BBK 11: ಪೋಸ್ಟರ್‌ ರಿಲೀಸ್‌ ಮಾಡಿ ʼಬಿಗ್‌ ಬಾಸ್ʼ ವಿಜೇತರ ಹೆಸರನ್ನು ಕ್ರಮವಾಗಿ ಹೇಳಿತಾ ವಾಹಿನಿ?

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಗ್ರ್ಯಾಂಡ್‌ ಫಿನಾಲೆ ವೇದಿಕೆ ಸಜ್ಜಾಗಿದೆ. ಜನವರಿ 25, 26ರಂದು ಅದ್ದೂರಿಯಾಗಿ ಫಿನಾಲೆ ನಡೆಯುವುದು. ಅಂದಹಾಗೆ ಕಲರ್ಸ್‌ ಕನ್ನಡ ವಾಹಿನಿಯೇ ಈಗಾಗಲೇ ವಿಜೇತರ ಹೆಸರನ್ನು ಕ್ರಮವಾಗಿ ಹೇಳಿತಾ ಎಂಬ ಅನುಮಾನ ಶುರುವಾಗಿದೆ. 
 

bigg boss kannada 11 who will win win the show

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋ ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ( ಜನವರಿ 25 ), ನಾಳೆ ( ಜನವರಿ 26) ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಯಾರು ಈ ಶೋನ ಟ್ರೋಫಿ ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಾಗುತ್ತಿದೆ. ಹೀಗಿರುವಾಗ ಕಲರ್ಸ್‌ ಕನ್ನಡ ವಾಹಿನಿಯು ಒಂದಾದ ಮೇಲೆ ಒಂದರಂತೆ ಫೋಟೋ, ವಿಡಿಯೋಗಳನ್ನು ಶೇರ್‌ ಮಾಡ್ತಿದೆ. ಈಗ ರಿವೀಲ್‌ ಮಾಡಿದ ಪೋಸ್ಟರ್‌ ವಿಜೇತರ ಸೂಚನೆ ಕೊಟ್ಟಿತಾ ಎಂಬ ಅನುಮಾನ ಮೂಡಿದೆ.

ಸ್ಪರ್ಧಿಗಳ ಸ್ಥಾನ ಹೇಳ್ತಿದೆಯಾ?
ಹೌದು, ಕಲರ್ಸ್‌ ಕನ್ನಡ ವಾಹಿನಿಯು ರಿಲೀಸ್‌ ಮಾಡಿದ ಪೋಸ್ಟರ್‌ ನೋಡಿ, ಅದರಂತೆ ವಿಜೇತರು ಹೊರಹೊಮ್ಮಿಲಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಲಾಗ್ತಿದೆ. ಅಂದರೆ ಫಿನಾಲೆ ಆರಂಭ ಆಗಲು ಐದು ಗಂಟೆಗಳು ಇರುವಾಗಿನಿಂದ ಓರ್ವ ಸ್ಪರ್ಧಿಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ ಇನ್ನು ಐದು ಗಂಟೆ, ನಾಲ್ಕು ಗಂಟೆ, ಮೂರು ಗಂಟೆ, ಎರಡು ಗಂಟೆಗಳಲ್ಲಿ ಫಿನಾಲೆ ಆರಂಭ ಎಂದು ಹೇಳಲಾಗುತ್ತಿದೆ. ಈ ಮೂಲಕ ʼಬಿಗ್‌ ಬಾಸ್ʼ‌ ವಿಜೇತರ ಹೆಸರನ್ನು ಅಥವಾ ಸ್ಪರ್ಧಿಗಳ ಸ್ಥಾನವನ್ನು ಹೇಳುತ್ತದೆಯಾ ಎಂಬ ಅನುಮಾನ ಶುರು ಆಗಿದೆ.

ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ಹರಿಹಾಯ್ದ ಕಿಚ್ಚ ಸುದೀಪ್‌ ಫ್ಯಾನ್ಸ್;‌ ಮೌನ ಮುರಿದ ʼಬಿಗ್‌ ಬಾಸ್ʼ‌ ಸ್ಪರ್ಧಿ!

ಐದನೇ ಸ್ಥಾನ ರಜತ್?‌
ರಜತ್‌ ಅವರ ಫೋಟೋ ಹಾಕಿ ಇನ್ನು ಐದು ಗಂಟೆಗಳಲ್ಲಿ ʼಬಿಗ್‌ ಬಾಸ್ʼ‌ ಫಿನಾಲೆ ಆರಂಭ ಎಂದು ಹೇಳಲಾಗಿದೆ. ಅಂಜಲ್ಲ ಗಿಂಜಲ್ಲ, ಗುನ್ನ ಹೊಡೆಯೋದರಲ್ಲಿ ಎಕ್ಸ್‌ಪರ್ಟ್‌, ಸಿಂಗಲ್‌ ಭೇಟೆಗಾರ, ತಾಳ್ಮೆ ಬಿಲ್‌ಕುಲ್‌ ಇಲ್ಲ ಎಂದು ಅವರನ್ನು ಗುಣಗಾನ ಮಾಡಲಾಗಿದೆ. ರಜತ್‌ ಅವರು ವೈಲ್ಡ್‌ಕಾರ್ಡ್‌ ಸ್ಪರ್ಧಿಯಾದರೂ ಕೂಡ ಈ ಸೀಸನ್‌ನ ವರಸೆ, ರೂಪವನ್ನೇ ಬದಲಿಸಿದರು ಎನ್ನಬಹುದು.

