ಸೀರಿಯಲ್‌ನ ಈ ಪಾತ್ರ ಕಂಡ್ರೆ ಕೆಲವ್ರಿಗೆ ಕೆಂಡದಂಥಾ ಕೋಪ!

ಜನಪ್ರಿಯ ಸೀರಿಯಲ್‌ಗಳಲ್ಲಿ ವೀಕ್ಷಕರ ಬಿ ಪಿ ಹೆಚ್ಚಿಸಲೆಂದೇ ಕೆಲವೊಂದು ಪಾತ್ರಗಳಿವೆ. ಅವುಗಳ ಎಂಟ್ರಿ ಆಗ್ತಿದ್ದಂತೇ ಹಲವರ ಮೈ ನಖಶಿಖಾಂತ ಉರಿದುಹೋಗುತ್ತೆ. ನಿಮಗೆ ಇರಿಟೇಟ್‌ ಮಾಡೋ ಪಾತ್ರಗಳು ಯಾವುವು?

 

which kannada serial characters make people feel more angry

ಕನ್ನಡ ಸೀರಿಯಲ್‌ನಲ್ಲಿ ಕೆಲವೊಂದು ಪಾತ್ರಗಳಿವೆ. ಅವು ಅಡಿಯಿಂದ ಮುಡಿಯವರೆಗೂ ಕೆಟ್ಟತನವೇ ತುಂಬಿಕೊಂಡಿರುವ ಪಾತ್ರಗಳೇನಲ್ಲ, ಆದರೂ ಆ ಪಾತ್ರಗಳು ಬರ್ತಿದ್ದ ಹಾಗೆ ಜನ ಮೈ ಕೈ ಪರಚಿಕೊಳ್ಳೋದೊಂದು ಬಾಕಿ ಇರುತ್ತೆ. ಸೋಷಿಯಲ್ ಮೀಡಿಯಾದಲ್ಲಂತೂ ಆ ಪಾತ್ರಗಳಿಗೆ ಯಥೇಚ್ಛ ಬೈಗಳು ಮಿಸ್ಸಾಗೋದೇ ಇಲ್ಲ. ವೀಕ್ಷಕರನ್ನು ಕೆಣಕಲೆಂದೇ ಇಟ್ಟಿರುವ ಅಂಥಾ ಕೆಲವು ಪಾತ್ರಗಳು ಇಲ್ಲಿವೆ. 

1. ಕನ್ನಡತಿಯ ವರೂಧಿನಿ (kannadathi) 
ಕಳೆದೆರಡು ವಾರಗಳ ಕೆಳಗೆ ಈಕೆಯ ಮನೆ ಅಡ್ರೆಸ್ ಗೊತ್ತಿದ್ದಿದ್ರೆ ಜನ ನೇರ ಮನೆಗೇ ಹೋಗಿ ಆವಾಜ್ ಹಾಕಿ ಬರ್ತಿದ್ರೇನೋ? 'ಕನ್ನಡತಿ' ಸೀರಿಯಲ್‌ನಲ್ಲಿ ಹರ್ಷನನ್ನು ಭುವಿಯಿಂದ ಹೇಗಾದ್ರೂ ದೂರ ಮಾಡಿ ತಾನು ಹರ್ಷನನ್ನು ಮದುವೆ ಆಗ್ಬೇಕು ಅಂತ ಈ ಪಾತ್ರ ಮಾಡಿದ ಡ್ರಾಮಾ ಅಷ್ಟಿಷ್ಟಲ್ಲ. ಇವಳ ಕಾರಣಕ್ಕೆ ಹರ್ಷ-ಭುವಿ ಮದುವೆ ಆಸ್ಪತ್ರೆಯಲ್ಲೇ ನಡೆಯೋ ಹಾಗಾಯ್ತು. ಅವ್ರಿಬ್ರ ಮದುವೆ ಆದರೂ ಈಗ ಮದುವೆಯನ್ನು ಹೇಗಾದರೂ ಮುರಿಯಬೇಕು ಅಂತ ಸ್ಕೆಚ್‌ ಹಾಕ್ತಿದ್ದಾಳೆ ವರೂ. ಹಾಗಂತ ಈಕೆ ಕೆಟ್ಟವಳಾ ಅಂದ್ರೆ ಅಲ್ಲ, ತನ್ನ ಸ್ನೇಹಿತೆ ಭುವಿಯ ಪ್ರಾಣ ಉಳಿಸಿದವಳು. ಆಕೆಯ ಸಾಲ ತೀರಿಸಿದವಳು. ಆದರೆ ಹರ್ಷನನ್ನು ಪಡೆಯಬೇಕೆಂಬ ಹಠ ಅವಳನ್ನು ಕೆಟ್ಟವಳನ್ನಾಗ್ತಿಸ್ತಿದೆ. ಇದು ಪ್ರೇಕ್ಷಕರನ್ನು ಉರಿಸ್ತಿದೆ. ಸಾರಾ ಅಣ್ಣಯ್ಯ ಈ ಪಾತ್ರವನ್ನು ಅಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ನಟನೆಯ ಹಿನ್ನೆಲೆಯಿಲ್ಲದ ಈ ಹುಡುಗಿ ಈಗ ಅದ್ಭುತ ನಟಿಯಾಗಿ ಹೊರಹೊಮ್ಮಿದ್ದಾರೆ. 

