ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿಚ್ಛೇದನದ ನಂತರ 'ಮುದ್ದು ರಾಕ್ಷಸಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಚಿತ್ರದ ಕೊನೆಯ ದಿನದ ಶೂಟಿಂಗ್‌ನಲ್ಲಿ, ಇಬ್ಬರೂ ಭಾವುಕರಾಗಿದ್ದರು. ನಿವೇದಿತಾ ಅವರು ಚಂದನ್ ಶೆಟ್ಟಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿ, ಬೇರೆಯವರ ಅಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮಹಿಳೆಯರು ಸ್ವತಂತ್ರವಾಗಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಗ್​ಬಾಸ್​ನ ಕ್ಯೂಟ್​ ಜೋಡಿ ಎಂದೇ ಫೇಮಸ್​ ಆಗಿದ್ದ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದು ಮದ್ವೆಯಾಗಿ, ಈಗ ಮಾಜಿಗಳಾಗಿರುವುದು ಗೊತ್ತಿರುವ ವಿಷಯವೇ. ಅತ್ತ ಚಂದನ್​ ಶೆಟ್ಟಿ ತಮ್ಮ ಆಲ್ಬಂ, ಸಿನಿಮಾ ಅಂತೆಲ್ಲಾ ಬಿಜಿಯಾಗಿದ್ದರೆ, ಇತ್ತ ನಿವೇದಿತಾ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ದಿನನಿತ್ಯವೂ ರೀಲ್ಸ್​ ಮಾಡುವಲ್ಲಿ ಬಿಜಿಯಾಗಿದ್ದಾರೆ. ಒಮ್ಮೆ ಮಂಚದ ಮೇಲೆ, ಮತ್ತೊಮ್ಮೆ ಬಾತ್​ರೂಮ್​ನಲ್ಲಿ... ಹೀಗೆ ರೀಲ್ಸ್​ ಮಾಡುತ್ತಾ ತುಂಡುಡುಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನಿನ್ನೆಯಷ್ಟೇ ಈ ಜೋಡಿ ಪತ್ರಿಕಾಗೋಷ್ಠಿ ಕರೆದು ಭಾರಿ ಹಲ್​ಚಲ್​ ಸೃಷ್ಟಿಸಿತ್ತು. ಡಿವೋರ್ಸ್ ಪಡೆದು 9-10 ತಿಂಗಳಾದ ಮೇಲೆ ಒಂದಾಗಿದ್ದ ಜೋಡಿ, ʼಮುದ್ದು ರಾಕ್ಷಸಿʼ ಸಿನಿಮಾ ಶೂಟಿಂಗ್‌ಗಾಗಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಇಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರೇನೋ ಎನ್ನುವ ರೀತಿಯಲ್ಲಿ ತಬ್ಬಿಕೊಂಡು ಕಣ್ಣೀರು ಸುರಿಸುವ ದೃಶ್ಯಗಳೆಲ್ಲವೂ ನಡೆಯಿತು. 

ಇದೀಗ, ನಿವೇದಿತಾ ಗೌಡ ಅವರು ಚಂದನ್​ ಶೆಟ್ಟಿ ಅವರನ್ನು ಮದುವೆಯಾಗಿರುವ ವಿಷಯವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿವೇದಿತಾ, ಈ ಬಗ್ಗೆ ಸೂಕ್ಷ್ಮವಾಗಿ ವಿವರಣೆ ನೀಡಿದ್ದಾರೆ. ಚಂದನ್​ ಶೆಟ್ಟಿ ಅವರ ಲುಕ್​ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ನಿವೇದಿತಾ, ಡೆಫಿನೆಟ್ಲಿ ಚೆನ್ನಾಗಿದ್ದಾರೆ. ಮುಂಚೆನೂ ಚೆನ್ನಾಗಿದ್ದರು. ಅದಕ್ಕೇ ಅಲ್ವಾ ನಾನು.... ಎನ್ನುತ್ತಲೇ ಹ್ಹೆಹ್ಹೆಹ್ಹೆ ಎಂದು ನಕ್ಕಿದ್ದಾರೆ. ಅದಕ್ಕೆ ನೆಟ್ಟಿಗರು, ಅಲಲ್ಲಾ ಹೆಣ್ಣೆ... ಚೆಂದ ನೋಡಿ ಮದ್ವೆಯಾಗಿದ್ದಾ? ಮದ್ವೆಯಾದ್ಮೇಲೆ ಚೆಂದ ಹೊರಟೋಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಅದ್ಕೇ ಅಲ್ವಾ ನಾನು... ಎಂದು ನಿಂತದ್ದೇಕೆ? ಅದಕ್ಕೇ ನೀನು ಮದ್ವೆಯಾಗಿದ್ರೆ ನೆಟ್ಟಗೆ ಸಂಸಾರ ಮಾಡಬೇಕಿತ್ತು ತಾನೆ, ಈಗ ಈ ರೀತಿ ಡೌ ಮಾಡೋದು ಏಕೆ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ನಿವೇದಿತಾರ ಕಾಲೆಯುವುದು ಎಂದರೆ ನೆಟ್ಟಿಗರಿಗೆ ಇನ್ನಿಲ್ಲದ ಇಷ್ಟ. 

ಪಬ್​ಡಾನ್ಸ್​ ಇಷ್ಟ ಎನ್ನುತ್ತಲೇ ಹಾಟ್​ ಅವತಾರ ಬಿಚ್ಚಿಟ್ಟ ನಿವೇದಿತಾ ಗೌಡ: ಕಣ್ಣರಳಿಸಿ ನೋಡಿದ ನೆಟ್ಟಿಗರು!

