Asianet Suvarna News Asianet Suvarna News

ಕಬಡ್ಡಿ ಪಂದ್ಯದಿಂದ ಶುರುವಾಗಿ ಮದುವೆ ಉಂಗುರ ತೆಗೆಯುವವರೆಗೆ: ಐಶ್​-ಅಭಿ ಡಿವೋರ್ಸ್​ ನಿಜವಾಯ್ತಾ?

ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರು ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ಈ ಹಿಂದೆ ನಡೆದ ಹಲವು ಘಟನೆಗಳೀಗ ಮುನ್ನಲೆಗೆ ಬಂದಿವೆ. ಏನದು? 
 

Timeline Of Events Which Made Believe Aishwarya Abhishek  Heading For Divorce suc
Author
First Published Dec 12, 2023, 3:43 PM IST

ಸದ್ಯ ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ.ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ.

ಅಷ್ಟಕ್ಕೂ ಡಿವೋರ್ಸ್​ ವಿಷಯದ ಚರ್ಚೆ ಶುರುವಾಗಿದ್ದು ಎಲ್ಲಿಂದ ಎಂದು ನೋಡುವುದಾದರೆ, ಅಭಿಷೇಕ್ ಬಚ್ಚನ್ ಅವರ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ಆಡಿದ ಕಬ್ಬಡಿ ಪಂದ್ಯವೊಂದರಲ್ಲಿ ಪಾಲ್ಗೊಂಡಿತ್ತು. ಆ ಸಮಯದಲ್ಲಿ ಐಶ್ವರ್ಯ ಮಗಳೊಂದಿಗೆ ಭಾಗವಹಿಸಿದ್ದರು.  ಆ ಸಮಯದಲ್ಲಿ ಪ್ರಸಾರವಾದ ವಿಡಿಯೋದಲ್ಲಿ  ಅಭಿಷೇಕ್ ಐಶ್ವರ್ಯಾ ಅವರಿಗೆ ಏನೋ ಹೇಳುತ್ತಿದ್ದಾಗ ಅವರು ಮುಖ ತಿರುಗಿಸಿದ್ದರು. ಅಲ್ಲಿಯೇ ಇಲ್ಲ ಅಮಿತಾಭ್​ ಅವರ ಮೊಮ್ಮಗಳು ನವ್ಯಾ ನವೇಲಿ ಜೊತೆಗೂ ಐಶ್ವರ್ಯ ವರ್ತನೆ ಅಷ್ಟು ಸರಿಯಾಗಿ ಕಂಡು ಬಂದಿರಲಿಲ್ಲ. ಇದು ದೊಡ್ಡಮಟ್ಟದಲ್ಲಿ ಆಗ ಸುದ್ದಿಯಾಗಿತ್ತು. ಅದಾದ ಬಳಿಕ ನಡೆದ ಒಂದೊಂದೇ ಘಟನೆಗಳನ್ನು ತಾಳೆ ಹಾಕುತ್ತಾ ಹೋದಂತೆ ವಿಚ್ಛೇದನದ ಸುದ್ದಿ ನಿಜವೇ ಎಂದು ಚರ್ಚೆ ಶುರುವಾಗಿದೆ.

ಅಭಿಷೇಕ್​ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್​ ವೈರಲ್​!

