ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅರಳಿತಾ ಸ್ನೇಹದ ಹೂ; ವಿನಯ್ ಕಾರ್ತಿಕ್ ಒಂದಾಗಿದ್ದು ನೋಡಿ ನಕ್ಕ ಸಂಗೀತಾ ಶೃಂಗೇರಿ

ವಿನಯ್ ಹಾಗೂ ಕಾರ್ತಿಕ್ ನಡುವೆ ಮತ್ತೆ ಸ್ನೇಹದ ಹೂ ಚಿಗುರಿದೆ. ಪ್ರತಾಪ್ ಹಾಗೂ ವರ್ತೂರು ಸಂತೋಷ್ ನಡುವೆ ಮತ್ತೆ ಗೆಳೆತನ ಬೆಸೆದುಕೊಂಡಿದೆ. ವಿನಯ್ ಮಾತು ಕೇಳಿ ಸಂಗೀತಾ ವ್ಯಂಗ್ಯವಾಗಿ ನಕ್ಕಿದ್ದಾರೆ. 

Friendship grows again in colors kannada Bigg Boss kannada season 10 srb

ಬಿಗ್ ಬಾಸ್ ಕನ್ನಡ ಸೀಸನ್ 10 ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಬಿಡುಗಡೆ ಆಗಿರುವ ಪ್ರೊಮೋ ನೋಡುತ್ತಿದ್ದರೆ ಬಿಗ್ ಬಾಸ್ ಮನೆಯಲ್ಲಿ ಕ್ಷಮೆ ಕೇಳುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂಬುದು ತಿಳಿಯುತ್ತದೆ. ಕಿಚ್ಚ ಸುದೀಪ್ ನಡೆಸಿಕೊಡುವ 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆ ಇಂದು ಪ್ರಸಾರವಾಗಲಿದೆ. ಅದರಲ್ಲಿ, ಯಾರು ಯಾರ ಬಳಿ ಕ್ಷಮೆ ಕೇಳಿದ್ದಾರೆ ಎಂಬುದು ತಿಳಿದುಬರಲಿದೆ. ಜತೆಗೆ, ಇಂದಿನ ಸಂಚಿಕೆಯಲ್ಲಿ ಎಲಿಮಿನೇಶನ್ ಮೂಲಕ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ. 

ಕಿಚ್ಚ ಸುದೀಪ್ 'ನಿಮ್ ಕಡೆಯಿಂದ ಆಗಿರೋ ತಪ್ಪು ಇರಬಹುದು ಅಥವಾ ಅವ್ರ ಕಡೆಯಿಂದ ಆಗಿರೋ ತಪ್ಪು ಇರಬಹುದು. ಅದ್ನ ಹೇಳಿ ನಾವು ಸರಿಪಡಿಸ್ಕೊಳ್ಳೋಣ ಎಂಬ ಮನಸ್ಥಿತಿ ನಿಮ್ಮಲ್ಲಿದ್ದರೆ ನಿಮಗೊಂದು ಚಾನ್ಸ್ ಈಗ ಇಲ್ಲಿ ಇದೆ' ಎನ್ನುತ್ತಾರೆ ಕಿಚ್ಚ ಸುದೀಪ್. ಬಳಿಕ, ಪ್ರತಾಪ್ ಬಳಿ ಬಂದ ವರ್ತೂರು ಸಂತೋಷ್ 'ಪ್ರತಾಪ್, ಒಂದು ಗೇಮ್‌ಗೋಸ್ಕರ ನಾನು ಬಂದು ನಿನಗೆ ನೀರು ಹಾಕಿದ್ದು. ಮತ್ತೆ ಈ ತರ ಮಾಡಲ್ಲ. ನಾವಿಬ್ರು ಮತ್ತೆ ಫ್ರೆಂಡ್ಸ್ ಆಗಿರೋಣ' ಎಂದಿದ್ದಾರೆ. ಅದಕ್ಕೆ ಒಳ್ಳೆಯ ರೀತಿಯಲ್ಲಿ ರೆಸ್ಪಾನ್ಸ್ ಮಾಡಿರುವ ಪ್ರತಾಪ್ ಎದ್ದು ನಿಂತು ವರ್ತೂರು ಸಂತೋಷ್ ಅವರನ್ನು ಹಗ್ ಮಾಡಿಕೊಂಡು ಸ್ನೇಹ ಹಸ್ತ ಚಾಚಿದ್ದಾರೆ. 

