Asianet Suvarna News Asianet Suvarna News

ಕಂಬಳ ವೀಕ್ಷಣೆ ವೇಳೆ ಸಾನ್ಯಾ ಅಯ್ಯರ್‌ಗೆ ಕಿರುಕುಳ; ಕಪಾಳಮೋಕ್ಷ ಮಾಡಿದ ನಟಿ ವಿಡಿಯೋ ವೈರಲ್?

ಅಭಿಮಾನಿ ಇಬ್ರಾಹಿಂನಿಂದ ಸಾನ್ಯಾ ಅಯ್ಯರ್‌ಗೆ ಕಿರುಕುಳ. ಅನುಚಿತ ವರ್ತನೆ ತೋರಿಸ ಅಭಿಮಾನಿ ಮೇಲೆ ಸಾನ್ಯಾ ಸ್ನೇಹಿತರು ಗರಂ.... 

Bigg boss Sanya Iyer molested in putturu Kambala event vcs
Author
First Published Jan 31, 2023, 12:49 PM IST

ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ಸಾನ್ಯಾ ಅಯ್ಯರ್ ದೊಡ್ಡ ಬ್ರೇಕ್ ತೆಗೆದುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ಸ್‌ ರಿಯಾಲಿಟಿ ಶೋ ಮೂಲಕ ಬಿಗ್ ಕಮ್ ಬ್ಯಾಕ್ ನೀಡಿದ್ದರು. ಜೊತೆಗಿದ್ದ ಡ್ಯಾನ್ಸ್‌ ಪಾರ್ಟನರ್‌ ವೈಯಕ್ತಿಕ ಕಾರಣಗಳಿಂದ ಶೋ ನಡುವೆ ಕೈ ಬಿಟ್ಟ ಕಾರಣ ಸಾನ್ಯಾ ಕೂಡ ತಮ್ಮ ಡ್ಯಾನ್ಸ್‌ ಜರ್ನಿ ನಿಲ್ಲಿಸಬೇಕಿತ್ತು. ಅದಾದ ಮೇಲೆ ಸಾನ್ಯಾ ಕೈ ಸೇರಿದ್ದು ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋ. 49 ದಿನಗಳ ಜರ್ನಿ ಮುಗಿಸಿ ಅತಿ ಹೆಚ್ಚು ವೋಟ್ ಪಡೆದುಕೊಂಡಿದ್ದ ಕಾರಣ ಸಾನ್ಯಾ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೇಶ ಪಡೆದುಕೊಂಡರು. ಅಲ್ಲಿಂದ ಸಾನ್ಯಾ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. 

ಕೆಲವು ದಿನಗಳಿಂದ ಪುತ್ತೂರಿನಲ್ಲಿ ಕಂಬಳ ಅದ್ಧೂರಿಯಾಗಿ ನಡೆಯುತ್ತಿದೆ. ಕಂಬಳ ಕಾರ್ಯಕ್ರಮ ಉದ್ಘಾಟನೆ ಮಾಡಿ ವೀಕ್ಷಿಸಲು ಸಾನ್ಯಾ ತಮ್ಮ ತಾಯಿ ದೀಪಾ ಮತ್ತು ಸ್ನೇಹಿತರ ಜೊತೆ ಆಗಮಿಸಿದ್ದರು. ಈ ವೇಳೆ ಅಭಿಮಾನಿ ಅಸಭ್ಯವಾಗಿ ವರ್ತಿಸಿದ್ದಾರೆ ಇದರಿಂದ ಸಾನ್ಯಾ ಮತ್ತು ಸ್ನೇಹಿತರು ಕೋಪಗೊಂಡು ವೇದಿಕೆ ಮೇಲೆ ತರಾಟೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. 

ಭಾನುವಾರ (29 ಜನವರಿ) ಕಾರ್ಯಕ್ರಮ ಉದ್ಘಾಟನೆ ಮಾಡಿದ ನಂತರ ಸಾನ್ಯಾ ಅಯ್ಯರ್ ಪುತ್ತೂರಿನಲ್ಲಿರುವ ಹೋಟೆಲ್‌ ರೂಮ್‌ಗೆ ತೆರಳಿ ಕೆಲವು ನಿಮಿಷಗಳ ಕಾಲ ವಿಶ್ರಾಂತಿಸಿ ಮತ್ತೆ ವಾಪಸ್ ಬಂದಿದ್ದಾರೆ. ಕಂಬಳ ವೀಕ್ಷಿಸಲು ತಾಯಿ ಮತ್ತು ಸ್ನೇಹಿತೆ ಜೊತೆ ವೇದಿಕೆ ಮೇಲೆ ಕುಳಿತುಕೊಂಡಿದ್ದಾರೆ. ಅಲ್ಲಿದ್ದ ಅಭಿಮಾನಿಯೊಬ್ಬ ಸೆಲ್ಫಿ ಬೇಕೆಂದು ನಟಿ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಅಭಿಮಾನಿಯನ್ನು ಇಬ್ರಾಹಿಂ ಎಂದು ಗುರುತಿಸಲಾಗಿದೆ.    

ಸಾನ್ಯಾ ಅಯ್ಯರ್ ಜುಟ್ಟು ಎಳೆದ ಅಭಿಮಾನಿ; ಕಂಬಳ ವೇದಿಕೆ ಮೇಲೆ ನಟಿ ಗರಂ

ಸೆಲ್ಫಿ ಪಡೆಯಲು ಬಂದ ಅಭಿಮಾನಿ ಇಬ್ರಾಹಿಂ ಸಾನ್ಯಾ ಜುಟ್ಟು ಎಳೆದಿದ್ದಾರೆ. ಕೋಪಗೊಂಡ ಸಾನ್ಯಾ ಇಬ್ರಾಹಿಂಗೆ ಬೈದಿದ್ದಾರೆ ಅಲ್ಲಿ ಜಗಳ ದೊಡ್ಡದಾಗಿದೆ. ಕೋಪಗೊಂಡ ಸಾನ್ಯಾ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. ಸಾನ್ಯಾ ಮಾಡಿದ್ದು ತಪ್ಪು ಎಂದು ಇಬ್ರಾಹಿಂ ಸಾನ್ಯಾಗೆ ತಿರುಗಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. 

ಸಾನ್ಯಾ ಸ್ನೇಹಿತರು ಕೂಡ ಆಕ್ರೋಶಗೊಂಡು ಕಂಬಳ ವೇದಿಕೆ ಮೇಲೆ ಪುಲ್ ಗರಂ ಆಗಿದ್ದಾರೆ. ಕಾರ್ಯಕ್ರಮ ಆಯೋಜಿಸಿದವರ ಜೊತೆ ಜಗಳ ಮಾಡಿದ್ದಾರೆ. ಅಲ್ಲಿದ್ದ ಸ್ಥಳೀಯರು ಇಬ್ರಾಹಿಂಗೆ ಧರ್ಮದೇಟು ನೀಡಿದ್ದಾರೆ. ಕೆಲವು ನಿಮಿಷಗಳ ಬಳಿಕ ರಾಜಿ ಮಾತುಕತೆಯಲ್ಲಿ ವಿಚಾರ ಇತ್ಯರ್ಥ ಮಾಡಿಕೊಂಡಿದ್ದಾರೆ. ಸಾನಿಯಾ ಪೊಲೀಸ್ ದೂರು ನೀಡದ ಕಾರಣ ಯಾವುದೇ ಪ್ರಕರಣ ದಾಖಲಾಗಿಲ್ಲ. 

ಇತರ ವೆಬ್‌ ಪೋರ್ಟಲ್‌ಗಳು ವರದಿ ಮಾಡಿರುವ ಪ್ರಕಾರ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಸಾನ್ಯಾ ಮಾತನಾಡುವಾಗ ಐ ಲವ್ ಯು ಪುತ್ತೂರು ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡು ಅಲ್ಲಿದ್ದ ಅಭಿಮಾನಿ ಇಬ್ರಾಹಿಂ ಐ ಲವ್ ಯು ಸಾನ್ಯಾ  ಎಂದು ಪದೇ ಪದೇ ಹೇಳಿ ಅರುಚಾಡುತ್ತಿದ್ದನಂತೆ, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಾನ್ಯಾ ಒಳಿ ಓಡೋಡಿ ಬಂದು ಅಸಭ್ಯವಾಗಿ ವರ್ತಿಸಿದ್ದಾನಂತೆ. ವೇದಿಕೆಯಿಂದ ಸಾನ್ಯಾ ಇಳಿಯುತ್ತಿದ್ದಂತೆ ಕೈ ಹಿಡಿದು ಎಳೆದಾಡಿದ್ದಾನೆ. ಕುಡಿದ ನಶೆಯಲ್ಲಿದ್ದ ಇಬ್ರಾಹಿಂನ ಕಾರ್ಯಕ್ರಮದಿಂದ ಹೊರ ಕಳುಹಿಸಲಾಗಿತ್ತು.  

Follow Us:
Download App:
  • android
  • ios