Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಎಲ್ಲರನ್ನು ನಗಿಸುತ್ತಿರುವ ಗಿಲ್ಲಿ ನಟನಿಗೆ ಹಾವು, ವಿಷಕಾರಿ ಎಂಬೆಲ್ಲ ಪಟ್ಟಗಳು ಸಿಕ್ಕಿವೆ. ಈ ಬಗ್ಗೆ ಖಾಸಗಿ ಕಂಪೆನಿ HR ಮಾಡಿದ ವಿಮರ್ಶೆ ಹೀಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಗಿಲ್ಲಿ ನಟ ಬಗ್ಗೆ ಖಾಸಗಿ ಕಂಪೆನಿ HR ಸಂಕೇತ್ ಮೇಘರವಳ್ಳಿ ಅವರು ಬರೆದ ಬರಹ ಹೀಗಿದೆ.
ರಿಯಾಲಿಟಿ ಶೋ ಎನ್ನುವುದು ಕೇವಲ ಮನರಂಜನೆಗಾಗಿ ಮಾತ್ರವಲ್ಲ. ಅಲ್ಲಿಯೇ ಮಾನವ ವರ್ತನೆ, ಭಾವನಾತ್ಮಕ ಬುದ್ಧಿವಂತಿಕೆ, ಒತ್ತಡ ನಿರ್ವಹಣೆ, ತಂಡದ ಗತಿಯು, 𝐭𝐫𝐢𝐠𝐠𝐞𝐫𝐬 ಮತ್ತು 𝐫𝐞𝐬𝐢𝐥𝐢𝐞𝐧𝐜𝐞 ಇವೆಲ್ಲವೂ ನಿಜಸ್ವರೂಪದಲ್ಲಿ ಹೊರಬೀಳುತ್ತವೆ.ಇದನ್ನೆ ಆಧರಿಸಿಕೊಂಡು, 𝐇𝐑 ದೃಷ್ಟಿಯಿಂದ ಗಿಲ್ಲಿ ನಾಟನ ಬಗ್ಗೆ ನನ್ನ ಓದು ಹೀಗಿದೆ.
𝐇𝐢𝐠𝐡 𝐄𝐦𝐨𝐭𝐢𝐨𝐧𝐚𝐥 𝐑𝐞𝐬𝐢𝐥𝐢𝐞𝐧𝐜𝐞 — ಭಾವನಾತ್ಮಕ ಸಹನಶಕ್ತಿ
ಗಿಲ್ಲಿಯನ್ನು ಎಷ್ಟೇ ಟಾರ್ಗೆಟ್ ಮಾಡಿದರೂ, ಅವನು ಒಡೆಯದೇ, ಸ್ವಭಾವದ ಶಾಂತತೆಯನ್ನು ಕಳೆದುಕೊಳ್ಳದೇ, ಸಮತೋಲನದಿಂದ ನಿಂತಿರುತ್ತಾನೆ. ಕೆಲಸ ಮಾಡುವ ಸ್ಥಳದಲ್ಲಿ ಇಂಥವರೇ 𝐬𝐭𝐚𝐛𝐢𝐥𝐢𝐭𝐲 𝐚𝐧𝐜𝐡𝐨𝐫𝐬.
𝐇𝐮𝐦𝐨𝐮𝐫 𝐚𝐬 𝐚 𝐂𝐨𝐧𝐟𝐥𝐢𝐜𝐭 𝐃𝐢𝐟𝐟𝐮𝐬𝐞𝐫 — ಹಾಸ್ಯದಿಂದ ಒತ್ತಡ ತಣಿಸುವ ಶಕ್ತಿ
𝐂𝐨𝐦𝐦𝐨𝐧 𝐫𝐞𝐚𝐜𝐭𝐢𝐨𝐧 𝐭𝐨 𝐜𝐨𝐧𝐟𝐥𝐢𝐜𝐭 𝐢𝐬 𝐚𝐠𝐠𝐫𝐞𝐬𝐬𝐢𝐨𝐧.
ಆದರೆ ಗಿಲ್ಲಿ? ಅವನು ಹಾಸ್ಯವನ್ನು ಬಳಸಿಕೊಂಡೇ ಗಲಾಟೆಗಳನ್ನು ಹಗುರವಾಗಿಸುತ್ತಾನೆ. ಇದು 𝐛𝐞𝐡𝐚𝐯𝐢𝐨𝐮𝐫𝐚𝐥 𝐥𝐞𝐯𝐞𝐥𝐬 ನಲ್ಲಿ ತುಂಬಾ ಅಪರೂಪದ 𝐜𝐨𝐦𝐩𝐞𝐭𝐞𝐧𝐜𝐞.
𝐎𝐛𝐬𝐞𝐫𝐯𝐚𝐭𝐢𝐨𝐧𝐚𝐥 𝐂𝐥𝐚𝐫𝐢𝐭𝐲 — ಪರಿಸ್ಥಿತಿ ಮನಗಂಡು ಮಾತನಾಡುವ ಸಾಮರ್ಥ್ಯ ಗಿಲ್ಲಿ ತನ್ನ ಕಾರಣಗಳನ್ನು ಕೊಡೋದೀಗ, ಅವನು ನೋಡಿದ, ಅರ್ಥ ಮಾಡಿಕೊಂಡ, 𝐟𝐚𝐜𝐭𝐬 ಮೇಲೆ ನಿಂತ ಮಾತು ಮಾತ್ರ ಹೇಳುತ್ತಾನೆ. 𝐇𝐑 ನಲ್ಲಿ ಇದನ್ನು 𝐒𝐢𝐭𝐮𝐚𝐭𝐢𝐨𝐧𝐚𝐥 𝐀𝐰𝐚𝐫𝐞𝐧𝐞𝐬𝐬 ಎಂದು ಕರೀತಾರೆ.
𝐒𝐭𝐫𝐞𝐧𝐠𝐭𝐡 𝐁𝐞𝐜𝐨𝐦𝐞𝐬 𝐭𝐡𝐞 𝐓𝐚𝐫𝐠𝐞𝐭 — ಬಲವಿರುವವರೇ ಗುರಿಯಾಗುತ್ತಾರೆ
ಸೈಕಾಲಜಿ ಒಂದು ಸರಳ ಸತ್ಯ ಹೇಳುತ್ತದೆ: ಜನರು ಮ್ಯಾಚ್ ಮಾಡಲಾಗದವರನ್ನೇ ಗುರಿಯಾಗಿಸುತ್ತಾರೆ. ಗಿಲ್ಲಿಯ 𝐬𝐩𝐨𝐧𝐭𝐚𝐧𝐞𝐢𝐭𝐲, ಸ್ಪಷ್ಟತೆ ಮತ್ತು ಹಾಸ್ಯ ಇವೆಲ್ಲವೂ ಕೆಲವರ ಕೀಳರಿಮೆಯನ್ನು ಹೊರಗೆ ತರುತ್ತವೆ.
𝐏𝐨𝐬𝐢𝐭𝐢𝐯𝐢𝐭𝐲 𝐭𝐨 𝐭𝐡𝐞 𝐄𝐧𝐯𝐢𝐫𝐨𝐧𝐦𝐞𝐧𝐭 — ಪರಿಸರಕ್ಕೆ ಬೆಳಕು ತರೋ ವ್ಯಕ್ತಿ
ಗಾಸಿಪ್, ಹಿಂದೆ ಮಾತಾಡೋದು ಮತ್ತು ನಕಾರಾತ್ಮಕತೆ ನಡುವೆ ಗಿಲ್ಲಿ ಮನೆಯೊಳಗೆ ಹಗುರಾದ ಭಾವ ಮತ್ತು ಪಾಸಿಟಿವಿಟಿ ತರುತ್ತಾನೆ.
ಕೆಲಸದ ಜಾಗದಲ್ಲಿ ಸಂಸ್ಕೃತಿ ಎತ್ತಿತೋರಿಸುವ ಶಕ್ತಿ ಇಂಥವರಲ್ಲೇ ಇರುತ್ತದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕೆಲವರು ಗಿಲ್ಲಿಯನ್ನು “ವಿಷಕಾರಿ ಹಾವು” ಎಂದು ಕರೆಯುತ್ತಿದ್ದಾರೆ. ಆದರೆ 𝐇𝐑 ದೃಷ್ಟಿಯಿಂದ ನೋಡಿದರೆ ಈ ಲೆಬೆಲ್ ಅವನ ವರ್ತನೆಗೆ, ಅವನ ನೈಜತೆಗೆ, ಅವನ ಹಾಸ್ಯಕ್ಕೆ ಎಲ್ಲಕ್ಕೂ ವಿರುದ್ಧ.
𝐓𝐨𝐱𝐢𝐜𝐢𝐭𝐲 ಎಂದರೆ ಏನು?
