Bhagyalakshmi Kannada Serial ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಶ್ರೀಮಂತಳಾಗಿದ್ದಾಳೆ, ತಾಂಡವ್‌ ಅಳುತ್ತಿದ್ದಾನೆ. ಇದು ಕನಸಾಗಿರಬಹುದು. ಆದರೆ ಸೀರಿಯಲ್‌ ತಂಡ ಮುಂದಿನ ಕತೆ ಗುಟ್ಟು ಬಿಟ್ಟುಕೊಡ್ತಿದ್ಯಾ?  

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಶ್ರೀಮಂತಳಾಗಿದ್ದಾಳೆ. ಅತ್ತೆ-ಸೊಸೆ ಸಖತ್‌ ಆಗಿರೋ ಸೀರೆಯುಟ್ಟು, ಆಭರಣ ಧರಿಸಿ ಮಿಂಚುತ್ತಾರೆ. ತಾಂಡವ್‌ ಅತ್ತುಕೊಂಡು ನಿಲ್ಲುತ್ತಾನೆ. ಇದು ಸುಂದರಿ ಕನಸು ಅಷ್ಟೇ. ಆದರೆ ಈ ಮೂಲಕ ಸೀರಿಯಲ್‌ ಕಥೆಯ ಭವಿಷ್ಯ ರಿವೀಲ್‌ ಆಯ್ತಾ?

ಸುಂದರಿ ಕಂಡ ಕನಸು ಏನು?
ಭಾಗ್ಯ ಶ್ರೀಮಂತಳಾಗಿದ್ದಾಳೆ. ಇಡೀ ಮನೆಯವರು ವೈಭೋಗವನ್ನು ಎಂಜಾಯ್‌ ಮಾಡುತ್ತಾರೆ. ದುಡ್ಡು ತುಂಬಿರೋ ಸೂಟ್‌ಕೇಸ್‌ನ ತಾಂಡವ್‌ ಮುಂದೆ ಇಟ್ಟ ಭಾಗ್ಯ, “ಇಎಂಐ ಬೇಡ, ಏನೂ ಬೇಡ, ನಾನೇ ಈ ಮನೆ ಖರೀದಿ ಮಾಡ್ತೀನಿ” ಅಂತ ತಾಂಡವ್‌ಗೆ ಹೇಳುತ್ತಾಳೆ. ತಾಂಡವ್‌ ಮುಖ ಇಂಗು ತಿಂದ ಮಂಗನಂತಾಗುತ್ತದೆ. ಹೀಗೆ ಸುಂದರಿ ಹಗಲುಗನಸು ಕಂಡು, ಅದನ್ನು ಮನೆಯವರ ಮುಂದೆ ಹೇಳಿಕೊಳ್ಳುತ್ತಾಳೆ. ಸುಂದರಿ ಕನಸು ನೋಡಿ ಭಾಗ್ಯ ಬೇಸರ ಮಾಡಿಕೊಳ್ಳುತ್ತಾಳೆ.

ಕನ್ನಡ ಕಿರುತೆರೆ ಜೋಡಿ ಸುನೇತ್ರಾ -ರಮೇಶ್ ಪಂಡಿತ್ ದಾಂಪತ್ಯ ಜೀವನಕ್ಕೆ 30 ವರ್ಷ!

ತಿಳಿ ಹೇಳಿದ ಭಾಗ್ಯ, ಪೂಜಾ! 
“ಇಂದು ಒಂದು ಸಮಸ್ಯೆಯಿಂದ ಹೊರಗಡೆ ಬಂದಿದ್ದೇವೆ, ಇನ್ನೂ ಸಾಕಷ್ಟು ಸಮಸ್ಯೆ ಇದೆ. ನಾವು ರಿಯಾಲಿಟಿಯನ್ನು ಅರ್ಥ ಮಾಡಿಕೊಂಡು ಬದುಕಬೇಕು. ಏನೇ ಬಂದರೂ ಧೈರ್ಯದಿಂದ ಬದುಕಬೇಕು, ಅದೇ ನಮ್ಮ ಗುರಿ” ಎಂದು ಪೂಜಾ, ಭಾಗ್ಯ ಸುಂದರಿಗೆ ತಿಳಿ ಹೇಳಿದ್ದಾರೆ.

ಸಿಟ್ಟು ಮಾಡಿಕೊಂಡಿರೋ ಭಾಗ್ಯ! 
ಇನ್ನೊಂದು ಕಡೆ ಭಾಗ್ಯ ಗೆದ್ದಳು, ಗೆದ್ದು ಗತ್ತಿನಿಂದ ಮಾತನಾಡಿದ್ದಾಳೆ ಎಂದು ತಾಂಡವ್‌ ಪಿತ್ತ ನೆತ್ತಿಗೇರಿದೆ. ಅವನಿಗೆ ಎರಡನೇ ಮದುವೆ ಆದೆ ಅನ್ನೋ ಖುಷಿಗಿಂತ ಭಾಗ್ಯ ಗೆದ್ದು ತನಗೆ ಚಾಲೆಂಜ್‌ ಮಾಡಿದ ಸಿಟ್ಟೇ ಜಾಸ್ತಿ. ಭಾಗ್ಯ ಗೆಲುವು ನನ್ನ ಸೋಲಲ್ಲ, ಸಾವು ಎಂದು ತಾಂಡವ್‌ ಹೇಳಿದ್ದಾನೆ. ಅಷ್ಟೇ ಅಲ್ಲದೆ ಗಾಜಿನ ಬಾಟಲಿಗಳನ್ನು ಕಾಂಪೌಂಡ್‌ಗೆ ಎಸೆದು ಒಡೆದು ಹಾಕಿದ್ದಾನೆ. ಮನೆಯ ಒಂದು ತಿಂಗಳ ಇಎಂಐ ಕಟ್ಟಿದಳು ಅಂತ ತಾಂಡವ್‌ಗೆ ಸಿಟ್ಟು ಬಂದಿದೆ. ಪ್ರತಿ ಬಾರಿಯೂ ಭಾಗ್ಯ ಗೆಲ್ಲುತ್ತಾಳೆ, ಗೆದ್ದು ಹೀರೋಯಿನ್‌ ಆಗ್ತಾಳೆ ಅಂತ ತಾಂಡವ್‌ ಕೋಪ ಜಾಸ್ತಿ ಆಗಿದೆ. ಶ್ರೇಷ್ಠಳಿಗೂ ತಾಂಡವ್‌ನನ್ನು ಸಮಾಧಾನ ಮಾಡೋಕೆ ಆಗ್ತಿಲ್ಲ.

