ ಮಾತನಾಡಿದರು. ಕೆಲವೊಂದು ಮಾತುಗಳನ್ನು ನಾನು ಬಾಯಿ ತಪ್ಪಿ ಹೇಳಿದ್ದೀನಿ ಆ ವಿಚಾರಗಳಿಂದ ಸಾಕಷ್ಟು ಅನುಭವಿಸಿರುವೆ. ಆ ಸಮಯದಿಂದ ನನಗೆ ಪ್ಯಾನಿಕ್ ಆಗುವ ಸಮಸ್ಯೆ ಶುರುವಾಯ್ತು. ನಾನು ಸರಿಯಾಗಿದ್ದರೂ ಮಾತನಾಡಲು ಆಗುತ್ತಿರಲಿಲ್ಲ. ಪ್ರತಾಪ್ ಹೆದರಿಕೊಂಡರು ಅನ್ನೋ ಮಾತುಗಳು ಶುರುವಾಯ್ತು' ಎಂದು ಡ್ರೋನ್ ಪ್ರತಾಪ್ ಮಾತನಾಡಿದ್ದಾರೆ.

ತಂಡ ಬದಲಾಯಿಸಿ ಕಣ್ಣೀರಿಟ್ಟ ನಮ್ರತಾ ಗೌಡ; ಚಮಚಗಳಿಗೆ ಸರಿಯಾದ ಪಾಠ ಕಲಿಸಿದ ಡ್ರೋನ್ ಪ್ರತಾಪ್?

'ನನ್ನ ಕೈಗೆ ಕ್ವಾರಂಟೈನ್ ಸಿಂಬಲ್ ಹಾಕಿದ್ದರೂ ಆ ಸಾಕ್ಷಿಗಳನ್ನು ತೋರಿಸಿದೆ. ಕೆಲವು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿರುವ ನನ್ನ ಸ್ನೇಹಿತರ ಮನೆಯಲ್ಲಿ ವಾಸವಿದ್ದೆ. ನಾನು ಬೆಂಗಳೂರು ಬಿಡಬೇಕು ಅನ್ನೋದು ಎಲ್ಲರ ಆಸೆ ಅಗಿತ್ತು. ನನ್ನ ಅಪಾರ್ಟ್‌ಮೆಂಟ್‌ ಬೀಗ ಹೊಡೆದು ಓಪನ್ ಮಾಡಿ ಸುದ್ದಿ ಮಾಡಿದ್ದರು. ಮಾಧ್ಯಮಗಳಲ್ಲಿ ಪ್ರತಾಪ್ ಮೇಲೆ ಕೇಸ್. ನನ್ನ ಬಗ್ಗೆ ಚೆನ್ನಾಗಿ ತಿಳಿದುಕೊಂಡು ನನ್ನ ಮೇಲೆ ಮೋಸ ಮಾಡಿದ್ದರು. ಆ ವ್ಯಕ್ತಿ ನನಗೆ ಎರಡು ಸಾವಿರ ರೂಪಾಯಿ ಕೊಟ್ಟರು. ನಾನು ಕ್ವಾರಂಟೈನ್ ಆಗಿಲ್ಲ ಅಂತ ತಂದೆನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.  ಪ್ರತಾಪ್ ಕಾಣಿಸುತ್ತಿಲ್ಲ ಅಂತ ಶೂಟೌಟ್‌ ಆರ್ಡರ್ ಕೊಟ್ಟಿದ್ದಾರೆ ಅಂತ ಊರು ತುಂಬಾ ಹಬ್ಬಿತ್ತು. ಕಂಡಲ್ಲೇ ಗುಂಡಿಕ್ಕುವ ಆರ್ಡರ್‌ ಕೊಟ್ಟಿದ್ದರಂತೆ. ನನ್ನ ತಂದೆ ತಾಯಿ ಹೊರ ಬಂದಿಲ್ಲ. ನನ್ನ ತಾಯಿ ಭಾಗಿಲು ಹಾಕೋಂಡು ಗದ್ದೆ ಕಡೆ ಹೋಗಿದ್ದಾರೆ ನನ್ನ ತಂದೆ ಎಲ್ಲಿ ಎಲ್ಲೂ ಇಲ್ಲ. ಊರಿನ ಜನರು ದಿನಕ್ಕೊಂದು ಕಥೆ ಹಬ್ಬಿಸುತ್ತಿದ್ದರು' ಎಂದು ಪ್ರತಾಪ್ ಹೇಳಿದ್ದಾರೆ.

