Asianet Suvarna News Asianet Suvarna News

ಧಾರಾವಾಹಿ ಲೋಕಕ್ಕೆ ಸ್ಪರ್ಶ ರೇಖಾ ಎಂಟ್ರಿ; ಹೇಗಿದೆ ಪಾತ್ರ? ಇಲ್ಲಿದೆ ಸಂಪೂರ್ಣ ವಿವರ

ಸ್ಯಾಂಡಲ್ ವುಡ್‌ನ ಖ್ಯಾತ ನಟಿ ಸ್ಪರ್ಶ ರೇಖಾ ಎಂದೇ ಖ್ಯಾತಿಗಳಿಸಿರುವ ರೇಖಾ ಪ್ರಸಾದ್ ಅವರು ಕಿತುರೆಗೆ ಎಂಟ್ರಿ ಕೊಟ್ಟಿದ್ದಾರೆ.

Sparsha fame Actress Rekha to make her small screen debut with Tripura Sundari sgk
Author
First Published Dec 24, 2022, 2:32 PM IST

ಸ್ಯಾಂಡಲ್ ವುಡ್‌ನ ಖ್ಯಾತ ನಟಿ ಸ್ಪರ್ಶ ರೇಖಾ ಎಂದೇ ಖ್ಯಾತಿಗಳಿಸಿರುವ ರೇಖಾ ಪ್ರಸಾದ್ ಅವರು ಕಿತುರೆಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ರೇಖಾ ಧಾರಾವಾಹಿ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಹೌದು, ರೇಖಾ ಮೊದಲ ಭಾರಿಗೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತ್ರಿಪುರ ಸುಂದರಿ ಎನ್ನುವ ಧಾರಾವಾಹಿ ಮೂಲಕ ರೇಖಾ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸ್ಯಾಂಡಲ್ ವುಡ್‌ನ ಸ್ಟಾರ್ ಕಲಾವಿದರಿಗೆ ನಾಯಕಿಯಾಗಿ ನಟಿಸಿರುವ ರೇಖಾ ಬಳಿಕ ಬಣ್ಣದ ಲೋಕದಿಂದ ದೂರ ಸರಿದರು. ಮದುವೆಯಾಗಿ ಸಂಸಾರದ ಕಡೆ ಹೆಚ್ಚು ಗಮನ ಹರಿಸಿದ್ದ ರೇಖಾ ಅನೇಕ ವರ್ಷಗಳ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದರು. ನಂತರ ಕೆಲವು ಸಿನಿಮಾಗಳಿಲ್ಲಿಯೂ ನಟಿಸಿದ್ದಾರೆ. ಇದೀಗ ರೇಖಾ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. 

ಧಾರಾವಾಹಿ ಎಂಟ್ರಿ ಬಗ್ಗೆ ರೇಖಾ, ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. 'ನಾನು ಯಾವಾಗಲೂ ಕಾಲ್ಪನಿಕ ಕಥೆಗಳಿಗೆ ಅಭಿಮಾನಿ. ಈ ಸಿನಿಮಾದ ನಿರ್ಮಾಪಕರು ನನ್ನನ್ನು ಸಂಪರ್ಕಿಸಿದಾಗ ಈ ಧಾರಾವಾಹಿ ಕಥೆ ತುಂಬಾ ವಿಭಿನ್ನವಾಗಿದೆ ಎನ್ನುವುದು ಗೊತ್ತಾಯಿತು. ಈ ಧಾರಾವಾಹಿ ಎಲ್ಲಾ ಸೀರಿಯಲ್ ಹಾಗೆ ಇಲ್ಲ. ಧಾರಾವಾಹಿಗಳು ನಮ್ಮನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ ಮತ್ತು ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ' ಎಂದು ಸಂತಸ ಹಂಚಿಕೊಂಡಿದ್ದಾರೆ.  