Bhagyalakshmi Serial: ತಾಂಡವ್‌ ಸೊಕ್ಕನ್ನೊಂದೇ ಅಲ್ಲ... ಕೈ ಮುರಿದುಬಿಟ್ಳಾ ʼಗಟ್ಟಿಗಿತ್ತಿʼ ಭಾಗ್ಯ?

ಮುಂದೆ ಏನು ಮಾಡ್ತಾನೆ ತಾಂಡವ್‌?
ಭಾಗ್ಯಳನ್ನು ಸೋಲಿಸಿ, ಅಪ್ಪ-ಅಮ್ಮನನ್ನು ತನ್ನ ಕಡೆ ಎಳೆದುಕೊಳ್ಳಬೇಕು ಅಂತ ತಾಂಡವ್‌ ಅಂದುಕೊಂಡಿದ್ದನು. ಆದರೆ ಈ ಬಾರಿಯೂ ಅವನ ಪ್ರಯತ್ನ ವಿಫಲವಾಗಿದೆ. ಭಾಗ್ಯಳನ್ನು ಸೋಲಿಸಲು ತಾಂಡವ್‌ ಇನ್ನೊಂದಿಷ್ಟು ಸಮಸ್ಯೆ ಸೃಷ್ಟಿ ಮಾಡುತ್ತಾನೆ. ಮುಂದೆ ಏನಾಗಬಹುದು ಎಂದು ಕಾದು ನೋಡಬೇಕಿದೆ. 

Kannada Serial TRP 2025: ರೆಕಾರ್ಡ್‌ ಸೃಷ್ಟಿಸಿದ್ದ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್!‌ ಯಾವುದು?


ಮುಂದೆ ಏನಾಗುವುದು? 
ಭಾಗ್ಯಗೆ ಈಗ ಪದೇ ಪದೇ ಸೋಲು ಬಂದಿರಬಹುದು. ಆದರೆ ಮುಂದೆ ಅವಳು ಪಕ್ಕಾ ಶ್ರೀಮಂತಳಾಗ್ತಾಳೆ, ತಾಂಡವ್‌ ಅವಳ ಮುಂದೆ ಮಂಡಿಯೂರಿ ಕೂತುಕೊಳ್ಳುತ್ತಾನೆ. ಈ ರೀತಿ ಸೀರಿಯಲ್‌ ಕಥೆ ಪ್ರಸಾರ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ ಎನ್ನಬಹುದು. 

ಈ ಧಾರಾವಾಹಿ ಕಥೆ ಏನು?
ತಾಂಡವ್-ಭಾಗ್ಯ ಮದುವೆಯಾಗಿ ಇಬ್ಬರು ಮಕ್ಕಳಿವೆ. ತಾಂಡವ್‌ಗೆ ಪತ್ನಿ ಕಂಡರೆ ಇಷ್ಟ ಇಲ್ಲ. ಹೀಗಾಗಿ ಅವನು ಶ್ರೇಷ್ಠ ಎನ್ನುವ ಹುಡುಗಿಯನ್ನು ಮದುವೆಯಾಗಿದ್ದಾನೆ. ಗಂಡ ಬೇರೆ ಮದುವೆ ಆದ ಅಂತ ಭಾಗ್ಯ ತನ್ನ ತಾಳಿಯನ್ನು ಕಿತ್ತು ಎಸೆದಿದ್ದಾಳೆ. ಇದನ್ನು ನೋಡಿ ಪಕ್ಕದಮನೆಯವರು ಆಡಿಕೊಂಡಿದ್ದಾರೆ. ಇನ್ನೊಂದು ಕಡೆ ಮನೆಯನ್ನು ಉಳಿಸಿಕೊಳ್ಳಲು ಭಾಗ್ಯ ಪ್ರತಿ ತಿಂಗಳು ಇಎಂಐ ಕಟ್ಟಬೇಕಿದೆ. ಇದಕ್ಕಾಗಿ ಅವಳು ನಿತ್ಯ ಹೋರಾಟ ಮಾಡುತ್ತಿದ್ದಾಳೆ. ಭಾಗ್ಯ ಸಾಲ ಕಟ್ಟಿಲ್ಲ ಅಂದರೆ ಸೋತಂತೆ, ನನ್ನ ಜೊತೆ ಅಪ್ಪ-ಅಮ್ಮ ಬರುತ್ತಾರೆ ಅಂತ ತಾಂಡವ್‌ ಕನಸು ಕಾಣುತ್ತಿದ್ದಾನೆ. 

ಪಾತ್ರಧಾರಿಗಳು
ಭಾಗ್ಯ- ಸುಷ್ಮಾ ಕೆ ರಾವ್‌
ತಾಂಡವ್- ಸುದರ್ಶನ್‌ ರಂಗಪ್ರಸಾದ್‌
ಶ್ರೇಷ್ಠ- ಕಾವ್ಯಾ ಗೌಡ