ರಾಮಾಚಾರಿ ಸೀರಿಯಲ್ ಸಡನ್ ಶಾಕ್ ಕೊಟ್ಟಿದೆ. ಈ ಕ್ಷಣದವರೆಗೂ ಬದ್ಧ ವೈರಿಗಳಾಗಿ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ರಾಮಾಚಾರಿ ಮತ್ತು ಚಾರುಲತಾ ಮದುವೆ ಆಗ್ತಿದ್ದಾರೆ. ನಾಳೆಯೇ ಮದುವೆಯಂತೆ. ಲಗ್ನಪತ್ರಿಕೆಯೂ ರೆಡಿಯಾಗಿದೆ. ಮುಂದಿನ ಕತೆಯ ಬಗ್ಗೆ ಕುತೂಹಲ ಹೆಚ್ಚಿದೆ.
ರಾಮಾಚಾರಿ ಸೀರಿಯಲ್ ಬಹಳ ಇಂಟರೆಸ್ಟಿಂಗ್ ಘಟ್ಟ ಬಂದು ತಲುಪಿದೆ. ಚಾರುಲತಾಗೆ ಕಂಪನಿಯ ಅಧಿಕಾರ ಕೊಡಬೇಕು ಅಂದರೆ ರಾಮಾಚಾರಿಯಿಂದ ಅವಳು ಪ್ರಮಾಣ ಪತ್ರ ತರಬೇಕು. ನಿಷ್ಠಾವಂತ, ಪ್ರಾಮಾಣಿಕನಾದ ರಾಮಾಚಾರಿ ಸುಮ್ಮ ಸುಮ್ಮನೆ ಅದನ್ನೆಲ್ಲ ಕೊಡುವವನಲ್ಲ. ಈ ಸರ್ಟಿಫಿಕೇಟ್ ಪಡೆಯಲೋಸ್ಕರ ಚಾರು ಏನು ಮಾಡೋದಕ್ಕೂ ಹೇಸುತ್ತಿಲ್ಲ. ರಾಮಾಚಾರಿಯ ಹೆಸರನ್ನೇ ಕೆಡಿಸಿ ಅವನನ್ನು ಮನೆಯವರಿಂದ ದೂರ ಮಾಡಿ ಆತ ಕಂಗೆಡುವಂತಾದಾಗ ಸರ್ಟಿಫಿಕೇಟ್ ಪಡೆಯಬೇಕು ಅನ್ನೋದು ಅವಳ ಪ್ಲಾನ್. ಅದಕ್ಕೋಸ್ಕರ ಈಗ ಪ್ರೀತಿಸುವ ನಾಟಕ ಮಾಡುತ್ತಿದ್ದಾಳೆ. ತನ್ನ ಗೆಳತಿ ಸಹಾಯ ಪಡೆದು ಮುಖ ಮಾರ್ಫಿಂಗ್ ಮಾಡಿಸಿ ರಾಮಾಚಾರಿ ಮತ್ತು ಚಾರು ಲವರ್ಸ್ ಥರ ಇರುವಂಥಾ ಫೋಟೋ ಸೋಷಿಯಲ್ ಮೀಡಿಯಾದಲ್ಲೆಲ್ಲ ಓಡಾಡೋ ಹಾಗೆ ಮಾಡಿದ್ದಾಳೆ. ಇದರಿಂದ ಮನೆಯಲ್ಲಿ, ಆಫೀಸಲ್ಲಿ, ಹೋಗಿ ಬಂದಲ್ಲೆಲ್ಲ ರಾಮಾಚಾರಿ ತಲೆ ಎತ್ತದ ಹಾಗಾಗಿದೆ. ಈ ವಿಚಾರ ರಾಮಾಚಾರಿಯನ್ನು ಕಂಗೆಡಿಸಿದೆ. ಆತ ಏನು ಮಾಡಲೂ ತೋಚದೇ ನಿಂತಿದ್ದಾನೆ. ಅನಿವಾರ್ಯವಾಗಿ ಚಾರುವನ್ನೇ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾನೆ.
