ಕಳೆದ ವರ್ಷ ಹಲವರನ್ನು ಕಳೆದುಕೊಂಡೆ ಅದಿಕ್ಕೆ 30ರಲ್ಲಿ ನನ್ನ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವೆ: ಹಿತಾ ಚಂದ್ರಶೇಖರ್
ಈ ವರ್ಷ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಹಿತಾ ಚಂದ್ರ ಶೇಖರ್. ನನ್ನವರ ಜೊತೆ ನಾನು ಇರಲೇ ಬೇಕು ಎಂದ ನಟಿ....
ಕಾಲ್ ಕೆಜಿ ಪ್ರೀತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾ ಜೇಷ್ಠ ಪುತ್ರಿ ಹಿತಾ ಚಂದ್ರಶೇಖರ್. ಡಿಸೆಂಬರ್ 15ರಂದು ಜನಿಸಿರುವ ಈ ಪ್ರತಿ ವರ್ಷವೂ ಪ್ರಯಾಣ ಮಾಡುತ್ತಾರೆ ಆದರೆ ಇತ್ತೀಚಿಗೆ ನ್ಯೂಜಿಲ್ಯಾಂಡ್ ಕಡೆ ಮುಖ ಮಾಡಿದ್ದ ಕಾರಣ ಈ ವರ್ಷದ ಬರ್ತಡೆಯಲ್ಲಿ ಫ್ಯಾಮಿಲಿ ಜೊತೆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಹಿತಾ ತಮ್ಮ ಅಭಿಪ್ರಾಯಗಳನ್ನು ಸಖತ್ ಬೋಲ್ಡ್ ಆಗಿ ಹಂಚಿಕೊಳ್ಳುತ್ತಾರೆ ಹೀಗಾಗಿ ಸಿಕ್ಕಾಪಟ್ಟೆ ಫಾಲೋವರ್ಸ್‌ನ ಪಡೆದಿದ್ದಾರೆ.
'ನನಗೆ ಒಂದು ಅರ್ಥವಾಗಿದೆ, ನನ್ನ 20ರಲ್ಲಿ ಇದ್ದ ವ್ಯಕ್ತಿಗಿಂತ ಈಗ ನಾನು ತುಂಬಾ ಸ್ಟ್ರಾಂಗ್ ಆಗಿದ್ದೀನಿ. 30ಕ್ಕೆ ಕಾಲಿಡುತ್ತಿದ್ದಂತೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮುಖ್ಯವಾಗುತ್ತದೆ. ಕಳೆದ ವರ್ಷ ನನ್ನ ಹಲವರು ಸಂಭಂದಿಗಳನ್ನು ಕಳೆದುಕೊಂಡೆ ಇದು ನನಗೆ ಸೆಲ್ಫ್ ಕೇರ್ ಪಾಠ ಕಲಿಸಿದೆ. ಅಂದಿನಿಂತ ನಾನು ತುಂಬಾ ಗಂಭೀರವಾಗಿ ಶುದ್ಧ ಆಹಾರ ತಿನ್ನುತ್ತಿರುವೆ, ನನ್ನ ಬೌಂಡ್ರಿಗಳನ್ನು ಸೆಟ್ ಮಾಡಿಕೊಂಡಿರುವೆ ನನ್ನ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಿರುವೆ. ಈ ವರ್ಷದ ಹುಟ್ಟುಹಬ್ಬ ನನಗೆ ತುಂಬಾ ಸ್ಪೆಷಲ್ ಏಕೆಂದರೆ ನನ್ನನ್ನು ನಾನು ಮೊದಲ ಆದ್ಯತೆ ಎಂದು ಪರಿಗಣಿಸಿರುವೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹಿತಾ ಮಾತನಾಡಿದ್ದಾರೆ.
ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್
'ಈ ವರ್ಷದ ಹುಟ್ಟುಹಬ್ಬಕ್ಕೆ ನನ್ನ ಪೋಷಕರು ಮತ್ತು ತಾಯಿ ಸಹೋದರಿಯರು ಆಗಮಿಸಿದ್ದರು. ಸಂಜೆ ನನ್ನ ಸ್ನೇಹಿತರು ಬಂದಿದ್ದರು, ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿ ಇರಲಿ ಅವರು ಸದಾ ನನ್ನ ಹುಟ್ಟುಹಬ್ಬಕ್ಕೆ ಸಮಯ ಮಾಡಿಕೊಂಡು ಬರುತ್ತಾರೆ. ಸಾಮಾನ್ಯವಾಗಿ ನನ್ನ ಹುಟ್ಟುಹಬ್ಬಕ್ಕೆ ನಾನು ಪ್ರಯಾಣ ಮಾಡುತ್ತೀನಿ ಆದರೆ ಕಳೆದ ತಿಂಗಳು ನ್ಯೂಜಿಲ್ಯಾಂಡ್‌ಗೆ ಹೋಗಿದ್ದ ಹೀಗಾಗಿ ಈ ಸಲ ಮನೆಯಲ್ಲಿ ಉಳಿದುಕೊಂಡು ನನ್ನ ಸಣ್ಣ ಸರ್ಕಲ್ ಜೊತೆ ಆಚರಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ. ಅವರು ಮಾತ್ರ ನನಗಿದ್ದಾರೆ ಎಂದು ತೋರಿಸುವುದು ಅಲ್ಲ ನಾನು ಕೂಡ ಅವರಿಗಾಗಿ ಇದ್ದೀನಿ, ನನ್ನ ಅಗತ್ಯ ಇರುವವರಿಗೆ ಸಪೋರ್ಟ್ ಆಗಿರುತ್ತೀನಿ'ಎಂದು ಹಿತಾ ಹೇಳಿದ್ದಾರೆ.
ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್