ಇನ್ನು ಧಾರಾವಾಹಿಯಲ್ಲಿ ತನ್ನ ಪಾತ್ರದ ಬಗ್ಗೆಯೂ ರೇಖಾ ವಿವರಿಸಿದ್ದಾರೆ, 'ಧಾರಾವಾಹಿಯು ತಾಯಿ ಸೆಂಟಿಮೆಂಟ್ ಇದೆ. ಒಬ್ಬ ಮಗನನ್ನು ದತ್ತು ಪಡೆಯುತ್ತೀನಿ. ಆದರೆ ನನ್ನ ಪತಿ ಅವನನ್ನು ದ್ವೇಷಿಸುತ್ತಾನೆ' ಎಂದು ಸ್ವಲ್ಪ ವಿವರಿಸಿದರು. 

ರೇಖಾ ಲೇಟಾಗಿ ಹುಟ್ಟಿದ್ರೆ ನಂಗೆ ನಾಯಕಿ ಆಗಬೋದಿತ್ತು!

ಖ್ಯಾತ ನಟಿಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದ ರೇಖಾ ಇದೀಗ ಕಿರುತೆರೆಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಮಾತನಾಡಿದ್ದಾರೆ. 'ನನಗೆ ಧಾರಾವಾಹಿ ಮತ್ತು ಸಿನಿಮಾಗಳ ನಡುವೆ ಹೆಚ್ಚು ವ್ಯತ್ಯಾಸ ಕಾಣಿಸುತ್ತಿಲ್ಲ. ಪ್ರಮುಖ ವ್ಯತ್ಯಾಸ ಎಂದರೆ ಸಮಯ. ಧಾರಾವಾಹಿಗಳ ಗುಣಮಟ್ಟ ನನಗೆ ಹೆಚ್ಚು ಆಚ್ಚರಿ ಮೂಡಿಸಿದೆ. ಹೆಚ್ಚಿನ ಧಾರಾವಾಹಿಗಳು ಸಿನಿಮಾಗಳ ಹಾಗೆ ಉತ್ತಮ ಗುಣಮಟ್ಟವನ್ನು ಹೊಂದಿವೆ.  

ಅಂದಹಾಗೆ ರೇಖಾ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಆದರೆ ಚಿಕ್ಕ ಪುಟ್ಟ ಪಾತ್ರಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೇದ ಸಿನಿಮಾದಲ್ಲಿ ರೇಖಾ ನಟಿಸಿದ್ದಾರೆ. ಈ ಬಗ್ಗೆ ಮಾತನಾಡಿದರ ರೇಖಾ, ಶಿವಣ್ಣ ಎನರ್ಜಿಗೆ ಫಿದಾ ಆಗಿದ್ದಾರೆ. ಅವರ ವಯಸ್ಸು ಹಿಂದೆ ಹೋಗುತ್ತಿದೆ. ನಾನು ಅವರೊಂದಿಗೆ ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಯಾರೆ ನೀ ಅಭಿಮಾನಿ, ಶ್ರೀಕಂಠ ಮತ್ತು ವೇದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತುಂಬಾ ಖುಷಿಯಾಗಿದೆ' ಎಂದು ಹೇಳಿದರು. 

ಗೆಳೆಯರಿಂದಲೇ ನೋವುಂಡ ರಾಮಾಚಾರಿ ಹೀರೋ! ರಿತ್ವಿಕ್‌ಗಾದ ಅವಮಾನ ಏನು?

ತ್ರಿಪುರ ಸುಂದರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಜನವರಿ 2 ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದ್ದೂರಿಯಾಗಿ ಈ ಧಾರಾವಾಹಿ ಮೂಡಿಬರುತ್ತಿದ್ದು ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ಧಾರಾವಾಹಿ ಹೇಗಿರಲಿದೆ, ರೇಖಾ ಕಿರುತೆರೆ ಪ್ರೇಕ್ಷಕರ ಹೃದಯ ಗೆಲ್ಲುತ್ತಾರಾ ಕಾದು ನೋಡಬೇಕಿದೆ. 


 

Follow Us:
Download App:
  • android
  • ios