ಬ್ರಹ್ಮಗಂಟು ಸೀರಿಯಲ್‌ನ ಹೀರೋ ಡಮ್ಮಿಯಾಗಿ ನರಸಿಂಹ ಕ್ಯಾರೆಕ್ಟರೇ ಹೈಲೈಟ್ ಆಗ್ತಿದೆ. ಈ ಕ್ಯಾರೆಕ್ಟರ್ ಯಾಕಷ್ಟು ಫೇಮಸ್ ಆಗ್ತಿದೆ. ಪಾತ್ರ ಮಾಡ್ತಿರೋರು ಯಾರು?
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಡ್ರಾಮಾ ಜಾಸ್ತಿ. ಸೋ ಕಾಲ್ಡ್ ಬ್ಯೂಟಿ ಮಾನದಂಡಕ್ಕೆ ಸೆಟ್ ಆಗ್ದೇ ಇರುವ ಹುಡುಗಿ, ಮತ್ತು ಬ್ಯೂಟಿಯ ಹಿಂದೆ ಬಿದ್ದಿರೋ ನಾಯಕ, ಮತ್ತವನ ತಲೆ ಹಾಳು ಮಾಡೋ ಅತ್ತಿಗೆ ಇವರೇ ಈ ಸೀರಿಯಲ್‌ನ ಪ್ರಧಾನ ಪಾತ್ರಗಳು. ನೋಡೋದಕ್ಕೆ ಚೆನ್ನಾಗಿಲ್ಲ ಅನಿಸಿಕೊಂಡಿರೋ ದೀಪ ಗಂಡನ ಮನೆಯಲ್ಲಿ ಕೆಲಸದವಳಿಗಿಂತ ಕಡೆ ಆಗಿದ್ದಾಳೆ. ಗಂಡನೂ ಈಕೆಯನ್ನು ಕಂಡು ಅಸಹ್ಯ ಪಟ್ಕೊಳ್ತಾನೆ. ಆದರೆ ಈ ಮನೇಲಿರೋ ವಿಲನ್‌ಗಳು ದೀಪಾಗೆ ಕಷ್ಟ ಕೊಡೋ ನೆವದಲ್ಲಿ ಮಾಡ್ತಿರೋ ತಂತ್ರಗಳು ಹೀರೋ ಹೀರೋಯಿನ್‌ಗಳನ್ನು ಹತ್ತಿರ ತರುತ್ತಿವೆ. ಮೊನ್ನೆ ತಾನೇ ಈ ಮನೆಯ ಕೆಟ್ಟ ಹುಡುಗಿ ದೀಪಾ ಕನ್ನಡಕ ಫುಲ್ ಸ್ಕ್ರಾಚ್ ಮಾಡಿದ್ದಾಳೆ. ಅದರಿಂದ ಅವಳು ಕಣ್ಣು ಕಾಣದೇ ಸ್ವಿಮ್ಮಿಂಗ್ ಪೂಲ್‌ಗೆ ಬೀಳುವಾಗ ಅವಳ ಜೊತೆಗೆ ಅವಳ ಗಂಡನೂ ಬೀಳುತ್ತಾನೆ. ಇನ್ನೊಂದು ಕಡೆ ಅವಳು ಬಟ್ಟೆರಾಶಿ ಹಿಡ್ಕೊಂಡು ನಡ್ಕೊಂಡು ಬರುವಾಗ ಮೆಟ್ಟಿಲಿಗೆ ವಿಲನ್ಸ್ ಹಗ್ಗ ಕಟ್ಟಿದ್ದಾರೆ. ಅದೆ ಹೊತ್ತಿಗೆ ಅಲ್ಲಿ ಬರೋ ಹೀರೋ ಮೇಲೇ ಅವಳು ಬೀಳೋ ಹಾಗೆ ಆಗ್ತಿದೆ.
ಆದರೆ ಇಲ್ಲಿ ಡಮ್ಮಿ ಪೀಸ್ ಥರ ಇರೋ ಹೀರೋ ಯಾರಿಗೂ ಇಷ್ಟ ಆಗ್ತಿಲ್ಲ. ಇದೀಗ ಜೀ ಕನ್ನಡ ಬಿಟ್ಟಿರೋ ಪ್ರೋಮೋವೊಂದರಲ್ಲಿ ಹೀರೋಗೆ ಜನ ವಾಚಾಮಗೋಚರವಾಗಿ ಬೈಯ್ಯೋದನ್ನು ನೋಡಬಹುದು. ಆದರೆ ಹೀರೋಯಿನ್ ದೀಪಾ ಅಣ್ಣ ನರಸಿಂಹ ಅಂದ್ರೆ ಎಲ್ರಿಗೂ ಇಷ್ಟ ಆಗ್ತಿದೆ. ಇದಕ್ಕೆ ಕಾರಣ ಈತನ ಮಾಸ್ ಅಪೀಯರೆನ್ಸ್. ಮೂರ್ಹೊತ್ತೂ ಕುಡ್ಕೊಂಡು ಇರೋ ಈ ಪುಣ್ಯಾತ್ಮಂಗೆ ತಂಗಿ ಅಂದ್ರೆ ಪ್ರಾಣ. ನೋಡೋದಕ್ಕೆ ಯಾವ ಹೀರೋಗೂ ಕಮ್ಮಿ ಇಲ್ಲದ ಈತ ಭರ್ಜರಿ ಫೈಟ್‌ನಲ್ಲಿ ಸಖತ್ ಚಪ್ಪಾಳೆ ಗಿಟ್ಟಿಸಿದ್ದ. ಹೃದಯವಂತ ತಂಗಿ ದೀಪಾಳ ಅಣ್ಣ ಖಡಕ್ ಹೀರೋ ಮ್ಯಾನರಿಸಂ ಇರೋನು. ಸದ್ಯಕ್ಕೀಗ ಒಬ್ಬ ಜಂಭದ ಹುಡುಗಿ ಈತನಿಗೆ ಕಾಟ ಕೊಡೋದಕ್ಕೆ ಬಂದಿದ್ದಾಳೆ. ಈತ ಅವಳಿಗೆ ಸ್ಯಾಂಡಲ್‌ವುಡ್ ಹೀರೋ ರೇಂಜ್‌ನಲ್ಲಿ ಕ್ಲಾಸ್ ತಗೊಳ್ತಿದ್ದಾನೆ. ಈ ಸೀನ್‌ಗಳನ್ನು ನೋಡಿದ್ರೆ ನಿಮಗೆ ರವಿಚಂದ್ರನ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ಮೊದಲಾದವರ ಸಿನಿಮಾ ಸ್ಟೋರಿ ನೆನಪಿಗೆ ಬರಬಹುದು. ಆ ಕಾಲದಲ್ಲಿ ಫೇಮಸ್ ಆಗಿದ್ದ ಜಂಭದ ಹುಡುಗಿಗೆ ಪಾಠ ಕಲಿಸೋ ಧೀರ ವೀರನಾಗಿ ಈ ನರಸಿಂಹ ಕಾಣಿಸಿಕೊಂಡಿದ್ದಾನೆ. ಈ ಪಾತ್ರಕ್ಕೆ ಸಖತ್ ವಿಶಲ್, ಕ್ಲಾಪ್ ಬೀಳ್ತಿದೆ.
ಹೆಜ್ಜೆಹೆಜ್ಜೆಗೂ ಬಾಡಿಶೇಮಿಂಗ್ ಅನುಭವಿಸ್ತಿರೋ ಬ್ರಹ್ಮಗಂಟು ನಾಯಕಿ ದೀಪಾ ನಿಜಜೀವನ ಗೊತ್ತಾ?
ಅಷ್ಟಕ್ಕೂ ಈ ಪಾತ್ರ ಮಾಡ್ತಿರೋ ಸ್ಫುರದ್ರೂಪಿ ಯಾರು ಅಂತ ಸಾಕಷ್ಟು ಜನ ಈತನ ಪ್ರೊಫೈಲ್ ಎಡತಾಕಿದ್ದಾರೆ. ಭರತ್ ಎಸ್ ನಾಯ್ಕ ಅನ್ನೋರು ಈ ನರಸಿಂಹನ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸೀರಿಯಲ್ ನೋಡ್ತಾ ನೋಡ್ತಾ ಈತನಿಗೆ ಲೈನ್ ಹೊಡೀತಿರೋ ಹುಡುಗೀರಿಗೆ ಬ್ಯಾಡ್ ನ್ಯೂಸ್. ಈ ನಟನಿಗೆ ಈಗಾಗಲೇ ಮದುವೆ ಆಗಿದೆ. ಇನ್ನೊಂದು ವಿಷಯ ಅಂದರೆ ಇವರು ಪ್ರತಿಭಾವಂತ ರಂಗಭೂಮಿ ಕಲಾವಿದ. ಇದಕ್ಕಿಂತಲೂ ಫೇಮಸ್ ಆಗಿರೋದು ಸಿಂಗರ್ ಆಗಿ. ಸಾಕಷ್ಟು ಟಿವಿ ರಿಯಾಲಿಟಿ ಶೋಗಳಲ್ಲಿ ಭರತ್ ತಮ್ಮ ಪ್ರತಿಭೆ ಮೆರೆದಿದ್ದಾರೆ. ಇದಲ್ಲದೇ ಲೈವ್ ಬ್ಯಾಂಡ್ ಪ್ರದರ್ಶನಗಳಲ್ಲಿ ಅನೇಕ ಹುಡುಗೀರ ಮನಸ್ಸು ಕದ್ದಿದ್ದಾರೆ. ಇವರ ಶಾರೀರಕ್ಕೆ ಮಾರು ಹೋಗದವರು ಕಡಿಮೆ.
ಇಲ್ಲೀವರೆಗೆ ತಾನಾಯ್ತು, ತನ್ನ ಮ್ಯೂಸಿಕ್ ಬ್ಯಾಂಡ್ ಆಯ್ತು, ಬಿಟ್ರೆ ರಂಗಭೂಮಿ ಆಯ್ತು ಅಂತಿದ್ದ ಭರತ್‌ಗೆ ಅದೇನನಿಸಿತೋ ಸೀರಿಯಲ್‌ನ ನಟನೆಗೆ ಎಂಟ್ರಿ ಕೊಡ್ತಾರೆ. ಸದ್ಯ ಇವರು ನರಸಿಂಹನ ಪಾತ್ರದಲ್ಲಿ ಮಾಡ್ತಿರೋ ಆಕ್ಟಿಂಗ್‌ಗೆ ಸಖತ್ ರೆಸ್ಪಾನ್ಸ್ ಬರ್ತಿದೆ. ಟೈಮ್ ಆದಾಗ ಹೆಂಡ್ತಿ ಜೊತೆ ಬೀಚ್, ಟ್ರೆಕ್ ಅಂತ ಸುತ್ತುತ್ತಿರೋ ಭರತ್ ಕ್ಯಾಮರ ಮುಂದೆ ಸದ್ಯಕ್ಕೆ ಸುಂಟರಗಾಳಿ ಥರ ಹವಾ ಎಬ್ಬಿಸುತ್ತಿದ್ದಾರೆ.
ಬ್ರಹ್ಮಗಂಟು ದೀಪಾಗೂ, ಜ್ಯೋತಿ ರೈಗೂ ಇದೆ ಲಿಂಕ್... ಸಡನ್ನಾಗಿ ಚೇಂಜ್ ಆದ ಇಬ್ಬರ ಲುಕ್!
