ಹೆಣ್ಮಕ್ಕಳೇನು ಹುಟ್ಟುತ್ತಾನೇ ತವರು ಮನೆಯನ್ನ ಬಾಡಿಗೆಗೆ ತಗೊಂಡು ಹುಟ್ಟಿರುತ್ತಾರ? ಭಾಗ್ಯಳ ಪ್ರಶ್ನೆಗೆ ನಿಮ್ಮ ಉತ್ತರ ಏನು?
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಗಾದೆಯನ್ನಿಟ್ಟು ಭಾಗ್ಯಾ ತವರಿನ ಕುರಿತಾಗಿ ಪ್ರಶ್ನೆ ಎತ್ತಿದ್ದಾಳೆ. ಸಮಾಜದ ದೃಷ್ಟಿಯಿಂದ ಈಗಲೂ ಕೊಟ್ಟ ಹೆಣ್ಣು ಕುಲದಿಂದ ಹೊರಗೆನಾ? ಭಾಗ್ಯ ಇದಕ್ಕೆ ಏನಂತಾಳೆ ನೋಡಿ..
ಭಾಗ್ಯಲಕ್ಷ್ಮೀ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್. ಸದ್ಯ ಇದರಲ್ಲಿ ಹೈ ಡ್ರಾಮಾ ನಡೆಯುತ್ತಿದೆ. ಇಲ್ಲೀವರೆಗೆ ಗಂಡ, ಅತ್ತೆ, ಗಂಡನ ಮನೆಯೇ ತನ್ನ ಜಗತ್ತು ಅಂದುಕೊಂಡಿರೋ ಭಾಗ್ಯ ಸಿಡಿದೆದ್ದಿದ್ದಾಳೆ. ಈ ನಡುವೆ ಹೆಣ್ಣಿನ ಬದುಕಿನ ಬಗ್ಗೆ, ಸಮಾಜ ಅವಳ ಮೇಲೆ ವಿಧಿಸಲು ಹೊರಟಿರುವ ಕಟ್ಟುಪಾಡುಗಳ ಬಗ್ಗೆ, ಹೆಣ್ಣಿನ ಬಗೆಗೆ ಜನರಾಡುವ ಮಾತುಗಳ ಬಗೆಗೆ ಅನೇಕ ಪ್ರಶ್ನೆಗಳನ್ನೂ ಎತ್ತಿದ್ದಾಳೆ. ಅವಳ ಈ ಪ್ರಶ್ನೆಗೆ ಅನೇಕ ವೀಕ್ಷಕರು ಉತ್ತರ ನೀಡುತ್ತಿರೋದು ವಿಶೇಷ. ಅಂದಹಾಗೆ ಭಾಗ್ಯ ಈಗ ಎತ್ತಿರೋ ಪ್ರಶ್ನೆ ಹೆಚ್ಚಿನೆಲ್ಲ ಹೆಣ್ಣುಮಕ್ಕಳಿಗೆ ರಿಲೇಟ್ ಆಗ್ತಿದೆ. ಇಂದಿಗೂ ಒಂದಿಷ್ಟು ಜನ ಹೆಣ್ಣುಮಕ್ಕಳು ಭಾಗ್ಯಳಂತೇ ತನ್ನ ಗಂಡನ ಮನೆ, ಗಂಡ, ಮಕ್ಕಳೇ ಜಗತ್ತು ಅಂದು ಬದುಕುತ್ತಿದ್ದಾರೆ. ಸೀರಿಯಲ್ ನೋಡೋ ಎಷ್ಟೋ ಜನ ಹೆಣ್ಮಕ್ಕಳು ಈ ಸೀರಿಯಲ್‌ನಲ್ಲಿ ಭಾಗ್ಯ ಎತ್ತುವ ಪ್ರಶ್ನೆ ತಮಗೂ ಅನ್ವಯವಾಗುತ್ತೆ ಅನ್ನೋ ಅರ್ಥದಲ್ಲಿ ಪ್ರತಿಕ್ರಿಯೆ ನೀಡುತ್ತ ಇರುತ್ತಾರೆ. ಹೀಗಾಗಿ ಹೆಚ್ಚಿನ ಹೆಣ್ಮಕ್ಕಳು ಈ ಸೀರಿಯಲ್‌ನ ಕಥೆಗೆ ಕನೆಕ್ಟ್ ಆಗಿರುವ ಕಾರಣ ಈ ಸೀರಿಯಲ್ ಟಿಆರ್‌ಪಿಯೂ ಹೆಚ್ಚಾಗ್ತ ಇದೆ.
