Asianet Suvarna News Asianet Suvarna News

ರಾಮ್​ಗೆ ಹುಟ್ಟುಹಬ್ಬದ ಸಂಭ್ರಮ: ವಿಶೇಷ ವಿಡಿಯೋ ರಿಲೀಸ್​- ಸೀತಾರಾಮ ನಾಯಕನ ರಿಯಲ್​ ಸ್ಟೋರಿ ಇಲ್ಲಿದೆ

ಸೀತಾರಾಮ ಸೀರಿಯಲ್​ ನಾಯಕ ರಾಮ್​  ಪಾತ್ರಧಾರಿ ಗಗನ್​ ಚಿನ್ನಪ್ಪ ಅವರ ಹುಟ್ಟುಹಬ್ಬವಿಂದು. ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ರಿಲೀಸ್​ ಮಾಡಿದೆ. 
 

Birthday of Gagan Chinnappa hero of Seetarama serial Ram special video released suc
Author
First Published Dec 14, 2023, 12:35 PM IST

 ಸದ್ಯ ರಾಮ್​ ಎಂದರೆ ಸಾಕು. ಶ್ರೀರಾಮಚಂದ್ರನಿಗಿಂತಲೂ ಮುಂಚಿತವಾಗಿ ಕನ್ನಡ ಸೀರಿಯಲ್​ ಪ್ರಿಯರ ಕಣ್ಣಮುಂದೆ ಬರುವುದು ಸೀತಾರಾಮ ಧಾರಾವಾಹಿಯ ನಾಯಕ ರಾಮ್​ ಮುಖ. ಅಷ್ಟರಮಟ್ಟಿಗೆ ಈ ಸೀರಿಯಲ್​ ಹಲವರಿಗೆ ಪ್ರಿಯವಾಗಿದೆ. ಬೇರೆ ಧಾರಾವಾಹಿಗಳಿಗಿಂತ ಸ್ವಲ್ಪ ವಿಭಿನ್ನ ಕಥಾಹಂದರ ಹೊಂದಿರುವ ಈ ಸೀರಿಯಲ್​ ಅನ್ನು ಇಷ್ಟಪಟ್ಟು ನೋಡುವ ದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಇಂದು ಅಂದರೆ ಡಿಸೆಂಬರ್​ 14 ಸೀತಾರಾಮ ಸೀರಿಯಲ್​ ರಾಮ್​ಗೆ ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ, ರಾಮ್​ ಪಾತ್ರಧಾರಿಯ ನಿಜಯವಾದ ಹೆಸರು ಗಗನ್​ ಚಿನ್ನಪ್ಪ. ಗಗನ್​ ಅವರ ಹುಟ್ಟುಹಬ್ಬದ ನಿಮಿತ್ತ ಜೀ ಕನ್ನಡ ವಾಹಿನಿ ವಿಶೇಷವಾಗಿರುವ ವಿಡಿಯೋ ಒಂದನ್ನು ರಿಲೀಸ್​ ಮಾಡಿದೆ. ಇದರಲ್ಲಿ ಸೀತಾರಾಮ ಸೀರಿಯಲ್​ ಶೂಟಿಂಗ್​ನ ಕೆಲವೊಂದು ತುಣುಕುಗಳನ್ನು ಬಿತ್ತರಿಸಲಾಗಿದ್ದು, ವಿಶೇಷ ರೀತಿಯಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲಾಗಿದೆ.

ಇನ್ನು ಗಗನ್​ ಚಿನ್ನಪ್ಪ ಅವರ ಸೀರಿಯಲ್​ ಲೈಫ್​ ಟಿ.ವಿ.ವೀಕ್ಷಕರಿಗೆ ಗೊತ್ತೇ ಇದೆ. ಇದರಲ್ಲಿ ರಾಮ್​ ದೊಡ್ಡ ಬಿಜಿನೆಸ್​ಮೆನ್​. ಆದರೆ ತನ್ನದೇ ಕಂಪೆನಿಯಲ್ಲಿ ಯಾರಿಗೂ ತಿಳಿಯದಂತೆ ಸಾಮಾನ್ಯ ನೌಕರನಂತೆ ಕೆಲಸ ಮಾಡುತ್ತಿದ್ದಾನೆ. ಭಗ್ನಪ್ರೇಮಿಯಾಗಿರುವ ಈತ ಸದ್ಯ ವಿಧವೆಯಾಗಿರುವ ಸೀತಾಳ ಪ್ರೀತಿಯ ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಇದು ಧಾರಾವಾಹಿ ಆಯ್ತು. ಆದರೆ ಅಸಲಿಗೆ ಕೊಡಗು ಮೂಲದ ಗಗನ್​,  ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು  ಎರಡು ವರ್ಷ ಓಮನ್‌ ದೇಶದಲ್ಲಿ ಅದಾದ ಬಳಿಕ  ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್​ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು.

ಸೀತಾರಾಮ ಸೀರಿಯಲ್​ ಸೆಟ್ ಹೇಗಿದೆ? ಶೂಟಿಂಗ್​ ಹೇಗೆ ಮಾಡ್ತಾರೆ? ವಿಡಿಯೋ ಮೂಲಕ ವೈಷ್ಣವಿ ಮಾಹಿತಿ

ಆಗಿದ್ದೇನೆಂದರೆ, ಅದು 2014 ರ ಸಮಯ.  ಫೋಟೋಶೂಟ್​ ಮಾಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್​ ಬಂದಿತ್ತು. ಬಣ್ಣದ ಲೋಕದ ಸೆಳೆತದಿಂದ ಅಬುದಾಬಿ ಬಿಟ್ಟು ಬೆಂಗಳೂರಿಗೆ ಬಂದರು. ಚಿತ್ರದಲ್ಲಿ ನಟಿಸಿದರೂ ಅದು ರಿಲೀಸ್​ ಆಗಲೇ ಇಲ್ಲ. ಸೀರಿಯಲ್​ಗಳಲ್ಲಿ ಆಡಿಷನ್​ ಕೊಟ್ಟರೂ ಭಾಷೆ ಸರಿಯಿಲ್ಲವೆಂದು ರಿಜೆಸ್ಟ್​ ಆಗುತ್ತಿದ್ದಂತೆ. ನಂತರ ಬಣ್ಣದ ಲೋಕ ಬೇಡ ಎಂದು  ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಶುರು ಮಾಡಿದರು. ಆದರೆ ಬಣ್ಣದ ಲೋಕದ ಸೆಳೆತ ಇದ್ದೇ ಇದ್ದು.  ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು.  ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್​ಗೂ ಎಂಟ್ರಿ ಕೊಟ್ಟು ಈಗ  ಸೀತಾರಾಮ ಸೀರಿಯಲ್​ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ.  ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್​ ಅವರು,  ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು  ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಹಿಂದೊಮ್ಮೆ ನೀಡಿದ್ದ ಸಂದರ್ಶನದಲ್ಲಿ ಗಗನ್​ ಅವರು, ತಮ್ಮ ಬಾಲ್ಯದ ದಿನಗಳನ್ನು ಹೇಳಿಕೊಂಡಿದ್ದರು. ಬಾಲ್ಯದಿಂದಲೂ ಅಪ್ಪ ಅಮ್ಮನ ಸಹಕಾರ ಪಡೆಯದೇ ಖುದ್ದು ಕೆಲಸ ಮಾಡುತ್ತಲೇ ಶಾಲೆ, ಕಾಲೇಜಿನ ಫೀಸ್‌ ತಾವೇ ಕಟ್ಟಿಕೊಳ್ಳುತ್ತ ಬಂದವರು ಎಂದಿದ್ದರು.  ಸೆಕೆಂಡ್‌ ಪಿಯುಸಿ ಆದ ಮೇಲೆ, ಮನೆಯಿಂದ ಆಚೆ ಬಂದಾಗಿನಿಂದಲೂ  ಇಂಡಿಪೆಂಡೆಂಟ್‌ ಆಗಿಯೇ ಇದ್ದೆ. ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು, ನಾನೇ ನನ್ನ ಕಾಲೇಜು ಫೀಸ್‌ ಕಟ್ಟಿಕೊಂಡು ಹೋಗ್ತಿದ್ದೆ. ಜತೆಗೆ ಬಿಕಾಂ ಡಿಗ್ರಿಯನ್ನೂ ಕಂಪ್ಲಿಟ್‌ ಮಾಡಿಕೊಂಡೆ ಎಂದಿದ್ದರು.

ಕಬಡ್ಡಿ ಪಂದ್ಯದಿಂದ ಶುರುವಾಗಿ ಮದುವೆ ಉಂಗುರ ತೆಗೆಯುವವರೆಗೆ: ಐಶ್​-ಅಭಿ ಡಿವೋರ್ಸ್​ ನಿಜವಾಯ್ತಾ?

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios