ಬಿಗ್ ಬಾಸ್‌ನಲ್ಲಿ ಎದ್ದಿರುವ ಹಲವು ಪ್ರಶ್ನೆಗಳಿಗೆ 'ಸೂಪರ್ ಸಂಡೇ ವಿತ್ ಸುದೀಪ' ಉತ್ತರ ಕೊಡಬಹುದೇ?
ಸಂಗೀತಾ ಮತ್ತು ಪ್ರತಾಪ್ ಟ್ರೀಟ್‌ಮೆಂಟ್ ತೆಗೆದುಕೊಂಡು ವಾಪಸ್ ಬಂದಾಗ ವರ್ತೂರು ಸಂತೋಷ್ ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ. ಸಂಗೀತಾ ಬಳಿಯೂ ಕ್ಷಮೆ ಕೇಳಿರಬಹುದು.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಇತ್ತೀಚೆಗಷ್ಟೇ ಹೋಸ್ಟ್ ಕಿಚ್ಚ ಸುದೀಪ್ ಅಣತಿಯಂತೆ ಕ್ಯಾಪ್ಟನ್ ಮನೆಗೆ ಬೀಗ ಬಿದ್ದಿತ್ತು. ಆದರೆ ಅಚ್ಚರಿ ಎಂಬಂತೆ, ಇಂದಿನ ಪ್ರೊಮೋದಲ್ಲಿ ಮತ್ತೆ ಕ್ಯಾಪ್ಟನ್ಸಿ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಎಲ್ಲರೂ ಸೇರಿ ಒಬ್ಬರ ಹೆಸರನ್ನು ಆಯ್ಕೆ ಮಾಡಲು ಈಗಲೂ ಅಲ್ಲಿರುವ ಸದಸ್ಯರಿಗೆ ಸಾಧ್ಯವಾಗಿಲ್ಲ. ವಿನಯ್ ಜತೆ ಸೇರಿ ಮೋಸದಾಟದಲ್ಲಿ ಭಾಗಿಯಾದ ಆರೋಪವನ್ನು ವರ್ತೂರು ಸಂತೋಷ್ ಎದುರಿಸಿದರು. ಬಳಿಕ ಕಿಚ್ಚ ಸುದೀಪ್ ಸ್ನೇಹಿತ್ ಕರೆದು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮಿಗೆ ಬೀಗ ಹಾಕಿಸಿದ್ದರು.
ಈಗ ಮತ್ತೆ ಕ್ಯಾಪ್ಟನ್ ಯಾರಾಗಬೇಕು ಎಂಬ ಚರ್ಚೆ ನಡೆಯುತ್ತಿದೆ ಎಂದರೆ ಮತ್ತೆ ಯಾರನ್ನಾದರೂ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿ ಎಂದು ಇಂದು ಸುದೀಪ್ ಸೂಚಿಸಬಹುದೇ ಎಂಬ ಸಂದೇಹ ಮೂಡಿದೆ. ಇದ್ದರೂ ಇರಬಹುದು, ಆದರೆ ಅದಕ್ಕೆ ಉತ್ತರವನ್ನು ಇಂದಿನ 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಯಲ್ಲಿ ಪಡೆಯಬಹುದು. ಏಕೆಂದರೆ, ಇಂದು ಬಿಗ್ ಬಾಸ್ ಮನೆಯ ಸದಸ್ಯರೆಲ್ಲರೂ ಕಿಚ್ಚನ ಎದುರು ಬರಲಿದ್ದಾರೆ. ಅಷ್ಟೇ ಅಲ್ಲ, ಯಾರಾದರೊಬ್ಬರು ಮನೆಯಿಂದ ಔಟ್ ಆಗಲಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾಡುವ ವಿಷಯದಲ್ಲಿ ಎಲ್ಲರೂ ಸ್ವಲ್ಪ ಹಿಂಜರಿಕೆ ಅನುಭವಿಸುತ್ತಿದ್ದಾರೆ ಎನ್ನಬಹುದು. ಕಾರಣ, ಕಳೆದ ವಾರದ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಅವರಿಬ್ಬರ ಕಣ್ಣಿಗೆ ಸೋಪಿನ ನೀರು ಭಾರೀ ಫೋರ್ಸಿಂದ ನುಗ್ಗಿರುವ ಕಾರಣಕ್ಕೆ ಇಬ್ಬರ ಕಣ್ಣಿಗೂ ಹೆಚ್ಚಿನ ಡ್ಯಾಮೇಜ್ ಆಗಿತ್ತು. ಅವರಿಬ್ಬರನ್ನೂ ಮನೆಯಿಂದ ಹೊರಗೆ ಟ್ರೀಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬರಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅರಳಿತಾ ಸ್ನೇಹದ ಹೂ; ವಿನಯ್ ಕಾರ್ತಿಕ್ ಒಂದಾಗಿದ್ದು ನೋಡಿ ನಕ್ಕ ಸಂಗೀತಾ ಶೃಂಗೇರಿ
ಸಂಗೀತಾ ಮತ್ತು ಪ್ರತಾಪ್ ಟ್ರೀಟ್‌ಮೆಂಟ್ ತೆಗೆದುಕೊಂಡು ವಾಪಸ್ ಬಂದಾಗ ವರ್ತೂರು ಸಂತೋಷ್ ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ. ಸಂಗೀತಾ ಬಳಿಯೂ ಕ್ಷಮೆ ಕೇಳಿರಬಹುದು. ಅದನ್ನು ಪ್ರೋಮೋ ಬದಲು ಸಂಚಿಕೆಯಲ್ಲಿ ನೋಡಬಹುದೇನೋ. ಇಂದಿನ ಸಂಚಿಕೆ ಹಲವು ಕಾರಣಕ್ಕೆ ತೀವ್ರ ಕುತೂಹಲ ಕೆರಳಿಸಿದೆ. ಕ್ಯಾಪ್ಟನ್ಸಿ ಕತೆ ಏನು? ಯಾರು ಮನೆಯಿಂದ ಹೊರಹೋಗುವ ಸ್ಪರ್ಧಿ? ಯಾರ ಬಳಿ ಯಾರು ಕ್ಷಮೆ ಕೇಳಿ ಮತ್ತೆ ಸ್ನೇಹಿತರಾಗಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಕ್ಯಾಪ್ಟನ್ ಇಲ್ಲದ ಬಿಗ್ ಬಾಸ್ ಮನೆ; ಕಿಚ್ಚ ಸುದೀಪ್ ಮಾತು ಕೇಳಿ ಶಾಕ್ ಆಗ್ಬಿಟ್ರಾ ಸ್ಪರ್ಧಿಗಳು!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.