ಕಳೆದ ಅಕ್ಟೋಬರ್​ನಲ್ಲಿ  ನವ್ಯಾ ನವೇಲಿ ನಂದಾ ಅವರು ಪ್ಯಾರಿಸ್ ಫ್ಯಾಷನ್ ವೀಕ್ 2023 ರಲ್ಲಿ ರ‍್ಯಾಂಪ್ ಮೇಲೆ ನಡೆದಿದ್ದರು.  ನವ್ಯಾ ಈ ಸಂದರ್ಭದಲ್ಲಿ  ತಾಯಿ ಅಂದರೆ ಅಮಿತಾಭ್​ ಅವರ ಪುತ್ರಿ ಶ್ವೇತಾ ಬಚ್ಚನ್ ಹಾಗೂ ಅಜ್ಜಿ  ಜಯಾ ಬಚ್ಚನ್ ಜೊತೆಗಿದ್ದರು. ನವ್ಯಾ ತಮ್ಮ ಚೊಚ್ಚಲ ರ‍್ಯಾಂಪ್ ವಾಕ್​ ಕುರಿತು ಟಿಪ್ಪಣೆ ಬರೆದು  ಅದನ್ನು ಅಮ್ಮ ಶ್ವೇತಾ ಮತ್ತು ಜಯಾ ಅವರೊಂದಿಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಆದರೆ ಈವೆಂಟ್‌ನ ಭಾಗವಾಗಿದ್ದ ಐಶ್ವರ್ಯಾ ರೈ ಬಚ್ಚನ್ ಅವರ ಯಾವುದೇ ಚಿತ್ರವನ್ನು ನವ್ಯಾ ಹಾಕಿರಲಿಲ್ಲ, ಅಷ್ಟೇ ಅಲ್ಲದೇ ತಮ್ಮ ಚೊಚ್ಚಲ ರ‍್ಯಾಂಪ್ ವಾಕ್​ ಕುರಿತು ಉಳಿದವರಿಗೆ ಟ್ಯಾಗ್ ಮಾಡಿದ್ದರೇ ವಿನಾ ಐಶ್ವರ್ಯ ಅವರನ್ನು ಹೊರಗಿಟ್ಟಿದ್ದರು. ಆಗಲೂ ಇದು ಸಕತ್​ ಸದ್ದು ಮಾಡಿತ್ತು.  ಮಾತ್ರವಲ್ಲದೇ ಈ ಬಗ್ಗೆ ಬರೆದ ಟಿಪ್ಪಣಿಯಲ್ಲಿ ಐಶ್ವರ್ಯ ಅವರನ್ನು ಹೊರತುಪಡಿಸಿ ಉಳಿದವರ ಹೆಸರನ್ನು ನವ್ಯಾ ಬರೆದಿದ್ದರು. 
 
ಇದಾದ ಬಳಿಕ ಅಂದರೆ, ಅಕ್ಟೋಬರ್ 11ರಂದು  ಅಮಿತಾಭ್ ಬಚ್ಚನ್ 81 ನೇ ವರ್ಷಕ್ಕೆ ಕಾಲಿಟ್ಟರು. ಆಗ  ಐಶ್ವರ್ಯಾ ರೈ, ಅವರ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಬಿಗ್​ ಬಿ ತಮ್ಮ  ಮೊಮ್ಮಗಳು ಆರಾಧ್ಯಳ ಜೊತೆಗಿನ ಫೋಟೋ ಶೇರ್​ ಮಾಡಿಕೊಂಡಿದ್ದರು. ಇದರಲ್ಲಿ ಫ್ಯಾಮಿಲಿ ಫೋಟೋ ಕೂಡ ಇತ್ತು. ಆದರೆ ಆ ಫೋಟೋದಲ್ಲಿ ಐಶ್ವರ್ಯ ಚಿತ್ರವನ್ನು ಕ್ರಾಪ್​ ಮಾಡಿರುವುದು ನೆಟ್ಟಿಗರ ಹದ್ದಿನ ಕಣ್ಣಿಗೆ ಕಂಡುಬಂದಿತ್ತು. ರೆಡ್ಡಿಟ್​ನಲ್ಲಿ ಶೇರ್​ ಆದ ಈ ಫೋಟೋ ಬಗ್ಗೆ ಸಾಕಷ್ಟು ಕಮೆಂಟ್​ಗಳು ಸುಳಿದಾಡಿದವು. ಅದೂ ಸಾಲದು ಎಂದರೆ,  ನವೆಂಬರ್ 1ರಂದು ಐಶ್ವರ್ಯ ರೈ ಅವರು  50 ನೇ ವರ್ಷಕ್ಕೆ ಕಾಲಿಟ್ಟರು ಮತ್ತು ಅವರ ಅಭಿಮಾನಿಗಳು ಪ್ರಪಂಚದಾದ್ಯಂತ ಹೃತ್ಪೂರ್ವಕ ಶುಭಾಶಯಗಳನ್ನು ಹರಿಸಿದರು. ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ತಮ್ಮ ತಾಯಿ ಬೃಂದಾ ರೈ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ದಿನವನ್ನು ಆಚರಿಸಿದರು. ಆದರೆ ಐಶ್ವರ್ಯಾ ಅವರ 50 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಷೇಕ್ ಬಚ್ಚನ್ ಆಗಲಿ ಅಥವಾ ಬಚ್ಚನ್ ಮನೆತನದ ಯಾರೊಬ್ಬರೂ  ಹಾಜರಾಗದೇ ಇರುವುದು ಎಂದರೆ ಸುಮ್ಮನೆಯೆ? ಇದರಿಂದ ಬಿಗ್​-ಬಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂದು ತಿಳಿಯುತ್ತಿದೆ. 

