Asianet Suvarna News Asianet Suvarna News

ಕೇವಲ 15ನೇ ವಯಸ್ಸಿಗೆ ಕನಸಿನ ಮನೆ ಖರೀದಿಸಿದ ನಟಿ; ಇದು ಆರಂಭವಷ್ಟೆ, ಇನ್ನೂ ಇದೆ ಎಂದ ರುಹಾನಿಕಾ

ಚಿಕ್ಕ ವಯಸ್ಸಿನಲ್ಲೇ ಮನೆ ಖರೀದಿಸುವ ಮೂಲಕ ತನ್ನ ಕನಸನನ್ನು ನನಸು ಮಾಡಿಕೊಂಡಿದ್ದಾರೆ ಕಿರುತೆರೆಯ ಖ್ಯಾತ ಬಾಲನಟಿ ರುಹಾನಿಕಾ ಧವನ್. 

Child actress Ruhaanika Dhawan buys a lavish house at the age of 15 sgk
Author
First Published Jan 2, 2023, 11:27 AM IST

ಚಿಕ್ಕ ವಯಸ್ಸಿನಲ್ಲೇ ಮನೆ ಖರೀದಿಸಿ ತನ್ನ ಕನಸನನ್ನು ನನಸು ಮಾಡಿಕೊಂಡಿದ್ದಾರೆ ಕಿರುತೆರೆಯ ಖ್ಯಾತ ಬಾಲನಟಿ ರುಹಾನಿಕಾ ಧವನ್. ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಬಾಲನಟಿ ರಿಹಾನಿಕ ಚಿಕ್ಕ ವಯಸ್ಸಿನಲ್ಲೇ ಐಷಾರಾಮಿ ಮನೆ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ರುಹಾನಿಕಾ ದುಡಿದ ಹಣವನ್ನು ಉಳಿಸಿ ಮನೆ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಹಣ ಉಳಿತಾಯಕ್ಕೆ ತನ್ನ ತಾಯಿ ಸಹಾಯ ಮಾಡಿದರು ಹಾಗಾಗಿ ತನ್ನ ಕನಸಿನ ಮನೆ ಖರೀದಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 

ರುಹಾನಿಕಾ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ  ಕಾಲಿಟ್ಟರು. ಟಿವಿ ಶೋ ಮೂಲಕ ತೆರೆಮೇಲೆ ಮಿಂಚಿದರು. ಕೌಶಿಕ್ ಕಿ ಪಾಂಚ್ ಬೆಹನ್, ಯೇ ಹೆ ಮೊಹಬ್ಬತೇನ್, ಕಾಮಿಡಿ ನೈಟ್ಸ್ ವಿತ್ ಕಪಿಲ್ ಸೇರಿದಂತೆ ಅನೇಕ ಟಿವಿ ಶೋಗಳಲ್ಲಿ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಖತ್ ಅಕ್ಟೀವ್ ಆಗಿರುವ ರುಹಾನಿಕಾ ಆಗಾಗ ತನ್ನ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ಹೊಸ ಮನೆ ಖರೀದಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  

ರುಹಾನಿಕಾ ಸಾಧನೆಗೆ ಅನೇಕರ ಗಣ್ಯರು, ಆಪ್ತರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪ್ರೀತಿ ವ್ಯಕ್ತ ಪಡಿಸುತ್ತಿದ್ದಾರೆ. ಚಿಕ್ಕ ವಯಸ್ಸಿಗೆ ಮನೆ ಕನಸು ನನಸು ಮಾಡಿಕೊಂಡ ರುಹಾನಿಕಾಗೆ ಭೇಷ್ ಎನ್ನುತ್ತಿದ್ದಾರೆ. 

ತಮ್ಮ ಅಭಿಮಾನಿಗಳೊಂದಿಗೆ ಸಂತಸದ ಸುದ್ದಿ ಹಂಚಿಕೊಂಡ ನಟಿ 'ನನ್ನ ಹೆತ್ತವರ ಆಶೀರ್ವಾದದೊಂದಿಗೆ ನನ್ನ ಸಂತೋಷವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹೊಸ ಆರಂಭಕ್ಕೆ ನನ್ನ ಹೃದಯ ತುಂಬಿದೆ ಮತ್ತು ನಾನು ತುಂಬಾ ಕೃತಜ್ಞನಾಗಿದ್ದೇನೆ' ಎಂದು ಹೇಳಿದ್ದಾರೆ.

ಬಿಗ್ ಬಾಸ್ ದಿವ್ಯಾ ಸುರೇಶ್ ಈಗ 'ತ್ರಿಪುರ ಸುಂದರಿ'; ರಿಮೇಕ್ ಎಂದು ಕಾಲೆಳೆದ ನೆಟ್ಟಿಗರು

ಸ್ವಂತ ಮನೆ ಖರೀದಿಸುವುದು ಇದು ನನಗೆ ಮತ್ತು ನನ್ನ ಜನರಿಗೆ ಬಹಳ ದೊಡ್ಡದಾಗಿದೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಕಾಯಲು ಸಾಧ್ಯವಾಗಲಿಲ್ಲ. ಈ ಕನಸನ್ನು ಸಾಧಿಸಲು ನನಗೆ ಸಹಾಯ ಮಾಡಿದ ಎಲ್ಲಾ ಪ್ಲಾಟ್‌ಫಾರ್ಮ್ ಮತ್ತು ನನ್ನ ಪೋಷಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಸಹಜವಾಗಿ, ನನ್ನ ಹೆತ್ತವರ ಸಹಾಯ ಮತ್ತು ಮಾರ್ಗದರ್ಶನವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನನ್ನ ತಾಯಿಯ ಬಗ್ಗೆ ಹೇಳಬೇಕೆಂದರೆ ವಿಶೇಷವಾದ ಎಲ್ಲಾ ರೀತಿಯಲ್ಲೂ ಪ್ರತಿ ಪೈಸೆಯನ್ನು ಉಳಿಸಿ ಅದನ್ನು ದ್ವಿಗುಣಗೊಳಿಸುವ ದೇಸಿ ತಾಯಿ' ಎಂದು ಹೇಳಿದ್ದಾರೆ.

ಧಾರಾವಾಹಿ ಲೋಕಕ್ಕೆ ಸ್ಪರ್ಶ ರೇಖಾ ಎಂಟ್ರಿ; ಹೇಗಿದೆ ಪಾತ್ರ? ಇಲ್ಲಿದೆ ಸಂಪೂರ್ಣ ವಿವರ

ಇದನ್ನೆಲ್ಲ ಆಕೆ ಹೇಗೆ ಮಾಡುತ್ತಾಳೆ ಎಂದು ಅವಳಿಗೆ ಮತ್ತು ದೇವರಿಗೆ ಮಾತ್ರ ಗೊತ್ತು. ಇದು ಆರಂಭವಷ್ಟೇ. ನಾನು ಈಗಾಗಲೇ ದೊಡ್ಡ ಕನಸು ಕಾಣುತ್ತಿದ್ದೇನೆ, ನಾನು ನನ್ನ ಕನಸುಗಳನ್ನು ಬೆನ್ನಟ್ಟುತ್ತೇನೆ ಇನ್ನೂ ಕಷ್ಟಪಟ್ಟು ಕೆಲಸ ಮಾಡುತ್ತೇನೆ' ಎಂದು ಹೇಳಿದ್ದಾರೆ. 'ನೀವೆಲ್ಲರೂ ನನಗೆ ನೀಡಿದ ಎಲ್ಲಾ ಸಹಾಯ ಮತ್ತು ಬೆಂಬಲಕ್ಕಾಗಿ ನಾನು ಎಷ್ಟು ಕೃತಜ್ಞನಾಗಿದ್ದೇನೆ ಎಂದರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳಿಗಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು' ಎಂದು ಹೇಳಿದರು. 

 

Follow Us:
Download App:
  • android
  • ios