ಬ್ರಹ್ಮಗಂಟು ಚಿರು-ದೀಪಾ ರೊಮಾಂಟಿಕ್ ಡಾನ್ಸ್​ : ಇಲ್ಲಾದ್ರೂ ಸೋಡಾ ಗ್ಲಾಸ್​ ತೆಗೀಬಾರ್ದಾ ಕೇಳ್ತಿರೋ ಫ್ಯಾನ್ಸ್​

ಬ್ರಹ್ಮಗಂಟು ಸೀರಿಯಲ್​ನಲ್ಲಿ ಹಾವು-ಮುಂಗುಸಿಯಂತಿರೋ ಚಿರು-ದೀಪಾ ಸಕತ್​ ರೊಮಾಂಟಿಕ್ ಡಾನ್ಸ್​ : ಇಲ್ಲಾದ್ರೂ ಸೋಡಾಬುಡ್ಡಿ ತೆಗೀಬಾರ್ದಾ ಕೇಳ್ತಿರೋ ಫ್ಯಾನ್ಸ್​
 

Brahmagantu Chiru Deepa Romantic dance Fans ask her to remove glass and dance

ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಹೌದು. ಇವಳೇ ಜೀ ಕನ್ನಡ   ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​.

ಇಲ್ಲಿ ದೀಪಾ ಕಂಡರೆ ಮನೆಯಲ್ಲಿ ಹೆಚ್ಚಿನವರಿಗೆ ಯಾರಿಗೂ ಆಗಲ್ಲ, ಅದರಲ್ಲಿಯೂ ಪತಿ ಚಿರಾಗ್​ಗೂ ಇಷ್ಟವಿಲ್ಲ. ದೀಪಾಳ ಸೌಂದರ್ಯದಿಂದಾಗಿ ಅವಳನ್ನು ಕಂಡರೆ ಎಲ್ಲರಿಗೂ ತಾತ್ಸಾರ. ಆದರೆ ಅದೇ ದೀಪಾ ಮತ್ತು ಚಿರಾಗ್​ ಈಗ ಸಕತ್​ ರೀಲ್ಸ್​ ಮಾಡಿದ್ದು, ಎಲ್ಲರೂ ಫಿದಾ  ಆಗಿದ್ದಾರೆ. ಕೊನೆಯ ಪಕ್ಷ ರೀಲ್ಸ್​ನಲ್ಲಾದರೂ ನಿಜ ವೇಷ ತೋರಿಸಬಾರದಾ? ಆ ಸೋಡಾಬುಡ್ಡಿ ಗ್ಲಾಸ್​ ತೆಗೆಯಬಾರದಾ ಎಂದು ಪ್ರಶ್ನಿಸುತ್ತಿದ್ದಾರೆ ಅಭಿಮಾನಿಗಳು. ಇನ್ನು, ದೀಪಾ ಪಾತ್ರಧಾರಿಯ ಹೆಸರು ದಿಯಾ ಪಾಲಕ್ಕಲ್ (Diya Palakkal). 

ಹೆಜ್ಜೆಹೆಜ್ಜೆಗೂ ಬಾಡಿಶೇಮಿಂಗ್​ ಅನುಭವಿಸ್ತಿರೋ ಬ್ರಹ್ಮಗಂಟು ನಾಯಕಿ ದೀಪಾ ನಿಜಜೀವನ ಗೊತ್ತಾ?