ಸೋ ಸದ್ಯ ಭಾಗ್ಯ ತವರಿನ ಬಗ್ಗೆ, ಹೆಣ್ಣಿಗೆ ತವರಿನಲ್ಲಿರುವ ಸ್ಥಾನಮಾನದ ಬಗ್ಗೆ, ಅದೇ ರೀತಿ ಅವಳಿಗೆ ತವರು ಮನೆ ಬಾಡಿಗೆ ಮನೆಯಂತೆಯಾ ಅನ್ನೋ ಗಂಭೀರ ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದಾಳೆ. ಅವಳ ಪ್ರಶ್ನೆ ಅನೇಕ ಹೆಣ್ಣುಮಕ್ಕಳ ಪ್ರಶ್ನೆಯೂ ಆಗಿರುವ ಕಾರಣ ಇದಕ್ಕೆ ವೀಕ್ಷಕರ ರಿಯಾಕ್ಷನ್ ಏನಿರಬಹುದು ಅನ್ನುವುದು ಕುತೂಹಲ ಮೂಡಿಸುತ್ತಿದೆ.
ಅಪ್ಪ ಅಮ್ಮ ಯಾರೂ ಇಲ್ಲದೆ ಕಣ್ಣೀರುಗರೆದ ಗಾಯಕನಿಗೆ ಸರೆಗಮಪ ಟೀಮ್ ಕುಟುಂಬವಾದ ಕಥೆಯಿದು! ಯಾರು ಆ ಗಾಯಕ?
ಇನ್ನೊಂದೆಡೆ ಈ ಸೀರಿಯಲ್ ಕಥೆಯಲ್ಲಿ ಅಪ್ಪ-ಅಮ್ಮ ಇನ್ನು ಜೊತೆಯಾಗಿರುವುದಿಲ್ಲ, ನಾವು ಮೊದಲಿನಂತೆ ಒಟ್ಟಿಗೆ ಇರಲಾಗುವುದಿಲ್ಲ ಎಂದು ತಿಳಿದಾಗಿನಿಂದ ಭಾಗ್ಯ ಮತ್ತು ತಾಂಡವ್ ಮಗ ಗುಂಡಣ್ಣ ಹಾಸಿಗೆ ಹಿಡಿದಿದ್ದಾನೆ. ಗಂಡ ಹೆಂಡತಿ ಜಗಳದಲ್ಲಿ ಮಕ್ಕಳಿಗೆ ಸಮಸ್ಯೆ ಉಂಟು ಮಾಡಬೇಡಿ ಎಂದು ಡಾಕ್ಟರ್ ಭಾಗ್ಯಾಗೆ ಸಲಹೆ ನೀಡುತ್ತಾರೆ. ಭಾಗ್ಯಾಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಅಷ್ಟರಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಭಾಗ್ಯಾಗೆ ಗೊತ್ತಾಗುತ್ತದೆ. ಮದುವೆ ವಿಚಾರ ಕೇಳಿ ಭಾಗ್ಯಾಗೆ ಸಿಟ್ಟು ಬರುತ್ತದೆ. ಕೂಡಲೇ ತನ್ನ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಪೂಜಾ ಹಾಗೂ ಸುಂದ್ರಿಯನ್ನು ಕರೆಯುತ್ತಾಳೆ. ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಮಕ್ಕಳು, ಅತ್ತೆ ಮಾವನ ಬಟ್ಟೆಗಳನ್ನು ಪ್ಯಾಕ್ ಮಾಡಿ ಎನ್ನುತ್ತಾಳೆ. ಭಾಗ್ಯಾ ಇದ್ದಕ್ಕಿದ್ದಂತೆ ಈ ರೀತಿ ಏಕೆ ನಡೆದುಕೊಳ್ಳುತ್ತಿದ್ದಾಳೆ ಎಂದು ತಿಳಿದು ಎಲ್ಲರೂ ಗಾಬರಿ ಆಗುತ್ತಾರೆ. ಏನಾಯ್ತು ಎಂದು ಕೇಳಿದರೂ ಭಾಗ್ಯಾ ಏನೂ ಹೇಳುವುದಿಲ್ಲ. ನೀವು ಹೇಳುತ್ತಿದ್ದು ನಿಜ ಅತ್ತೆ ತಾಳ್ಮೆಗೂ ಮಿತಿ ಇರಬೇಕು, ಅದನ್ನು ಮೀರಿದರೆ ಸಮಸ್ಯೆ, ನಿಮ್ಮ ಮೊಮ್ಮಗ ಇಲ್ಲಿ ಜ್ವರದಿಂದ ನರಳಾಡುತ್ತಿದ್ದರೆ, ಅಲ್ಲಿ ನಿಮ್ಮ ಮಗ ಹಾಗೂ ಆ ಶ್ರೇಷ್ಠಾ ಮಾಡಬಾರದ ಕೆಲಸ ಮಾಡುತ್ತಿದ್ದಾರೆ, ನನಗೆ ಕೆಲಸ ಇದೆ ಹೋಗುತ್ತೇನೆ ಎಂದು ಅಲ್ಲಿಂದ ಗಡಿಬಿಡಿಯಿಂದ ಹೊರಡುತ್ತಾಳೆ.
ಇತ್ತ ಶ್ರೇಷ್ಠಾ-ತಾಂಡವ್ ಮದುವೆ ಖುಷಿಯಲ್ಲಿರುತ್ತಾರೆ. ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪೊಲೀಸರು ಮನೆಯೊಳಗೆ ಬರುತ್ತಾರೆ. ಮೊದಲ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆ ಆಗುತ್ತಿದ್ದೀರ? ಇಬ್ಬರನ್ನೂ ಅರೆಸ್ಟ್ ಮಾಡಿ ಎಂದು ಇನ್ಸ್‌ಪೆಕ್ಟರ್ ಹೇಳುತ್ತಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಶ್ರೇಷ್ಠಾ, ತಾಂಡವ್ ಶಾಕ್ ಆಗುತ್ತಾರೆ. ನೀವು ರಾಂಗ್ ಅಡ್ರೆಸ್‌ಗೆ ಬಂದಿದ್ದೀರ ಎನ್ನುತ್ತಾರೆ. ಅಷ್ಟಕ್ಕೂ ನಿಮಗೆ ಯಾರು ಕಂಪ್ಲೇಂಟ್ ಕೊಟ್ಟಿದ್ದು ಎಂದು ತಾಂಡವ್ ಕೇಳುತ್ತಾನೆ. ನಾನೇ ಎನ್ನುತ್ತಾ ಭಾಗ್ಯಾ ಮನೆ ಒಳಗೆ ಬರುತ್ತಾಳೆ.
ಕಳೆದ ವರ್ಷ ಹಲವರನ್ನು ಕಳೆದುಕೊಂಡೆ ಅದಿಕ್ಕೆ 30ರಲ್ಲಿ ನನ್ನ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವೆ: ಹಿತಾ ಚಂದ್ರಶೇಖರ್
ಕಥೆ ಈ ರೀತಿ ಸಾಗ್ತಿದೆ. ಡಿವೋರ್ಸ್ ಕೊಟ್ಟವಳು ಮತ್ಯಾಕೆ ಬಂದೆ ಎಂದು ತಾಂಡವ್ ಭಾಗ್ಯಾಳನ್ನ ಪ್ರಶ್ನೆ ಮಾಡುತ್ತಿದ್ದಾನೆ. ಆದರೆ ಭಾಗ್ಯ ಇದೀಗ ತಾಂಡವ್ ಎದುರು ನಿಂತು ಆತನಿಗೆ ಚಾಲೆಂಜ್ ಹಾಕಿದ್ದಾಳೆ. ಹದಿನೆಂಟು ವರ್ಷ ನಿಮ್ಮನ್ನು ಸಹಿಸಿಕೊಂಡದ್ದಕ್ಕೆ ಇನ್ನೊಬ್ಬಳನ್ನು ಮದುವೆ ಆಗಲು ಬಿಡೋದಿಲ್ಲ ಅಂತಿದ್ದಾಳೆ. ಆದರೆ ಅತ್ತ ತಾಂಡವ್ ಮತ್ತು ಶ್ರೇಷ್ಠ ತಮ್ಮ ಹಠ ಮುಂದುವರಿಸಿದ್ದಾರೆ.
ಈ ನಡುವೆ ಭಾಗ್ಯ ಹೆಣ್ಣಿಗೆ ತವರು ಬಾಡಿಗೆ ಮನೆ ಥರನಾ? ಹೆಣ್ಣು ಹುಟ್ಟುತ್ತಲೇ ತವರನ್ನು ಬಾಡಿಗೆ ಮನೆ ಮಾಡಿಕೊಂಡು ಹುಟ್ಟಿರ್ತಾಳ, ಅವಳ ಎಷ್ಟೋ ಮೊದಲುಗಳಿಗೆ ಕಾರಣವಾದ ತವರು ಮದುವೆ ಆದಮೇಲೆ ಅವಳಿಗೆ ಏನೂ ಅಲ್ವಾ ಎಂದೆಲ್ಲ ಪ್ರಶ್ನೆ ಮಾಡಿ ತವರು ನಿಜಕ್ಕೂ ಹೆಣ್ಣಿಗೆ ಆಸರೆ. ಅವಳ ನೋವಿಗೆ ಅಮ್ಮನ ಮಡಿಲಿದೆ, ಚಿಂತೆಗೆ ಅಪ್ಪನ ಹೆಗಲಿದೆ ಅನ್ನುವ ಮೂಲಕ ತವರಿನ ಮಹಿಮೆಯನ್ನು ಹಾಡಿ ಹೊಗಳಿದ್ದಾಳೆ.