ನಟರಾದ ಸುನೇತ್ರಾ ಮತ್ತು ರಮೇಶ್ ಪಂಡಿತ್ ದಂಪತಿಗಳು ತಮ್ಮ 30ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಕಿರುತೆರೆ ಮತ್ತು ಸಿನಿಮಾದಲ್ಲಿ ಇಬ್ಬರೂ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಸುನೇತ್ರಾ ಅವರು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮತ್ತು ರಮೇಶ್ ಪಂಡಿತ್ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರಾವಾಹಿಗಳ ಮೂಲಕ ತಮ್ಮ ಕಾಮಿಡಿ ಪಾತ್ರಗಳ ಮೂಲಕ ಮನರಂಜನೆ ನೀಡುತ್ತಿರುವ ನಟರಾದ ಸುನೇತ್ರಾ ಪಂಡಿತ್ ಮತ್ತು ರಮೇಶ್ ಪಂಡಿತ್ ದಂಪತಿಗಳು ತಮ್ಮ 30ನೇ ವಿವಾಹ ವಾರ್ಷಿಕೋತ್ಸವವನ್ನು (30th wedding anniversary) ಇತ್ತೀಚೆಗೆ ಆಚರಿಸಿಕೊಂಡಿದ್ದು, ಈ ಕುರಿತು ಸುನೇತ್ರಾ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಫೋಟೊ ಹಾಗೂ ದಾಂಪತ್ಯ ಜೀವನದ ಕುರಿತು ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ರಿಯಲ್- ರೀಲ್ ಪತ್ನಿಯರ ನಡುವೆ ಪುಟ್ಟಕ್ಕನ ಮಕ್ಕಳು ಇಬ್ಬರು ಹೆಂಡಿರ ಮುದ್ದಿನ ಗಂಡ ಗೋಪಾಲಯ್ಯ ಸುಸ್ತೋ ಸುಸ್ತು!
ಕನ್ನಡ ಕಿರುತೆರೆ ಹಾಗೂ ಸಿನಿಮಾದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡ ಜೋಡಿ ಸುನೇತ್ರಾ ಪಂಡಿತ್ (Sunethra Pandit) ಹಾಗೂ ರಮೇಶ್ ಪಂಡಿತ್. ಈ ಜೋಡಿ ಸುಮಧುರ ದಾಂಪತ್ಯ ಜೀವನದ 30 ವರ್ಷಗಳ ಸಂಭ್ರಮವನ್ನು ಸಂಭ್ರಮಿಸುತ್ತಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸುನೇತ್ರಾ 30 ವರ್ಷಗಳ ಒಗ್ಗಟ್ಟು, ನಾನು ಪ್ರಪಂಚಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಮಗೆ ಹ್ಯಾಪಿ ಆನಿವರ್ಸರಿ. ನಾವು ಪ್ರೀತಿಸುವ ಪ್ರತಿ ದಂಪತಿಗಳಂತೆ, ಜಗಳವಾಡುತ್ತೇವೆ, ತಪ್ಪಾಗಿ ಅರ್ಥಮಾಡಿಕೊಳ್ಳುತ್ತೇವೆ, ಅಹಂ ಘರ್ಷಣೆಗಳನ್ನು ಹೊಂದಿದ್ದೇವೆ, ಕಿರಿಕಿರಿಗೊಳ್ಳುತ್ತೇವೆ ಮತ್ತು ತ್ಯಾಗ ಮಾಡುತ್ತೇವೆ. ಆದರೆ ಕೊನೆಯಲ್ಲಿ ಸಾರಿ ಎಂದು ಹೇಳಲು ಮತ್ತು ಪರಸ್ಪರ ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲಲು ಎಂದಿಗೂ ಮರೆಯೋದಿಲ್ಲ. ರಮೇಶ್ ಪಂಡಿತ್ ನೀವು ನನ್ನ ಶಕ್ತಿ ಮತ್ತು ಭರವಸೆ. ಈ ರೀತಿ ಎಂದೆಂದಿಗೂ ಇರಿ ಎಂದು ಸುನೇತ್ರಾ ಗಂಡನಿಗಾಗಿ ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಮದುವೆ ಫೋಟೋ ವಿಡಿಯೋ ಇಲ್ಲದಂತೆ ಸುಟ್ಟು ಹೋಗಿದೆ: ನಟಿ ಸುನೇತ್ರಾ ಕಣ್ಣೀರು
