ಚಂದನ್ ಶೆಟ್ಟಿ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ವಿಡಿಯೋದಲ್ಲಿ ಬ್ಯುಸಿಯಾಗಿದ್ದು, ನಿವೇದಿತಾ ಗೌಡ ಜೊತೆ 'ಮುದ್ದು ರಾಕ್ಷಸಿ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ವಿಚ್ಛೇದನದ ನಂತರ ಮತ್ತೆ ಒಟ್ಟಿಗೆ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಚಂದನ್ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದು, ಹೊಸ ಜೀವನದ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್‌ಗೆ ಮೂರನೇ ವ್ಯಕ್ತಿಯೇ ಕಾರಣ ಎಂದು ಹೇಳಿದ್ದಾರೆ.

ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರು 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್​ ಬಿಜಿಯಾಗಿರೋ ನಡುವೆಯೇ ಇದೀಗ ಮಾಜಿ ಪತ್ನಿ ನಿವೇದಿತಾ ಗೌಡ ಅವರ ಜೊತೆಗೆ ನಟಿಸಿದ್ದ ಮುದ್ದು ರಾಕ್ಷಸಿ ಚಿತ್ರದ ಶೂಟಿಂಗ್​ ಕೂಡ ಮುಗಿಸಿ ನಿರಾಳರಾಗಿದ್ದಾರೆ. ನಿವೇದಿತಾ ಜೊತೆಗಿನ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್​ಬ್ಯಾಕ್​ ಆಗಿದ್ದು ನೋಡಿ ಫ್ಯಾನ್ಸ್​ಗೆ ಸಕತ್​ ಖುಷಿಯಾಗಿದೆ. ಕನ್ನಡದ ರ್‍ಯಾಪ್ ಸಾಂಗ್ಸ್‌ಗಳ ಹೊಸ ಹೊಸ ಪ್ರಯೋಗ ಮಾಡುವಲ್ಲಿ ಫೇಮಸ್​ ಆಗಿರೋ ಚಂದನ್​ ಅವರು ಇದಾಗಲೇ ಹಲವಾರು ಹಿಟ್​ ಹಾಡುಗಳನ್ನು ನೀಡಿದ್ದಾರೆ. '3 ಪೆಗ್', 'ಟಕಿಲಾ', 'ಪಕ್ಕಾ ಚಾಕೋಲೆಟ್ ಗರ್ಲ್' ಹೀಗೆ ಹಲವು ಹಾಡುಗಳು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತಿರುತ್ತವೆ. ಅದರಲ್ಲಿಯೂ ಪಬ್​, ರೆಸಾರ್ಟ್​ ಪಾರ್ಟಿಗಳಲ್ಲಿ ಕನ್ನಡದ ಹಾಡು ಎಂದರೆ ಇವರ ಹಾಡೇ ಕೇಳಿಬರುವಷ್ಟರ ಮಟ್ಟಿಗೆ ಇವರ ಹಾಡು ಫೇಮಸ್​ ಆಗಿವೆ. 2011 ರಿಂದಲೂ ತಮ್ಮ ರ್‍ಯಾಪ್ ಸಾಂಗ್ಸ್‌ಗಳ ಮೂಲಕ ಇವರು ಫೇಮಸ್​ ಆಗಿದ್ದು, ಇದಾಗಲೇ 15ಕ್ಕಿಂತ ಹೆಚ್ಚು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಇವರೇ ಹಾಡಿದ್ದಾರೆ ಕೂಡ. ಇದೀಗ ಅವರ ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಸಕತ್​ ಸೌಂಡ್​ ಮಾಡುತ್ತಿದೆ. ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ ಈ ವಿಡಿಯೋ.

ಇದರ ನಡುವೆಯೇ ಇವರ ಹೊಸ ಲುಕ್​ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಂದನ್ ಶೆಟ್ಟಿ ಬಾಡಿ ಬಿಲ್ಡ್​ ಮಾಡುತ್ತಿರುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಕೂಡ ಸಾಕಷ್ಟು ಕುತೂಹಲವಿದೆ. ವಿಚ್ಛೇದನದ ಬಳಿಕ, ಬೇರೆಯ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತಿರುವ ಚಂದನ್​ ಶೆಟ್ಟಿ ಬಗ್ಗೆ ಅಭಿಮಾನಿಗಳಲ್ಲಿಯೂ ಸಾಕಷ್ಟು ಪ್ರಶ್ನೆಗಳಿವೆ. ಇದೀಗ ಅದೇ ಪ್ರಶ್ನೆ ಅವರಿಗೆ ಎದುರಾಗಿದೆ. ನಿನ್ನೆ ಮುದ್ದುರಾಕ್ಷಸಿಯ ಕ್ಲೈಮ್ಯಾಕ್ಸ್ ಶೂಟಿಂಗ್​ಗಾಗಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಮಾಜಿ ದಂಪತಿ ಪತ್ರಿಕಾಗೋಷ್ಠಿ ಕರೆದಿದ್ದರು. ಆ ಸಂದರ್ಭದಲ್ಲಿ ಈ ಜೋಡಿ, ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದೆ. ಅಲ್ಲಿ ಅವರಿಗೆ ಹಠಕ್ಕೆ ಬಿದ್ದು ಬಾಡಿ ಬಿಲ್ಡ್​ ಮಾಡಿದ್ದೀರಾ ಎನ್ನುವ ಪ್ರಶ್ನೆ ಎದುರಾಗಿದೆ.

ಚಂದನ್​ ಶೆಟ್ಟಿಯನ್ನು ಮದ್ವೆಯಾದ ಗುಟ್ಟು ಕೊನೆಗೂ ಬಾಯ್ಬಿಟ್ಟ ನಿವೇದಿತಾ ಗೌಡ: ಅಲೆಲೆ ಹೆಣ್ಣೇ ಎಂದ ನೆಟ್ಟಿಗರು!

ಆಗ ಚಂದನ್​ ಶೆಟ್ಟಿ ಅವರು ಹೊಸ ಜೀವನ ಶುರು ಮಾಡುವ ಬಗ್ಗೆ ಮಾತನಾಡಿದ್ದಾರೆ. ಲೈಫ್​ ರೀಸ್ಟಾರ್ಟ್​ ಮಾಡಬೇಕು ಎನ್ನಿಸಿತು. ಅದಕ್ಕಾಗಿಯೇ ಗುರಿಯೊಂದನ್ನು ಸೆಟ್​ ಮಾಡಿಕೊಂಡಿದ್ದೇನೆ. ಅದಕ್ಕಾಗಿಯೇ ಈ ಬಾಡಿ ಬಿಲ್ಡ್​ ಮಾಡಿರುವುದು ಎಂದಿದ್ದಾರೆ. ಇವರ ಈ ಮಾತಿಗೆ ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಇವರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅದನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ಹೊಸ ಜೀವನ ಎಂದರೆ ಚಂದನ್​ ಶೆಟ್ಟಿ ಮತ್ತೊಂದು ಮದ್ವೆಯಾಗುತ್ತಿದ್ದಾರಾ ಎನ್ನುವುದು ಹಲವರ ಪ್ರಶ್ನೆ. ಅದೂ ಮಾಜಿ ಪತ್ನಿ ನಿವೇದಿತಾ ಎದುರಿಗೇ ಹೀಗೆ ಹೇಳಿರುವುದರಿಂದ ಇನ್ನೂ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. 

ಈ ಹಿಂದೆ ಡಿವೋರ್ಸ್ ಕುರಿತು ಚಂದನ್ ಶೆಟ್ಟಿ ಮಾತನಾಡಿದ್ದರು. ಪ್ರತಿಯೊಬ್ಬರ ಜೀವನದಲ್ಲಿಯೂ ಡಿವೋರ್ಸ್​ಗೆ, ಪತಿ-ಪತ್ನಿ ನಡುವೆ ಬಿರುಕು ಮೂಡಲು ಮೂರನೆಯ ವ್ಯಕ್ತಿಯೇ ಕಾರಣ. ಇದು 100 ಪರ್ಸೆಂಟ್​ ನಿಜ. ಆದರೆ ಆ ಮೂರನೆಯ ವ್ಯಕ್ತಿ ಯಾರು ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಆ ವ್ಯಕ್ತಿ ನಮ್ಮೊಳಗೇ ಇರಬಹುದು, ಅದು ನಮ್ಮ ಮನಸ್ಸೇ ಆಗಿರಬಹುದು. ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಎನ್ನುವ ಮೂಲಕ ತಮ್ಮ ಜೀವನದಲ್ಲಿ ಎಂಟ್ರಿ ಕೊಟ್ಟಿರೋ ಆ ಮೂರನೆಯ ವ್ಯಕ್ತಿ ಯಾರು ಎಂದು ಈ ಮೂಲಕ ಹೇಳಿದ್ದರು. ಇದಕ್ಕೆ ಇನ್ನಷ್ಟು ಎಕ್ಸ್​ಪ್ಲನೇಷನ್​ ಕೊಟ್ಟಿರೋ ಚಂದನ್​ ಅವರು, ನೋಡಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಎರಡೆರಡು ಶೇಡ್​ಗಳು ಇರುತ್ತವೆ. ಒಳಗೆ ಒಂದು, ಹೊರಗೆ ಒಂದು ಇರಬಹುದು ಅಥವಾ ಮನೆಯಲ್ಲಿ ಒಂದು, ಹೊರಗಡೆ ಒಂದು ಇರಬಹುದು. ಆ ಶೇಡ್​ನಲ್ಲಿ ಒಂದು ಮೂರನೆಯ ವ್ಯಕ್ತಿ ಆಗಿರಬಹುದು. ಪ್ರತಿಯೊಂದು ವಿಚ್ಛೇದನದ ಹಿಂದೆಯೂ ಇದೇ ಮೂರನೆಯ ವ್ಯಕ್ತಿ ಎಂಟ್ರಿಕೊಟ್ಟಾಗಲೇ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ ಎಂದಿದ್ದರು.

ಪಬ್​ಡಾನ್ಸ್​ ಇಷ್ಟ ಎನ್ನುತ್ತಲೇ ಹಾಟ್​ ಅವತಾರ ಬಿಚ್ಚಿಟ್ಟ ನಿವೇದಿತಾ ಗೌಡ: ಕಣ್ಣರಳಿಸಿ ನೋಡಿದ ನೆಟ್ಟಿಗರು!

View post on Instagram