ಬಿಗ್ ಬಾಸ್ ಮನೆಯಲ್ಲಿ ಮುಗ್ಧತೆಯಿಂದ ಗಮನ ಸೆಳೆಯುತ್ತಿರುವ ಉತ್ತರ ಕರ್ನಾಟಕದ ಮಲ್ಲಮ್ಮ, ತಮ್ಮದೇ ಎಐ ಫೋಟೋ ಕಂಡು ಅಚ್ಚರಿಪಟ್ಟಿದ್ದಾರೆ. ಕಷ್ಟದ ಬದುಕನ್ನು ಸಾಗಿಸಿ ಬಂದಿರುವ ಮಲ್ಲಮ್ಮ, ಇದೀಗ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಕಂಟೆಂಡರ್ ಆಗಿ ಹೊರಹೊಮ್ಮಿದ್ದಾರೆ.

ಸದ್ಯ Bigg Boss ಹವಾ ಜೋರಾಗಿದೆ. ಆಟ ಆರಂಭಕ್ಕೂ ಮುನ್ನ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್​ ಮಾಡಿದ್ದು ಸಕತ್​ ಟ್ವಿಸ್ಟ್​ ತಂದಿದೆ. ಅವರು ಮತ್ತೆ ವಾಪಸ್​​ ಬಂದೇ ಬರುತ್ತಾರೆ ಎನ್ನುವುದು ಬಿಗ್​ಬಾಸ್​ ವೀಕ್ಷಕರ ಅಭಿಪ್ರಾಯ. ಇವೆಲ್ಲವುಗಳ ನಡುವೆಯೂ ಬಿಗ್​ಬಾಸ್​ ಆರಂಭವಾಗಿ ನಾಲ್ಕೇ ದಿನಕ್ಕೆಲ್ಲಾ ಆಟದ ಬಿಸಿ ಹೆಚ್ಚುತ್ತಲೇ ಸಾಗಿದೆ. ಈ ಸಲವೂ ಪೈಪೋಟಿ ಜೋರಾಗಿಯೇ ಇದೆ. ತಮ್ಮ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಹೋರಾಡಲೇಬೇಕಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಉತ್ತರ ಕರ್ನಾಟಕದ ಮಲ್ಲಮ್ಮ (Bigg Boss Mallamma) ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರೋ ಮಲ್ಲಮ್ಮ ಅವರಿಗೆ ಈ ಬಾರಿ ಛಾನ್ಸ್​ ಸಿಕ್ಕಿದೆ. ಮಲ್ಲಮ್ಮ ಅವರು ತುಂಬ ಮುಗ್ಧರು. ಬಿಗ್​ಬಾಸ್​ ಎಂದರೆ ಅಲ್ಲಿ ತಂತ್ರಗಾರಿಕೆ ಮಾಡಲೇಬೇಕು. ಆದರೆ, ಮಲ್ಲಮ್ಮ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಳ್ಳಲು ಸೋಲುತ್ತಿದ್ದಾರೆ. ಬಿಗ್ ಬಾಸ್ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಅವರು ಕಷ್ಟಪಡುತ್ತಾರೆ. ಆದರೂ ಕೂಡ ಅವರು ಎಲ್ಲರ ಪ್ರೀತಿಪಾತ್ರರಾಗಿದ್ದಾರೆ.

ಎಐ ಫೋಟೋ ಕಂಡು ಶಾಕ್​

ಬಿಗ್​ಬಾಸ್​ಗೆ ಹೋಗುವ ಮುನ್ನ ಅವರ ಸಂದರ್ಶನದ ವಿಡಿಯೋ ವೈರಲ್​ ಆಗುತ್ತಲೇ ಇರುತ್ತದೆ. ಈಗ ಏನಿದ್ದರೂ ಎಐ ಯುಗ. ಮಲ್ಲಮ್ಮ ಅವರ ಎಐ ಫೋಟೋ ಅನ್ನು ಅವರಿಗೆ ತೋರಿಸಲಾಗಿದೆ. ಇದನ್ನು ನೋಡಿ ಮಲ್ಲಮ್ಮ ಶಾಕ್​ ಆಗಿಬಿಟ್ಟಿದ್ದಾರೆ. ಇದು ನಾನೇನಾ ಅಯ್ಯಯ್ಯಪ್ಪಾ... ಸಣ್​ ಹುಡುಗಿ ಕಂಡಂಗಾಗೋಯ್ತು. ಇದನ್ನು ಯಾರಿಗೆ ಕೊಡಲು ಇಟ್ಟಿದ್ರೀ ಎಂದು ಪ್ರಶ್ನಿಸಿದ್ದಾರೆ. ಮಾರಪ್ಪಂಗೆ ಕೊಟ್ಟಿದ್ರೆ ಆಗ್ತಿತ್ತು. ಅವರು ನೋಡಿದ್ರೆ ಈಗಿಲ್ಲ ಎನ್ನೋ ಮೂಲಕ, ತಮ್ಮ ಪತಿಯನ್ನು ನೆನಪಿಸಿಕೊಳ್ಳುತ್ತಲೇ ಹಾಸ್ಯ ಮಾಡಿದ್ದಾರೆ ಮಲ್ಲಮ್ಮ. ಆದರೆ ಇದು ಎಐ ಫೋಟೋ ಎನ್ನುವ ಅರಿವು ಅವರಿಗೆ ಇಲ್ಲ. ಇಂಥ ಸೀರೆ, ರವಿಕೆ ತಮ್ಮ ಬಳಿ ಇಲ್ಲ ಹೇಗೆ ಬಂತು ಎಂದು ಅಚ್ಚರಿಯಿಂದ ನೋಡಿದ್ದಾರೆ. ಒಂದು ವೇಳೆ ತಮ್ಮ ಪತಿ ಈ ಫೋಟೋ ನೋಡಿದ್ರೆ ನನ್ನನ್ನು ಯಾರ ಹತ್ರನೂ ಮಾಡತನಾಡಲು ಬಿಡ್ತಿರಲಿಲ್ಲವೇನೋ ಎಂದು ನಕ್ಕಿದ್ದಾರೆ. 

