ಚಿತ್ಕಲಾಗೀಗ 50K ಫ್ಯಾನ್ಸ್! ಖುಷಿ ಹಂಚಿಕೊಂಡ ಕನ್ನಡತಿ ಅಮ್ಮಮ್ಮ!
ಕನ್ನಡತಿಯ ಅಮ್ಮಮ್ಮ, ರತ್ನಮ್ಮ, ರತ್ನಮಾಲಾ, ಮೇಡಂ.. ಹೀಗೆ ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳುವ ಚೀತ್ಕಳಾ ಬಿರಾದಾರ್‌ಗೆ ಈಗ ಇನ್‌ಸ್ಟಾಗ್ರಾಮ್ ಒಂದರಲ್ಲೇ ೫೦,೦೦೦ ಜನ ಫಾಲೋವರ್ಸ್ ಸಿಕ್ಕಿದ್ದಾರೆ. ಸೀರಿಯಲ್ ಹೀರೋ, ಹೀರೋಯಿನ್‌ಗೆ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇರ್ತಾರೆ. ಆದರೆ ಪೋಷಕ ನಟಿಗೆ ಈ ಮಟ್ಟಿನ ಜನಪ್ರಿಯತೆ ಸಿಗೋದು ಅಪರೂಪ.
ಚೀತ್ಕಳಾ ಬಿರಾದಾರ್ ಸದ್ಯಕ್ಕೀಗ 'ಕನ್ನಡತಿ' ಸೀರಿಯಲ್‌ನ ಅಮ್ಮಮ್ಮ ಅಂತಲೇ ಫೇಮಸ್. ಅವರು ಈ ಸೀರಿಯಲ್‌ನಲ್ಲಿ ಸಕ್ರಿಯವಾಗಿದ್ದಾಗ ಜನ ಅವರ ಅಭಿನಯ ಮೆಚ್ಚಿ ಕಮೆಂಟ್ ಮಾಡುತ್ತಿದ್ದರು. ಇದೀಗ ಅವರು ತಾತ್ಕಾಲಿಕವಾಗಿ ಸೀರಿಯಲ್‌ನಿಂದ ಬ್ರೇಕ್ ಪಡೆದಿದ್ದಾರೆ. ಈಗ ಅವರ ಅನುಪಸ್ಥಿತಿಯನ್ನು ಪ್ರೇಕ್ಷಕರು ಹೆಚ್ಚೆಚ್ಚು ಫೀಲ್ ಮಾಡುತ್ತಿದ್ದಾರೆ. ಅಮ್ಮಮ್ಮ ಬೇಗ ಬನ್ನಿ ಅನ್ನುವ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಇದೀಗ ಚೀತ್ಕಳಾ ಬಿರಾದಾರ್ ಅವರ ಅಭಿಮಾನಿಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇನ್‌ಸ್ಟಾಗ್ರಾಮ್ ಒಂದರಲ್ಲೇ ಅವರಿಗೆ 50,000 ಜನ ಫಾಲೋವರ್ಸ್ ಆಗಿದ್ದಾರೆ. ಅರ್ಧ ಲಕ್ಷ ಜನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಅಮ್ಮಮ್ಮ. ಈ ಅಭಿಮಾನಿಗಳೀಗ ಕನ್ನಡತಿಯಲ್ಲಿ ಅಮ್ಮಮ್ಮ ವಾಪಾಸ್ ಬರೋದನ್ನೇ ಎದುರು ನೋಡುತ್ತಿದ್ದಾರೆ. ಚೀತ್ಕಳಾ ಬಿರಾದಾರ್ ಅಭಿನಯ ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಮನೆಮಾತಾಗಿದೆ. ಇದರಿಂದ ಅವರು ಸದ್ಯ ಅಮೇರಿಕಾದಲ್ಲಿದ್ದರೂ ಇಲ್ಲಿನ ಅಭಿಮಾನಿಗಳಿಗೆ ಒಂದಿಲ್ಲೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಆ ಮೂಲಕ ನಟಿ ಹಾಗೂ ಅಭಿಮಾನಿಗಳ ಕೊಂಡಿ ಮುಂದುವರಿದಿದೆ.
ಕನ್ನಡತಿ ಸೀರಿಯಲ್ (Kannada Serial) ನಲ್ಲಿ ನಾಯಕ ಹರ್ಷನ ತಾಯಿ ರತ್ನಮಾಲಾ ಪಾತ್ರವನ್ನು ಚೀತ್ಕಳಾ ಬಿರಾದಾರ್ ನಿರ್ವಹಿಸುತ್ತಿದ್ದಾರೆ. ಆಕೆ ಸ್ವಂತ ಶ್ರಮದಿಂದ 'ಮಾಲಾ ಕೆಫೆ' ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಸಣ್ಣ ಕಾಫಿ ಶಾಪ್ ಆಗಿ ಓಪನ್ ಆದ ಮಾಲಾ ಕೆಫೆ ಇದೀಗ ದೊಡ್ಡ ಜಾಲವಾಗಿ ಬೆಳೆದಿದೆ. ಅದರ ಹಿಂದಿರುವುದು ರತ್ನಮಾಲಾ ದೂರದೃಷ್ಟಿ, ಜಾಣ್ಮೆ, ಪರಿಶ್ರಮ ಮತ್ತು ಪ್ರಾಮಾಣಿಕತೆ. ಪ್ರತೀ ಸಮಸ್ಯೆಯನ್ನೂ ರತ್ನಮಾಲಾ ಡೀಲ್ ಮಾಡುವ ರೀತಿಯಲ್ಲೇ ಆ ಪಾತ್ರದ ವ್ಯಕ್ತಿತ್ವ ತಿಳಿಯುತ್ತದೆ. ಆಕೆ ಸಂಪಾದಿಸಿದ ಆಸ್ತಿ ಮಾಲಾ ಕೆಫೆ ಮಾತ್ರ ಅಲ್ಲ, ತುಂಬು ಸಂಸಾರ. ಮಾಲಾಳ ಗಂಡನ ತಮ್ಮನ ಸಂಸಾರವನ್ನೂ ಈಕೆಯೇ ಸಲಹಿ ಆತನ ಮಕ್ಕಳನ್ನು ಓದಿಸಿ ಅವರು ಮುಖ್ಯಹುದ್ದೆಗೆ ಏರುವಂತೆ ಮಾಡಿದ್ದಾಳೆ. ಅವರ ಮದುವೆಯನ್ನೂ ಮಾಡಿದ್ದಾಳೆ. ಹೀಗೆ ತನ್ನ ಸಂಸಾರವನ್ನೂ, ಉದ್ಯಮವನ್ನು ಜಾಣ್ಮೆಯಿಂದ ಸರಿದೂಗಿಸಿಕೊಂಡು ಹೋಗುವ ಆದರ್ಶ ಮಹಿಳೆ ಪಾತ್ರ ಆಕೆಯದು. ಇಲ್ಲಿ ಆಕೆ ಆಡುವ ಪ್ರತೀ ಮಾತು ಎಲ್ಲರ ಬದುಕಿಗೂ ಪಾಠದ ಹಾಗಿದೆ. ಹೀಗಾಗಿಯೇ ಈ ಪಾತ್ರ ಹೆಚ್ಚು ಜನರಿಗೆ ಕನೆಕ್ಟ್ ಆಗುತ್ತಾ ಹೋಗುತ್ತದೆ.
ಬಾಡಿಗೆ ಕಟ್ಟಲಿಕ್ಕಾಗದೇ ಬಾಂಬೆ ಬಿಟ್ಟು ಬೆಂಗಳೂರಿಗೆ ಬಂದವಳೀಗ ಸೀರಿಯಲ್ ನಾಯಕಿ
ಇನ್ನೊಂದೆಡೆ ತನ್ನೂರು ಹಸಿರು ಪೇಟೆಯ ಹುಡುಗಿ ಭುವಿಯೇ ತನ್ನ ಆಸ್ತಿಗೆ ವಾರಸುದಾರಳು ಅಂತ ಮಾಲಾಗೆ ಅನಿಸಿಬಿಟ್ಟಿದೆ. ತನ್ನ ಸಮಸ್ತ ಆಸ್ತಿಯನ್ನೂ ಅವಳಿಗೆ ಧಾರೆಯೆರೆದು ಅವಳನ್ನೇ ತನ್ನ ಮಗ ಹರ್ಷನಿಗೆ ಮದುವೆ ಮಾಡಿಸಿದ್ದಾರೆ ರತ್ನಮಾಲಾ. ಜಾಣ್ಮೆ, ವಿವೇಕದಲ್ಲಿ ರತ್ನಮ್ಮನ ಪಡಿಯಚ್ಚಿನಂತೆ ಕಾಣುವ ಭುವಿ ಇನ್ನು ಮೇಲೆ ರತ್ನಮ್ಮನ ಆಸ್ತಿಗೆ ವಾರಸುದಾರಿಣಿ. ಇಂಥಾ ಹೊತ್ತಲ್ಲಿ ಅನಾರೋಗ್ಯದ ಕಾರಣ ಹೇಳಿ ರತ್ನಮ್ಮ ನಿರ್ಗಮಿಸಿದ್ದಾರೆ. ಅವರು ಅಮೆರಿಕಾದಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ ಎಂದು ಬಿಂಬಿಸಲಾಗಿದೆ. ಆದರೆ ಅಗತ್ಯ ಬಿದ್ದಾಗ ಫೋನಲ್ಲಿ ಅವರು ಫ್ಯಾಮಿಲಿ ಜೊತೆಗೆ ಮಾತಾಡುತ್ತಾರೆ.
