ನನ್ನ ಮದ್ವೆಯಾಗೋಕೆ ಯಾರೂ ಸಿದ್ಧನೇ ಇರ್ಲಿಲ್ಲ, ಜಿಗುಪ್ಸೆ ಹುಟ್ಟೋಗಿತ್ತು... ನಟ ರಾಜೇಶ್ ರಿಯಲ್ ಲೈಫ್ ಸ್ಟೋರಿ ಕೇಳಿ...
ಅಮೃತಧಾರೆ ಗೌತಮ್ ಉರ್ಫ್ ರಾಜೇಶ್ ನಟರಂಗ ಅವರ ರಿಯಲ್ ಲೈಫ್ನಲ್ಲಿ ಮದ್ವೆಯಾಗೋಕೆ ಯಾರೂ ಒಪ್ಪಿರಲಿಲ್ಲವಂತೆ! ಈ ವಿಷಯವನ್ನು ಅವರ ಬಾಯಲ್ಲೇ ಕೇಳಿ...
ರಾಜೇಶ್ ನಟರಂಗ ಎನ್ನುವುದಕ್ಕಿಂತಲೂ ಸದ್ಯ ಸಾಕಷ್ಟು ಫೇಮಸ್ ಆಗಿರೋರುವವರು ಅಮೃತಧಾರೆ ಡುಮ್ಮಾ ಸರ್ ಉರ್ಫ್ ಗೌತಮ್. ಮಿಲೇನಿಯರ್ ಬಿಜಿನೆಸ್‌ಮೆನ್. ಯಾವುದೇ ವ್ಯವಹಾರವನ್ನು ಫಟಾಫಟ್ ಮಾಡಬಲ್ಲ. ಆದರೆ ಪ್ರೀತಿಯ ವಿಷಯ ಬಂದಾಗ ಮಾತ್ರ ಜೀರೋ ಇದ್ದ ಗೌತಮ್ ಈಗ ಪ್ರೀತಿಯಲ್ಲಿಯೂ ಹೀರೋ ಆಗಿದ್ದಾನೆ. ಗೌತಮ್ ಮತ್ತು ಭೂಮಿಕಾ ಪ್ರೀತಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ. ಇದ್ದರೆ ಇಂಥ ಕಪಲ್ ಇರಬೇಕು ಎನ್ನುವವರೇ ಹೆಚ್ಚು. ಅದರಲ್ಲಿಯೂ ಇದದ್ದರೆ ಗೌತಮ್ನಂಥ ಪತಿ ಇರಬೇಕು, ಎಲ್ಲರಿಗೂ ಇಂಥ ಪತಿ ಸಿಗಲಿ ಎಂದೇ ಹಲವು ಹೆಣ್ಣುಮಕ್ಕಳು ಅಂದುಕೊಳ್ಳುವುದು ಉಂಟು. ಆದ್ರೆ ನಿಮ್ಗೆ ಗೊತ್ತಾ? ನಿಜ ಜೀವನದಲ್ಲಿ ಗೌತಮ್ಗೆ ಮದ್ವೆ ಎನ್ನುವುದೇ ದೊಡ್ಡ ಸವಾಲಾಗಿ ಹೋಗಿತ್ತಂತೆ!
ಹೌದು. ಇವರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬಂದಿರಲಿಲ್ಲ. ಈ ವಿಷಯವನ್ನು ಖುದ್ದು ಅವರೇ ಕೀರ್ತಿ ಎಂಟರ್ಟೇನ್ಮೆಂಟ್ ಕ್ಲಿನಿಕ್ (keerthientclinic)ಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅವರು ಸಂದರ್ಶನದಲ್ಲಿ ಮದುವೆ ಮತ್ತು ಪತ್ನಿಯ ಬಗ್ಗೆ ಏನು ಹೇಳಿದ್ದಾರೆ ನೋಡಿ. 2005 ಮನೆಯವರಿಂದ, ಗೆಳೆಯರಿಂದ ನನ್ನ ಮದ್ವೆಗೆ ಧರಣಿ ನಡೀತಿದ್ದು. ಆದ್ರೆ ಊರಿನಲ್ಲಿ ಇರೋ ಯಾವ ಹೆಣ್ಣುಮಕ್ಕಳೂ ನನ್ನನ್ನು ಮದ್ವೆಯಾಗೋಕೆ ರೆಡಿನೇ ಇರಲಿಲ್ಲ. ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಆಗ ನನ್ನ ಬ್ಯಾಚುಲರ್ಸ್ ಫ್ರೆಂಡ್ಸ್ ನನಗೆ ಜತೆಯಾದ್ರು. ಬೇಜಾರು ಮಾಡ್ಕೋಬೇಡ ಕಣೋ. ಯಾಕೆ ಮದುವೆಯಾಗಬೇಕು, ಮದ್ವೆಯಾಗದೇ ಆರಾಮಾಗಿ ಇರಬಹುದು ಎಂದ್ರು. ಆ ಟೈಮ್ನಲ್ಲಿ ಕರ್ನಾಟಕದ ದಕ್ಷಿಣ ಭಾಗದಿಂದ ಒಂದು ಫೋಟೋ ಬಂತು. ಈ ಹುಡುಗಿಯನ್ನು ಒಮ್ಮೆ ನೋಡಿ ಅಂತ. ಇದೇ ಕೊನೆ ಫೋಟೋ, ಮತ್ತೆ ಮದ್ವೆನೇ ಬೇಡ ಅಂದ್ಕೊಂಡು ಆ ಫೋಟೋ ನೋಡಿದೆ ಎಂದು ಆ ದಿನಗಳನ್ನುನೆನಪಿಸಿಕೊಂಡಿದ್ದಾರೆ ರಾಜೇಶ್ ನಟರಂಗ.