ಸಲ್ಮಾನ್​ ತಾಯಿ 81ನೇ ಹುಟ್ಟುಹಬ್ಬ: ಗಿಣಿಯಂತೆ ಸಾಕುವೆನೆಂದು ಸುಶೀಲಾಳನ್ನು ಮದ್ವೆಯಾಗಿದ್ದ ಸಲೀಂ- ಮುಂದೇನಾಯ್ತು?

ಇದಾದ ಬಳಿಕ ಏಸ್ ಫ್ಯಾಷನ್ ಡಿಸೈನರ್, ಮನೀಶ್ ಮಲ್ಹೋತ್ರಾ ಅವರು ನವೆಂಬರ್ 2023 ರಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದ ಸಂದರ್ಭದಲ್ಲಿ ಅಭಿಷೇಕ್​ ಅವರು ಮೊಟ್ಟಮೊದಲ ಬಾರಿಗೆ ಮದುವೆಯ ಉಂಗುರವನ್ನು ಧರಿಸದೇ ಬಂದಿದ್ದು ಅಂತಿಮವಾಗಿ ಇವರ ವಿಚ್ಛೇದನ ಗ್ಯಾರೆಂಟಿ ಎಂದೇ ಹೇಳಲಾಗುತ್ತಿದೆ. ಇದಾದ ಬಳಿಕ ಅಮಿತಾಭ್​ ಬಚ್ಚನ್​ ಅವರು ಐಶ್ವರ್ಯ ಅವರನ್ನು ಅನ್​ಫಾಲೋ ಮಾಡಿದ್ದಾರೆ ಎನ್ನುವ ಸುದ್ದಿ ಹಾಗೂ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಈ ಎಲ್ಲಾ ಊಹಾಪೋಹಗಳ ನಡುವೆ ಅಮಿತಾಭ್​ ಅವರು ರಹಸ್ಯವಾದ ಹೇಳಿಕೆಯನ್ನು ಪ್ರಕಟಿಸಿದರು.  ಕೌನ್ ಬನೇಗಾ ಕರೋರ್​ಪತಿಯ ಸೆಟ್‌ನಲ್ಲಿರುವ ಫೋಟೋವನ್ನು ವಿಚಿತ್ರವಾದ ಹೇಳಿಕೆಯೊಂದಿಗೆ ಪ್ರಕಟಿಸಿದರು ಬಿಗ್​-ಬಿ. ಕಪ್ಪು ಬಿಳುಪು ಫೋಟೋ ಅನ್ನು ಪೋಸ್ಟ್ ಮಾಡಿ,  'ಎಲ್ಲವೂ ಹೇಳಿಯಾಗಿದೆ, ಎಲ್ಲವೂ ಮುಗಿದಿದೆ.  ಆದ್ದರಿಂದ ಮಾಡಿರುವುದನ್ನು ಮಾಡಿ ಮತ್ತು ಮಾಡುವುದನ್ನು ಮಾಡಿ' ಎಂದು ಬಿಗ್‌ ಬಿ ಬರೆದಿರುವುದು ಇನ್ನಷ್ಟು ಸುದ್ದಿಗಳಿಗೆ ಎಡೆ ಮಾಡಿಕೊಟ್ಟಿದೆ. 

ಐಶ್ವರ್ಯ ರೈ ತೂಕ ಹೆಚ್ಚಿಸಿಕೊಂಡಿದ್ದೇಕೆ? ಪತ್ನಿಯ ಕುರಿತು ಅಭಿಷೇಕ್​ ಬಚ್ಚನ್ ಬಿಚ್ಚು ಮನಸಿನ ಮಾತು...
 

Follow Us:
Download App:
  • android
  • ios