ಒಂದು ಹಂತದಲ್ಲಿ ಆತನಿಗೆ ಇದೆಲ್ಲ ತನ್ನ ಹಣೆ ಬರಹ ಅನಿಸಿದೆ. ವಿಚಾರಗಳ ಜೊತೆಗೆ ನಂಬಿಕೆಗಳನ್ನೂ ನಂಬುವ ಆತನಿಗೆ ಈ ಹಿಂದಿನ ಘಟನೆಗಳೆಲ್ಲ ತಲೆ ಕೆಡುವಂತೆ ಮಾಡಿದೆ. ತನ್ನ ಬಾಸ್ ಯಾವಾಗಲೂ ಚಾರುಗೂ ತನಗೂ ಮದುವೆ ಆಗುತ್ತೆ, ಭವಿಷ್ಯ ಯಾವತ್ತೂ ಸುಳ್ಳಾಗಲ್ಲ ಅಂತ ಹೇಳ್ತಾ ಇದ್ದಿದ್ದು, ಚಾರು ತಂದೆ ಜೈ ಶಂಕರ್ ಸಂಸ್ಕಾರ (Culture) ಕಲಿಕೆಯ ನೆವದಲ್ಲಿ ತಮ್ಮ ಮಗಳನ್ನು ರಾಮಾಚಾರಿ ಮನೆಯಲ್ಲಿ ಬಿಟ್ಟದ್ದು, ತಂದೆಗೆ ಮುಂಜಾವದಲ್ಲೇ ತನ್ನ ಹಾಗೂ ಚಾರು ಮದುವೆ (Wedding) ನಡೆಯುವಂತೆ ಕನಸು ಬಿದ್ದಿದ್ದು, ಇದನ್ನೇ ಅವರು ಸತ್ಯವೆಂದು ನಂಬಿದ್ದು, ಇದಕ್ಕೆ ಸರಿಯಾಗಿ ಸರ್ಟಿಫಿಕೇಟ್ ದೊರಕಿಸಿಕೊಳ್ಳುವ ಭರದಲ್ಲಿ ಚಾರುವಿನ ವರ್ತನೆ ಬದಲಾದದ್ದು, ಅವಳು ತನ್ನನ್ನು ಪ್ರೀತಿಸುತ್ತಿರುವ ಹಾಗೆ ವರ್ತಿಸುತ್ತಿರೋದು, ಜೊತೆಗೆ ತಮ್ಮಿಬ್ಬರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿಯಬಿಡ್ತಿರೋದು ಇವೆಲ್ಲ ಆತನಿಗೆ ಒಂದಕ್ಕೊಂದು ಲಿಂಕ್ ಇರುವ ಹಾಗೆ ಕಾಣ್ತಿದೆ. ಈ ಹಿನ್ನೆಲೆಯಲ್ಲಿ ಆತ ಒಂದು ನಿರ್ಧಾರಕ್ಕೆ ಬರುತ್ತಾನೆ.
ಕನ್ನಡತಿ : ಜಗಳವಾಡಿಕೊಂಡ ಹರ್ಷ ಭುವಿ, ಹರ್ಷನಿಗೆ ನೆಟ್ಟಿಗರ ಕ್ಲಾಸ್
ತನ್ನ ಹಣೆಬರಹದಲ್ಲಿ (Fae) ಚಾರುವನ್ನು ಮದುವೆ ಆಗಲೇ ಬೇಕು ಅಂತಿದ್ದರೆ ಅದನ್ನು ಯಾರೂ ಬದಲಾಯಿಸಲು ಆಗೋದಿಲ್ಲ. ತನ್ನ ಹಠ, ಸಿಟ್ಟು ಎಲ್ಲ ಹಣೆಬರಹದ ಮುಂದೆ ವ್ಯರ್ಥ. ತಾನೆಷ್ಟು ಪ್ರಯತ್ನಪಟ್ಟರೂ ಹಣೆಬರಹ ಬದಲಾಯಿಸೋದಕ್ಕಾಗಲ್ಲ ಅನ್ನುವ ಅರಿವು ಆತನಿಗಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮಾಚಾರಿ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾನೆ. 'ಚಾರುಲತಾ ವೆಡ್ಸ್ ರಾಮಾಚಾರಿ' ಅನ್ನೋ ಬೋರ್ಡ್ ನಾಳೆ ರಾಮಾಚಾರಿ ತಂದೆ ಪೂಜೆ ಮಾಡುವ ದೇವಸ್ಥಾನದಲ್ಲೇ ಪ್ರತಿಷ್ಠಾಪಿತವಾಗಲಿದೆ. ತನ್ನ ಹಾಗೂ ಚಾರುಲತಾಳ ಮದುವೆಯ ಲಗ್ನಪತ್ರಿಕೆಯನ್ನೂ ಆಗ ಪ್ರಿಂಟ್ ಮಾಡಿಸಿದ್ದಾನೆ. ಜೈ ಶಂಕರ್ ಮಗಳ ಜೊತೆಗೆ ತನ್ನ ಹೆಸರು ಹಾಕಿಸಿಕೊಂಡಿರುವ ರಾಮಾಚಾರಿ ಬಗ್ಗೆ ಪ್ರಿಟಿಂಗ್ ಮಾಡುವವರಿಗೂ ಅನುಮಾನ ಬರುತ್ತದೆ.
ರಾಮಾಚಾರಿ ಮೊದಲ ಲಗ್ನ ಪತ್ರಿಕೆಯನ್ನು ತನ್ನ ತಂದೆ ನಾರಾಯಣ ಶಾಸ್ತ್ರಿಗಳ ಪಾದದ ಬುಡದಲ್ಲೇ ಇಟ್ಟಿದ್ದಾನೆ. ತನ್ನ ಪಾಲಿಗೆ ಮನೆಯೇ ದೇವಸ್ಥಾನ ತಂದೆಯೇ ದೇವರು ಅನ್ನುವುದು ಅವನ ನಂಬಿಕೆ. ಹೀಗಾಗಿ ತಂದೆಯ ಮುಂದೆಯೇ ತನ್ನ ಭಿನ್ನಹ ತೋಡಿಕೊಂಡು ಲಗ್ನಪತ್ರಿಕೆ ಇಟ್ಟಿದ್ದಾನೆ. ಆಘಾತಗೊಂಡಿರುವ ಮನೆಯವರಿಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಸೀರಿಯಲ್‌ನ ಈ ಪಾತ್ರ ಕಂಡ್ರೆ ಕೆಲವ್ರಿಗೆ ಕೆಂಡದಂಥಾ ಕೋಪ!
ಇನ್ನೊಂದು ಕಡೆ ಚಾರುಲತಾ ತಂದೆ ಜೈ ಶಂಕರ್ ತನ್ನ ಮೊದಲ ಪತ್ನಿ ಮಾನ್ಯತಾಗೆ ಡಿವೋರ್ಸ್ ಕೊಡುತ್ತಿದ್ದಾನೆ. ಈವರೆಗೆ ಆತನ ಎರಡನೇ ಪತ್ನಿ ಶರ್ಮಿಳಾಗೆ ಆತ ಡಿವೋರ್ಸ್ ಕೊಡ್ತಿದ್ದಾನೆ ಅಂತ ಮಾನ್ಯತಾ ತಿಳಿದುಕೊಂಡಿದ್ದಳು. ಶರ್ಮಿಳಾನೂ ತಾನು ಜೈ ಶಂಕರ್‌ನಿಂದ ದೂರ ಆಗ್ತಿರೋದಕ್ಕೆ ದುಃಖದಲ್ಲಿದ್ದಳು. ಆದರೆ ಜೈ ಶಂಕರ್ ತಾನು ಡಿವೋರ್ಸ್ ಕೊಡ್ತಿರೋದು ಮಾನ್ಯತಾಗೆ ಅಂತ ಹೇಳಿದ್ದು ಮಾನ್ಯತಾಗೆ ಶಾಕ್ ತಂದಿದೆ.
ಹೀಗೆ ಎಲ್ಲ ಕಡೆಯಿಂದಲೂ ಈ ಸೀರಿಯಲ್ ರೋಚಕ ಘಟ್ಟ ತಲುಪುತ್ತಿದೆ. ಕನ್ನಡತಿ ಮದುವೆ ಮುಗಿದ ಮೇಲೆ ಆ ಮದುವೆಯನ್ನ ನಡೆಸಿದ ರಾಮಾಚಾರಿಗೇ ಮದುವೆ ನಡೀತಿದೆ. ರಿತ್ವಿಕ್ ಕೃಪಾಕರ್ ರಾಮಾಚಾರಿಯಾಗಿ, ಮೌನಾ ಗುಡ್ಡೆಮನೆ ಚಾರುಲತ ಪಾತ್ರದಲ್ಲಿ, ಗುರುದತ್ತ್ ಜೈ ಶಂಕರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
