ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಗೆದ್ದವರಿಗೆ ಎಷ್ಟು ಮತ ಸಿಕ್ಕಿದೆ ಎಂಬ ಕುತೂಹಲಕ್ಕೆ ಕಿಚ್ಚ ಸುದೀಪ್‌ ಅವರು ತೆರೆ ಎಳೆದಿದ್ದಾರೆ. ಹಾಗಾದರೆ ಎಷ್ಟು? 

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋ ವಿಜೇತರು ಯಾರು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇನ್ನು ವಿಜೇತರಿಗೆ ಎಷ್ಟು ಮತ ಬಿದ್ದಿರಬಹುದು ಎಂದು ಕುತೂಹಲ ಇರಬಹುದು. ಇದನ್ನು ʼಬಿಗ್‌ ಬಾಸ್‌ʼ ರಿವೀಲ್‌ ಮಾಡಿದೆ. 

ಮತ ಎಷ್ಟು? 
ಹೌದು, ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋ ವಿಜೇತರಿಗೆ 5,23,89,318 ಮತ ಬಿದ್ದಿದೆ. ಹಾಗಾದರೆ ಐದು ಕೋಟಿ, ಇಪ್ಪತ್ಮೂರು ಲಕ್ಷ, ಎಂಬತ್ತೊಂಭತ್ತು ಸಾವಿರದ ಮೂರು ನೂರು ಹದಿನೆಂಟು ಮತ ಪಡೆದವರು ಯಾರು ಎನ್ನೋದು ಸದ್ಯಕ್ಕಿರುವ ಮಿಲಿಯನ್‌ ಡಾಲರ್‌ ಪ್ರಶ್ನೆ. ಇನ್ನು ಕಡಿಮೆ ಮತ ಪಡೆದ ಫಿನಾಲೆ ಸ್ಪರ್ಧಿಗೆ 64 ಲಕ್ಷದ 48 ಸಾವಿರದ 853 ಮತಗಳು ಸಿಕ್ಕಿವೆಯಂತೆ. ಒಟ್ಟಿನಲ್ಲಿ ಇಂದು ಒಂದು ಎಲಿಮಿನೇಶನ್‌ ನಡೆಯಲಿದೆ. 

ʼಮೀಸಲಾತಿ, ಸಿಂಪಥಿಯಿಂದಲೇ ಹನುಮಂತ Bigg Boss ಫಿನಾಲೆ ತಲುಪಿದ್ದುʼ : ಹಂಸ ಹೇಳಿಕೆಗೆ ಆಕ್ರೋಶ ಹೊರಹಾಕಿದ ವೀಕ್ಷಕರು!

ಈ ಸೀಸನ್‌ ಯಾಕೆ ವಿಭಿನ್ನವಾಗಿದೆ? 
ಇಲ್ಲಿಯವರೆಗೆ ಒಟ್ಟೂ ಹತ್ತು ಸೀಸನ್‌ಗಳು ಯಶಸ್ವಿಯಾಗಿ ಪ್ರಸಾರವಾಗಿದೆ, ಅವುಗಳಲ್ಲಿ ಈ ಬಾರಿ ಹೆಚ್ಚಿನ ಮತ ಬಂದಿದೆಯಂತೆ. ಇಷ್ಟು ಸೀಸನ್‌ಗಳಿಗೆ ಹೋಲಿಕೆ ಮಾಡಿದರೆ ಈ ಸೀಸನ್‌ ಭಾರೀ ವಿಭಿನ್ನ ಎನ್ನಬಹುದು. ಆರಂಭದಲ್ಲಿ ಜಗಳದಿಂದ ಕೂಡಿದ ಈ ಸೀಸನ್‌ ಆಮೇಲೆ ಮನರಂಜನೆ ನೀಡುವತ್ತ ಮಾರ್ಪಾಟಾಯ್ತು. ಇನ್ನು ರಜತ್‌ ಅವರು ಈ ಮನೆಗೆ ಎಂಟ್ರಿ ಕೊಟ್ಟಮೇಲೆ ಆಟದ ವರಸೆ ಬದಲಾಯ್ತು. ಇನ್ನು ಹನುಮಂತ ಅವರು ಈ ಮನೆಗೆ ಇದ್ದ ಕೊರತೆಯನ್ನು ನೀಗಿಸಿದರು ಎನ್ನಬಹುದು. ಯಾರೂ ನಿರೀಕ್ಷಿಸದ ಮಟ್ಟಕ್ಕೆ ಹನುಮಂತ ಅವರು ಡೈಲಾಗ್‌ ಹೊಡೆದರು, ಆಟ ಆಡಿದರು, ತಂತ್ರ ಮಾಡಿದರು ಎನ್ನಬಹುದು. 

BBK 11: ರಿಯಲ್‌ ಮಾವ ಗಣೇಶ್‌ ಕಾಸರಗೋಡು ಹೀಗ್ಯಾಕೆ ಪೋಸ್ಟ್‌ ಮಾಡಿದ್ರು? ಪ್ರತಿಕ್ರಿಯೆ ಕೊಟ್ಟ ಗೌತಮಿ ಜಾಧವ್!‌

ಇಂದು ಯಾರು ಮನೆಗೆ ಹೋಗ್ತಾರೆ?
ಈ ಮನೆಯಲ್ಲಿ ಹೆಚ್ಚು ವಾರಗಳ ಕಾಲ ಇರುತ್ತಾರೆ ಎಂದು ಭಾವಿಸಿದವರೆಲ್ಲ ಈ ಮನೆಯಿಂದ ಹೊರಗಡೆ ಹೋದರು. ಹೌದು, ಜಗದೀಶ್‌, ರಂಜಿತ್‌‌, ಚೈತ್ರಾ ಕುಂದಾಪುರ, ಗೌತಮಿ ಜಾಧವ್‌, ಧನರಾಜ್‌ ಆಚಾರ್‌, ಅನುಷಾ ರೈ, ಧರ್ಮ ಕೀರ್ತಿರಾಜ್‌, ಐಶ್ವರ್ಯ ಸಿಂಧೋಗಿ, ಗೋಲ್ಡ್‌ ಸುರೇಶ್‌, ಮಾನಸಾ ಅವರು ಈಗಾಗಲೇ ಮನೆಯಿಂದ ಹೊರಗಡೆ ಬಂದಿದ್ದಾರೆ. ಇನ್ನು ತ್ರಿವಿಕ್ರಮ್‌, ಮೋಕ್ಷಿತಾ ಪೈ, ರಜತ್‌, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ ಅವರ ಮಧ್ಯೆ ಯಾರು ಇಂದು ಮೊದಲು ಔಟ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ. 

ಯಾರು ವಿಜೇತರು?
ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಪೈ, ಹನುಮಂತ ಅವರಲ್ಲಿ ಒಬ್ಬರು ವಿಜೇತರಾಗುತ್ತಾರೆ, ಇನ್ನೊಬ್ಬರು ರನ್ನರ್‌ ಅಪ್‌ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿಯೂ ಮೋಕ್ಷಿತಾ, ಹನುಮಂತ ಅವರಲ್ಲಿ ಒಬ್ಬರು ವಿನ್‌ ಆಗುವ ಸಾಧ್ಯತೆ ಹೆಚ್ಚಿದೆಯಂತೆ. ದೊಡ್ಮನೆ ಆಟ ಶುರುವಾಗಿ ಕೆಲ ದಿನಗಳ ಬಳಿಕ ಹನುಮಂತ ಈ ಮನೆಗೆ ಎಂಟ್ರಿ ಕೊಟ್ಟಿದ್ದಕ್ಕೆ, ಅವರು ವಿಜೇತರಾಗೋದು ಡೌಟ್‌ ಎಂಬ ಮಾತನ್ನು ಕೆಲ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. 

BBK 11: ಪೋಸ್ಟರ್‌ ರಿಲೀಸ್‌ ಮಾಡಿ ʼಬಿಗ್‌ ಬಾಸ್ʼ ವಿಜೇತರ ಹೆಸರನ್ನು ಕ್ರಮವಾಗಿ ಹೇಳಿತಾ ವಾಹಿನಿ?

ಕಿಚ್ಚ ಸುದೀಪ್‌ಗೆ ಇದು ಕೊನೆಯ ʼಬಿಗ್‌ ಬಾಸ್ʼ‌
ಇಷ್ಟು ವರ್ಷಗಳ ಕಾಲ ಒಟ್ಟೂ ಹನ್ನೊಂದು ʼಬಿಗ್‌ ಬಾಸ್‌ʼ ಸೀಸನ್‌ ನಿರೂಪಣೆ ಮಾಡಿಕೊಂಡು ಬಂದಿರುವ ಕಿಚ್ಚ ಸುದೀಪ್‌ ಇನ್ಮುಂದೆ ʼಬಿಗ್‌ ಬಾಸ್ʼ‌ ನಿರೂಪಣೆ ಮಾಡೋದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಕಿಚ್ಚ ಸುದೀಪ್‌ ಬದಲು ಬೇರೆ ನಿರೂಪಕರನ್ನು ʼಬಿಗ್‌ ಬಾಸ್ʼ‌ ವೇದಿಕೆ ಮೇಲೆ ನೋಡೋದು ವೀಕ್ಷಕರಿಗೆ ನಿಜಕ್ಕೂ ಕಷ್ಟ ಆಗಲೂಬಹುದು. ಒಟ್ಟಿನಲ್ಲಿ ಈ ಗ್ರ್ಯಾಂಡ್‌ ಫಿನಾಲೆ ಕಿಚ್ಚ ಸುದೀಪ್‌ರಿಗೂ, ವೀಕ್ಷಕರಿಗೂ ತುಂಬ ಭಾವನಾತ್ಮಕವಾದ ಗಳಿಗೆ ಎನ್ನಬಹುದು. ನೀವು ಏನು ಹೇಳ್ತೀರಾ?