ನಕಾರಾತ್ಮಕತೆ ಹರಡುವುದು
ಇದ್ದುದನ್ನು ಬಿಟ್ಟು, ಇಲ್ಲದಿರೋದನ್ನು ಹೇಳಿ ಕುತಂತ್ರ ಮಾಡುವುದು
ಅನಾರೋಗ್ಯಕರ ವಾತಾವರಣ ಸೃಷ್ಟಿ ಮಾಡುವುದು
ಗಿಲ್ಲಿಯ ವರ್ತನೆ ಇದರಲ್ಲಿ ಯಾವುದಕ್ಕೂ ಸೇರಿದದ್ದೇ ಅಲ್ಲ.
ಅವನು ಹಾಸ್ಯದಿಂದ ಒತ್ತಡ ಕಡಿಮೆ ಮಾಡುತ್ತಾನೆ
ಅಗ್ರೆಸ್ಸಿವ್ ಆಗೋ ಸ್ವಭಾವ ತೋರಿಸಲಿಲ್ಲ
ಊಹೆಗಳ ಮೇಲೆ ಅಲ್ಲ, ಸತ್ಯಾಂಶಗಳ ಮೇಲೆ ಮಾತನಾಡುತ್ತಾನೆ
ಮನೆಯೊಳಗೆ ಪಾಸಿಟಿವ್ ಗುಣ ಹರಡುತ್ತಾನೆ
ಅವನನ್ನು “ವಿಷಕಾರಿ” ಎಂದು ಕರೆಯೋದು ಒಂದು ಕ್ಷಣದ ತಪ್ಪು ಅವಲೋಕನ, ನಿಜವಾದ 𝐛𝐞𝐡𝐚𝐯𝐢𝐨𝐮𝐫𝐚𝐥 𝐚𝐬𝐬𝐞𝐬𝐬𝐦𝐞𝐧𝐭 ಅಲ್ಲ.
ಗಿಲ್ಲಿ 𝐭𝐨𝐱𝐢𝐜 ಅಲ್ಲ. ಅವನು 𝐫𝐞𝐬𝐢𝐥𝐢𝐞𝐧𝐭, 𝐨𝐛𝐬𝐞𝐫𝐯𝐚𝐧𝐭, 𝐞𝐦𝐨𝐭𝐢𝐨𝐧𝐚𝐥𝐥𝐲 𝐛𝐚𝐥𝐚𝐧𝐜𝐞𝐝. ಇಂತಹವರು 𝐰𝐡𝐞𝐫𝐞𝐯𝐞𝐫 𝐭𝐡𝐞𝐲 𝐠𝐨 ತಂಡಗಳನ್ನೂ, ಪರಿಸರಗಳನ್ನೂ 𝐮𝐩𝐥𝐢𝐟𝐭 ಮಾಡುತ್ತಾರೆ.
𝐇𝐑 ದೃಷ್ಟಿಯಿಂದ ನನ್ನ ಅಭಿಪ್ರಾಯ
ಗಿಲ್ಲಿ ಕೇವಲ ಮನರಂಜನೆ ನೀಡುವ ವ್ಯಕ್ತಿ ಅಲ್ಲ. ಅವನು 𝐡𝐢𝐠𝐡-𝐄𝐐, 𝐠𝐫𝐨𝐮𝐧𝐝𝐞𝐝, 𝐛𝐚𝐥𝐚𝐧𝐜𝐞𝐝, 𝐜𝐮𝐥𝐭𝐮𝐫𝐞-𝐩𝐨𝐬𝐢𝐭𝐢𝐯𝐞 ವ್ಯಕ್ತಿ. ಅವನ 𝐩𝐫𝐞𝐬𝐞𝐧𝐜𝐞 ಇರುವ ಜಾಗದಲ್ಲಿ ನೆಗೆಟಿವಿಟಿ ಕಡಿಮೆಯಾಗುತ್ತೆ, 𝐥𝐢𝐠𝐡𝐭𝐧𝐞𝐬𝐬, 𝐝𝐢𝐠𝐧𝐢𝐭𝐲 ಮತ್ತು ಗೌರವ ಹೆಚ್ಚಾಗುತ್ತವೆ.
ಗಿಲ್ಲಿ — ನಿನಗೆ ನನ್ನ ಗೌರವಗಳು. ನಿನ್ನ ಹಾಸ್ಯ, ನಿನ್ನ ಧೈರ್ಯ, ನಿನ್ನ ನೈಜತೆ — ಇದೇ ನಿನ್ನ ನಿಜವಾದ ಗೆಲುವು.


