ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್​ನ ನಾಯಕಿ, ಕ್ಷಣ ಕ್ಷಣಕ್ಕೂ ಅವಮಾನ ಎದುರಿಸುತ್ತಿರುವ ದೀಪಾ ರಿಯಲ್​ ಲೈಫ್​ನಲ್ಲಿ ಹೇಗಿದ್ದಾರೆ? 

ದೀಪಾ ಎಂದರೆ ಸಾಕು, ಸೀರಿಯಲ್​ ಪ್ರೇಮಿಗಳ ಅದರಲ್ಲಿಯೂ ಜೀ ಕನ್ನಡ ಸೀರಿಯಲ್​ ಸಾಲು ಸಾಲು ನೋಡುಗರಿಗೆ ಬ್ರಹ್ಮಗಂಟುವಿನ ನಾಯಕಿ ಕಣ್ಣೆದುರಿಗೆ ಬರುತ್ತಾಳೆ. ಅಷ್ಟಕ್ಕೂ ಬ್ರಹ್ಮಗಂಟುವಿನಲ್ಲಿ ಹೈಲೈಟ್​ ಆಗಿರೋ ದೀಪಾ ಎಂದಾಕ್ಷಣ, ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಹುಡುಗಿ ನೆನಪಾಗುತ್ತಾಳೆ. ತೆಳ್ಳಗೆ, ಬೆಳ್ಳಗೆ ಇದ್ದರಷ್ಟೇ ಸೌಂದರ್ಯ ಎನ್ನುವ ಈ ಕಾಲದಲ್ಲಿ, ಬಾಹ್ಯ ಸೌಂದರ್ಯಕ್ಕೇ ಮನಸೋಲುವವರು ಎಲ್ಲರೂ, ಮನದ ಸೌಂದರ್ಯವನ್ನು ನೋಡುವವರೇ ಇಲ್ಲ ಎನ್ನಬಹುದೇನೋ. ಇದೇ ಕಾರಣಕ್ಕೆ ಈ ಸೀರಿಯಲ್​ನಲ್ಲಿ ಕ್ಷಣಕ್ಷಣಕ್ಕೂ ಬಾಡಿಶೇಮಿಂಗ್​ ಅನುಭವಿಸುತ್ತಿದ್ದಾಳೆ ದೀಪಾ. ನೋಡಲು ಚೆನ್ನಾಗಿಲ್ಲ ಎನ್ನುವ ಒಂದೇ ಕಾರಣಕ್ಕೆ ಮನೆಯ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ ದೀಪಾ. ಇವಳ ಮೇಲೆ ಸೀರಿಯಲ್​ನಲ್ಲಿ ನಡೆಯುತ್ತಿರುವ ಟಾರ್ಚರ್​ನಿಂದ ನೆಟ್ಟಿಗರು ಗರಂ ಆಗುತ್ತಿದ್ದಾರೆ, ಸೌಂದರ್ಯವೇ ಎಲ್ಲವೂ ಎಂದು ತೋರಿಸುತ್ತಿರುವ ಈ ಸೀರಿಯಲ್​ ಬಹಿಷ್ಕಾರ ಹಾಕಬೇಕು ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಲಾಗುತ್ತಿದ್ದರೂ, ದೀಪಾಗೆ ಮುಂದೊಂದು ದಿನ ಒಳ್ಳೆಯದು ಆಗಿಯೇ ಆಗುತ್ತದೆ ಎನ್ನುವ ಆಸೆಯಿಂದ ಈ ಸೀರಿಯಲ್​ ನೋಡುತ್ತಿರುವ ದೊಡ್ಡ ವರ್ಗವೇ ಇದೆ.