Hitler Kalyana: ಅಂಗೈಯಲ್ಲಿ ಕರ್ಪೂರ ಇಟ್ಟು ಆರತಿ ಮಾಡಿದ ಲೀಲಾ! ಇವಳು ಎಜೆ ಪ್ರಾಣವನ್ನೂ ಕಾಪಾಡಿದ್ದು ಹೇಗೆ?
ಇತ್ತ ಅಮ್ಮಮ್ಮ ಪಾತ್ರಧಾರಿ ಚೀತ್ಕಳಾ ನಿಜಕ್ಕೂ ಅಮೆರಿಕಾಕ್ಕೆ ವೆಕೇಶನ್ ಮೇಲೆ ತೆರಳಿದ್ದಾರೆ. ಜೊತೆಗೆ ಅವರ 30ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನೂ ಅಮೆರಿಕಾದಲ್ಲಿ ಆಚರಿಸಿದ್ದಾರೆ. ಅವರ ಇಬ್ಬರು ಮಕ್ಕಳೂ ಅಮೆರಿಕಾದಲ್ಲಿದ್ದಾರೆ. ಕೋವಿಡ್ ಸಮಯದಲ್ಲಿ ಮಕ್ಕಳನ್ನು ನೋಡಲಾಗದ ಚೀತ್ಳಳಾ ಇದೀಗ ವೀಸಾ ಸಿಕ್ಕಿದ್ದೇ ಸ್ಟೇಟ್ಸ್‌ಗೆ ತೆರಳಿದ್ದಾರೆ. ಅಲ್ಲಿನ ಟೂರಿಸ್ಟ್ ಜಾಗಗಳನ್ನು ವೀಡಿಯೋ ಮಾಡಿ ಇನ್‌ಸ್ಟಾಗೆ ಅಪ್‌ಲೋಡ್ ಮಾಡುತ್ತಿರುತ್ತಾರೆ. ತನ್ನ ಅಭಿಮಾನಿಗಳ ಜೊತೆಗೆ ಇನ್‌ಸ್ಟಾ ಲೈವ್‌ನಲ್ಲೂ ಮಾತಾಡ್ತಾರೆ. ಮೂರು ತಿಂಗಳ ವೆಕೇಶನ್ ಬಳಿಕ ಅವರು ಮತ್ತೆ ಕನ್ನಡತಿಯಲ್ಲಿ ಪ್ರತ್ಯಕ್ಷವಾಗಲಿದ್ದಾರೆ. ಆದರೆ ಪ್ರೇಕ್ಷಕರು ವೆಕೇಶನ್ ಸಾಕು, ನಮಗೆ ಅಮ್ಮಮ್ಮ ಬೇಕು ಅಂತ ರಿಕ್ವೆಸ್ಟ್ ಮಾಡುತ್ತಲೇ ಇದ್ದಾರೆ. ಅವರ ಮೇಲಿನ ಅಭಿಮಾನಕ್ಕೆ ಇದಕ್ಕಿಂತ ಇನ್ನೇನು ಬೇಕು?
ವಂಶಿಕಾ ಆಯ್ತು, ಇದೀಗ ರಿತೂ ಸಿಂಗ್; ಡ್ರಾಮಾ ಜ್ಯೂನಿಯರ್ಸ್‌ನ ನೇಪಾಳಿ ಚಿನಕುರುಳಿ