ಅಷ್ಟಕ್ಕೂ ನಿನ್ನೆ ಅವರು ಕಾಣಿಸಿಕೊಂಡದ್ದು, 'ಮುದ್ದುರಾಕ್ಷಸಿ' ಸಿನಿಮಾ ಕ್ಲೈ ಮ್ಯಾಕ್ಸ್‌ ಸ್ವಲ್ಪ ಬಾಕಿಯೇ ಇತ್ತು. ಆ ದೃಶ್ಯಗಳನ್ನು ಪೂರ್ಣಗೊಳಿಸಲು. ಡಿವೋರ್ಸ್‌ಗೂ ಮುನ್ನವೇ ಈ ಜೋಡಿ ʼಮುದ್ದು ರಾಕ್ಷಸಿʼ ಎನ್ನುವ ಸಿನಿಮಾ ಒಪ್ಪಿಕೊಂಡಿತ್ತು. ಈಗ ಈ ಸಿನಿಮಾದ ಕೊನೆಯ ದಿನದ ಶೂಟಿಂಗ್‌ ಮುಗಿದಿದೆ. ಈ ಸಂದರ್ಭದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಾಜಿ ದಂಪತಿ ಮಾತನಾಡಿದ್ದಾರೆ. ಮತ್ತೆ ಒಂದಾಗುವ ಸಾಧ್ಯತೆ ಇದ್ಯಾ ಎನ್ನುವ ಪ್ರಶ್ನೆಗೆ ನಿವೇದಿತಾ ಗೌಡ, “ಡಿವೋರ್ಸ್‌ ಆದಾಗ ಅಥವಾ ಇನ್ನೇನೋ ಆದರೂ ಕೂಡ ನಮ್ಮ ಸಮಾಜದಲ್ಲಿ ಹುಡುಗಿಯದ್ದು ತಪ್ಪು ಅಂತ ಹೇಳುತ್ತಾರೆ. ನಮ್ಮ ಲೈಫ್‌ನಲ್ಲಿ ಏನೇನು ಸಮಸ್ಯೆಗಳು ಇರುತ್ತವೆ, ಅದನ್ನು ಎಲ್ಲರ ಮುಂದೆ ಹೇಳೋಕೆ ಆಗೋದಿಲ್ಲ, ಅದು ಎಲ್ಲರಿಗೂ ಗೊತ್ತಿಲ್ಲ. ಹೇಳೋ ಅವಶ್ಯಕತೆ ಇಲ್ಲ. ಡಿವೋರ್ಸ್‌ ಆದಾಗ ಅವರದ್ದೇ ತಪ್ಪಿರಬಹುದು, ಹಾಗೆ ಮಾಡಿದ್ರು, ಹೀಗೆ ಮಾಡಿದ್ರು ಅಂತ ಹೇಳ್ತಾರೆ. ಇದನ್ನು ಬದಲಾಯಿಸೋಕೆ ಆಗೋದಿಲ್ಲ. ಈ ರೀತಿ ಮಾತಾಡೋದು ತಪ್ಪು, ಮಾನವೀಯತೆ ಇಲ್ಲ ಅಂತ ಅನಿಸುತ್ತದೆ” ಎಂದಿದ್ದಾರೆ. 

ನಂತರ ಪದೇ ಪದೇ ತಾವು ಟ್ರೋಲ್​ ಆಗುವುದಕ್ಕೆ ಮಾತನಾಡಿರುವ ನಟಿ, “ಬೇರೆಯವರು ನನ್ನ ಬಗ್ಗೆ ಹೇಗೆ ಯೋಚನೆ ಮಾಡ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಯೋಚಿಸೋದು ಅವರ ಪ್ರಾಬ್ಲಮ್‌, ನನ್ನ ಪ್ರಾಬ್ಲಮ್‌ ಅಲ್ಲ. ನಾನು ನನ್ನ ಕೆಲಸದ ಕಡೆಗೆ ಗಮನ ಕೊಡ್ತೀನಿ. ನೆಗೆಟಿವ್‌ ಕಾಮೆಂಟ್ಸ್‌ ಏನೇನು ಬರತ್ತೆ ಅಂತ ನನಗೆ ಗೊತ್ತೂ ಇಲ್ಲ. ನೆಗೆಟಿವ್‌ ಕಾಮೆಂಟ್ಸ್‌ ನೋಡೋರನ್ನು ಜನರು ನೋಡಿಕೊಳ್ತಾರೆ, ಲೈವ್‌ ಆಗಿ ಬಂದು ಪ್ರೀತಿಯಿಂದ ಮಾತಾಡೋರು ತುಂಬ ಜನ ಇರ್ತಾರೆ. ಮಹಿಳೆಯರು ದುಡಿಯಬೇಕು, ಸ್ವತಂತ್ರವಾಗಿರಬೇಕು. ಆಗ ಯಾರು ಏನೇ ಅಂದ್ರೂ ತಲೆಕೆಡಿಸಿಕೊಳ್ಳುವ ಪ್ರಮೇಯವೇ ಬರೋದಿಲ್ಲ” ಎಂದು ನಿವೇದಿತಾ ಗೌಡ ಹೇಳಿದ್ದಾರೆ. ಇದನ್ನು ನ್ಯೂಸ್​ಬೀಟ್​ ಕನ್ನಡ ಶೇರ್ ಮಾಡಿಕೊಂಡಿದೆ. 

ಶ್ರೀಲಂಕಾದ ಜೂಜು ಅಡ್ಡೆಯಿಂದ ಬಾತ್​ರೂಮ್​ ಸೇರಿದ ನಿವೇದಿತಾ: 'ಐ ಮಿಸ್​ ಯು' ಎನ್ನುತ್ತಲೇ ಕೊಟ್ಟ ಪೋಸ್​ಗೆ ಫ್ಯಾನ್ಸ್​ ಸುಸ್ತು!

View post on Instagram