ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಗುಟ್ಟಾಗಿ ವಿಚ್ಛೇದನ ಪಡೆದಿದ್ದು, ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ವಿಚ್ಛೇದನದ ಕಾರಣ ತಿಳಿದಿಲ್ಲ. ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡ ಚಂದನ್, ನಿವೇದಿತಾ ಅವರನ್ನು ಟೀಕಿಸದಂತೆ ನೆಟ್ಟಿಗರಿಗೆ ಮನವಿ ಮಾಡಿದ್ದಾರೆ. ಸೆಲೆಬ್ರಿಟಿ ಜೀವನದಲ್ಲಿ ಇಂತಹ ವಿಷಯಗಳು ಸಾಮಾನ್ಯ ಎಂದು ಅವರು ಹೇಳಿದ್ದಾರೆ.
ಪರಸ್ಪರ ಒಪ್ಪಂದದ ಮೇರೆಗೆ ಯಾವುದೇ ಗಲಾಟೆ ಮಾಡಿಕೊಳ್ಳದೇ, ವಿವಾದಕ್ಕೂ ಆಸ್ಪದ ಕೊಡದೇ ಗುಟ್ಟಾಗಿ ಇಬ್ಬರೂ ಕೈಹಿಡಿದು ಕೋರ್ಟ್ಗೆ ಹೋಗಿ ಡಿವೋರ್ಸ್ ಪಡೆದು ಮೆಲ್ಲಗೇ ಬಂದವರು ಬಿಗ್ಬಾಸ್ನ ಮಾಜಿ ಜೋಡಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ಅಲ್ಲಿ ಮಾಧ್ಯಮದವರೊಬ್ಬರ ಕಣ್ಣಿಗೆ ಈ ಜೋಡಿ ಬೀಳದೇ ಹೋಗಿದ್ದರೆ, ಇವರು ಡಿವೋರ್ಸ್ ಪಡೆದಿದ್ದು ಗೊತ್ತೇ ಆಗುತ್ತಿರಲಿಲ್ಲ. ಈ ಸುದ್ದಿ ವೈರಲ್ ಆಗುತ್ತಲೇ ಇದು ನಿಜವೋ, ಸುಳ್ಳೋ ಎಂದು ಇಂಟರ್ನೆಟ್ನಲ್ಲಿ ಅಭಿಮಾನಿಗಳು ತಡಕಾಡುವಷ್ಟರಲ್ಲಿಯೇ ಜೋಡಿ ಡಿವೋರ್ಸ್ ಪಡೆದು ಬಂದಾದಾಗಿತ್ತು. ಇದರಿಂದ ಈ ಡಿವೋರ್ಸ್ ಭಾರಿ ಸದ್ದು, ಸುದ್ದಿ ಮಾಡುತ್ತಲೇ ಯಾಕೆ ಯಾಕೆ ಎನ್ನುವ ಪ್ರಶ್ನೆ ಹುಟ್ಟುಹಾಕಿತ್ತು, ಈಗಲೂ ಇದು ಸೀಕ್ರೇಟ್ ಆಗಿಯೇ ಉಳಿದಿದೆ.
ಅದೇ ಇನ್ನೊಂದೆಡೆ, ಇಬ್ಬರೂ ತಮ್ಮ ತಮ್ಮ ಲೋಕದಲ್ಲಿ ಬಿಜಿಯಾಗಿದ್ದಾರೆ. ಚಂದನ್ ಶೆಟ್ಟಿ ಸಿನಿಮಾದ ಮೇಲೆ ಕೇಂದ್ರಿತರಾಗಿದ್ದರೆ, ನಿವೇದಿತಾ ಬಿಕಿನಿ ತೊಟ್ಟು, ಚಿಕ್ಕಚಿಕ್ಕ ಡ್ರೆಸ್ ಹಾಕಿಕೊಂಡು ಹಾಟ್ ಫೋಟೋಗಳನ್ನು ವಿಡಿಯೋಗಳನ್ನು ಶೂಟ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವಲ್ಲಿ ಬಿಜಿಯಾಗಿದ್ದಾರೆ. ಅದೇ ಇನ್ನೊಂದೆಡೆ, ಅವರಿಗೆ ರಿಯಾಲಿಟಿ ಷೋಗಳಿಂದಲೂ ಆಫರ್ಗಳು ಬರುತ್ತಿವೆ. ಹೀಗೆ ಇಬ್ಬರೂ ತಮ್ಮ ತಮ್ಮ ಲೋಕದಲ್ಲಿ ಬಿಜಿಯಾಗಿದ್ದಾರೆ. ಆದರೆ, ಮೊದಲಿನಿಂದಲೂ ಚಂದನ್ ಶೆಟ್ಟಿ ಅವರಿಗೆ ಪಾಸಿಟಿವ್ ಕಮೆಂಟ್ಸ್ ಬರುತ್ತಿದ್ದರೆ, ನಿವೇದಿತಾ ಗೌಡಗೆ ಮಾತ್ರ ತೀರಾ ಕೆಟ್ಟದ್ದು ಎನ್ನಿಸುವ ಕಮೆಂಟ್ಸ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಅವರ ವಿಡಿಯೋಶೂಟ್ಗಳನ್ನು ನೋಡಿದ ಮೇಲಂತೂ ಅಸಭ್ಯ, ಅಶ್ಲೀಲ ಎನ್ನುವಂಥ ಕಮೆಂಟ್ಸ್ ತುಂಬಿಹೋಗುತ್ತಿವೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ನಿನ್ನನ್ನು ಬಿಟ್ಟಿದ್ದು ಎಂದೇ ಹೇಳಲಾಗುತ್ತದೆ.