ಡ್ರೋನ್ ಸಿನಿಮಾ ರಿಲೀಸ್ ಆದ್ರೆ ಬಿಗ್ ಬಾಸ್ ಪ್ರತಾಪ್ ಸೋಲೋಕೆ ನಾನೇ ಕಾರಣ ಅಂತಾರೆ: ಒಳ್ಳೆ ಹುಡುಗ ಪ್ರಥಮ್

' ಪ್ರತಾಪ್ ಸುಳ್ಳ ಕಳ್ಳ ಊಟದಲ್ಲಿ ವಿಷ ಹಾಕಿ ಸಾಯಿಸಬೇಕು ಯಾಕೆ ಬದುಕಲು ಬಿಟ್ಟಿದ್ದಾರೆ ಅಂತ ಸಂಬಂಧಿಕರು ಹೇಳುತ್ತಿದ್ದರು. ನನ್ನ ತಾಯಿ ಇದನ್ನು ಹೇಳಿದಾಗ ಬೇಸರ ಅಯ್ತು. ಚಿಕ್ಕಮಂಗಳೂರಿನಿಂದ ಶಾಂತಿನಗರದಲ್ಲಿರುವ ಹೋಟೆಲ್‌ಗೆ ಬಂದ ನನ್ನ ಮುಂದೆ ಇರುವ ಸ್ಕ್ರೀನ್ ಓಪನ್ ಮಾಡ್ತಾರೆ ಸುತ್ತಾ ಮಾಧ್ಯಮದವರು. ಯಾವ ಪ್ರತಾಪ್‌ನ ಇಷ್ಟು ದಿನ ಮೆರೆಸಿದರು ಅದೇ ಪ್ರತಾಪ್‌ಗೆ ಪೊಲೀಸ್ ರಿಸರ್ವ್ ಹಾಕಿದ್ದರು ಆ ನ್ಯೂಸ್ ಜೊತೆ ಮಾತನಾಡು ಈ ನ್ಯೂಸ್ ಜೊತೆ ಮಾತನಾಡು ಆ ಪೇಪರ್‌ಗೆ ಸ್ಪಷ್ಟನೆ ಕೊಡು ಎಂದು ಕಾಟ ಕೊಟ್ಟರು. ನಿನ್ನ ತಂಗಿನ ಯಾರು ಮದುವೆ ಮಾಡಿಕೊಳ್ಳುತ್ತಾರೆ ಎಂದು ಕೊಡಬಾರದ ಹಿಂಸೆ ಕೊಟ್ಟರು. ನಿಮ್ಮ ತಾಯಿ ಹುಚ್ಚು ತರ ರಸ್ತೆಯಲ್ಲಿ ಓಡಾಡಬೇಕು ನಿಮ್ಮ ಅಪ್ಪಂಗೆ ಯಾರೂ ಇರ್ಬಾರದು. ಮೆಂಟಲ್ ಆಸ್ಪತ್ರೆಯಿಂದ ಡಾಕ್ಟರ್‌ನ ಕರೆದುಕೊಂಡು ಬಂದು ನೀನು  Mentally Unstable ಎಂದು ಬರೆದುಕೊಡಲು ಒತ್ತಾಯ ಮಾಡಿದರು. ನನ್ನ ಪಾಸ್ ಪೋರ್ಟ್, ಐ ಪ್ಯಾಡ್ ತೆಗೆದುಕೊಂಡರು. ನಾನು ಯಾವುದಕ್ಕೂ ಸಹಿ ಮಾಡದ ಕಾರಣ ತಂದೆ ತಾಯಿನ ಕೇಳಿದರು. ತಲೆ ತಲೆ ಮೇಲೆ ಹೊಡೆಯುತ್ತಿದ್ದರು. ಹೋಟೆಲ್‌ನಿಂದ ಹೊರ ಬಂದ್ಮೇಲೆ ಸತ್ಯ ಹೇಳಿದರೂ ಯಾರು ನಂಬುತ್ತಿರಲಿಲ್ಲ. ಅಲ್ಲಿಂದ ಊರಿಗೆ ಬಂದೆ ಒಂದು ತಿಂಗಳು ಮನೆಯಲ್ಲಿದ್ದೆ. ಸಣ್ಣದಾಗಿ ನಾನು ಸಂಶೋಧನೆ ಮಾಡುತ್ತಿರುವೆ ದಯವಿಟ್ಟು ಸಪೋರ್ಟ್‌ ಮಾಡಿ. ಬಿಗ್ ಬಾಸ್‌ ವೇದಿಕೆ ಮೇಲೆ ಬರಬಾರದು ಅಂದುಕೊಂಡಿದ್ದೆ ಆದರೆ ಈಗ ವೇದಿಕೆ ಆಯ್ಕೆ ಮಾಡಿದ್ದು ಒಳ್ಳೆದು. ನಿಮ್ಮ ಮಕ್ಕಳನ್ನು ಭಾವಿಗೆ ತಳ್ಳಿ ನನ್ನನ್ನು ತಳ್ಳಬೇಡಿ' ಎಂದಿದ್ದಾರೆ ಪ್ರತಾಪ್. 

 

Latest Videos
Follow Us:
Download App:
  • android
  • ios