ಬಾಡಿಗೆ ಕಟ್ಟಲಿಕ್ಕಾಗದೇ ಬಾಂಬೆ ಬಿಟ್ಟು ಬೆಂಗಳೂರಿಗೆ ಬಂದವಳೀಗ ಸೀರಿಯಲ್ ನಾಯಕಿ

2. ಸತ್ಯಾ ಸೀರಿಯಲ್‌ನ ಕಾರ್ತಿಕ್ (satya serial)
ಈತನ ಪಾತ್ರವನ್ನು ತಂದ ರೀತಿಯೇ ಪ್ರೇಕ್ಷಕರಿಗೆ ಕನ್ವಿಸಿಂಗ್ ಆಗಿಲ್ಲ. ಸದಾ ಹರಳೆಣ್ಣೆ ಕುಡಿದವನ ಹಾಗೆ ಮುಖ ಮಾಡಿಕೊಂಡಿರುವ ಈತ ಯಾವಾಗಲೂ ನಾಯಕಿ ಸತ್ಯಾ ಮೇಲೆ ಕೋಪ ತೋರಿಸುತ್ತಲೇ ಇರುತ್ತಾನೆ. ಆತ ತಾನು ದಿವ್ಯಾಳನ್ನು ಪ್ರೀತಿಸಿದ್ದೀನಿ ಅಂತ ಪದೇ ಪದೇ ಹೇಳ್ತಿದ್ರೂ ಆತನಿಗೆ ಸತ್ಯಾ ಅಕ್ಕ ದಿವ್ಯಾ ಮೇಲೆ ಪ್ರೀತಿಯಾದದ್ದಕ್ಕೆ ಯಾವ ಸಾಕ್ಷಿಯೂ ಇಲ್ಲ. ಸದಾ ತನ್ನ ವಿರುದ್ಧ ಸತ್ಯ ಸಂಚು ಮಾಡ್ತಿದ್ದಾಳೆ ಅನ್ನೋ ಸಂಶಯದಲ್ಲೇ ಇರುವ ಈತನ ಪಾತ್ರವೇ ಜನರಿಗೆ ಇಷ್ಟವಾಗ್ತಿಲ್ಲ. ಆರಂಭದಲ್ಲಿ ಸತ್ಯಾ ಪಾತ್ರವನ್ನು ವಿಭಿನ್ನವಾಗಿ ತಂದದ್ದಕ್ಕೆ ಇಷ್ಟ ಪಟ್ಟ ಜನ ಈತ ಮತ್ತು ಸತ್ಯಾ ನಡುವೆ ನಡೀತಿರೋ ವಿಪರೀತ ಡ್ರಾಮಾ ನೋಡಲಾಗದೇ ರೋಸಿ ಹೋಗಿದ್ದಾರೆ. ಅವರಿಗೆ ಸತ್ಯಾಳನ್ನು ಹಿಂದಿನ ಟಾಮ್ ಬಾಯ್ ಲುಕ್‌ನಲ್ಲಿ ನೋಡೋದಕ್ಕೇ ಇಷ್ಟ. ಈಗಿನ ಥರ ಸೀರೆ ಉಟ್ಟ ಗರತಿ ಗೌರಮ್ಮ ಲುಕ್ ಈ ಪಾತ್ರಕ್ಕೆ ಸೂಟ್‌ ಆಗೋದೇ ಇಲ್ಲ ಅನ್ನೋದು ಅವರ ಕಂಪ್ಲೇಂಟು.

Hitler Kalyana: ಅಂಗೈಯಲ್ಲಿ ಕರ್ಪೂರ ಇಟ್ಟು ಆರತಿ ಮಾಡಿದ ಲೀಲಾ! ಇವಳು ಎಜೆ ಪ್ರಾಣವನ್ನೂ ಕಾಪಾಡಿದ್ದು ಹೇಗೆ?