ಚಂದನ್ ಶೆಟ್ಟಿಯನ್ನು ಮದ್ವೆಯಾದ ಗುಟ್ಟು ಕೊನೆಗೂ ಬಾಯ್ಬಿಟ್ಟ ನಿವೇದಿತಾ ಗೌಡ: ಅಲೆಲೆ ಹೆಣ್ಣೇ ಎಂದ ನೆಟ್ಟಿಗರು!
ಈ ಕಮೆಂಟ್ಸ್ಗಳಿಗೆ ನಟಿ ಡೋಂಟ್ ಕೇರ್ ಮಾಡದೇ ಇನ್ನಷ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಮಾಜಿ ಪತ್ನಿಯ ಕಮೆಂಟ್ಸ್ಗಳನ್ನು ನೋಡಿ ಚಂದನ್ ಶೆಟ್ಟಿ ಅವರು ತುಂಬಾ ನೊಂದುಕೊಂಡಂತೆ ಕಾಣಿಸುತ್ತಿದೆ. ಅದಕ್ಕಾಗಿ ಅವರು ನೆಟ್ಟಿಗರಿಗೆ ಕೈಜೋಡಿಸಿ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ನಿವೇದಿತಾ ಅವರಿಗೆ ಕೆಟ್ಟ ಕಮೆಂಟ್ಸ್ ಮಾಡಬೇಡಿ. ಅವರು ನನ್ನನ್ನು ಬಿಟ್ಟು ಹೋಗಿದ್ದಲ್ಲ, ನಾವಿಬ್ಬರೂ ಜೊತೆಯಾಗಿಯೇ ಈ ತೀರ್ಮಾನ ತೆಗೆದುಕೊಂಡಿರುವುದು. ಆದರೆ ಅವರನ್ನೇ ದೂಷಿಸುವುದು ಸರಿಯಲ್ಲ. ಅವರು ಅವರ ಲೈಫ್ನಲ್ಲಿ ಮುಂದುವರೆದಿದ್ದಾರೆ. ನಾವಿಬ್ಬರೂ ಬೇರೆಬೇರೆಯಾಗಿ ಮುಂದುವರೆಯುತ್ತಿದ್ದೇವೆ. ಆದರೆ ನಿವೇದಿತಾ ಅವರಿಗೆ ಕೆಟ್ಟ ಕಮೆಂಟ್ಸ್ ಮಾಡುತ್ತಿರುವುದನ್ನು ನೋಡಿದರೆ ಬೇಸರ ಆಗುತ್ತದೆ ಎಂದಿದ್ದಾರೆ.
ನ್ಯಾಷನಲ್ ಟಿವಿ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಚಂದನ್ ಶೆಟ್ಟಿ ಅವರು, ನಿಮಗೆ ನಿಮ್ಮದೇ ಆದ ಅಭಿಪ್ರಾಯಗಳು ಇರುವುದು ಸಹಜ. ಆದರೆ ಸಾಫ್ಟ್ ಆಗಿ ಕಮೆಂಟ್ ಮಾಡಿ. ತುಂಬಾ ಅಶ್ಲೀಲ ಪದ ಬಳಸಬೇಡಿ. ನನ್ನ ಮನಸ್ಸಿಗೂ ತುಂಬಾ ಬೇಜಾರಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಕ್ಯಾಂಡಿ ಕ್ರಷ್ ಸಿನಿಮಾದ ಬಳಿಕ, ನಟಿಯ ಜೊತೆ ಲಿಂಕ್ ಮಾಡಿರುವ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ ಚಂದನ್ ಶೆಟ್ಟಿ ಅವರು, ಸೆಲೆಬ್ರಿಟಿ ಲೈಫ್ ಪಬ್ಲಿಕ್ ಲೈಫ್ನಲ್ಲಿ ಇವೆಲ್ಲಾ ಕಾಮನ್. ಹಲವಾರು ಸೆಲೆಬ್ರಿಟಿಗಳ ಲೈಫ್ ನೋಡಿದ್ದೇನೆ. ಇವೆಲ್ಲಾ ಮಾಮೂಲು. ಯಾರಾದರೂ ಸೆಲೆಬ್ರಿಟಿ ಆಗಬೇಕು ಎಂದರೆ ಡೀಲ್ ಮಾಡುವುದನ್ನು, ಬದುಕುವುದನ್ನು ಕಲಿಯಬೇಕು. ಯಾರು ಬಲಿಷ್ಠ ಆಗಿರುತ್ತಾರೆಯೋ ಅವರು ಬದುಕಿ ಉಳಿಯುತ್ತಾರೆ. ಆದ್ದರಿಂದ ಇವೆಲ್ಲವೂ ಮಾಮೂಲು ಎಂದುಕೊಂಡು ಸುಮ್ಮನಾಗಿದ್ದೇನೆ ಎಂದಿದ್ದಾರೆ.
ನಿವೇದಿತಾ ಎದುರೇ ಬಾಡಿ ಬಿಲ್ಡ್ ಗುಟ್ಟು ರಟ್ಟು ಮಾಡಿದ ಚಂದನ್ ಶೆಟ್ಟಿ -ಹೊಸ ಜೀವನದ ಬಗ್ಗೆ ಹೇಳಿದ್ದೇನು?