ಅಕ್ಕನದ್ದು ಬಾಹ್ಯ ಸೌಂದರ್ಯ. ಆದರೆ ದೀಪಾಳದ್ದು ಆಂತರಿಕ ಸೌಂದರ್ಯ. ಅಕ್ಕನನ್ನು ಮದುವೆಯಾಗಬೇಕಿದ್ದ ನಾಯಕ, ಅದ್ಯಾವುದೋ ಗಳಿಗೆಯಲ್ಲಿ ತಂಗಿ ದೀಪಾಳನ್ನು ಮದುವೆಯಾಗುವ ಸ್ಥಿತಿ ಬರುತ್ತದೆ. ಆಕೆ ಸೌಂದರ್ಯವತಿ ಅಲ್ಲ ಎನ್ನುವ ಒಂದೇ ಕಾರಣಕ್ಕೆ ಗಂಡ ಸೇರಿದಂತೆ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ. ಇದೀಗ ಆಕೆಯನ್ನು ಮನೆಯಿಂದ ಹೊರಹಾಕುವಷ್ಟರ ಮಟ್ಟಿಗೆ ಈ ಸೀರಿಯಲ್​ನಲ್ಲಿ ಅತಿರೇಕ ಎನ್ನಿಸುವಂತೆ ತೋರಿಸಲಾಗಿದೆ. ದೀಪಾಳಿಗೆ ಮನೆಯವರಿಂದ ಸಿಗುವ ನೋವುಗಳು ಅಷ್ಟಿಷ್ಟಲ್ಲ. ಚಿತ್ರಹಿಂಸೆಯನ್ನೂ ನೀಡಲಾಗುತ್ತಿದೆ. ಇದು ಅತಿರೇಕದ ಪರಮಾವಧಿ ಎನ್ನಿಸುವ ಕಾರಣ, ಈ ಸೀರಿಯಲ್​ ಬಗ್ಗೆ ಸಾಕಷ್ಟು ಮಂದಿ ಅಸಮಾಧಾನ ಕೂಡ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಐ ಲವ್​ ಯೂ ಕೇಳಿಸಿಕೊಂಡ ಆರ್ಯವರ್ಧನ್​ ಗುರೂಜಿ! ಡಿಕೆಡಿ ವೇದಿಕೆಯಲ್ಲಿ ಕಮಾಲ್​

ಆದರೆ ಸೀರಿಯಲ್​ನಲ್ಲಿ ಈ ರೀತಿ ಕಾಣುವ ದೀಪಾಳ ನಿಜವಾದ ಹೆಸರು ದಿಯಾ ಪಾಲಕ್ಕಲ್ (Diya Palakkal). ಸೀರಿಯಲ್​, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್​ ಮಾಡುವುದು ಇದೆ. ಆದರೆ ಈ ಸೀರಿಯಲ್​ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್​ ಮಾಡಲಾಗಿದೆ. ಅಸಲಿಗೆ ದೀಪಾ ಅಂದರೆ ದಿಯಾ ಸೀರಿಯಲ್​ನಲ್ಲಿ ಕಾಣುವ ಹಾಗೆ ರಿಯಲ್​ ಲೈಫ್​ನಲ್ಲಿ ಇಲ್ಲ. ಆದರೆ ಈಕೆ ನಿಜಕ್ಕೂ ಹೀಗೆಯೇ ಇದ್ದಾಳಾ ಎನ್ನುವಷ್ಟರ ಮಟ್ಟಿಗೆ ಈಕೆಯನ್ನು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಸೀರಿಯಲ್​, ಸಿನಿಮಾಗಳಲ್ಲಿ ಹೀರೋಯಿನ್​ ಆಗಲು ಯಾವ್ಯಾವ ರೀತಿಯ ಕ್ವಾಲಿಟಿಗಳು ಇರಬೇಕೋ, ಯಾವ ರೀತಿಯಲ್ಲಿ ಗ್ಲಾಮರಸ್​ ಲುಕ್​ ಇರಬೇಕೋ ಎಲ್ಲವೂ ರಿಯಲ್​ ಲೈಫ್​ನಲ್ಲಿ ದಿಯಾ ಅವರಿಗೆ ಇದೆ. ಮಾಡರ್ನ್​ ಗರ್ಲ್​ ಆಗಿ, ಹಳ್ಳಿಯ ಹುಡುಗಿಯಾಗಿ, ಗ್ಲಾಮರಸ್​ ಲುಕ್​ನಲ್ಲಿ ಕಾಣಿಸಿಕೊಂಡು ಫೋಟೋಶೂಟ್​ ಕೂಡ ಮಾಡಿಸಿದ್ದಾರೆ ದಿಯಾ. 

ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. 

ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?