ರಂಗಭೂಮಿ ಕಲಾವಿದರಾದ ರಮೇಶ್ ಪಂಡಿತ್ (Ramesh Pandit) ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಖಳನಾಯಕ ಹಾಗೂ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಸುಮಾರು ಮೂವತ್ತಕ್ಕೂ ಅಧಿಕ ವರ್ಷಗಳಿಂದ ಸಿನಿರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಇನ್ನು ಸುನೇತ್ರಾ ಅವರು ಸಿಲ್ಲಿ ಲಲ್ಲಿ ಧಾರಾವಾಹಿಯ ವಿಶಾಲು ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಇವರು ಸಹ ಸುಮಾರು 40ಕ್ಕೂ ಹೆಚ್ಚು ಸಿನಿಮಾ ಹಾಗೂ ನಾಟಕಗಳಲ್ಲಿ ನಟಿಸಿದ್ದು, ಸದ್ಯ ಲೈಮ್ ಲೈಟ್ ಎಂಬ ಅಭಿನಯ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ಸುನೇತ್ರಾ ಕೇವಲ ನಟಿ ಮಾತ್ರವಲ್ಲದೇ ಕಂಠದಾನ ಕಲಾವಿದೆಯೂ ಹೌದು. ಇವು ಕನ್ನಡ ಚಿತ್ರರಂಗದಲ್ಲಿ ನಟಿಸಿದ ಟಾಪ್ ನಟಿಯರಾದ ಪ್ರೇಮ, ರಮ್ಯಾ ಕೃಷ್ಣ ಸೇರಿ ಹಲವು ನಟಿಯರಿಗೆ ಕಂಠದಾನ ಮಾಡಿದ್ದಾರೆ. ಸದ್ಯ ಸುನೇತ್ರಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿದ್ದರೆ, ರಮೇಶ್ ಪಂಡಿತ್ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಗಂಡನಾಗಿ ನಟಿಸುತ್ತಿದ್ದಾರೆ.
'ಕಟ್ಟಿರುವ ಎರಡು ತಾಳಿ ತುಂಡು ಬಿಟ್ಟರೆ ಏನೂ ಕೊಟ್ಟಿಲ್ಲ'; ನಟಿ ಸುನೇತ್ರಾರ ಪಾದಪೂಜೆ ಮಾಡಿದ ಪತಿ ರಮೇಶ್
ಇನ್ನು ಈ ಜೋಡಿ ಜೀ ಕನ್ನಡ ಜೀ ಕನ್ನಡ ವಾಹಿನಿಯಲ್ಲಿ ‘ಜೋಡಿ ನಂ 1’ ಸೀಸನ್ 2 ‘ಜೋಡಿ ನಂ 1’ ಸೀಸನ್ 2 ನಲ್ಲಿ ಕೂಡ ಭಾಗವಹಿಸಿದ್ದರು. ಇವರಿಬ್ಬರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಮೊದಲಿಗೆ ಪ್ರಪೋಸ್ ಮಾಡಿದ್ದು ರಮೇಶ್ ಪಂಡಿತ್ ಅಂತೆ. ರಮೇಶ್ ನೋಡೋದಕ್ಕೆ ವಿಚಿತ್ರವಾಗಿದ್ದರೂ ಕೂಡ, ಅವರಲ್ಲಿರುವ ಮಾನವೀಯತೆ ಗುಣ ನೋಡಿ ಸುನೇತ್ರಾ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತಂತೆ. ಮುಂದೆ ಪ್ರೀತಿಯಾಗಿ, ಮದುವೆಯಾಗಿ ಇದೀಗ 30ನೇ ವರ್ಷದ ಸಂಭ್ರಮದಲ್ಲಿದ್ದಾರೆ.