ದೀಪಾ ಪಾತ್ರಧಾರಿಯಾಗಿರುವ ದಿಯಾ ಪಾಲಕ್ಕಲ್  ಅವರು ಸೀರಿಯಲ್​ನಲ್ಲಿ ಎಷ್ಟು ಆಂತರಿಕವಾಗಿ ಸುಂದರಿಯಾಗಿದ್ದಾರೋ, ನಿಜ ಜೀವನದಲ್ಲಿ ಬಾಹ್ಯ ಸೌಂದರ್ಯವೂ ಅವರದ್ದು. ಆದರೆ ಸೀರಿಯಲ್​ ಪಾತ್ರಕ್ಕೆ ತಕ್ಕಂತೆ ಆಕೆಗೆ ಮೇಕಪ್​ ಮಾಡುವ ಮೂಲಕ ಎಷ್ಟು ಕೆಟ್ಟಿದ್ದಾಗಿ ತೋರಿಸಲು ಸಾಧ್ಯವೋ ಅಷ್ಟು ತೋರಿಸಲಾಗುತ್ತಿದೆ. ಆದರೆ ಈಕೆಯ ಒಳ್ಳೆಯತನದ ಮುಂದೆ ಧಾರಾವಾಹಿಯಲ್ಲಿ ಸೌಂದರ್ಯ ವೀಕ್ಷಕರಿಗೆ ಗಣನೆಗೆ ಬರುವುದೇ ಇಲ್ಲ. ಇಂತಿಪ್ಪ ದಿಯಾ ಪಾಲಕ್ಕಲ್​ ಅವರು ಸೋಷಿಯಲ್​  ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದು, ರೀಲ್ಸ್​ ಮಾಡಿದ್ದಾರೆ. ಶ್ರೇಯಾ ಘೋಷಲ್​ ಅವರು ಹಾಡಿರುವ ಮನ್ವಾ ಲಗೆ ಹಾಡಿಗೆ ರೀಲ್ಸ್​ ಮಾಡಿದ್ದಾರೆ ದಿಯಾ. ನಾನು ಲಯದಲ್ಲಿ ಕಳೆದುಹೋಗಿದ್ದೇನೆ,  ಹೃದಯವು ಲಯದ ಬಡಿತಕ್ಕೆ ತೂಗಾಡುತ್ತಿದೆ ಎನ್ನುವ ಶೀರ್ಷಿಕೆ ಕೊಟ್ಟಿರುವ ದಿಯಾ ಅವರು ರೀಲ್ಸ್​ ಮಾಡಿದ್ದಾರೆ.

ಕೇವಲ ಸೀರಿಯಲ್​ನಲ್ಲಿ ನೋಡಿದವರು ನಿಜಜೀವನದಲ್ಲಿ ದೀಪಾ ಇಷ್ಟು ಚೆನ್ನಾಗಿದ್ದಾರೆ ಎನ್ನುವುದನ್ನು ಅರಿಯಲು ಕೂಡ ಸಾಧ್ಯವಿಲ್ಲ. ಧಾರಾವಾಹಿಯಲ್ಲಿ ಈಕೆಗೆ ಕೊಡುತ್ತಿರುವ ಹಿಂಸೆಯನ್ನು ತಾಳಲಾಗದೇ ಪ್ಲೀಸ್ ನೋಡೋಕೆ ಆಗ್ತಿಲ್ಲ ಎನ್ನುತ್ತಿದ್ದಾರೆ. ತಾವು ನೋಡುತ್ತಿರುವುದು ಕೇವಲ ಧಾರಾವಾಹಿ ಎನ್ನುವುದನ್ನೂ ಮರೆತು ಅಭಿಮಾನಿಗಳು ಈ ಸೌಂದರ್ಯ ತೋರಿಸುವಂತೆ ಹೇಳುತ್ತಿದ್ದಾರೆ. ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು.  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ  ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ.   2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. 
 

ನನ್ನ ಮದ್ವೆಯಾಗೋಕೆ ಯಾರೂ ಸಿದ್ಧನೇ ಇರ್ಲಿಲ್ಲ, ಜಿಗುಪ್ಸೆ ಹುಟ್ಟೋಗಿತ್ತು... ನಟ ರಾಜೇಶ್​ ರಿಯಲ್​ ಲೈಫ್​ ಸ್ಟೋರಿ ಕೇಳಿ...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios