- Home
- Entertainment
- TV Talk
- Bigg Boss Kannada 12: ಸೂರಜ್ ಎದುರೇ ರಾಶಿಕಾ, ರಜತ್ ಜೊತೆ ರೊಮಾನ್ಸ್ ಮಾಡೋದಾ? ಛೇ ಧ್ರುವಂತ್ಗೆ ಇದೇನಾಯ್ತು?
Bigg Boss Kannada 12: ಸೂರಜ್ ಎದುರೇ ರಾಶಿಕಾ, ರಜತ್ ಜೊತೆ ರೊಮಾನ್ಸ್ ಮಾಡೋದಾ? ಛೇ ಧ್ರುವಂತ್ಗೆ ಇದೇನಾಯ್ತು?
ಬಿಗ್ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಲವ್ಸ್ಟೋರಿ ಸದ್ದು ಮಾಡುತ್ತಿರುವಾಗಲೇ, ರಾಶಿಕಾ ಇದೀಗ ರಜತ್ ಜೊತೆ ರೊಮ್ಯಾಂಟಿಕ್ ಡಾನ್ಸ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಧ್ರುವಂತ್ ಅವರ ರಿಯಾಕ್ಷನ್ ಕೂಡ ಗಮನ ಸೆಳೆದಿದೆ.

ಸೂರಜ್-ರಾಶಿಕಾ ಲವ್ಸ್ಟೋರಿ
ಬಿಗ್ಬಾಸ್ (Bigg Boss) ನಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಲವ್ಸ್ಟೋರಿ ವೀಕ್ಷಕರಿಗೆ ತಿಳಿದದ್ದೇ. ಸೂರಜ್ ಸಿಂಗ್ ಬಿಗ್ಬಾಸ್ ಮನೆಯೊಳಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಾಗ ಮೊದಲು ಗುಲಾಬಿ ಹೂವು ನೀಡಿ ಬಿಗ್ಬಾಸ್ ಮನೆಯ ಸುಂದರಿ ಎಂದು ಹೇಳಿದ್ದರು.
ಸದ್ದು ಮಾಡ್ತಿರೋ ಪ್ರೇಮ
ಆಗಿನಿಂದ ಈಗಿನವರೆಗೂ ಇವರಿಬ್ಬರ ಲವ್ಸ್ಟೋರಿ ತುಂಬಾ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಬಿಗ್ಬಾಸ್ನಲ್ಲಿ ಇರುವಷ್ಟು ದಿನ ಇಂಥ ಲವ್ಸ್ಟೋರಿಗಳು ಪ್ರತಿ ಸೀಸನ್ನಲ್ಲಿ, ಪ್ರತಿ ಭಾಷೆಗಳಲ್ಲಿ ಇದದ್ದೇ. ಬಹುತೇಕ ಎಲ್ಲವೂ ಬಿಗ್ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಮಾತ್ರ. ಕೊನೆಗೆ ಎಲ್ಲರೂ ದೂರ ದೂರ.
ಟಿಆರ್ಪಿ ಹೆಚ್ಚಳ
ಒಟ್ಟಿನಲ್ಲಿ ಬಿಗ್ಬಾಸ್ ಟಿಆರ್ಪಿ ಹೆಚ್ಚಿಸಲು ಇಂಥವರನ್ನು ಹುಡುಕಿ ಹುಡುಕಿ ಸೆಲೆಕ್ಟ್ ಮಾಡುವುದೇ ಬಿಗ್ಬಾಸ್ನ ಜಾಣ್ಮೆಯೂ ಹೌದು. ಜಗಳ, ರೊಮಾನ್ಸ್, ಹಾಸ್ಯ... ಹೀಗೆ ವಿಭಿನ್ನ ಕ್ಯಾರೆಕ್ಟರ್ ಇದ್ದವರು ಬಹಳ ಕಾಲದವರೆಗೆ ಬಿಗ್ಬಾಸ್ನಲ್ಲಿ ಉಳಿಯುತ್ತಾರೆ. ಉಳಿದವರಿಗೆ ಬೇಗನೇ ಗೇಟ್ಪಾಸ್ ಸಿಗುತ್ತದೆ. ಇಷ್ಟೇ ಇದರ ಸೀಕ್ರೆಟ್.
ರಾಶಿಕಾ- ರಜತ್ ಡಾನ್ಸ್
ಅದೇನೇ ಇರಲಿ. ಬಿಗ್ಬಾಸ್ ಮನೆಯಲ್ಲಿ ಆಗಾಗ್ಗೆ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಜುಂ ಜುಂ ಮಾಯಾ ಹಾಡಿಗೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಸಕತ್ ರೊಮಾಂಟಿಕ್ ಸ್ಟೆಪ್ ಹಾಕಿದ್ರು. ಅದೇ ರೀತಿ ರಾಶಿಕಾ ಶೆಟ್ಟಿ ಮತ್ತು ರಜತ್ ಕೂಡ ರೊಮಾಂಟಿಕ್ ಆಗಿ ಕಾಣಿಸಿಕೊಂಡಿದ್ದರು.
ಪಾಪ ಸೂರಜ್ ಸಿಂಗ್
ಇದೀಗ ಇವರ ಡಾನ್ಸ್ ಕೂಡ ವೈರಲ್ ಆಗಿದೆ. ಇದರಿಂದ ಬಿಗ್ಬಾಸ್ ಫ್ಯಾನ್ಸ್ ಸೂರಜ್ ಸಿಂಗ್ ಎದುರಿಗೇ ಹೀಗೆ ಬೇರೊಬ್ಬರ ಜೊತೆ ರೊಮಾನ್ಸ್ ಮಾಡೋದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಧ್ರುವಂತ್ಗೆ ಏನಾಯ್ತು?
ಆದರೆ, ಈ ಡಾನ್ಸ್ ಮಾಡುತ್ತಿರುವಾಗ ಗಮನ ಸೆಳೆದದ್ದು ಧ್ರುವಂತ್ ಅವರ ರಿಯಾಕ್ಷನ್. ಅವರು ಸಹಜವಾಗಿ ಈ ರೊಮಾಂಟಿಕ್ ಡಾನ್ಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಕ್ಯಾಮೆರಾ ಕಣ್ಣಿನಲ್ಲಿ ಅವರ ಆ್ಯಕ್ಷನ್ ಸೆರೆಯಾಗಿದೆ. ಅದಕ್ಕೆ ಧ್ರುವಂತ್ಗೆ ಏನಾಯ್ತು ಎಂದು ಹಲವರು ತಮಾಷೆ ಮಾಡುತ್ತಿದ್ದಾರೆ.
ಟಾಸ್ಕ್ ಭರಾಟೆ
ಒಟ್ಟಿನಲ್ಲಿ ಬಿಗ್ಬಾಸ್ ಅಂತಿಮ ದಿನಗಳ ಹತ್ತಿರ ಆಗುತ್ತಿದ್ದಂತೆಯೇ ಒಂದು ಕಡೆ ಟಾಸ್ಕ್ಗಳ ಭರಾಟೆ ನಡುವೆಯೇ ಇಂಥ ಸನ್ನಿವೇಶಗಳನ್ನು ಕ್ರಿಯೇಟ್ ಮಾಡಿ ಸ್ಪರ್ಧಿಗಳನ್ನು ರಿಲ್ಯಾಕ್ಸ್ ಮಾಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

