ʼಮೀಸಲಾತಿ, ಸಿಂಪಥಿಯಿಂದಲೇ ಹನುಮಂತ Bigg Boss ಫಿನಾಲೆ ತಲುಪಿದ್ದುʼ : ಹಂಸ ಹೇಳಿಕೆಗೆ ಆಕ್ರೋಶ ಹೊರಹಾಕಿದ ವೀಕ್ಷಕರು!

ನಟಿ ಹಂಸ ನಾರಾಯಣಸ್ವಾಮಿ ಅವರು ಮೀಸಲಾತಿ ಕಾರಣಕ್ಕೆ, ಸಿಂಪಥಿಯಿಂದ ಹನುಮಂತ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಗ್ರ್ಯಾಂಡ್‌ ಫಿನಾಲೆ ತಲುಪಿದ್ದಾರೆ ಎನ್ನುವ ಮಾತನಾಡಿದ್ದರು. ಈ ಮಾತಿಗೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. 
 

actress hamsa narayanaswamy criticize bbk 11 hanumantha s grand finale entry

ಇತ್ತೀಚೆಗೆ ನಟಿ, ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಸ್ಪರ್ಧಿಯೂ ಆಗಿರುವ ಹಂಸ ನಾರಾಯಣಸ್ವಾಮಿ ಅವರು ಹನುಮಂತ ಬಗ್ಗೆ ಮಾತನಾಡಿದ್ದು, ಅನೇಕರಿಗೆ ಸಿಟ್ಟು ತರಿಸಿದೆ. ಈ ಬಗ್ಗೆ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹಂಸ ಅವರು ಖಾಸಗಿ ವಾಹಿನಿ ಜೊತೆ ಮಾತನಾಡುತ್ತ, “ಧನರಾಜ್‌, ಹನುಮಂತ ಅವರು ಆರಂಭದಲ್ಲಿ ಮೂಲೆಯಲ್ಲಿ ಇರುತ್ತಿದ್ದರು. ಈಗ ಅವರು ಫಿನಾಲೆಗೆ ಬಂದಿದ್ದಾರೆ. ಹನುಮಂತ ಗ್ರಾಮೀಣ ಪ್ರತಿಭೆ, ಜನರು ಇಷ್ಟಪಟ್ಟರೆ ಅವರನ್ನು ತಲೆ ಮೇಲೆ ಎತ್ತಿಕೊಂಡು ಮೆರೆಸ್ತಾರೆ. ರಿಯಾಲಿಟಿ ಶೋನಲ್ಲಿ ಹೀಗೆಯೇ ನಡೆಯುತ್ತಿದೆ. ಹಳ್ಳಿ ಪ್ರತಿಭೆ, ಬಡವರು ಸುಲಭವಾಗಿ ಫಿನಾಲೆ ತಲುಪುತ್ತಾರೆ. ಹನುಮಂತಗೆ ಸಿಂಪಥಿ ವರ್ಕ್‌ ಆಗಿದೆ ಅಂತ ಅನಿಸುತ್ತದೆ, ಶಾಲೆಯಲ್ಲಿ ಜನರಲ್‌ ಕ್ಯಾಟಗರಿಗೆ ಶುಲ್ಕಗಳನ್ನು ಕಟ್ಟಬೇಕು, ಆದರೆ ಉಳಿದ ಕ್ಯಾಟಗರಿಯವರು ಶುಲ್ಕ ಕಡಿಮೆ ಕಟ್ಟಬೇಕು. ನೌಕರಿಯಲ್ಲಿಯೂ ಕೂಡ ಜನರಲ್‌ ಕ್ಯಾಟಗರಿಯನ್ನು ಕಡೆಗಾಣಿಸಿ, ಉಳಿದ ಕ್ಯಾಟಗರಿಗೆ ಮನ್ನಣೆ ಕೊಡ್ತಾರೆ. ರಿಯಾಲಿಟಿ ಶೋಗಳಲ್ಲಿಯೂ ಹೀಗೆ ಆಗುತ್ತದೆ” ಎಂದು ಹೇಳಿದ್ದರು. ಹಂಸ ಅವರು ಮೀಸಲಾತಿ ಬಗ್ಗೆ ಮಾತನಾಡಿದ್ದು ಅನೇಕರಿಗೆ ಆಕ್ರೋಶ ತಂದಿದೆ. 