ನಟ ಕಿಚ್ಚ ಸುದೀಪ್‌ ಕಡೆಯಿಂದ ಬಂಪರ್‌ ಆಫರ್‌ ಪಡೆದ ʼBigg Bossʼ ಹಂಸ ನಾರಾಯಣಸ್ವಾಮಿ! ಏನದು?

ನಾಲ್ಕನೇ ಸ್ಥಾನ ಮೋಕ್ಷಿತಾ!
ಮೋಕ್ಷಿತಾ ಅವರ ಫೋಟೋ ಹಂಚಿಕೊಂಡು ಇನ್ನು ನಾಲ್ಕು ಗಂಟೆಗಳಲ್ಲಿ ಫಿನಾಲೆ ಆರಂಭ ಆಗುವುದು ಎಂದು ಹೇಳಲಾಗಿದೆ. ಮನಸ್ಸು ತುಂಬ ಗಟ್ಟಿ, ಬದಲಾಗದ ನಿಲುವು, ನಿಷ್ಕಲ್ಮಶ ಮನಸ್ಸು, ದ್ವೇಷ ಸಾಧಿಸಲ್ಲ ಎಂದು ಅವರನ್ನು ಹೊಗಳಲಾಗಿದೆ. ಮೋಕ್ಷಿತಾ ಅವರು ಸರಳತೆಯಿಂದ ಅನೇಕರ ಮನಸ್ಸು ಗೆದ್ದಿದ್ದಾರೆ ಎನ್ನಬಹುದು.

ಮೂರನೇ ಸ್ಥಾನ ಉಗ್ರಂ ಮಂಜು
ಉಗ್ರಂ ಮಂಜು ಅವರ ಫೋಟೋ ಹಾಕಿ ಮೂರು ಗಂಟೆಗಳಲ್ಲಿ ಫಿನಾಲೆ ಶುರು ಆಗತ್ತೆ ಎಂದು ಹೇಳಲಾಗಿದೆ. ಕೊಟ್ಟ ಮಾತು ತಪ್ಪಲ್ಲ, ಸ್ನೇಹ ಬಿಟ್ಟುಕೊಡಲ್ಲ, ಬಹುರೂಪಿ ಅಂತರ್ಗಾಮಿ, ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದು ಮಂಜು ಅವರನ್ನು ಹೊಗಳಲಾಗಿದೆ. 

Bigg Boss: ಯಾವುದೇ ಭಾಷೆಯ ಬಿಗ್‌ ಬಾಸ್‌ ಆಗಲೀ ಸ್ಪರ್ಧಿಗಳ ಈ ಆಸೆ ಮಾತ್ರ ನೆರವೇರೋಲ್ಲ! ಏನದು?

ಎರಡನೇ ಸ್ಥಾನ?
ಇನ್ನು ಎರಡು ಗಂಟೆಗಳಲ್ಲಿ ಶೋ ಆರಂಭ ಎಂದು ಭವ್ಯಾ ಗೌಡ ಅವರ ಫೊಟೋ ಹಾಕಲಾಗಿದೆ. ಬಾಣದಂಥ ಮಾತು, ಯಾರಿಗೂ ಬಗ್ಗಲ್ಲ, ತುಂಟಾಟದಲ್ಲಿ ಎತ್ತಿದ ಕೈ, ಸಿಡಿದ್ರೆ ಆಟಂ ಬಾಂಬ್‌ ಎಂದು ಭವ್ಯಾ ಗೌಡ ಅವರನ್ನು ಗುಣಗಾನ ಮಾಡಲಾಗಿದೆ.

ಇದು ಕೆಲವರ ಊಹೆ ಅಷ್ಟೇ. ಇನ್ನು ವಾಹಿನಿಯು ಹನುಮಂತ, ತ್ರಿವಿಕ್ರಮ್‌ ಅವರ ಫೋಟೋವನ್ನು ಹಂಚಿಕೊಂಡಿಲ್ಲ. ಆದರೆ ಇದು ಅಧಿಕೃತ ನಿರ್ಣಯ ಅಲ್ಲ. ಹನುಮಂತ ಅವರೇ ಈ ಶೋನ ವಿಜೇತರು ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಪೈ, ಉಗ್ರಂ ಮಂಜು ನಡುವೆ ಯಾರು ಗೆಲ್ಲುತ್ತಾರೋ ಅಥವಾ ರನ್ನರ್‌ ಅಪ್‌ ಸ್ಥಾನ ಪಡೆದುಕೊಳ್ತಾರಾ ಎಂದು ಕಾದು ನೋಡನೇಕಿದೆ. ಅಂದಹಾಗೆ ಜನವರಿ 26ರಂದು ಗ್ರ್ಯಾಂಡ್‌ ಫಿನಾಲೆ ನಡೆದು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನ ವಿಜೇತರು ಯಾರು, ಯಾರು ರನ್ನರ್‌ ಅಪ್‌ ಎಂದು ಘೋಷಣೆ ಮಾಡಲಾಗುವುದು. 
 

Latest Videos
Follow Us:
Download App:
  • android
  • ios