ಅಪ್ಪ ಅಮ್ಮ ಯಾರೂ ಇಲ್ಲದೆ ಕಣ್ಣೀರುಗರೆದ ಗಾಯಕನಿಗೆ ಸರೆಗಮಪ ಟೀಮ್ ಕುಟುಂಬವಾದ ಕಥೆಯಿದು! ಯಾರು ಆ ಗಾಯಕ?

 

ಈ ಜಗತ್ತಿನಲ್ಲಿ ಎಲ್ಲವೂ ಇದ್ದು ಏನೂ ಇಲ್ಲ ಅಂತ ಕೊರಗೋರು ಸಾಕಷ್ಟಿದ್ದಾರೆ. ಅಂಥಾದ್ರಲ್ಲಿ ಈ ಗಾಯಕನಿಗೆ ಕುಟುಂಬದವರು ಅಂತ ಯಾರೂ ಇಲ್ಲ. ಸರೆಗಮಪ ವೇದಿಕೆಯಲ್ಲಿ ನಿಂತು ತಬ್ಬಲಿಯಂತೆ ಕಣ್ಣೀರಾದ ಈ ಗಾಯಕನಿಗೆ ಜೀ ಕನ್ನಡ ಸರೆಗಮಪ ಟೀಮ್ ಕುಟುಂಬವಾಗಿ ನಿಂತದ್ದು ವೀಕ್ಷಕರ ಕಣ್ಣಲ್ಲೂ ನೀರು ತಂದಿದೆ.

 

zee kannada saregamapa singer dyamesh karatagi lifestory

ಜೀ ಕನ್ನಡದ ಸರೆಗಮಪ ಕಾರ್ಯಕ್ರಮ ಬಹಳ ಫೇಮಸ್ಸು, ಇದು ಅನೇಕ ಪ್ರತಿಭಾವಂತ ಗಾಯಕರನ್ನು ಗುರುತಿಸುವ ಕಾರ್ಯ ಮಾಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಶೋನಿಂದ ಹಲವು ಪ್ರತಿಭಾವಂತ ಗಾಯಕರು ಬೆಳಕಿಗೆ ಬಂದಿದ್ದಾರೆ. ಇದೀಗ ಶೋನ ಹೊಸ ಸೀಸನ್ ಆರಂಭವಾಗುತ್ತಿದೆ. ಸರಿಗಮಪ ಸೀಸನ್ 20 ಆರಂಭವಾಗಿ ಎಲ್ಲ ಮೆಚ್ಚುಗೆಗೆ ಪಾತ್ರವಾಗ್ತ ಇದೆ. ತೀರ್ಪುಗಾರರ ಸ್ಥಾನದಲ್ಲಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಇರಲಿದ್ದಾರೆ. ಈ ಸೀಸನ್‌ನಲ್ಲಿ ನಾದಬ್ರಹ್ಮನ ಹಂಸಲೇಖರವರ ಎಂಟ್ರಿ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕನ್ನಡದ ಸರಿಗಮಪ ಮತ್ತೆ ಶುರು ಆಗುತ್ತಿದೆ. ಈ ಸಲ ಹಲವು ವಿಶೇಷತೆಗಳೂ ಇವೆ. ಕರ್ನಾಟಕ ಹಾಗೂ ದೇಶದ ಹಲವು ಭಾಗದಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಮೆಗಾ ಆಡಿಷನ್‌ಗೆ ಬರೋ ಸ್ಪರ್ಧಿಗಳ ಆಯ್ಕೆಯಲ್ಲಿ ವೀಕ್ಷಕರು ಭಾಗಿ ಆಗಿದ್ದಾರೆ.

ಜೀ ಕನ್ನಡದ ಸರಿಗಮಪ ಶೋದ ಅಧಿಕೃತ ಪೇಜ್‌ ಅಲ್ಲಿ ಶೇರ್ ಆಗಿರೋ ಆಡಿಷನ್ ವಿಡಿಯೋಗಳನ್ನ ಶೇರ್ ಮಾಡಲಾಗಿದೆ. ಈ ವಿಡಿಯೋಗಳಲ್ಲಿ ಜನರಿಂದ ಅತಿ ಹೆಚ್ಚು ಲೈಕ್ ಪಡೆದ ಸ್ಪರ್ಧಿಯಗಳನ್ನ ಮೆಗಾ ಆಡಿಷನ್‌ಗೂ ಆಯ್ಕೆ ಮಾಡಲಾಗಿದೆ. ಈ ಮೂಲಕ ವೀಕ್ಷಕರೂ ಈ ಶೋದಲ್ಲಿ ನೇರವಾಗಿ ಭಾಗಿಯಾಗುತ್ತಿದ್ದಾರೆ.

ಸರಿಗಮಪದಲ್ಲಿ ಜಡ್ಜ್‌ಗಳನ್ನೇ ಕುಣಿಸಿದ ಈ ಪುಟಾಣಿ ಹುಡುಗಿ ಯಾರು? ಈಕೆಯ ಮುದ್ದಾಟಕ್ಕೆ ವೀಕ್ಷಕರು ಫಿದಾ