BBK 11: ರಿಯಲ್‌ ಮಾವ ಗಣೇಶ್‌ ಕಾಸರಗೋಡು ಹೀಗ್ಯಾಕೆ ಪೋಸ್ಟ್‌ ಮಾಡಿದ್ರು? ಪ್ರತಿಕ್ರಿಯೆ ಕೊಟ್ಟ ಗೌತಮಿ ಜಾಧವ್!‌

ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 
ದಿನೇಶ್‌ಕುಮಾರ್‌ ಪೋಸ್ಟ್‌ ಹೀಗಿದೆ..!

"ಹನುಮಂತು ಬಿಗ್ ಬಾಸ್ ಫೈನಲ್ ತಲುಪಿರುವುದು ಮೀಸಲಾತಿ ಕಾರಣಕ್ಕೆ" ಎಂದಿದ್ದಾಳೆ ಹಂಸ ಎಂಬ ಮತ್ತೊಬ್ಬ ಸ್ಪರ್ಧಿ. ಅಷ್ಟೇ ಅಲ್ಲ, ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿದ್ದಾಗ ನಾವು ಜನರಲ್ ಕೆಟಗರಿಯವರು ಎಷ್ಟೇ ಓದಿ ದಬಾಕಿದ್ರುನು ಮೊದಲು 'ಅವರಿಗೇ' (SC ಗಳು) ಕೆಲಸ ಸಿಗುತ್ತೆ ಮತ್ತು ನಮ್ಮನ್ನು ಕಡೆಗಣಿಸುತ್ತಾರೆ ಎಂದು ಆಕೆ ಹೇಳಿದ್ದಾಳೆ. ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಆಕೆ, ಇಲ್ಲಿ ಬಡವರು, ಹಳ್ಳಿಯವರು ಎಂದ ತಕ್ಷಣ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ ಎಂದೂ ಮಾತಾಡಿದ್ದಾಳೆ. ಹಂಸ ಎಂಬ ನಟಿಯ ತಲೆಯಲ್ಲಿ ಜಾತಿಯ ವಿಷ, ಬಡವರ ಕುರಿತಾದ ಅಸಹನೆ, ಹಳ್ಳಿಗಾಡಿನ ಜನರ ಕುರಿತ ಹೊಟ್ಟೆ ಉರಿ ಎಲ್ಲ ಹೊರಗೆ ಬಂದಿದೆ. ತಾವೂ ಒಂದಲ್ಲ ಒಂದು ಬಗೆಯ ಮೀಸಲಾತಿಯ (ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗ) ಫಲಾನುಭವಿ ಆಗಿದ್ದರೂ ದಲಿತರಿಗೆ ಕೊಡಲಾಗುವ ಮೀಸಲಾತಿಯ ಕುರಿತು ಇರುವ ಅಸಹನೆಯಿಂದ ನರಳುವ ಹಿಪೋಕ್ರಾಟ್ ಜನವರ್ಗದ ಕೊಳಕು ಹಂಸಳ ಮಾತಲ್ಲಿ ಪ್ರತಿಧ್ವನಿಸಿದೆ. ಇದು ಒಂಟಿ ಧ್ವನಿ ಅಲ್ಲ, ಇವಳಂತೆ ಮಾತಾಡುವ ಒಂದು ದೊಡ್ಡ ಜನವರ್ಗವೇ ಇದೆ. ಈಕೆ ಅವರ ಪ್ರತಿನಿಧಿಯಂತೆ ಮಾತಾಡಿದ್ದಾಳೆ.

BBK 11: ಪೋಸ್ಟರ್‌ ರಿಲೀಸ್‌ ಮಾಡಿ ʼಬಿಗ್‌ ಬಾಸ್ʼ ವಿಜೇತರ ಹೆಸರನ್ನು ಕ್ರಮವಾಗಿ ಹೇಳಿತಾ ವಾಹಿನಿ?


ನಿಜ ಹನುಮಂತು ದಲಿತ ಸಮುದಾಯದ ಹಳ್ಳಿಗಾಡಿನ ಹುಡುಗ. ಅವನು ನನ್ನನ್ನು ಬಿಗ್ ಬಾಸ್ ಗೆ ಕರ್ಕೊರೀ ಎಂದೇನು ಅಂಗಲಾಚಿ‌ ಬಂದಿರಲಿಲ್ಲ. ಕುಸಿದು ಹೋಗುತ್ತಿದ್ದ ಟಿಆರ್ ಪಿ‌ ಹಿಡಿದು ನಿಲ್ಲಿಸಲು ಹನುಮಂತನನ್ನೇ ಶೋ ನಿರ್ಮಾಪಕರು ಕರೆಸಿಕೊಂಡಿದ್ದರು. ಶೋ ಹೇಗೆ ನಡೆಯುತ್ತೆ ಅನ್ನೋದೂ ಅವನಿಗೆ ಗೊತ್ತಿರಲಿಲ್ಲ. ಬಿಗ್ ಬಾಸ್ ನಲ್ಲಿ ಹನುಮಂತು ಹಂಸ ಹೇಳ್ತಾ ಇರೋ ಸೋ  ಕಾಲ್ಡ್ ಸಿವಿಲೈಸ್ಡ್ ಸೊಸೈಟಿಯ ಜನರ ಥಳುಕು, ಬಳುಕನ್ನೇನೂ ತರಲಿಲ್ಲ. ಮೊದಲೆರಡು ವಾರ ಅವನಿಗೆ ಅಲ್ಲಿ ಇರುವೂ ಕಷ್ಟವೇ ಆಗಿತ್ತು. ಬಿಗ್ ಬಾಸ್ ಅನ್ನೋದು ಈಗ ಮನುಷ್ಯರ ವಿಕೃತಿಗಳ ನಡುವಿನ ಸಂಘರ್ಷದ ಆಟವಾಗಿ ಬದಲಾಗಿರುವಾಗ ಹನುಮಂತು‌ 'ಈ ಆಟಕ್ಕೆ ನಾನಿಲ್ಲ' ಎಂದು ತಾನು ತಾನಾಗೇ ಇದ್ದ. ಯಾರ ಮೇಲೂ ಕಾಲು ಕೆರೆದು ಜಗಳಕ್ಕೆ ನಿಲ್ಲಲಿಲ್ಲ, ಯಾರನ್ನೂ‌ ದ್ವೇಷಿಸಲಿಲ್ಲ, ಫುಟೇಜ್ ಪಡೆಯಲು ಡ್ರಾಮಾಗಳನ್ನು ಮಾಡಲಿಲ್ಲ‌. ಹನುಮಂತು‌ ಬಿಗ್ ಬಾಸ್ ಶೋನ ಫಾರ್ಮಾಟ್ ಅರ್ಥ‌ಮಾಡಿಕೊಳ್ಳದೇ ಇದ್ದರೂ, ಅವನ ಆಟ ಅವನು ಆಡಿದ. "ನಾನು ಸುಮ್ ಸುಮ್ನೆ ರೀಜನ್ ಕೊಡಂಗಿಲ್ಲ. ಮನಸಿಗೆ ಬಂದ್ರೆ ಮಾತ್ರ ಹೇಳ್ತೀನಿ, ಇಲ್ಲಾಂದ್ರೆ ಸ್ವಿಚ್ ಆಫ್ ಆಗ್ತೀನಿ" ಎಂದು ನೇರವಾಗಿ ಸುದೀಪ್ ಗೆ ಹೇಳಿದ ಹನುಮಂತು.

ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ಹರಿಹಾಯ್ದ ಕಿಚ್ಚ ಸುದೀಪ್‌ ಫ್ಯಾನ್ಸ್;‌ ಮೌನ ಮುರಿದ ʼಬಿಗ್‌ ಬಾಸ್ʼ‌ ಸ್ಪರ್ಧಿ!


ಸ್ಪರ್ಧಿಗಳ ನಡುವಿನ ಜಗಳದಿಂದ ರೋಸಿಹೋಗಿ ಯಾವುದೋ ಟಾಸ್ಕ್ ಉಸ್ತುವಾರಿ ಮುಗಿಸದೇ  ಸುದೀಪ್ ಗೆ ಸಿಟ್ಟು ಬರಿಸಿದ್ದ ಹನುಮಂತು ನಂತರ ಅದೇ ಸುದೀಪ್ ಅವರಿಂದ ಪದೇ ಪದೇ ಮೆಚ್ಚುಗೆ ಪಡೆದ. ಹನುಮಂತು ತೋರಿದ ಸ್ಥಿತಪ್ರಜ್ಞತೆ, ಶಾಂತತೆ, ಸ್ಥಿರತೆಯನ್ನು ಸುದೀಪ್ ಮೆಚ್ಚಿ ಕೊಂಡಾಡಿದ್ದೂ ಆಯಿತು. ಬಿಗ್ ಬಾಸ್ ಶೋನ ಉಳಿದ ಸ್ಪರ್ಧಿಗಳು ಕಾಲಕಾಲಕ್ಕೆ ಎಕ್ಪೋಸ್ ಆಗುತ್ತಾ, ತಮ್ಮೊಳಗಿನ ಹುಳುಕುಗಳನ್ನು ಪ್ರದರ್ಶನಕ್ಕೆ ಇಡುತ್ತ ಬಂದರೆ ಹನುಮಂತು ಮಾತ್ರ ಸಂತೆಯೊಳಗಿನ ಸಂತನ ಹಾಗೆ ಸಣ್ಣಸಣ್ಣ ಮಾತುಗಳಲ್ಲೇ ಬದುಕಿನ ತತ್ತ್ವಗಳನ್ನು ಹೇಳುತ್ತ ಬಂದ. ಮಾತಲ್ಲಿ ಹೇಳಲು ಆಗದ್ದನ್ನು ಹಾಡುಗಳ ಮೂಲಕ ಹಾಡಿ ಯಾರಿಗೆ ಏನು ಹೇಳಬೇಕೋ ಹೇಳಿದ.


ಈ ಬಾರಿ ಶೋ ಗೆಲ್ಲೋದು ಹನುಮಂತನೇ ಅನ್ನೋದು ಈಗಾಗಲೇ ನಿಶ್ಚಿತವಾಗಿದೆ. ಕಲರ್ಸ್ ಪೇಜ್ ನಲ್ಲಿ ಬಿಗ್ ಬಾಸ್ ಪೋಸ್ಟ್ ಗಳ ಮೇಲೆ ಬೀಳೋ ನೂರು ಕಮೆಂಟ್ ಗಳಲ್ಲಿ ಕನಿಷ್ಠ 60 ಹನುಮಂತು‌ ವಿನ್ನರ್ ಅನ್ನುತ್ತವೆ. ಬೇರೆ ಬೇರೆ ಆನ್ ಲೈನ್ ಮಾಧ್ಯಮಗಳು ಮಾಡಿದ ಸಮೀಕ್ಷೆಗಳೂ ಇದನ್ನೇ ಹೇಳುತ್ತವೆ. ಮ್ಯಾಚ್ ಫಿಕ್ಸಿಂಗ್ ಥರ ಏನಾದರೂ ಆಗದೇ ಇದ್ದರೆ ಹನುಮಂತು ಗೆಲ್ಲೋದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇದೆಲ್ಲ ನೋಡಿಯೇ ಹಂಸ ಕರುಬುತ್ತಿದ್ದಾಳೆ. ಹನುಮಂತು ದಲಿತ ಅನ್ನೋ‌ ಕಾರಣಕ್ಕೆ ತನ್ನ ಜನರಲ್ ಕೆಟಗರಿ ಅವಳಿಗೆ ನೆನಪಿಗೆ ಬಂದಿದೆ. ಅದರ ಜೊತೆ ಜಾತಿ‌ ಅಸಹನೆಯ ವಿಷವೂ ಕೂಡ ಹೊರಗೆ ಬಂದಿದೆ. ಎಲ್ಲ ಬಗೆಯ ಕುತ್ಸಿತ ಮನಸ್ಥಿತಿ, ಕುತಂತ್ರಗಳ ಪ್ರಯೋಗದ ಅನುಭವವಿದ್ದರೂ ಇದ್ಯಾವುದೂ ಗೊತ್ತಿಲ್ಲದ ಲಂಬಾಣಿ ತಾಂಡ್ಯಾದ ಕುರಿಗಾಹಿ ಹುಡುಗ ಹನುಮಂತು ಗೆಲ್ತಾ ಇದ್ದಾನಲ್ಲ ಅನ್ನೋದಷ್ಟೆ ಇವರ ಸಮಸ್ಯೆ.

ಯತಿರಾಜ್ ಬ್ಯಾಲಹಳ್ಳಿ 
ಈ ಹಂಸ ವಿರುದ್ಧ 'ಜಾತಿ ನಿಂದನೆ' ಕೇಸ್ ದಾಖಲಿಸಿದರೆ ಸರಿಯಾಗುತ್ತದೆ. ಬಂಜಾರ ಸಮುದಾಯದ ಹುಡುಗ 'ಹನುಮಂತ'. ಆತ ಮುಗ್ಧ. ತನಗೆ ಗೊತ್ತಿರುವಷ್ಟು ಆಟ ಆಡಿ ಫೈನಲ್ ಪ್ರವೇಶಿಸಿದ್ದಾನೆ. ಇಷ್ಟನ್ನೂ ಸಹಿಸದ ಹಂಸನಂಥವರ ಮನಸ್ಥಿತಿಗೆ ಏನು ಹೇಳಲಿ?

 

ನಟ ಕಿಚ್ಚ ಸುದೀಪ್‌ ಕಡೆಯಿಂದ ಬಂಪರ್‌ ಆಫರ್‌ ಪಡೆದ ʼBigg Bossʼ ಹಂಸ ನಾರಾಯಣಸ್ವಾಮಿ! ಏನದು?

ಪುನೀತ್‌ ರುದ್ರು ಪೋಸ್ಟ್‌ ಹೀಗಿದೆ..

"ಹನುಮಂತು ಬಿಗ್ ಬಾಸ್ ಫೈನಲ್ ತಲುಪಿರುವುದು ಮೀಸಲಾತಿ ಕಾರಣಕ್ಕೆ ಎಂದು ಲೇವಡಿ ಮಾಡಿದ ಬಿಗ್ ಬಾಸ್ ಸ್ಪರ್ದಿ ಹಂಸ". ಬಿಗ್ ಬಾಸ್ ಸ್ಪರ್ದಿಯಾಗಿ ಒಳಹೋಗಿದ್ದ ಮತ್ತು ಕೆಲವೇ ವಾರಗಳಲ್ಲಿ ತಮ್ಮ ಕಳಪೆ ಆಟದ ಮೂಲಕ ಹೊರಬಂದ ನಟಿ ಹಂಸ ರವರು ಈಗ ಫೈನಲ್‌ಗೆ ತಲುಪಿರುವ ಹನುಮಂತ ಲಮಾಣಿ ಬಗ್ಗೆ ಖಾಸಗಿ ವಾಹಿನಿಯ ನಿರೂಪಕನ ಜೊತೆ ಮಾತನಾಡುವ ಸಂದರ್ಭದಲ್ಲಿ ಹನುಮಂತು ಲಮಾಣಿ ಫೈನಲ್ ತಲುಪಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳುವ ಸಮಯದಲ್ಲಿ ಆಕೆ ಹೇಳುತ್ತಾಳೆ; ಇಲ್ಲಿ ಬಡವರು, ಹಳ್ಳಿಯವರು ಎಂದ ತಕ್ಷಣ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ, ನಾನು ಒಳಗೆ ಇದ್ದಾಗ ನೋಡಿದ್ದೇನೆ ಹನುಮಂತು ಲಮಾಣಿಯು ಸೈಲೆಂಟ್ ಆಗಿ ಕೂತಿರ್ತಾನೆ, ಆತ ಫೈನಲ್ ತಲುಪುವುದಕ್ಕೆ ಅರ್ಹನಲ್ಲ ಎನ್ನುವ ನಿಟ್ಟಿನಲ್ಲಿ ಮಾತನಾಡುತ್ತ, ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿದ್ದಾಗ ನಾವು ಜನರಲ್ ಕೆಟಗರಿಯವರು ಎಷ್ಟೇ ಓದಿ ದಬಾಕಿದ್ರುನು ಮೊದಲು 'ಅವರಿಗೇ' (SC ಗಳು) ಕೆಲಸ ಸಿಗುತ್ತೆ ಮತ್ತು ನಮ್ಮನ್ನು ಕಡೆಗಣಿಸುತ್ತಾರೆ ಅನ್ನುವಂಥಹ ಹೇಳಿಕೆಯನ್ನು ನೀಡಿದ್ದಾರೆ. ಇದು clearly caste discrimination ಅಂತ ಈ ವಿಡಿಯೋ ನೋಡಿದವರಿಗೆ ಅರ್ಥವಾಗುತ್ತೆ. ಈಯಮ್ಮನಿಗೆ ಅಸಲಿಗೆ ಈ ದೇಶದಲ್ಲಿ ಮೀಸಲಾತಿ ಯಾಕೆ ನೀಡಿದ್ದಾರೆ, ಅದರ ಹಿನ್ನೆಲೆಯೇನು, ಉದ್ದೇಶ ಏನು ಅಂತ ಗೊತ್ತಿರದಿದ್ದರೆ ಬಾಯಿ ಮುಚ್ಕೊಂಡಿರಬೇಕು ಅದನ್ನ ಬಿಟ್ಟು ಹೀಗೆ ಸಾರ್ವಜನಿಕವಾಗಿ ಮೀಸಲಾತಿ ಕುರಿತು ಅಪವ್ಯಾಖ್ಯಾನ ಮಾಡೋದು ಅಸಂವಿಧಾನಿಕ.. 

ಹನುಮಂತ ತನ್ನ ಆಟದ ಮೂಲಕ, ಎಲ್ಲಾ ಟಾಸ್ಕ್‌ಗಳಲ್ಲೂ ಚೆನ್ನಾಗಿ ಆಡಿದ್ದಾನೆ. ಆತನ ಕಲೆ ಮತ್ತು ಪ್ರತಿಭೆಯೂ ಕೂಡ ಅವನು ಫೈನಾಲೆ ತಲುಪಲು ಕಾರಣವಾಗಿದೆ. ಜನರು ದಡ್ಡರಲ್ಲ ಸುಮ್ನೆ ವೋಟ್ ಮಾಡೋಕೆ.. ಹನುಮಂತು ಮೀಸಲಾತಿ ಕಾರಣಕ್ಕೆ ಫೈನಾಲೆ ತಲುಪಿದ್ದಾನೆ ಅನ್ನೋ ನಿಟ್ಟಿನಲ್ಲಿ ಈಯಮ್ಮ ಮಾತನಾಡಿ ಬಿಗ್ ಬಾಸ್ ಶೋ ಮೇಲೂ ಆಪಾದನೆ ಮಾಡಿರುತ್ತಾಳೆ, ಬಿಗ್ ಬಾಸ್ ವೇದಿಕೆ ತಕ್ಷಣವೇ ಈಯಮ್ಮನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲಿ ಈಯಮ್ಮನ ವಿರೋಧ ಇರೋದು ಹನುಮಂತ ಲಮಾಣಿ ಮೇಲೆ ಅಲ್ಲ, ಅವನ ಜಾತಿಯ ಮೇಲೆ ಅನ್ನೋದು ಎದ್ದು ಕಾಣುತ್ತಿದೆ.. ಕಿಚ್ಚ ಸುದೀಪ್ ಸರ್ ಈಕೆಯ ಮೇಲೆ ನೀವು ಸೂಕ್ತ ಕ್ರಮ ಕೈಗೊಳ್ಳಬೇಕು.. ಥು ಇಂಥಹ ಜಾತಿಗ್ರಸ್ತ ಮನಸ್ಥಿತಿಗೆ ನನ್ನ ಎಕ್ಕಡ

 

Latest Videos
Follow Us:
Download App:
  • android
  • ios