- Home
- Entertainment
- TV Talk
- BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್, ರಜತ್ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್, ರಜತ್ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?
Colors Kannada Bigg Boss Kannada Season Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಾಮಿನೇಶನ್ ಎಂದು ಬಂದಾಗ, ಸ್ಪರ್ಧಿಗಳು ಕೊಡುವ ಕಾರಣಕ್ಕೆ ಜಗಳ ಆಗುವುದು. ಈಗ ಇದೇ ವಿಚಾರಕ್ಕೆ ರಜತ್ ಹಾಗೂ ಧ್ರುವಂತ್ ಮಧ್ಯೆ ಗಲಾಟೆ ಆಗಿದೆ. ಇದರ ಕಿಡಿ ಹೊತ್ತಿರೋದು ಕಾವ್ಯ ಮಾತಿನಿಂದ.

ನಾಮಿನೇಶನ್ ಬಿಸಿ
ಕಾವ್ಯ ಶೈವ ಅವರು ಗಿಲ್ಲಿ ನಟ ಹಾಗೂ ರಜತ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ರಜತ್, ಗಿಲ್ಲಿಯನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದಾರೆ. ಇದರಿಂದಲೇ ಮನೆಯಲ್ಲಿ ಹೊಡೆದಾಡುಕೊಳ್ಳುವಷ್ಟರ ಮಟ್ಟಿಗೆ ಜಗಳ ಹೋಗಿದೆ.
ಒಂದು ಕಡೆಗೆ ಸೀಮಿತ ಆಗಿರೋ ಕಾವ್ಯ
ಕಾವ್ಯ ಶೈವ, ಗಿಲ್ಲಿ ನಟ ಅವರು ಒಂದು ಕಡೆಗೆ ಸೀಮಿತ ಆಗಿದ್ದಾರೆ, ಕಾಮಿಡಿ ಮಾಡುತ್ತಾರೆ ಎಂದು ಕಾರಣ ನೀಡಿದ್ದರು. ಇದು ರಜತ್ ಪಿತ್ತವನ್ನು ನೆತ್ತಿಗೇರಿಸಿದೆ. ಈ ಕಾರಣ ನೋಡಿ ರಜತ್ ಅವರು ಕೆಂಡಾಮಂಡಲರಾಗಿದ್ದಾರೆ. ಆಮೇಲೆ ಜಗಳ ನಡೆದಿದೆ.
ಸ್ಪರ್ಧಿಗಳಿಗೆ ತಲೆ ಕೆಟ್ಟೋಗಿದೆಯಾ?
ಈ ಮನೆಯಲ್ಲಿ ತಮಾಷೆ ಮಾಡಬಾರದಾ? ಸ್ಪರ್ಧಿಗಳಿಗೆ ತಲೆ ಕೆಟ್ಟೋಗಿದೆಯಾ? ಎಂದು ರಜತ್ ಅವರು ಹೇಳಿದ್ದಾರೆ. ಆಗ ಧ್ರುವಂತ್ ಅವರು, “ಏನು ಏಕವಚನದಲ್ಲಿ ಮಾತನಾಡುತ್ತಾರೆ” ಎಂದಿದ್ದಾರೆ. ಆಗ ರಜತ್ ಅವರು ಧ್ರುವಂತ್ ಮೇಲೆ ಕೂಗಾಡಿದ್ದಾರೆ.
ನಿನ್ನ ಸೀಸನ್ ಅಲ್ಲಿ ಇದೆಲ್ಲ ಇಟ್ಟುಕೋ
ಧ್ರುವಂತ್ ಅವರು, “ನಮ್ಮನ್ನು ಗಿಲ್ಲಿ ಅಂದುಕೊಂಡಿದ್ದೀಯಾ? ಬಾರೋ. ಇದೆಲ್ಲ ನಿನ್ನ ಸೀಸನ್ ಅಲ್ಲಿ ಇಟ್ಟುಕೋ” ಎಂದಿದ್ದಾರೆ. ಆಗ ರಜತ್ ಅವರು, “ಕೊಟ್ಟರೆ ಎರಡು, ಹಾಗೆ ತಿಂದುಕೊಳ್ತೀಯಾ?” ಎಂದು ಹೇಳಿದ್ದಾರೆ. ಆಮೇಲೆ ಇವರಿಬ್ಬರು ಹೊಡೆದಾಡಿಕೊಳ್ಳಲು ಮುಂದಾಗಿದ್ದಾರೆ.
ಮಾತಿನಲ್ಲಿ ಬಗೆಹರಿಸಿಕೊಂಡ್ರಾ?
ಮನೆಯವರೆಲ್ಲ ಸೇರಿಕೊಂಡು ಧ್ರುವಂತ್, ರಜತ್ ಅವರು ಹೊಡೆದಾಡಿಕೊಳ್ಳದೆ, ಮಾತಿನಲ್ಲಿ ಬಗೆಹರಿಸಿಕೊಳ್ಳುವಂತೆ ಮಾಡಿದ್ದಾರೆ. ಆಮೇಲೆ ಏನಾಗಿದೆ ಎಂದು ಕಾದು ನೋಡಬೇಕಿದೆ. ಸದ್ಯ ಈ ವಿಲನ್ ಟಾಸ್ಕ್‌ನಲ್ಲಿ ಯಾರು ಯಾರು ಏನೇನು ಜಗಳ ಆಡುತ್ತಾರೋ? ಗಿಲ್ಲಿ ನಟ ಎಷ್ಟು ಫನ್ ಮಾಡ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