ಬಿಗ್ಬಾಸ್ಗೆ ಸುದೀಪ್ ಗುಡ್ಬೈ ಹೇಳಲು ಇದೇ ಕಾರಣವಾಯ್ತಾ? ಚರ್ಚೆಗೆ ಗ್ರಾಸವಾಗ್ತಿದೆ ಮಾಜಿ ಸ್ಪರ್ಧಿಯ ಟ್ವೀಟ್
ಈ ವಿಷಯವನ್ನು ತುಂಬಾ ಇಂಟರೆಸ್ಟಿಂಗ್ ಆಗಿ ಹೇಳಿದ ಅವರು, ಆ ಸಮಯದಲ್ಲಿ ಇವಳ ಫೋಟೋ ನನ್ನ ಕೈಸೇರುತ್ತೆ, ಕಣ್ ನೋಡುತ್ತೆ, ಒಳಗೆ ಟಣ್ ಎನ್ನತ್ತೆ, ನೋಡೋಣ ಅಂತ ಹುಡುಗಿ ನೋಡೋ ಕಾರ್ಯಕ್ರಮನೂ ಆಗುತ್ತೆ. ಅವಳನ್ನು ನೋಡಿದ ಮೇಲೆ ಹೌದು ಯಾಕೆ ಮದ್ವೆಯಾಗಬಾರದು ಎನ್ನಿಸಿ, ಮದ್ವೆಯಾಗಿ ಈಗ ಸುಂದರ ಸಂಸಾರ ನಡೆಸುತ್ತಿದ್ದೇವೆ. ಇವಳು ನನ್ನ ಏಕೈಕ ಪತ್ನಿ ಚೈತ್ರಾ ರಾಜೇಶ್ ಎಂದಿದ್ದಾರೆ ರಾಜೇಶ್. ಹಿಂದೊಮ್ಮೆ ರಿಯಾಲಿಟಿ ಷೋನಲ್ಲಿ ತಮ್ಮ ಅಳಿಯನನ್ನು ಚೈತ್ರಾ ಅವರ ಅಮ್ಮ ಬಾಯ್ತುಂಬಾ ಹೊಗಳಿದ್ದರು. ತಮ್ಮ ಮಗಳಿಗೆ ಎಂಥ ಗಂಡ ಬೇಕಿತ್ತು ಎಂಬ ಬಗ್ಗೆ ಕನಸು ಕಂಡಿದ್ದೆ. ಪ್ರತಿಯೊಬ್ಬ ತಾಯಿಯೂ ತಮ್ಮ ಮಗಳಿಗೆ ಇದೇ ರೀತಿ ಗಂಡ ಸಿಗಬೇಕು ಎಂದು ಕನಸು ಕಂಡಿರುತ್ತಾಳೆ. ಆದರೆ ಕೆಲವರಿಗೆ ಮಾತ್ರ ಆ ಅದೃಷ್ಟ ಸಿಕ್ಕಿರುತ್ತದೆ. ನನ್ನ ಮಗಳಿಗೆ ಯಾವ ರೀತಿಯ ಗಂಡ ಸಿಗಬೇಕು ಎಂದು ಕನಸು ಕಂಡಿದ್ದೆನೋ ನಿಜಕ್ಕೂ ಅಂಥದ್ದೇ ಗಂಡ ಸಿಕ್ಕಿದ್ದಾನೆ ಎಂದು ಭಾವುಕರಾಗಿದ್ದರು.
ಇನ್ನು ರಾಜೇಶ್ ನಟರಂಗ ಕುರಿತು ಹೇಳುವುದಾದರೆ, ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.