ಫಿನಾಲೆ ಕಂಟೆಂಡರ್ ಮಲ್ಲಮ್ಮ

ಇನ್ನು ಕಲರ್ಸ್​ ಕನ್ನಡದಲ್ಲಿ ಆರಂಭವಾಗಿರುವ ಬಿಗ್​ಬಾಸ್​ನ ಮಲ್ಲಮ್ಮ ಕುರಿತು ಹೇಳುವುದಾದರೆ, ಈ ಸಲ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಮೂರನೇ ವಾರದಲ್ಲಿಯೇ ಒಂದು ಫಿನಾಲೆ ಬರಲಿದೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಅದಕ್ಕಾಗಿ ಪ್ರತಿ ವಾರ ಕೆಲವು ಟಾಸ್ಕ್​​ಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಗೆದ್ದವರು ಫಿನಾಲೆ ಕಂಟೆಂಡರ್ ಆಗುತ್ತಾರೆ. ಈಗ ಆ ಛಾನ್ಸ್ ಮಲ್ಲಮ್ಮ ಅವರಿಗೆ ಸಿಕ್ಕಿದೆ. ಆರಂಭದಲ್ಲಿಯೇ ಕಿಚ್ಚ ಸುದೀಪ್​ ಕೂಡ ಮಲ್ಲಮ್ಮನವರ ಮುಗ್ಧತೆ ನೋಡಿ ಭಾವುಕರಾಗಿದ್ದರು.

ಕಷ್ಟದ ಬದುಕಲ್ಲಿ ಮಲ್ಲಮ್ಮ

ಇನ್ನು ಈ ಹಿಂದೆ ಇನ್ನೋರ್ವ ಸ್ಪರ್ಧಿ ಆ್ಯಂಕರ್​ ಜಾಹ್ನವಿ ಅವರು ಮಲ್ಲಮ್ಮನವರ ಕಷ್ಟದ ಕುರಿತು ವಿವರಿಸಿದ್ದರು ನಾನು ಬಿಲ್ಡಿಂಗ್ ಕೆಲಸ, ಹೊಲದ ಕೆಲಸ.. ಎಲ್ಲಾ ತರಹದ ಕೆಲಸ ಮಾಡಿದ್ದೇನೆ ಎಂದು ಮಲ್ಲಮ್ಮ ಹೇಳಿದಾಗ, ಜಾಹ್ನವಿ ಅವರು, ಮಲ್ಲಮ್ಮ ಎಂದಿಗೂ ಅವರಿಗೋಸ್ಕರ ಬದುಕಿಲ್ಲ. ಈಗ ತಾನೇ ಕೆರಿಯರ್ ಶುರುವಾಗಿದೆ, 15 ವರ್ಷಕ್ಕೆ ಮದುವೆಯಾಯ್ತು. ತಕ್ಷಣ ಮಕ್ಕಳಾಯ್ತು, ಮಕ್ಕಳಿಗೋಸ್ಕರ ದುಡಿಯುತ್ತಾರೆ. ಗಂಡ ಕುಡಿದರೂ ಹೊಂದುಕೊಂಡಿದ್ದಾರೆ. ಗಂಡ ಹೋದ್ಮೇಲೆ ಮಕ್ಕಳಿಗೋಸ್ಕರ ಬದುಕಿದ್ದಾರೆ ಎಂದು ಹೇಳಿದ್ದರು. ಇದನ್ನು ಕೇಳಿ ಮಲ್ಲಮ್ಮ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: Bigg Bossಗೆ ಯಾಕ್ರೀ ಹೋಗ್ಬೇಕು- ಇಲ್ಲೇ ಹುಡುಗಿಯರು ಸಿಗಲ್ವೇನ್ರಿ? ಬೆಳಿಗ್ಗೆನೂ ತಗೋತೇನ್ರಿ: ಕಾಕ್ರೋಚ್​ ಸುಧಿ ವಿಡಿಯೋ ವೈರಲ್

View post on Instagram