ವಿನಯ್ ಗೌಡ ಕಾರ್ತಿಕ್ ಬಳಿ ಬಂದು 'ನಾವಿಬ್ರು ತುಂಬಾ ವರ್ಷಗಳಿಂದ ಫ್ರೆಂಡ್ಸ್. ಯಾರೋ ಮೂರನೇ ವ್ಯಕ್ತಿಯಿಂದ ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಆಯ್ತು. ನಾನು ರೂಡ್ ಆಗಿ ಬಿಹೇವ್ ಮಾಡ್ದೆ. ಇದಾದ್ಮೇಲೆ ನೀನು ಮತ್ತೆ ನನ್ನ ಫ್ರೆಂಡ್‌ ಆಗಿ ಟ್ರೀಟ್ ಮಾಡ್ತಿಯೋ ಇಲ್ವೋ. ಮತ್ತೆ ಫ್ರೆಂಡ್ಸ್ ಆಗಿ ಇರೋಣ' ಎನ್ನುತ್ತಿದ್ದಂತೆ ಕುಳಿತಲ್ಲಿಂದ ಎದ್ದುಬಂದ ಕಾರ್ತಿಕ್ ವಿನಯ್ ಬಳಿ ಬರಲು ಇಬ್ಬರೂ ಹಗ್ ಮಾಡಿಕೊಂಡು ಮತ್ತೆ ಸ್ನೇಹಿತರಾಗುವ ಸೂಚನೆ ನೀಡಿದ್ದಾರೆ. 

ಕ್ಯಾಪ್ಟನ್ ಇಲ್ಲದ ಬಿಗ್ ಬಾಸ್ ಮನೆ; ಕಿಚ್ಚ ಸುದೀಪ್ ಮಾತು ಕೇಳಿ ಶಾಕ್ ಆಗ್ಬಿಟ್ರಾ ಸ್ಪರ್ಧಿಗಳು!

ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಹೊಸ ವಾತಾವರಣ ನಿರ್ಮಾಣವಾಗಿದೆ ಎನ್ನಬಹುದು. ಮೊದಲು ಸ್ನೇಹಿತರಾಗಿದ್ದವರು ಬಿಗ್ ಬಾಸ್ ಮನೆಯಲ್ಲಿ ವಿರೋಧಿಗಳಾಗಿ ಮತ್ತೆ ಈಗ ಸ್ನೇಹಿತರಾಗಲು ಹೊರಟಿದ್ದಾರೆ. ವಿನಯ್ ಹಾಗೂ ಕಾರ್ತಿಕ್ ನಡುವೆ ಮತ್ತೆ ಸ್ನೇಹದ ಹೂ ಚಿಗುರಿದೆ. ಪ್ರತಾಪ್ ಹಾಗೂ ವರ್ತೂರು ಸಂತೋಷ್ ನಡುವೆ ಮತ್ತೆ ಗೆಳೆತನ ಬೆಸೆದುಕೊಂಡಿದೆ. ವಿನಯ್ ಮಾತು ಕೇಳಿ ಸಂಗೀತಾ ವ್ಯಂಗ್ಯವಾಗಿ ನಕ್ಕಿದ್ದಾರೆ. ವಿನಯ್ ತನ್ನ ಕುರಿತಾಗಿಯೇ ಮಾತನಾಡಿದ್ದು ಎಂಬುದು ಸಂಗೀತಾಗೆ ಅರಿವಾಗಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆ ಮತ್ತೆ ಸಂತಸದ ಗೂಡಾಗುವತ್ತ ಹೆಜ್ಜೆ ಹಾಕುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

ಒಂಬತ್ತನೇ ವಾರದಲ್ಲಿ 9 ನಾಮಿನೇಶನ್ಸ್‌; ಮನೆಯಿಂದ ಯಾರು ಹೊರಹೋಗ್ತಾರೆ ಎಂಬುದು ಸದ್ಯದ ಕುತೂಹಲ!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

 

 

Latest Videos
Follow Us:
Download App:
  • android
  • ios