3. ರಾಮಾಚಾರಿ ಸೀರಿಯಲ್‌ನ ಚಾರು (Ramachari) 
ಶ್ರೀಮಂತ ಉದ್ಯಮಿಯ ಮಗಳು ಅನ್ನೋ ಸೊಕ್ಕಿನಲ್ಲಿ ಹಾರಾಡುವ ಹುಡುಗಿ ಪಾತ್ರ ಚಾರುಲತಾದು. ಈ ಪಾತ್ರವನ್ನು ಮೌನಾ ಗುಡ್ಡೆಮನೆ ನಿರ್ವಹಿಸುತ್ತಿದ್ದಾರೆ. ಒಂಚೂರು ಒಳ್ಳೆತನ ಇದ್ದರೂ ಸ್ವಾರ್ಥವೇ ಹೆಚ್ಚಾಗಿರೋ ಈ ಪಾತ್ರದ ಬಗ್ಗೆ ಜನರಿಗೆ ಸಿಟ್ಟೂ ಇದೆ, ಪ್ರೀತಿಯೂ ಇದೆ. ಆದಷ್ಟು ಬೇಗ ರಾಮಾಚಾರಿ ಈಕೆಗೆ ಪಾಠ ಕಲಿಸಿ ಸೊಕ್ಕಿಳಿಸಬೇಕು, ಸರಿದಾರಿಗೆ ತರಬೇಕು ಅಂತ ಜನ ಕಾಯ್ತಿದ್ದಾರೆ. ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಸದ್ಯಕ್ಕೀಗ ಚಾರುವಿಗೆ ರಾಮಾಚಾರಿಯಿಂದ ಅವಳ ಕೆಲಸಕ್ಕೆ ಒಳ್ಳೆ ರಿಪೋರ್ಟ್ ಸಿಗಬೇಕಿದೆ. ಅದನ್ನು ತನ್ನ ಕೆಲಸದಿಂದ ಸಂಪಾದಿಸದೇ ಬೇರೆ ದಾರಿ ಹಿಡಿದಿದ್ದಾಳೆ ಚಾರು. ಮತ್ತೆ ರಾಮಾಚಾರಿ ಮನೆಯ ನೆಮ್ಮದಿ ಕದಡಿ ಆ ಮೂಲಕ ರಾಮಾಚಾರಿಯಿಂದ ಸರ್ಟಿಫಿಕೇಟ್ ತಗೊಳ್ಳಬೇಕು ಅನ್ನೋ ಇರಾದೆಯಲ್ಲಿ ಅವಳಿದ್ದಾಳೆ. 

ಇಂಥಾ ಕೆಲವೊಂದು ಪಾತ್ರಗಳಿವೆ. ಇವು ವಿಲನ್‌ ಪಾತ್ರಗಳಾ ಅಂದರೆ ಅಲ್ಲ, ಹಾಗಿದ್ರೆ ಒಳ್ಳೆಯವ್ರಾ ಅಂದರೆ ಅದೂ ಅಲ್ಲ. ಪರಿಸ್ಥಿತಿಯಿಂದ ಕೆಟ್ಟವರಾಗುವ ಪಾತ್ರಗಳಿವು. ಆದರೆ ಹೆಚ್ಚಿನ ಸೀರಿಯಲ್‌ ವೀಕ್ಷಕರಿಗೆ ವಿಲನ್‌ಗಳಿಗಿಂತಲೂ ಮುಳ್ಳಿನಂತೆ ಚುಚ್ಚುವ ಇಂಥಾ ಪಾತ್ರ ಕಂಡರೇ ಕೆಂಡದಂಥಾ ಕೋಪ. ಈ ಪಾತ್ರ ಮಾಡೋದೂ ಚಾಲೆಂಜಿಂಗ್. ಹೀರೋಯಿನ್ ಹಾಗೂ ವಿಲನ್ ಮಧ್ಯೆ ಬರುವ ಇಂಥಾ ಪಾತ್ರಗಳನ್ನು ಮಾಡುವ ನಟಿ ನಟರಿಗೆ ನಟನೆಯ ಎಬಿಸಿಡಿ ಗೊತ್ತಿರಲೇ ಬೇಕು. 

ವಂಶಿಕಾ ಆಯ್ತು, ಇದೀಗ ರಿತೂ ಸಿಂಗ್; ಡ್ರಾಮಾ ಜ್ಯೂನಿಯರ್ಸ್‌ನ ನೇಪಾಳಿ ಚಿನಕುರುಳಿ
 

Latest Videos
Follow Us:
Download App:
  • android
  • ios