ಈ ಶೋ ಅನೇಕ ಪ್ರತಿಭಾವಂತರನ್ನು ಈಗಾಗಲೇ ಕನ್ನಡನಾಡಿಗೆ ಕೊಡುಗೆಯಾಗಿ ನೀಡಿದೆ. ಸಂಜಿತ್ ಹೆಗ್ಡೆ, ಪೃಥ್ವಿಭಟ್ ಮತ್ತು ಜಸ್ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾಭಟ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿ ಶಾಸ್ಟ್ರಿ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ, ರಜತ್ ಹೆಗ್ಡೆ, ಹರ್ಷ, ದರ್ಶನ್, ಕಂಬದ ರಂಗಯ್ಯ, ಇಂಪನಾ ಜಯರಾಜ್, ಜ್ಞಾನಗುರುರಾಜ್, ಸುಪ್ರೀತ್, ನಿಹಾಲ್, ಅಶ್ವಿನ್ ಶರ್ಮ ರಂತಹ ಪ್ರತಿಭಾವಂತ ಗಾಯಕರು ಸಿನಿಮಾ ರಂಗದಲ್ಲೂ ಮೆಚ್ಚುಗೆ ಪಡೆದು ಬೇಡಿಕೆಯ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಈ ಸಲವೂ ಪ್ರತಿಭಾವಂತ ಗಾಯಕರಿಗೆ ಇದು ಅದ್ಭುತವಾದ ವೇದಿಕೆ ಆಗಲಿದೆ. ಸ್ಪರ್ಧಿಗಳ ಸ್ಪೂರ್ತಿದಾಯಕ ಕಥೆಯನ್ನ ಜನರಿಗೆ ತಿಳಿಸೋ ಮೂಲಕ ಇತರರಿಗೂ ಇಲ್ಲಿ ಮೋಟಿವೇಟ್ ಮಾಡಲಾಗುತ್ತಿದೆ.

ಅನೇಕ ಹಳ್ಳಿ ಪ್ರತಿಭೆಗಳು ಈ ಬಾರಿ ಗಮನ ಸೆಳೆಯುತ್ತಿದ್ದಾರೆ. ಅವರಲ್ಲಿ ದ್ಯಾಮೇಶ ಕಾರಟಗಿ ಕೂಡ ಒಬ್ಬರು. ಜೀ ಕನ್ನಡ ಪ್ರಸಾರ ಮಾಡ್ತಿರೋ ಇವರ ಕಥೆ ಕೇಳ್ತಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬರದೇ ಇರದು.

ರಶ್ಮಿಕಾ ಮದುವೆ ಆಗೋ ಗಂಡು ಹೀಗಿರಬೇಕಂತೆ, ಈ ಕ್ವಾಲಿಟೀಸ್ ರಕ್ಷಿತ್ ಶೆಟ್ಟಿ ಅವರಲ್ಲಿ ಇರಲಿಲ್ವಾ?

ಹೌದು, ಈ ದ್ಯಾಮೇಶ ಕಾರಟಗಿ ಭತ್ತದ ನಾಡು ಅಂತಲೇ ಹೆಸರುವಾಸಿಯಾಗಿರುವ ಕಾರಟಗಿಯ ಪ್ರತಿಭೆ. ಇವರು ಸರೆಗಮಪ ವೇದಿಕೆಯಲ್ಲಿ ಒಂದು ಸೊಗಸಾದ ಜಾನಪದ ಗೀತೆ ಹಾಡಿ ಜಡ್ಜಸ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಾಮಾನ್ಯವಾಗಿ ಗಾಯಕರು ವೇದಿಕೆ ಮೇಲೆ ಹಾಡುತ್ತಿದ್ದರೆ ವೀಕ್ಷಕರ ಬಳಗದಲ್ಲಿ ಅವರ ಮನೆಯವರು ಈ ಸಂಭ್ರಮವನ್ನು ಕಣ್ತುಂಬಿಸಿಕೊಳ್ತಾ ಇರುತ್ತಾರೆ. ಆದರೆ ಈ ಗ್ರಾಮೀಣ ಪ್ರತಿಭೆ ದ್ಯಾಮೇಶ ಕಾರಟಗಿ ಹಾಡುತ್ತಿದ್ದರೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಅವರ ಮನೆಮಂದಿ ಅಂತ ಯಾರೂ ಇರಲಿಲ್ಲ. ಈ ಬಗ್ಗೆ ಆಂಕರ್ ಅನುಶ್ರೀ ಪ್ರಶ್ನಿಸಿದಾಗ, 'ನನಗೆ ಯಾರೂ ಇಲ್ಲ. ಅಮ್ಮ, ಅಪ್ಪ, ಅಣ್ಣ, ತಂಗಿ ಯಾರೂ ಇಲ್ಲ. ನಾನು ಒಬ್ಬನೇ' ಅಂತ ಕಣ್ಣೀರುಗರೆದರು ದ್ಯಾಮೇಶ. ಬದುಕಿನ ನಿರ್ವಹಣೆಗಾಗಿ ಹೂವಿನ ವ್ಯಾಪಾರ ಮಾಡ್ತಿರೋದಾಗಿ ತಿಳಿಸಿದರು. ಅವರ ಕಥೆ, ಕಣ್ಣೀರು, ಸಂಗೀತದ ಮೇಲಿನ ಪ್ರೀತಿ ಕಂಡು ಅಲ್ಲಿದ್ದವರಿಗೂ ಕಣ್ತುಂಬಿ ಬಂದಿದೆ. ಜಡ್ಜಸ್ ಜೊತೆಗೆ ಈ ಶೋದಲ್ಲಿ ಭಾಗಿಯಾದ ಎಲ್ಲರೂ ವೇದಿಕೆಗೆ ಬಂದು ದ್ಯಾಮೇಶ್ ಅವರ ಜೊತೆಗೆ ನಿಂತಿದ್ದಾರೆ. ನಿಮಗಾಗಿ ನಾವೆಲ್ಲ ಇದ್ದೇವೆ ಅಂದಿದ್ದಾರೆ. ಇದು ವೀಕ್ಷಕರ ಕಣ್ಣಲ್ಲೂ ನೀರು ತರಿಸಿದೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios