ಸೀತಾರಾಮ ಸೀರಿಯಲ್​ ಸೆಟ್ ಹೇಗಿದೆ? ಶೂಟಿಂಗ್​ ಹೇಗೆ ಮಾಡ್ತಾರೆ? ವಿಡಿಯೋ ಮೂಲಕ ವೈಷ್ಣವಿ ಮಾಹಿತಿ

ಸೀತಾರಾಮ ಸೀರಿಯಲ್​ನ ಶೂಟಿಂಗ್​ ಸೆಟ್​ ಅನ್ನು ಹೇಗೆ ರೂಪಿಸಲಾಗಿದೆ ಎಂಬ ಬಗ್ಗೆ ಸೀತಾ ಪಾತ್ರಧಾರಿ ವೈಷ್ಣವಿ ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
 

Vaishnavi Gowdas information  about how the shooting set of Seetharama Serial suc

ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ಅದೇ ಒಂದು ಶೂಟಿಂಗ್​ ಮನೆಯ ಚಿತ್ರಣವನ್ನು ತೋರಿಸಿದ್ದಾರೆ ನಟಿ ವೈಷ್ಣವಿ ಆರ್​.ಬಿ.ಗೌಡ ಅರ್ಥಾತ್​ ಜೀ ಕನ್ನಡ ಸೀರಿಯಲ್​ನಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ ಸೀತಾ. ವೈಷ್ಣವಿ ಅವರು ಇದಾಗಲೇ ತಮ್ಮ ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಎರಡನೆಯ ಮನೆ ಎಂದೇ ಖ್ಯಾತಿ ಪಡೆದಿರುವ ಸೀತಾರಾಮ ಸೀರಿಯಲ್​ ಸೆಟ್​ ಕುರಿತು ಮಾಹಿತಿ ನೀಡಿದ್ದಾರೆ. ಮನೆಗಿಂತ ಸೆಟ್​ನಲ್ಲಿ ಹೆಚ್ಚು ಹೊತ್ತು ಶೂಟಿಂಗ್​ ಸೆಟ್​ನಲ್ಲಿ ಇರುವುದರಿಂದ ಇದು ನಮ್ಮ ಸೆಕೆಂಡ್​ ಮನೆ ಆಗಿದೆ. ಶೂಟಿಂಗ್​ ಸಮಯದಲ್ಲಿ ಥೇಟ್​ ವಠಾರ ಹಾಗೂ ಮನೆಯ ಚಿತ್ರವಣವನ್ನು ಇಲ್ಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಂತಾರ-1 ಚಿತ್ರದಲ್ಲಿ ನಟಿಸೋ ಆಸೆಯಿದ್ಯಾ? ಕಲಾವಿದರಿಗೆ ಇದೋ ಇಲ್ಲಿದೆ ಸುವರ್ಣಾವಕಾಶ...
 
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವಂತೆ ಗೋಡೆಗಳ ಮೇಲೆ ಪೋಸ್ಟರ್​ಗಳನ್ನು ಹಾಕಲಾಗುತ್ತದೆ. ಕಾಂಪೌಂಡ್​ ಅಂತೆ ತೋರುವ ಗೋಡೆಗಳನ್ನೂ ಹಾಕಲಾಗುತ್ತದೆ. ಆದರೆ ಅಸಲಿಗೆ ಅದು ಗೋಡೆಗಳಲ್ಲ, ಬದಲಿಗೆ ಅದನ್ನೇ ಹೋಲುವ ರೀತಿಯಲ್ಲಿ ಕಟ್ಟಿಗೆಗಳ ಮೇಲೆ  ಕ್ರೇಪ್ ವರ್ಕ್​​ ಮಾಡಿರುತ್ತಾರೆ. ಇದು ಸೆಟ್​ ಆಗಿರುವ ಕಾರಣ,  ನಿಜವಾದ ಗೋಡೆ ಅಂತ ಅನಿಸುತ್ತದೆ. ಸಾಮಾನ್ಯವಾಗಿ  ಗೋಡೆಯನ್ನು ಯಾರೂ ಏರಬಾರದು ಎಂದು  ಗಾಜು ಹಾಕಿಡಲಾಗುತ್ತದೆ. ಅದೇ ನೈಜತೆ ಕಾಣಿಸಲು ಸೀತಾರಾಮ ಸೀರಿಯಲ್​ನ ನಕಲಿ ಗೋಡೆಗಳ ಮೇಲೂ ಗಾಜು ಹಾಕಲಾಗಿದೆ ಎಂಬ ಬಗ್ಗೆ ತೋರಿಸಿಕೊಟ್ಟಿದ್ದಾರೆ ವೈಷ್ಣವಿ.

ಶೂಟಿಂಗ್ ಸೆಟ್​ನಲ್ಲಿಯೇ  ಅಂಗಡಿಗಳೂ ಇವೆ. ಬೆಳಿಗ್ಗೆ ಎದ್ದು ತಕ್ಷಣ ನಂದಿನಿ ಪಾರ್ಲರ್​ನಿಂದ ನಮ್ಮ ದಿನ ಪ್ರಾರಂಭವಾಗುತ್ತದೆ ಎಂದಿರುವ ನಟಿ, ಸೆಟ್​ನಲ್ಲಿ ಸಿಗುವ  ಪ್ರೊವಿಷನ್​ ಸ್ಟೋರ್ಸ್​,  ಕಾಫಿ ಅಂಗಡಿಯ ಮಾಹಿತಿ ನೀಡಿದ್ದಾರೆ. ವಠಾರದಂತೆ  ಕಾಣಿಸಲು ಒಂದು ಕಟ್ಟೆ ಅಲ್ಲೊಂದು ಹುಣಸೆ ಮರ ಹೇಗೆ ಸೆಟ್​ ಮಾಡಲಾಗಿದೆ ಎಂಬ ಅಂಶವನ್ನು ತೋರಿಸಿದ್ದಾರೆ.  

2023ರಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ್ದೇ ಈಕೆಯನ್ನು! ಎಲ್ಲಾ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ ಚೆಲುವೆ ಯಾರು?

ಅಲ್ಲಿಂದ ವಠಾರದ ಒಳಗೆ ನಮ್ಮನ್ನು ಕರೆದುಕೊಂಡು ಹೋಗಿರುವ ವೈಷ್ಣವಿ, ಅಲ್ಲಿ ಶಾಂತಮ್ಮನ ವಠಾರ ಬೋರ್ಡ್​ ತೋರಿಸಿದ್ದಾರೆ.  ಮಿಡ್ಲ್​ ಕ್ಲಾಸ್​ ಮನೆಯ ಸಂಪೂರ್ಣ ಚಿತ್ರಣ ಈ ಸೆಟ್​ನಲ್ಲಿ ತೋರಿಸಲಾಗಿದೆ. ಗಾಜು ಒಡೆದದ್ದು, ಬಟ್ಟೆ ಒಣ ಹಾಕುವುದು ಎಲ್ಲವನ್ನೂ ನೈಜತೆ ಬರುವಂತೆ ಸೆಟ್​ನಲ್ಲಿ ಇಡಲಾಗಿದೆ. ಎಲ್ಲಾ ಡಿಟೇಲ್​ಗಳನ್ನು ನಟಿ ತೋರಿಸಿದ್ದಾರೆ. ಸಾಮಾನ್ಯವಾಗಿ ವಠಾರಗಳಲ್ಲಿ ನೀರು ಹಿಡಿಯಬೇಕಾದರೆ ಜಗಳವಾಗುವುದು ಮಾಮೂಲು. ಆದ್ರೆ ಸೀತಾರಾಮದಲ್ಲಿ ಹೀಗೆ ಇರದ ಕಾರಣ, ಎಲ್ಲರೂ ಪೀಸ್​ಫುಲ್​ ಆಗಿ ನೀರು ಹಿಡಿಯುತ್ತೇವೆ ಎಂದು ತಮಾಷೆ ಮಾಡಿದ್ದಾರೆ.  ಮನೆಯಲ್ಲಿ ಏನೇನು ಇರುತ್ತದೆಯೋ ಅವೆಲ್ಲವನ್ನೂ ಸೆಟ್​ನಲ್ಲಿ ನೈಜತೆ ಇರುವಂತೆ ಬಿಂಬಿಸಲಾಗಿದೆ ಎಂಬ ಬಗ್ಗೆ ಸಂಪೂರ್ಣ ವಿವರಣೆ ನೀಡಿರುವ ನಟಿ,  ಮನೆಯೂ ಈ ಸೀರಿಯಲ್​ನ ಒಂದು ಪಾತ್ರವೇ ಆಗಿರುವ ಕಾರಣ, ನಟ-ನಟಿಯರಂತೆ ಇದಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದಿದ್ದಾರೆ. ಇನ್ನು ಮನೆಯ ಒಳಗಡೆ ಏನೆಲ್ಲಾ ಇದೆ ಎಂಬುದನ್ನು ಮುಂದಿನ ವಿಡಿಯೋದಲ್ಲಿ ತೋರಿಸುವುದಾಗಿ ಹೇಳಿದ್ದಾರೆ. ಶೂಟಿಂಗ್​ ಸ್ಪಾಟ್​ ಹೇಗೆಲ್ಲಾ ಇರುತ್ತದೆ ಎನ್ನುವುದನ್ನು ನೋಡಿದ ನೆಟ್ಟಿಗರು ಥಹರೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. 

 

Latest Videos
Follow Us:
Download App:
  • android
  • ios